ಇಸ್ರೇಲ್-ಇರಾನ್: ತೀವ್ರಗೊಂಡ ದಾಳಿ
ವರದಿ: ಏಜೆನ್ಸೀಸ್
ಇಸ್ರೇಲ್ ಮತ್ತು ಇರಾನ್ (Israel-Iran War) ನಡುವಿನ ಮಿಲಿಟರಿ ಸಂಘರ್ಷ ಇಂದು ಮತ್ತಷ್ಟು ತೀವ್ರಗೊಂಡಿದೆ. ಎರಡೂ ಕಡೆಯವರು ಪರಸ್ಪರ ಹೊಸ ಕ್ಷಿಪಣಿ ದಾಳಿಗಳನ್ನು ಮುಂದುವರೆಸಿದ್ದರಿಂದ ಯುದ್ಧದ ಸತತ ಆರನೇ ದಿನ ಕೂಡ ಸಾವು-ನೋವಿನ ಸಂಖ್ಯೆ ಹೆಚ್ಚಾಗಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಇಸ್ರೇಲ್ ಮೇಲೆ ಫತ್ತಾಹ್-1 ಹೈಪರ್‌ಸಾನಿಕ್ ಕ್ಷಿಪಣಿಯನ್ನು ಉಡಾಯಿಸಿರುವುದಾಗಿ ಹೇಳಿಕೊಂಡಿದೆ. ಇದು ಎರಡೂ ದೇಶಗಳ ನಡುವಿನ ಸಂಘರ್ಷದಲ್ಲಿ (Israel-Iran War) ಈ ಕ್ಷಿಪಣಿಯ ಮೊದಲ ಬಳಕೆಯಾಗಿದೆ ಎಂದು ಬಿಬಿಸಿ ವರದಿ ಮಾಡಿದೆ. ಇರಾನ್‌ನಿಂದ ಇಂದು ಬೆಳಗಿನ ಜಾವ ಕ್ಷಿಪಣಿ ದಾಳಿಗಳ ನಂತರ ಟೆಲ್ ಅವೀವ್ ಮೇಲೆ ಸ್ಫೋಟಗಳು ವರದಿಯಾಗಿವೆ. ಆದರೆ ಮಿಲಿಟರಿ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ಇಸ್ರೇಲ್ ವಾಯುದಾಳಿಗಳು ಟೆಹ್ರಾನ್ ಬಳಿ ಮುಂದುವರೆದಿವೆ.
ಇದರ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನಿನ ಪರಮಾಣು ಸೌಲಭ್ಯಗಳ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯಲ್ಲಿ ಮಧ್ಯಪ್ರವೇಶಿಸಲು ಬಯಸುತ್ತಿದ್ದಾರೆ ಎಂದು ಯುಎಸ್ ಮಾಧ್ಯಮ ವರದಿ ಮಾಡಿದೆ. ಟ್ರಂಪ್ ಅವರು G7 ಶೃಂಗಸಭೆಯಿಂದ ಹಠಾತ್ತನೆ ನಿರ್ಗಮಿಸಿದ ಕಾರಣ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಬಂದಿರುವ ಎಚ್ಚರಿಕೆಗಳ ಸರಣಿಯಿಂದಾಗಿ ಈ ಸಂಘರ್ಷದಲ್ಲಿ ಅಮೆರಿಕ ಇಸ್ರೇಲ್ ಜೊತೆ ಕೈಜೋಡಿಸುವ ವದಂತಿಗಳು ಹೆಚ್ಚಾಗುತ್ತಿವೆ.
ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆ ಡೊನಾಲ್ಡ್ ಟ್ರಂಪ್ ಮಂಗಳವಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ ಎನ್ನಲಾಗಿದೆ. ಹಾಗೇ, ಮಧ್ಯಪ್ರಾಚ್ಯಕ್ಕೆ ಹೆಚ್ಚಿನ ಅಮೇರಿಕನ್ ಫೈಟರ್ ಜೆಟ್‌ಗಳನ್ನು ನಿಯೋಜಿಸಲಾಗುತ್ತಿದೆ ಎಂದು ಯುಎಸ್ ಅಧಿಕಾರಿಗಳು ದೃಢಪಡಿಸಿದ್ದಾರೆ.
ಇಸ್ರೇಲ್ ಮತ್ತು ಇರಾನ್ (Israel-Iran War) ನಡುವಿನ ಮಿಲಿಟರಿ ಸಂಘರ್ಷ ಇಂದು ಮತ್ತಷ್ಟು ತೀವ್ರಗೊಂಡಿದೆ. ಎರಡೂ ಕಡೆಯವರು ಪರಸ್ಪರ ಹೊಸ ಕ್ಷಿಪಣಿ ದಾಳಿಗಳನ್ನು ಮುಂದುವರೆಸಿದ್ದರಿಂದ ಯುದ್ಧದ ಸತತ ಆರನೇ ದಿನ ಕೂಡ ಸಾವು-ನೋವಿನ ಸಂಖ್ಯೆ ಹೆಚ್ಚಾಗಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಇಸ್ರೇಲ್ ಮೇಲೆ ಫತ್ತಾಹ್-1 ಹೈಪರ್‌ಸಾನಿಕ್ ಕ್ಷಿಪಣಿಯನ್ನು ಉಡಾಯಿಸಿರುವುದಾಗಿ ಹೇಳಿಕೊಂಡಿದೆ.