ಸಂಕಷ್ಟದ ಸಮಯದಲ್ಲಿಯೂ ಭರವಸೆಯಿಂದ ಜೀವಿಸುತ್ತಿರುವ ಗಾಝಾ ಕ್ರೈಸ್ತ ಸಮುದಾಯ
ವರದಿ: ವ್ಯಾಟಿಕನ್ ನ್ಯೂಸ್
ಗಾಜಾ ಧರ್ಮಕೇಂದ್ರದ ಧರ್ಮಗುರು ಅಲ್ಲಿನ ಕ್ರೈಸ್ತ ಸಮುದಾಯದ ಕುರಿತು ಮಾತನಾಡಿದ್ದಾರೆ. ವ್ಯಾಟಿಕನ್ ರೇಡಿಯೋಗೆ ಮಾತನಾಡಿರುವ ಅವರು ಇಲ್ಲಿ ನನ್ನ ಕ್ರೈಸ್ತ ಸಮುದಾಯವು ಯುದ್ಧದಿಂದ ಹಾಗೂ ಆಹಾರದ ಕೊರತೆಯಿಂದ ಬಹಳಷ್ಟು ಬಳಲಿದೆ. ಹಾಗಾಗಿ ಸದಾ ಪ್ರಾರ್ಥಿಸುವಂತೆ ಎಲ್ಲರಲ್ಲಿ ವಿನಂತಿಸಿಕೊಂಡಿದ್ದಾರೆ.
"ಒಂದು ಕೆಜಿ ಹಸೀಟಿನ ಬೆಲೆ 18 ಯುರೋಗಳು; ಒಂದು ಕೆಜಿ ಟೊಮ್ಯಾಟೋ ಬೆಲೆ 23 ಯುರೋಗಳು; ಒಂದೇ ಒಂದು ಈರುಳ್ಳಿಗೆ 12 ರಿಂದ 15 ಯುರೋಗಳು; ಹಾಗೂ ಒಂದು ಕೆಜಿ ಸಕ್ಕರೆಗೆ ನೂರು ಯುರೋಗಳು; ಕಾಫಿ ಅಂತೂ ಇಲ್ಲಿ ಸಿಗುವುದೇ ಇಲ್ಲ; ಅಂದರೆ ಒಂದು ಕೆಜಿ ಕಾಫಿಗೆ 250 ಯುರೋಗಳು" ಇದು ಪ್ರಸ್ತುತ ಗಾಜಾದಲ್ಲಿನ ದಾರುಣ ಪರಿಸ್ಥಿತಿ.
ಫಾದರ್ ಗೇಬ್ರಿಯಲ್ ರೋಮಾನೆಲ್ಲಿ ಇಲ್ಲಿನ ಧರ್ಮಗುರು ಆಗಿದ್ದಾರೆ. ಯುದ್ಧಪೀಡಿತ ಗಾಜಾ ಪ್ರದೇಶದಲ್ಲಿ ಜನತೆ ಹೇಗೆ ಅತ್ಯಂತ ಸಂಕಷ್ಟದ ಪರಿಸ್ಥಿತಿಗಳಲ್ಲಿ ಬದುಕುತ್ತಿದ್ದಾರೆ ಎಂಬುದನ್ನು ಅವರು ವಿವರಿಸುತ್ತಾರೆ. ಇಲ್ಲಿ ಬದುಕುವುದೇ ದುಸ್ತರವಾಗಿದೆ. ತೀವ್ರ ಆಹಾರದ ಕೊರತೆ ಇದೆ ಹಾಗೂ ಜೀವಿಸುವ ಸಲುವಾಗಿ ಎಲ್ಲಾ ರೀತಿಯ ಪ್ರಯತ್ನಗಳನ್ನು ಇಲ್ಲಿನ ಜನತೆ ಮಾಡುತ್ತಿದ್ದಾರೆ ಎಂದು ಅವರು ತಮ್ಮ ನೋವನ್ನು ಹಾಗೂ ತಮ್ಮ ಸಮುದಾಯದ ನೋವನ್ನು ವ್ಯಾಟಿಕನ್ ರೇಡಿಯೋಗೆ ಹಂಚಿಕೊಂಡಿದ್ದಾರೆ.
ಮುಂದುವರೆದು ಮಾತನಾಡಿದ ಅವರು ಈಗಾಗಲೇ ಇದ್ದ ಎಲ್ಲಾ ಸಂಪನ್ಮೂಲಗಳು ಮುಗಿದು ಹೋಗುತ್ತಿದ್ದು, ಶೇಕರಿಸಿದ್ದ ಆಹಾರ ಸಾಮಗ್ರಿಗಳು ಸಹ ಮುಗಿಯುತ್ತ ಬಂದಿದೆ. ಇಂತಹ ಪರಿಸ್ಥಿತಿಯಲ್ಲೂ ಸಹ, ಧರ್ಮಕೇಂದ್ರದ ಪಕ್ಕದಲ್ಲೇ ಜೀವಿಸುತ್ತಿದ್ದ ಮುಸ್ಲಿಂ ಕುಟುಂಬಗಳಿಗೆ ಅವರು ನೆರವಾಗಲು ಬಯಸುತ್ತಿದ್ದಾರೆ. ಗಾಜ ಪ್ರದೇಶಕ್ಕೆ ಎಲ್ಲಾ ರೀತಿಯ ಮಾನವೀಯ ನೆರವನ್ನು ಹಾಗೂ ಯಾವುದೇ ರೀತಿಯ ನೆರವೇಗೆ ಸಂಪರ್ಕವನ್ನು ಕಡಿತಗೊಳಿಸಿದ ಪರಿಣಾಮ ಜನತೆ ಇಲ್ಲಿ ಬಹಳ ಸಂಕಷ್ಟದಲ್ಲಿ ಜೀವಿಸುತ್ತಿದ್ದಾರೆ ಎಂದು ಫಾದರ್ ಗೇಬ್ರಿಯಲ್ ರೋಮಾನೆಲ್ಲಿ ಆವರು ಹೇಳಿದ್ದಾರೆ.
ಯುದ್ಧವು ಶೀಘ್ರವೇ ಮುಗಿದು ಇಲ್ಲಿನ ಪರಿಸ್ಥಿತಿ ಸುಧಾರಿಸಲಿ; ಮತ್ತೆ ಜನತೆ ಶಾಂತಿಯಿಂದ ಜೀವಿಸುವಂತಾಗಲಿ ಎಂದು ಪ್ರಾರ್ಥಿಸುವಂತೆ ಫಾದರ್ ರೋಮಾನೆಲ್ಲಿ ಅವರು ಜನತೆಗೆ ವಿನಂತಿಸಿಕೊಂಡಿದ್ದಾರೆ.