MAP

US agents, protesters clash again in Los Angeles over immigration raids US agents, protesters clash again in Los Angeles over immigration raids  (AFP or licensors)

ವಲಸೆ ದಾಳಿಗಳ ವಿರುದ್ಧದ ಪ್ರತಿಭಟನೆಯ ಪ್ರತಿಕ್ರಿಯೆ

ದಾಖಲೆರಹಿತ ವಲಸಿಗರ ಮೇಲೆ ನಡೆಸುತ್ತಿರುವ ದಾಳಿಯನ್ನು ವಿರೋಧಿಸಿ ಕೈಗೊಂಡ ಪ್ರತಿಭಟನೆಗಳಿಗೆ ಪ್ರತಿಕ್ರಿಯೆಯಾಗಿ, ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರು ಕ್ಯಾಲಿಫೋರ್ನಿಯಾದ ರಾಷ್ಟ್ರೀಯ ರಕ್ಷಣಾ ದಳದ ಸಿಪಾಯಿಗಳು ಮತ್ತು ನೌಕಾಪಡೆಗಳಿಗೆ ಲಾಸ್ ಏಂಜಲೀಸ್‌ಗೆ ಬರುವಂತೆ ಆದೇಶಿಸಿದ್ದಾರೆ.

ಕ್ರಿಸ್ಟೋಫರ್ ವೆಲ್ಸ್

ವಲಸೆ ಜಾರಿ ಅಧಿಕಾರಿಗಳ ದಾಳಿಗಳ ವಿರುದ್ಧದ ಪ್ರತಿಭಟನೆಗಳ ನಡುವೆ, ಫೆಡರಲ್ ಸಿಬ್ಬಂದಿ ಮತ್ತು ಆಸ್ತಿಯನ್ನು ರಕ್ಷಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಮಾರು 2000 ಮಂದಿ ಕ್ಯಾಲಿಫೋರ್ನಿಯಾದ ರಾಷ್ಟ್ರೀಯ ರಕ್ಷಣಾ ದಳದ ಸಿಪಾಯಿಗಳನ್ನು ಮತ್ತು 700 ಮಂದಿ ಅಮೇರಿಕದ ನೌಕಾಪಡೆಯವರನ್ನು ಲಾಸ್ ಏಂಜಲೀಸ್‌ಗೆ ಬರುವಂತೆ ಆದೇಶಿಸಿದ್ದಾರೆ.

ಶುಕ್ರವಾರ ಪ್ರಾರಂಭವಾದ ದಾಳಿಗಳು ಮತ್ತು ದೇಶಾದ್ಯಂತ ನೂರಾರು ವಲಸಿಗರನ್ನು ಬಂಧಿಸಲಾಗಿದೆ. ಈ ತಿಂಗಳ ಆರಂಭದಲ್ಲಿ, ವಲಸೆ ಮತ್ತು ಕಸ್ಟಮ್ಸ್ ಜಾರಿ ಸಂಸ್ಥೆಯು ಜೂನ್ ತಿಂಗಳ 2 ಮತ್ತು 3 ರಂದು ದಿನಕ್ಕೆ 2000ಕ್ಕೂ ಹೆಚ್ಚು ಬಂಧನಗಳನ್ನು ದಾಖಲಿಸಿದೆ, ಇದು ಮಾಜಿ ಅಧ್ಯಕ್ಷ ಜೋ ಬೈಡೆನ್ ರವರ ಅಧಿಕಾರದ ಕೊನೆಯ ವರ್ಷದ ಅವಧಿಯಲ್ಲಿ ದೈನಂದಿನ ಸರಾಸರಿ 300 ಬಂಧನಗಳಿಗಿಂತ ಹೆಚ್ಚಳವಾಗಿದೆ.

ದಾಳಿಗಳಿಗೆ ಪ್ರತಿಕ್ರಿಯೆಯಾಗಿ, ನೂರಾರು ಜನರು ಲಾಸ್ ಏಂಜಲೀಸ್ ಡೌನ್‌ಟೌನ್‌ನಲ್ಲಿ ಪ್ರತಿಭಟನೆ ನಡೆಸಲು ಪ್ರಾರಂಭಿಸಿದರು. ಸೋಮವಾರ, ಫೆಡರಲ್ ಬಂಧನ ಕೇಂದ್ರದ ಬಳಿ ಪ್ರತಿಭಟನೆಕಾರರನ್ನು ಆ ಸ್ಥಳದಿಂದ ಹೊಡೆದೋಡಿಸಲು ಪೊಲೀಸ್ ಅಧಿಕಾರಿಗಳು ಸ್ಟನ್ ಗ್ರೆನೇಡ್‌ಗಳು ಮತ್ತು ಹೊಗೆರಹಿತ ಗುಂಡುಗಳನ್ನು ಹಾರಿಸಿ ಜನರನ್ನು ಅಲ್ಲಿಂದ ಹೋಗುವಂತೆ ಮಾಡಿದರು.

ಟ್ರಂಪ್ ರವರು ಕ್ಯಾಲಿಫೋರ್ನಿಯಾದ ರಾಷ್ಟ್ರೀಯ ರಕ್ಷಣಾ ದಳದ ಸಿಪಾಯಿಗಳನ್ನು ಬಳಸಿಕೊಂಡಿದ್ದು, ಪ್ರತಿಭಟನೆಯು ನಿಯಂತ್ರಣ ಸಕ್ರಿಯಗೊಂಡಾಗ ರಾಷ್ಟ್ರದ ಮಿಲಿಟರಿ ಮೀಸಲು ಪಡೆಯ ಭಾಗವಾಗಿರುವ ರಾಜ್ಯ ಮಟ್ಟದ ಮಿಲಿಟರಿ ಪಡೆ, ನೌಕಾಪಡೆಗಳನ್ನು ನಿಯೋಜಿಸಿರುವುದು ಕ್ಯಾಲಿಫೋರ್ನಿಯಾದ ಗವರ್ನರ್‌ನಿಂದ ಆಕ್ರೋಶದ ಪ್ರತಿಕ್ರಿಯೆಯನ್ನು ಉಂಟುಮಾಡಿತು. ಅಧ್ಯಕ್ಷರು ಫೆಡರಲ್ ಕಾನೂನನ್ನು ಉಲ್ಲಂಘಿಸುತ್ತಿದ್ದಾರೆ ಮತ್ತು ಅಮೇರಿಕದ ಸಂವಿಧಾನವು ರಾಜ್ಯಗಳಿಗೆ ಮೀಸಲಾಗಿರುವ ಅಧಿಕಾರವನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಕ್ಯಾಲಿಫೋರ್ನಿಯಾ ರಾಜ್ಯವು ಸೋಮವಾರ ಟ್ರಂಪ್ ಮತ್ತು ಇತರ ಅಧಿಕಾರಿಗಳ ಮೇಲೆ ಮೊಕದ್ದಮೆ ಹೂಡಿತು, ರಾಷ್ಟ್ರೀಯ ರಾಷ್ಟ್ರೀಯ ರಕ್ಷಣಾ ದಳ ಮತ್ತು ಅಮೇರಿಕ ಮಿಲಿಟರಿ ಸಿಬ್ಬಂದಿಯ ಬಳಕೆಯನ್ನು ನಿರ್ಬಂಧಿಸುವಂತೆ ನ್ಯಾಯಾಲಯಗಳನ್ನು ಕೋರಿತು.

ಜಾರಿ ದಾಳಿಗಳಿಂದ ಲಾಸ್ ಏಂಜಲೀಸ್‌ನ ಮಹಾಧರ್ಮಾಧ್ಯಕ್ಷರು "ತೊಂದರೆಗೊಳಗಾಗಿದ್ದಾರೆ"
ಫೆಡರಲ್ ವಲಸೆ ಜಾರಿ ಕಾರ್ಯಾಚರಣೆಗಳನ್ನು ವಿಸ್ತರಿಸಿದ ನಂತರ ಶುಕ್ರವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಲಾಸ್ ಏಂಜಲೀಸ್‌ನ ಮಹಾಧರ್ಮಾಧ್ಯಕ್ಷರಾದ ಜೋಸ್ ಗೊಮೆಜ್ ರವರು ಪ್ರಸ್ತುತವಾಗಿ ನಡೆಯುತ್ತಿರುವ ವಲಸೆ ಜಾರಿ ದಾಳಿಗಳಿಂದ "ತೊಂದರೆಗೊಳಗಾಗಿದ್ದಾರೆ" ಎಂದು ಹೇಳಿದ್ದಾರೆ. ಸಮುದಾಯಕ್ಕಾಗಿ ಮತ್ತು ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರೂ ಸಂಯಮ ಮತ್ತು ಶಾಂತತೆಯನ್ನು ಕಾಯ್ದುಕೊಳ್ಳಲಿ ಎಂದು ಪ್ರಾರ್ಥಿಸುತ್ತಿರುವುದಾಗಿ ಮಹಾಧರ್ಮಾಧ್ಯಕ್ಷರು ಹೇಳಿದರು.

"ಭಯೋತ್ಪಾದಕರು ಅಥವಾ ಹಿಂಸಾತ್ಮಕ ಅಪರಾಧಿಗಳು ಎಂದು ಕರೆಯಲ್ಪಡುವ ದಾಖಲೆರಹಿತ ವಲಸಿಗರು" ಬೇಡದವರು ಎಂದು ಒಪ್ಪಿಕೊಂಡ ಮಹಾಧರ್ಮಾಧ್ಯಕ್ಷ ಗೊಮೆಜ್ ರವರು, ಶ್ರೀ ಸಾಮಾನ್ಯರನ್ನು, ಕಷ್ಟಪಟ್ಟು ದುಡಿಯುವ ವಲಸಿಗರನ್ನು ಮತ್ತು ಅವರ ಕುಟುಂಬಗಳಲ್ಲಿ ಭಯ ಹಾಗೂ ಆತಂಕವನ್ನು ಉಂಟುಮಾಡುವ ರೀತಿಯಲ್ಲಿ ಸರ್ಕಾರವು ಜಾರಿ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿಲ್ಲ ಎಂದು ಹೇಳಿದರು.
 

10 ಜೂನ್ 2025, 12:42