MAP

A view of an empty in the West Bank of Bethlehem, in October 2024, which normally would have been filled with tourists A view of an empty in the West Bank of Bethlehem, in October 2024, which normally would have been filled with tourists 

ಪರಿಸ್ಥಿತಿ ಹದಗೆಡುತ್ತಿದ್ದಂತೆ ಬೆತ್ಲೆಹೇಮ್‌ನ ನಿವಾಸಿಗಳು ಕೆಲಸ ಮತ್ತು ಭೂ-ಸ್ವತ್ತನ್ನು ಕಳೆದುಕೊಳ್ಳುತ್ತಿದ್ದಾರೆ

ಪ್ಯಾಲಸ್ತೀನಿನ ಪಶ್ಚಿಮ ದಂಡೆಯಲ್ಲಿರುವ ಬೆತ್ಲೆಹೇಮ್‌ನ ನಿವಾಸಿಗಳ ನಿರುದ್ಯೋಗ ಶೇಕಡಾ 31ಕ್ಕೆ ಏರಿರುವುದನ್ನು ಮತ್ತು ಪ್ರವಾಸಿಗರ ಸಂಖ್ಯೆ ಕಡಿಮೆಯಾಗುತ್ತಿರುವುದು, ಅವರ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಜೆರುಸಲೇಮ್‌ನ ಸಿಎನ್‌ಇಡಬ್ಲ್ಯೂಎ -ವಿಶ್ವಗುರುಗಳ ಧ್ಯೇಯದ ಪ್ರಾದೇಶಿಕ ನಿರ್ದೇಶಕ ಜೋಸೆಫ್ ಹಜ್ಬೌನ್ ರವರು ಹೇಳಿದ್ದಾರೆ.

ಬಾರ್ಬ್ ಫ್ರೇಜ್, ಸಿಎನ್‌ಇಡಬ್ಲ್ಯೂಎ

ಗಾಜಾದಲ್ಲಿನ ಘಟನೆಗಳ ಮೇಲೆ ಜಗತ್ತಿನ ಕಣ್ಣುಗಳು ಕೇಂದ್ರೀಕೃತವಾಗಿರುವುದರಿಂದ, ಪ್ಯಾಲಸ್ತೀನಿನ ಪಶ್ಚಿಮ ದಂಡೆಯ ಬೆತ್ಲೆಹೇಮ್‌ನ ನಗರ ಮತ್ತು ಅದರ ಸುತ್ತಮುತ್ತಲಿನ ಸಮುದಾಯಗಳಲ್ಲಿನ ಪರಿಸ್ಥಿತಿ ಹದಗೆಡುತ್ತಲೇ ಇದೆ ಎಂದು ಜೆರುಸಲೇಮ್‌ನಲ್ಲಿರುವ ಸಿಎನ್‌ಇಡಬ್ಲ್ಯೂಎ- ವಿಶ್ವಗುರುಗಳ ಧ್ಯೇಯದ ಪ್ರಾದೇಶಿಕ ನಿರ್ದೇಶಕ ಜೋಸೆಫ್ ಹಜ್ಬೌನ್ ರವರು ಹೇಳಿದ್ದಾರೆ.

ನಿರುದ್ಯೋಗವು ಶೇಕಡಾ 31ಕ್ಕೆ ಏರಿದೆ ಮತ್ತು ಬೆತ್ಲೆಹೇಮ್‌ನಲ್ಲಿ ಪ್ರವಾಸೋದ್ಯಮ ಆದಾಯದಲ್ಲಿ ಪ್ರತಿದಿನ ಸುಮಾರು $2.5 ಮಿಲಿಯನ್ ನಷ್ಟ ಅನುಭವಿಸುತ್ತಿದೆ ಎಂದು ಶ್ರೀ ಹಜ್ಬೌನ್ ರವರು ಹೇಳಿದರು.

"ಬೆತ್ಲೆಹೇಮ್‌ನಲ್ಲಿ ಪ್ರವಾಸೋದ್ಯಮ ಸಂಖ್ಯೆಯು ಕ್ಷೀಣಿಸುತ್ತಿರುವುದರಿಂದ ಸ್ಥಳೀಯ ಅಂಗಡಿಗಳು, ರೆಸ್ಟೋರೆಂಟ್‌ಗಳು ಮತ್ತು ಸಾಂಸ್ಕೃತಿಕ ಸಂಸ್ಥೆಗಳನ್ನು ಮುಚ್ಚಲು ಕಾರಣವಾಗಿದೆ, ಇದು ಪ್ಯಾಲಸ್ತೀನಿನ ಪರಂಪರೆಯ ಸಂರಕ್ಷಣೆಗೆ ಅಪಾಯವನ್ನುಂಟುಮಾಡಿದೆ." ಈ ಆರ್ಥಿಕ ತೊಂದರೆಗಳ ಜೊತೆಗೆ, ಮುಂದುವರೆಯುತ್ತಿರುವ ಯುದ್ಧದ ಕಾರಣದಿಂದಾಗಿ ಕ್ರಿಸ್‌ಮಸ್ ಮತ್ತು ಈಸ್ಟರ್ ಆಚರಣೆಗಳಂತಹ ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗಳನ್ನು ರದ್ದುಗೊಳಿಸಲಾಗಿದೆ. ಒಂದು ಕಾಲದಲ್ಲಿ ಕ್ರೈಸ್ತರೇ ಹೆಚ್ಚಾಗಿದ್ದ ಬೆತ್ಲೆಹೇಮ್‌ನಿಂದ ಹೆಚ್ಚಿನ ಕುಟುಂಬಗಳು ಬೇರೆಡೆ ಅವಕಾಶಗಳನ್ನು ಹುಡುಕುತ್ತಾ ವಲಸೆ ಹೋಗುತ್ತಿದ್ದಾರೆ.

CNEWA (ಕ್ಯಾಥೋಲಿಕ್ ನಿಯರ್ ಈಸ್ಟ್ ವೆಲ್ಫೇರ್ ಅಸೋಸಿಯೇಷನ್) ಗಾಗಿ ಜೂನ್‌ ತಿಂಗಳಿನಲ್ಲಿ ನೀಡಿದ ಪರಿಸ್ಥಿತಿ ವರದಿಯಲ್ಲಿ, ಶ್ರೀ ಹಜ್ಬೌನ್ ರವರು ಇಸ್ರಯೇಲ್ ಸರ್ಕಾರವು ಪ್ಯಾಲಸ್ತೀನಿಯರಿಗೆ ಸಾವಿರಾರು ಕೆಲಸದ ಪರವಾನಗಿಗಳನ್ನು ರದ್ದುಗೊಳಿಸಿದೆ ಎಂದು ವರದಿ ಮಾಡಿದ್ದಾರೆ. ವರದಿಯ ಜೊತೆಗೆ ಇಮೇಲ್‌ನಲ್ಲಿ, ಶ್ರೀ ಹಜ್ಬೌನ್ ಒಂದು ಕುಟುಂಬದ ಅನುಭವವನ್ನು ವಿವರಿಸಿದ್ದಾರೆ.

ಇಮೇಲ್‌ನ ವರದಿ, ನಾನು ಇಸ್ರಯೇಲ್‌ನಲ್ಲಿ ಕೆಲಸ ಮಾಡುತ್ತಿದ್ದೆ, ಆದರೆ ಅಕ್ಟೋಬರ್ 2023ರಿಂದ ಅವರು ಪ್ಯಾಲಸ್ತೀನಿಯರ ಪರವಾನಗಿಯನ್ನು ರದ್ದುಗೊಳಿಸಲಾಗಿದೆ ಎಂದು ಶ್ರೀ ಹಜ್ಬೌನ್ ರವರು ಬರೆದಿದ್ದಾರೆ. "ಕಠಿಣವಾದ ಆರ್ಥಿಕ ಪರಿಸ್ಥಿತಿಯು ಮನೆಯಲ್ಲಿ ಜೀವನವನ್ನು ಕಷ್ಟಕರವಾಗಿಸಿದೆ, ಏಕೆಂದರೆ 'ನಾನು' ನನ್ನ ಸಣ್ಣ ಕುಟುಂಬವನ್ನು ಪೋಷಿಸಲು ಸಾಧ್ಯವಾಗದೆ ಪ್ರಕ್ಷುಬ್ಧ ಮತ್ತು ಅಸಹಾಯಕನಾಗಿದ್ದೇನೆ. ಏಕೆಂದರೆ ಆತನ ಹೆಂಡತಿ ಮತ್ತು ಪುಟ್ಟ ಮಗಳಿಗೂ ಸಹ ಪ್ರಾರ್ಥಮಿಕ ಅವಶ್ಯಕತೆಗಳನ್ನು ಪೂರೈಸಲು ಕಷ್ಟಕರವಾಗಿದೆ.

ಇದು ಮುಂದುವರೆಯುತ್ತಿರುವ ಯುದ್ಧದ ಸಂತ್ರಸ್ತರುಗಳಾಗಿ, ತಮ್ಮದೇನೂ ಅಪರಾಧವಿಲ್ಲದೆ ಬಳಲುತ್ತಿರುವ ಸಾವಿರಾರು ಜನರ ದುರಂತ ಕಥೆಗಳಲ್ಲಿ ಇದು ಒಂದಾಗಿದೆ ಎಂದು ಅವರು ಹೇಳಿದರು.

ಮೇ ತಿಂಗಳಲ್ಲಿ, ಇಸ್ರಯೇಲ್‌ನ ಕ್ಯಾಬಿನೆಟ್ 1967ರ ನಂತರ ಮೊದಲ ಬಾರಿಗೆ ಮತ್ತು ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿ ʼಸಿʼ ಪ್ರದೇಶದಲ್ಲಿ ಭೂ-ಮಾಲೀಕತ್ವದ ಹಕ್ಕುಗಳ ಅಂತಿಮ ನೋಂದಣಿಯನ್ನು ಪ್ರಾರಂಭಿಸಲು ಅನುಮೋದನೆ ನೀಡಿತು ಎಂದು ಅವರು ಹೇಳಿದರು.

ಇದು ಪ್ಯಾಲಸ್ತೀನಿಯರ ವಿರುದ್ಧ ತಾರತಮ್ಯಕ್ಕೆ ಕಾರಣವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ, ಏಕೆಂದರೆ ಅವರು ತಮ್ಮ ಸ್ವಂತ ಭೂಮಿಯ ಮೇಲಿನ ಹಕ್ಕುಗಳನ್ನು ಸಾಬೀತುಪಡಿಸಲು ಕಷ್ಟಪಡುತ್ತಿದ್ದಾರೆ. ಹೆಚ್ಚುವರಿಯಾಗಿ, ಇಸ್ರಯೇಲ್ ಸರ್ಕಾರವು ಬೆತ್ಲೆಹೇಮ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭೂಮಿಯನ್ನು ವಶಪಡಿಸಿಕೊಳ್ಳುವುದನ್ನು ಮುಂದುವರೆಸಿದೆ, ಎಂದು ಶ್ರೀ ಹಜ್ಬೌನ್ ಇತ್ತೀಚಿನ ಉದಾಹರಣೆಗಳನ್ನು ಉಲ್ಲೇಖಿಸಿ ಹೇಳಿದರು.

CNEWA-ಪಾಂಟಿಫಿಕಲ್ ಮಿಷನ್ ಮತ್ತು ಅದರ ಪಾಲುದಾರರು ತಾತ್ಕಾಲಿಕ ಉದ್ಯೋಗಾವಕಾಶಗಳು, ಸಣ್ಣ ಆರೋಗ್ಯ ರಕ್ಷಣಾ ಅನುದಾನಗಳು, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳಿಗೆ, ಸಾಮಾಜಿಕ ಸೇವಾ ಯೋಜನೆಗಳು ಮತ್ತು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬೆತ್ಲೆಹೇಮ್‌ ಪ್ರದೇಶದ ಇತರ ಪಾಲುದಾರ ಸಂಸ್ಥೆಗಳಿಗೆ ಹಣಕಾಸು ಒದಗಿಸುವುದನ್ನು ಮುಂದುವರಿಸಿದ್ದಾರೆ. NEWA-ಪಾಂಟಿಫಿಕಲ್ ಮಿಷನ್‌ನೊಂದಿಗೆ ಕೆಲಸ ಮಾಡುವ ಸರ್ಕಾರೇತರ ಸಂಸ್ಥೆಗಳು ದಾರ್ ಅಲ್-ಕಲಿಮಾ ವಿಶ್ವವಿದ್ಯಾಲಯ ಮತ್ತು ಬೆತ್ಲೆಹೇಮ್‌ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಅನುದಾನವನ್ನೂ ಸಹ ನೀಡುತ್ತಿವೆ.

ಅಂತರರಾಷ್ಟ್ರೀಯ ನ್ಯಾಯೋಚಿತ ವ್ಯಾಪಾರ ಮಾರುಕಟ್ಟೆಗಳಿಗೆ ಒಲಿವ್ ಮರದ ಕರಕುಶಲ ವಸ್ತುಗಳನ್ನು ಉತ್ಪಾದಿಸಲು ಕುಶಲಕರ್ಮಿಗಳಿಗೆ ಅನುವು ಮಾಡಿಕೊಡಲು, ಒಲಿವ್ ಮರವನ್ನು ಖರೀದಿಸಲು, ಮಾನ್ಯತೆ ಪಡೆದ ನ್ಯಾಯೋಚಿತ ವ್ಯಾಪಾರ ಸಂಸ್ಥೆಯಾದ ಪವಿತ್ರ ನಾಡಿನ ಹ್ಯಾಂಡಿಕ್ರಾಫ್ಟ್ ಕೋಆಪರೇಟಿವ್ ಸೊಸೈಟಿಗೆ ಸಹಾಯ ಮಾಡುವುದು ತಕ್ಷಣದ ಅಗತ್ಯವಾಗಿದೆ ಎಂದು ಶ್ರೀ ಹಜ್ಬೌನ್ ರವರು ಹೇಳಿದರು.
 

11 ಜೂನ್ 2025, 11:49