MAP

Second round of presidential election in Poland Second round of presidential election in Poland   (ANSA)

ಪೋಲೆಂಡ್ ಅಧ್ಯಕ್ಷೀಯ ಚುನಾವಣೆಯ ಮತದಾನ

ಪೋಲೆಂಡ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಬಿಗಿಯಾದ ಎರಡನೇ ಹಂತದ ಮತದಾನ ಆರಂಭವಾಗಿದೆ, ಅಭಿಪ್ರಾಯ ಸಂಗ್ರಹಗಳು ಉದಾರವಾದಿ ಮತ್ತು ರಾಷ್ಟ್ರೀಯವಾದಿಯ ನಡುವೆ ನಿಕಟವಾದ ಸ್ಪರ್ಧೆಯನ್ನು ತೋರಿಸುತ್ತಿವೆ.

ಸ್ಟೀಫನ್ ಜೆ. ಬೋಸ್

ಪೋಲಿಷ್ ಮತದಾರರು ವಿಭಿನ್ನ ರಾಜಕೀಯ ದಾರ್ಶನಿಕತೆಯನ್ನು ಹೊಂದಿ ಪ್ರತಿನಿಧಿಸುತ್ತಿರುವ ಇಬ್ಬರು ಅಧ್ಯಕ್ಷೀಯ ಅಭ್ಯರ್ಥಿಗಳ ನಡುವೆ ಆಯ್ಕೆ ಮಾಡಲು ಪ್ರಾರಂಭಿಸಿದರು. 53 ವರ್ಷದ ರಫಾಲ್ ಟ್ರಜಾಸ್ಕೋವ್ಸ್ಕಿರವರು, ರಾಜಧಾನಿ ವಾರ್ಸಾದ ಯುರೋಪಿನ ಪರ ಉದಾರವಾದಿ, ಬಹುಭಾಷಾ ಮೇಯರ್ ಮತ್ತು ಪ್ರಮುಖ ಜಾಝ್ ಸಂಗೀತಗಾರನ ಮಗ. ಅವರು ಪ್ರಧಾನಿ ಡೊನಾಲ್ಡ್ ಟಸ್ಕ್ ರವರು ರಾಜಕೀಯವಾಗಿ ವೈವಿಧ್ಯಮಯ ಆಡಳಿತ ಒಕ್ಕೂಟದಿಂದ ಬೆಂಬಲಿತರಾಗಿದ್ದಾರೆ.

ಆದಾಗ್ಯೂ, ಅಭ್ಯರ್ಥಿ ಟ್ರಜಾಸ್ಕೋವ್ಸ್ಕಿರವರು ರಾಷ್ಟ್ರೀಯತಾವಾದಿ ಇತಿಹಾಸಕಾರ ಮತ್ತು ಮಾಜಿ ಹವ್ಯಾಸಿ ಬಾಕ್ಸರ್ ಕರೋಲ್ ರವರು ನವ್ರೊಕಿಯಿಂದ ಕಠಿಣ ಸವಾಲನ್ನು ಎದುರಿಸುತ್ತಾರೆ. 42 ವರ್ಷ ವಯಸ್ಸಿನ ನವ್ರೋಕಿರವರನ್ನು 2015 ಮತ್ತು 2023ರ ನಡುವೆ ಪೋಲೆಂಡ್ ನ್ನು ಆಳಿದ ಜನಪ್ರಿಯ-ಬಲಪಂಥೀಯ ಕಾನೂನು ಮತ್ತು ನ್ಯಾಯ ಪಕ್ಷವು ಅನುಮೋದಿಸಿದೆ.

ನವ್ರೋಕಿಯರವರ ಗೆಲುವು ಯುದ್ಧಪೀಡಿತ ನೆರೆಯ ಉಕ್ರೇನ್‌ನ ಕಡೆಗೆ ಪೋಲೆಂಡ್‌ನ ಬೆಂಬಲದ ಸ್ಥಾನವನ್ನು ಬದಲಾಯಿಸುತ್ತದೆ ಎಂದು ವೀಕ್ಷಕರು ಹೇಳುತ್ತಾರೆ.

ಅವರು ಎರಡು ರಾಷ್ಟ್ರಗಳ ನಡುವಿನ ಉದ್ವಿಗ್ನ ಐತಿಹಾಸಿಕ ಸಂಬಂಧಗಳ ಬಗ್ಗೆ ಮಾತನಾಡಿದರು ಮತ್ತು NATO ಮಿಲಿಟರಿ ಮೈತ್ರಿಕೂಟದಲ್ಲಿ ಉಕ್ರೇನಿಯದ ಸದಸ್ಯತ್ವಕ್ಕೆ ತಮ್ಮ ವಿರೋಧವನ್ನು ಘೋಷಿಸಿದರು.

ಆದರೆ ಅವರ ಪ್ರಚಾರವು ತಪ್ಪು ಆರೋಪಗಳಿಂದ ಮುಚ್ಚಿಹೋಗಿತ್ತು, ಅದರಲ್ಲೂ ವಯಸ್ಸಾದ ವ್ಯಕ್ತಿಯಿಂದ ಅಪಾರ್ಟ್ಮೆಂಟ್ ನ್ನು ಸ್ವಾಧೀನಪಡಿಸಿಕೊಂಡ ಬಗ್ಗೆ ಮತ್ತು ಅವರ ಯೌವನದಲ್ಲಿ 140 ಫುಟ್ಬಾಲ್ ಗೂಂಡಾಗಳ ನಡುವಿನ ಸಂಘಟಿತ ಹೋರಾಟದಲ್ಲಿ ಅವರು ಭಾಗವಹಿಸಿದ್ದಾಗಿ ಒಪ್ಪಿಕೊಂಡಿದ್ದರ ಬಗ್ಗೆ ಪ್ರಶ್ನೆಗಳು ಸೇರಿವೆ.

ಇತರ ವಿವಾದಗಳು
ಆದರೂ ಪಾಶ್ಚಿಮಾತ್ಯ ಪರ ಟ್ರ್ಜಾಸ್ಕೋವ್ಸ್ಕಿರವರು ಕೂಡ ವಿವಾದಗಳಿಂದ ಮುಕ್ತವಾಗಿಲ್ಲ, ಅವರು ತಮ್ಮ ಉಮೇದುವಾರಿಕೆಯನ್ನು ಉತ್ತೇಜಿಸುವ ಆನ್‌ಲೈನ್ ಜಾಹೀರಾತಿಗೆ ವಿದೇಶಿ ನಿಧಿಯನ್ನು ಒದಗಿಸಿದ ಆರೋಪಗಳನ್ನು ಎದುರಿಸಿದರು.

ಅವರು ಸಂಪರ್ಕದಿಂದ ಹೊರಗುಳಿದ ಮತ್ತು ಜನಪ್ರಿಯವಲ್ಲದ ಟಸ್ಕ್ ಸರ್ಕಾರದ ಬೆಂಬಲದೊಂದಿಗೆ ಗಣ್ಯ ವ್ಯಕ್ತಿ ಎಂಬ ಮಾತುಗಳ ವಿರುದ್ಧ ತಮ್ಮನ್ನು ತಾವು ಸಮರ್ಥಿಸಿಕೊಳ್ಳಬೇಕಾಯಿತು.

ಪ್ರಧಾನಿ ಟಸ್ಕ್‌ರವರಿಗೆ, ಟ್ರಜಾಸ್ಕೋವ್ಸ್ಕಿ ರವರು ಗೆಲ್ಲಬೇಕು.

ಪೋಲಿಷ್ ಅಧ್ಯಕ್ಷರ ಪಾತ್ರವು ಮುಖ್ಯವಾಗಿ ಔಪಚಾರಿಕವಾಗಿದ್ದರೂ, ಅದು ವಿದೇಶಾಂಗ ಮತ್ತು ರಕ್ಷಣಾ ನೀತಿಯ ಮೇಲೆ ಸ್ವಲ್ಪ ಪ್ರಭಾವ ಬೀರುತ್ತದೆ. ಹೊಸ ಶಾಸನವನ್ನು ವೀಟೋ ಮಾಡುವ ನಿರ್ಣಾಯಕ ಅಧಿಕಾರವೂ ಅಧ್ಯಕ್ಷರಿಗೆ ಇದೆ.

ಸಂಸತ್ತಿನಲ್ಲಿ ಐದನೇ ಮೂರು ಭಾಗದಷ್ಟು ಬಹುಮತದಿಂದ ಮಾತ್ರ ವೀಟೋವನ್ನು ರದ್ದುಗೊಳಿಸಬಹುದು, ಆದರೆ ಪ್ರಸ್ತುತ ಸರ್ಕಾರಕ್ಕಿಲ್ಲ. ಅದಕ್ಕಾಗಿಯೇ ಭಾನುವಾರದ ಚುನಾವಣೆಯು ಸುಮಾರು 39 ಮಿಲಿಯನ್ ಜನರಿರುವ ಪೂರ್ವ ಯುರೋಪಿನ ಅತಿದೊಡ್ಡ ಆರ್ಥಿಕತೆ ಮತ್ತು ಹೆಚ್ಚು ಕಥೋಲಿಕ ರಾಷ್ಟ್ರದ ಭವಿಷ್ಯದ ದಿಕ್ಕಿಗೆ ನಿರ್ಣಾಯಕವಾಗಿದೆ.
 

01 ಜೂನ್ 2025, 14:54