ಮಿನ್ನಿಯಾಪೋಲಿಸ್‌ನ ಕಥೋಲಿಕ ಶಾಲೆಯಲ್ಲಿ ಗುಂಡಿನ ದಾಳಿ; ದುಃಖ ವ್ಯಕ್ತಪಡಿಸಿದ ಪೋಪ್
ವರದಿ: ವ್ಯಾಟಿಕನ್ ನ್ಯೂಸ್
ಅಮೆರಿಕದ ಮಿನ್ನೇಸೋಟ ನಗರದ ಮಿನ್ನಿಯಾಪೋಲಿಸ್‌ನಲ್ಲಿರುವ ಅನನ್ಸಿಯೇಷನ್ ಕ್ಯಾಥೋಲಿಕ್ ಚರ್ಚ್ ಮತ್ತು ಶಾಲಾ ಸಂಕೀರ್ಣದಲ್ಲಿ ಇಬ್ಬರು ಮಕ್ಕಳ ಹತ್ಯೆ ಮತ್ತು 17 ಇತರ ಮಕ್ಕಳು ಗಾಯಗೊಂಡ ಘಟನೆಯ ಬಗ್ಗೆ ಪೋಪ್ ಲಿಯೋ XIV ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ಅಮೆರಿಕದ ಮಿನ್ನೇಸೋಟದ ಮಿನ್ನಿಯಾಪೋಲಿಸ್‌ನಲ್ಲಿರುವ ಅನನ್ಸಿಯೇಷನ್ ಚರ್ಚ್‌ನಲ್ಲಿ ನಡೆದ ಗುಂಡಿನ ದಾಳಿಯ ನಂತರ ಸಂಭವಿಸಿದ ಜೀವಹಾನಿ ಮತ್ತು ಗಾಯಗಳ ಬಗ್ಗೆ ತಿಳಿದು ಪೋಪ್ ಲಿಯೋ XIV ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ಮಿನ್ನಿಯಾಪೋಲಿಸ್‌ನ ಆರ್ಚ್‌ಬಿಷಪ್ ಬರ್ನಾರ್ಡ್ ಹೆಬ್ಡಾ ಅವರಿಗೆ ಕಳುಹಿಸಲಾದ ಟೆಲಿಗ್ರಾಮ್‌ನಲ್ಲಿ, ಪೋಪ್ "ಈ ಭಯಾನಕ ದುರಂತದಿಂದ ಬಳಲುತ್ತಿರುವ ಎಲ್ಲರಿಗೂ, ವಿಶೇಷವಾಗಿ ಮಗುವಿನ ನಷ್ಟದಿಂದ ದುಃಖಿಸುತ್ತಿರುವ ಕುಟುಂಬಗಳಿಗೆ ತಮ್ಮ ಹೃತ್ಪೂರ್ವಕ ಸಂತಾಪ ಮತ್ತು ಆಧ್ಯಾತ್ಮಿಕ ಸಾಮೀಪ್ಯದ ಭರವಸೆಯನ್ನು" ವ್ಯಕ್ತಪಡಿಸಿದರು.
ವಿದೇಶಾಂಗ ಕಾರ್ಯದರ್ಶಿ ಕಾರ್ಡಿನಲ್ ಪಿಯೆಟ್ರೊ ಪರೋಲಿನ್ ಅವರು ಸಹಿ ಮಾಡಿದ ಟೆಲಿಗ್ರಾಮ್‌ನಲ್ಲಿ, ಪೋಪ್ "ಮೃತ ಮಕ್ಕಳ ಆತ್ಮಗಳನ್ನು ಸರ್ವಶಕ್ತ ದೇವರ ಪ್ರೀತಿಗೆ ಅರ್ಪಿಸುತ್ತೇನೆ" ಮತ್ತು "ಗಾಯಗೊಂಡವರಿಗೆ ಹಾಗೂ ಪ್ರಥಮ ಪ್ರತಿಕ್ರಿಯೆ ನೀಡುವವರು, ವೈದ್ಯಕೀಯ ಸಿಬ್ಬಂದಿ ಮತ್ತು ಅವರನ್ನು ಮತ್ತು ಅವರ ಪ್ರೀತಿಪಾತ್ರರನ್ನು ನೋಡಿಕೊಳ್ಳುತ್ತಿರುವ ಗುರುಗಳಿಗಾಗಿ ಪ್ರಾರ್ಥಿಸುತ್ತೇನೆ" ಎಂದು ಹೇಳಿದ್ದಾರೆ.