MAP

World Environment Day observed in Bangladesh World Environment Day observed in Bangladesh  (ANSA)

ವಿಶ್ವ ಪರಿಸರ ದಿನ 2025: ಪ್ಲಾಸ್ಟಿಕ್ ಮಾಲಿನ್ಯವನ್ನು ನಿವಾರಿಸಿ

2025 ರ ವಿಶ್ವ ಪರಿಸರ ದಿನದ ಆಚರಣೆಯನ್ನು ಕೊರಿಯಾ ಗಣರಾಜ್ಯವು ಆಯೋಜಿಸುತ್ತದೆ, ಏಕೆಂದರೆ ಈ ದಿನದ ಶೀರ್ಷಿಕೆಯು ನಿರಂತರವಾಗಿ ಬೆಳೆಯುತ್ತಿರುವ ಪ್ಲಾಸ್ಟಿಕ್ ಮಾಲಿನ್ಯದ ಸಮಸ್ಯೆಯನ್ನು ಎದುರಿಸಲು ಎಲ್ಲರಿಗೂ ಸವಾಲು ಹಾಕುತ್ತದೆ.

ಕೀಲ್ಸ್ ಗುಸ್ಸಿ

ಜೂನ್ 5 ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ - ಪರಿಸರಕ್ಕೆ ಮೀಸಲಾಗಿರುವ ಅತಿದೊಡ್ಡ ಅಂತರರಾಷ್ಟ್ರೀಯ ದಿನ. 1973ರಲ್ಲಿ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP) ರಚಿಸಿದ ದಿನವಿದು, ಇಂದಿನ ಅತ್ಯಂತ ಒತ್ತುವ ಪರಿಸರ ಸವಾಲುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ 150 ದೇಶಗಳಲ್ಲಿ ಜಾಗತಿಕ ಸಮುದಾಯವನ್ನು ಒಳಗೊಂಡ ಅತಿದೊಡ್ಡ ಪರಿಸರ ಸಂಪರ್ಕವಾಗಿದೆ.

ಪ್ಲಾಸ್ಟಿಕ್ ಮಾಲಿನ್ಯವನ್ನು ನಿವಾರಿಸಿ
ಪ್ರತಿ ವರ್ಷ, ಒಂದು ದೇಶವು ಈ ದಿನದ ನೆನಪಿಗಾಗಿ ಜಾಗತಿಕ ಆಚರಣೆಗಳನ್ನು ಆಯೋಜಿಸುತ್ತದೆ ಮತ್ತು 2025ರಲ್ಲಿ, ಈ ದಿನದ ನೆನಪಿನ ಜಾಗತಿಕ ಆಚರಣೆಯನ್ನು ಕೊರಿಯಾ ಗಣರಾಜ್ಯದಲ್ಲಿ ನಡೆಸಲಾಗುತ್ತಿದೆ. 2025ರ ಶೀರ್ಷಿಕೆಯು "ಪ್ಲಾಸ್ಟಿಕ್ ಮಾಲಿನ್ಯವನ್ನು ನಿವಾರಿಸಿ" ಏಕೆಂದರೆ ಪ್ಲಾಸ್ಟಿಕ್ ಜೀವನದ ಬಹುತೇಕ ಪ್ರತಿಯೊಂದು ಅಂಶವನ್ನು ಕಲುಷಿತಗೊಳಿಸಿದೆ, ನಮ್ಮ ನೀರು, ಆಹಾರ ಮತ್ತು ದೇಹಗಳನ್ನು ಪ್ರವೇಶಿಸುತ್ತಿದೆ, ದೈನಂದಿನ ಜೀವನದಲ್ಲಿ ಮತ್ತು ಪರಿಸರಕ್ಕೆ ಭಾರಿ ಪ್ರಮಾಣದ ಹಾನಿಯುನ್ನುಂಟು ಮಾಡುತ್ತಿದೆ.

ವಿಶ್ವ ಪರಿಸರ ದಿನವು ಯುಎನ್‌ಇಪಿ ನೇತೃತ್ವದ ʻಪ್ಲಾಸ್ಟಿಕ್ ಮಾಲಿನ್ಯ ನಿವಾರಿಸಿʼ ಕಾರ್ಯಕ್ರಮದಲ್ಲಿ ಸೇರಿಕೊಂಡು, ಈ ಸಮಸ್ಯೆಗೆ ಪರಿಣಾಮಕಾರಿ ಪರಿಹಾರಗಳನ್ನು ಅಳವಡಿಸಿಕೊಳ್ಳಲು ಮತ್ತು ಪರಿಹಾರ ಕಾರ್ಯಕ್ಮಗಳಿಗೆ ಬೆಂಬಲಿಸಲು ವಿಶ್ವಾದ್ಯಂತ ಸಮುದಾಯಗಳನ್ನು ಒಟ್ಟುಗೂಡಿಸುತ್ತದೆ. ಈ ವರ್ಷದ ವಿಶ್ವ ದಿನವು ನಮ್ಮ ಜಗತ್ತಿನಲ್ಲಿ ಪ್ಲಾಸ್ಟಿಕ್ ಮಾಲಿನ್ಯದ ಪರಿಣಾಮಗಳ ಬೆಳೆಯುತ್ತಿರುವ ವೈಜ್ಞಾನಿಕ ಪುರಾವೆಗಳನ್ನು ಎತ್ತಿ ತೋರಿಸುತ್ತದೆ ಮತ್ತು "ಪ್ಲಾಸ್ಟಿಕ್ ಬಳಕೆಯನ್ನು ನಿರಾಕರಿಸುವ, ಕಡಿಮೆ ಮಾಡುವ, ಮರುಬಳಕೆ ಮಾಡುವ ಮತ್ತು ಪುನರ್ವಿಮರ್ಶಿಸುವ" ಕ್ರಿಯೆಗಳಿಗೆ ಬೆಂಬಲವನ್ನು ಗಳಿಸುವುದರ ಮೇಲೆ ಕೇಂದ್ರೀಕೃತವಾಗಿದೆ.

ಸಮಸ್ಯೆಗಳ ತ್ರಿವಳಿ
ಪ್ಲಾಸ್ಟಿಕ್ ಬಳಕೆ ಮತ್ತು ಮಾಲಿನ್ಯವು ತ್ರಿವಳಿ ಗ್ರಹ ಬಿಕ್ಕಟ್ಟಿನ ಕಠಿಣ ಪರಿಣಾಮಗಳನ್ನು ವರ್ಧಿಸುತ್ತದೆ. ಹವಾಮಾನ ಬದಲಾವಣೆ; ಪ್ರಕೃತಿ, ಭೂಮಿ ಮತ್ತು ಜೀವವೈವಿಧ್ಯತೆಯ ನಷ್ಟ ಮತ್ತು ಮಾಲಿನ್ಯ ಹಾಗೂ ತ್ಯಾಜ್ಯ. ವಿಶ್ವದಾದ್ಯಂತ, ಪ್ರತಿ ವರ್ಷ ಸುಮಾರು 11 ಮಿಲಿಯನ್ ಟನ್ ಪ್ಲಾಸ್ಟಿಕ್ ತ್ಯಾಜ್ಯವು ನೀರಿನ ಪರಿಸರ ವ್ಯವಸ್ಥೆಗಳಿಗೆ ಹರಿಯ ಬಿಡುತ್ತಿದ್ದಾರೆ. ಕೃಷಿ ಉತ್ಪನ್ನಗಳಲ್ಲಿ ಪ್ಲಾಸ್ಟಿಕ್ ಬಳಕೆಯ ಪರಿಣಾಮವಾಗಿ ಕೊಳಚೆನೀರು ಮತ್ತು ಭೂಕುಸಿತಗಳಿಂದ ಸೂಕ್ಷ್ಮ ಪ್ಲಾಸ್ಟಿಕ್‌ಗಳು ನೆಲದ ಮಣ್ಣಿನಲ್ಲಿ ಸಂಗ್ರಹವಾಗುತ್ತವೆ. ಪ್ರತಿ ವರ್ಷ, ಪ್ಲಾಸ್ಟಿಕ್ ಮಾಲಿನ್ಯದ ಸಾಮಾಜಿಕ ಮತ್ತು ಪರಿಸರ ವೆಚ್ಚವು $300 ಬಿಲಿಯನ್ ನಿಂದ $600 ಬಿಲಿಯನ್ ವರೆಗೆ ಏರಿಳಿತಗೊಳ್ಳುತ್ತದೆ.

ಸರಳ ತಂತ್ರ
ದಶಕಗಳಿಂದ, ಪ್ಲಾಸ್ಟಿಕ್ ಮಾಲಿನ್ಯವು ಒಂದು ಪ್ರಮುಖ ಸಮಸ್ಯೆಯಾಗಿದೆ ಏಕೆಂದರೆ ಪ್ಲಾಸ್ಟಿಕ್‌ಗಳನ್ನು ಅಸಮರ್ಥನೀಯ ದರದಲ್ಲಿ ಉತ್ಪಾದಿಸಲಾಗುತ್ತಿದೆ ಮತ್ತು ಬಳಸಲಾಗುತ್ತಿದೆ, ಇದು ವಿಶ್ವದ ಆರೋಗ್ಯ, ಆರ್ಥಿಕ ಮತ್ತು ಸಾಮಾಜಿಕ ಯೋಗಕ್ಷೇಮವನ್ನು ಅಪಾಯಕ್ಕೆ ಸಿಲುಕಿಸುತ್ತಿದೆ. ಆದರೆ, ಇದು ಪರಿಸರದ ಅತ್ಯಂತ ಸರಿಪಡಿಸಬಹುದಾದ ಅಥವಾ ಪರಿಹರಿಸಬಹುದಾದ ಸವಾಲುಗಳಲ್ಲಿ ಒಂದಾಗಿದೆ.

ಸರ್ಕಾರಗಳು, ಕಂಪನಿಗಳು ಮತ್ತು ವ್ಯಕ್ತಿಗಳು ಪ್ಲಾಸ್ಟಿಕ್ ಉತ್ಪಾದನೆಯಿಂದ ಬಳಕೆಯವರೆಗೆ, ತ್ಯಾಜ್ಯ ನಿರ್ವಹಣೆಯವರೆಗೆ "ಪ್ಲಾಸ್ಟಿಕ್‌ಗಳ ಪೂರ್ಣ ಜೀವನ ಚಕ್ರ"ವನ್ನು ನೋಡುವ ವಿಭಿನ್ನ ವಿಧಾನವನ್ನು ಕಂಡುಕೊಳ್ಳುವಂತೆ UNEPಯನ್ನು ಒತ್ತಾಯಿಸುತ್ತದೆ. ಹಾನಿಕಾರಕ, ಅನಗತ್ಯ ಪ್ಲಾಸ್ಟಿಕ್‌ಗಳನ್ನು ಪರಿಸರದ ಮೇಲೆ ನಕಾರಾತ್ಮಕ ಪರಿಣಾಮ ಬೀರದ ಸುಸ್ಥಿರ ಆಯ್ಕೆಗಳೊಂದಿಗೆ ಬದಲಾಯಿಸುವುದು ಗುರಿಯಾಗಿದೆ.

ಬದಲಾವಣೆಗಾಗಿ ಜಾಗತಿಕ ಒಪ್ಪಂದ
ಆದರೆ ಈ ವರ್ಷದ ಶೀರ್ಷಿಕೆ ಕೇವಲ ಘೋಷಣೆಯಲ್ಲ. ಬದಲಿಗೆ, ಇದು 2022ರಲ್ಲಿ ಪ್ರಾರಂಭವಾದ ಕಾರ್ಯಾಚರಣೆಯ ಮುಂದುವರಿಕೆಯಾಗಿದೆ. ಮೂರು ವರ್ಷಗಳ ಹಿಂದೆ, ವಿಶ್ವಸಂಸ್ಥೆಯ ಪರಿಸರ ಸಭೆಯ ಪುನರಾರಂಭಗೊಂಡ ಐದನೇ ಅಧಿವೇಶನದಲ್ಲಿ, ಜಲ ಪರಿಸರ ಸೇರಿದಂತೆ ಪ್ಲಾಸ್ಟಿಕ್ ಮಾಲಿನ್ಯದ ಕುರಿತು ಅಂತರರಾಷ್ಟ್ರೀಯ ಕಾನೂನುಬದ್ಧವಾಗಿ ಬಂಧಿಸುವ ಸಾಧನವನ್ನು ಅಭಿವೃದ್ಧಿಪಡಿಸುವ ನಿರ್ಣಯವನ್ನು ಅಂಗೀಕರಿಸಲಾಯಿತು.

ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸಲು ಮೀಸಲಾಗಿರುವ ಈ ಜಾಗತಿಕ ಒಪ್ಪಂದವನ್ನು ಸ್ಥಾಪಿಸುವತ್ತ ದೇಶಗಳು ಕೆಲಸ ಮಾಡುತ್ತಿರುವಾಗ 2025ರ ವಿಶ್ವ ಪರಿಸರ ದಿನವೂ ಬರುತ್ತದೆ. ನವೆಂಬರ್ 2024ರಲ್ಲಿ, ಕೊರಿಯಾ ಗಣರಾಜ್ಯವು ಪ್ಲಾಸ್ಟಿಕ್ ಮಾಲಿನ್ಯ ಒಪ್ಪಂದವನ್ನು ಅಭಿವೃದ್ಧಿಪಡಿಸಲು ಐದನೇ ಮಾತುಕತೆ ಅಧಿವೇಶನದ ಮೊದಲ ಭಾಗವನ್ನು ಆಯೋಜಿಸಿತು. ಎರಡನೇ ಭಾಗವು ಆಗಸ್ಟ್ 5 ರಿಂದ 14 ರವರೆಗೆ ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿ ನಡೆಯಲಿದೆ.
 

05 ಜೂನ್ 2025, 10:55