ಗಾಜಾದಲ್ಲಿ ಟ್ಯಾಂಕ್ ಶೆಲ್ ದಾಳಿಗೆ 31 ನಾಗರಿಕರು ಬಲಿ
ನಾಥನ್ ಮಾರ್ಲಿ
ರಫಾದಲ್ಲಿರುವ ಅಮೇರಿಕದ ಆಹಾರ ನೆರವು ವಿತರಣಾ ಕೇಂದ್ರದ ಬಳಿ ಇಸ್ರಯೇಲ್ ಟ್ಯಾಂಕ್ ಗುಂಡಿನ ದಾಳಿಯಲ್ಲಿ ಕನಿಷ್ಠ 31 ಪ್ಯಾಲಸ್ತೀನಿಯದವರು ಸಾವನ್ನಪ್ಪಿದ್ದಾರೆ ಮತ್ತು 150ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಗಾಜಾದ ವೈದ್ಯರು ಹೇಳಿದ್ದಾರೆ. ಶೆಲ್ ದಾಳಿಯಿಂದ ಉಂಟಾದ "ಸಾವುನೋವುಗಳ ಬಗ್ಗೆ ತಮಗೆ ತಿಳಿದಿಲ್ಲ" ಎಂದು ಇಸ್ರಯೇಲ್ ರಕ್ಷಣಾ ಪಡೆಗಳು ತಿಳಿಸಿವೆ.
ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾದ ವೀಡಿಯೊಗಳು ಗಾಯಾಳುಗಳನ್ನು ಬಂಡಿಗಳಲ್ಲಿ ವೈದ್ಯಕೀಯ ಕೇಂದ್ರಕ್ಕೆ ಸಾಗಿಸುವುದನ್ನು ತೋರಿಸುತ್ತವೆ. ಬೆಳಗಿನ ಜಾವ ಸಾವಿರಾರು ಜನರು ಚಿಕಿತ್ಸಾ ಕೇಂದ್ರದಲ್ಲಿ ಜಮಾಯಿಸಿದ್ದರು, ಆಗ ಗುಂಡಿನ ಚಕಮಕಿ ಮತ್ತು ಸ್ಫೋಟಗಳು ಕೇಳಿಬಂದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮಾರ್ಚ್ 2 ರಂದು ಇಸ್ರಯೇಲ್ ಗಡಿ ದಾಟುವಿಕೆಗಳನ್ನು ಮುಚ್ಚಿತು ಮತ್ತು ಗಾಜಾಗೆ ಮಾನವೀಯ ನೆರವನ್ನು ನಿರ್ಬಂಧಿಸಿತು, ಮೇ 22 ರಿಂದ ಸೀಮಿತ ಪ್ರವೇಶವನ್ನು ಅನುಮತಿಸಿತು.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುರವರ ಕಚೇರಿಯು, ಒತ್ತೆಯಾಳುಗಳ ಬಿಡುಗಡೆ ಒಪ್ಪಂದಕ್ಕಾಗಿ ಅಮೇರಿಕದ ಮಧ್ಯಸ್ಥಿಕೆಯ ನವೀಕರಿಸಿದ ಪ್ರಸ್ತಾವನೆಯನ್ನು ಇಸ್ರಯೇಲ್ ಒಪ್ಪಿಕೊಂಡಿದೆ ಎಂದು ಹೇಳಿದೆ, ಚೌಕಟ್ಟನ್ನು ತಿರಸ್ಕರಿಸುವ ಮೂಲಕ ಹಮಾಸ್ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದೆ. ಹಮಾಸ್ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸಲ್ಲಿಸಿದೆ ಎಂದು ಹೇಳಿದೆ ಆದರೆ ದೀರ್ಘಾವಧಿಯ ಕದನ ವಿರಾಮದ ಬೇಡಿಕೆ ಸೇರಿದಂತೆ ತಿದ್ದುಪಡಿಗಳನ್ನು ಕೋರಿದೆ.
ಹಮಾಸ್ ಜೊತೆ ಎರಡು ತಿಂಗಳ ಯುದ್ಧವಿರಾಮದ ನಂತರ ಮಾರ್ಚ್ 18 ರಂದು ಇಸ್ರಯೇಲ್ ಗಾಜಾದ ಮೇಲೆ ತನ್ನ ದಾಳಿಯನ್ನು ಪುನರಾರಂಭಿಸಿತು.