MAP

Ukrainian President Volodymyr Zelensky visits Turkey Ukrainian President Volodymyr Zelensky visits Turkey  (ANSA)

ಇಸ್ತಾನ್‌ಬುಲ್‌ನಲ್ಲಿ ಮೊದಲ ಬಾರಿಗೆ ನೇರ ಉಕ್ರೇನ್-ರಷ್ಯಾ ಶಾಂತಿ ಮಾತುಕತೆ

ಗುರುವಾರ ಮಧ್ಯಾಹ್ನ ಇಸ್ತಾನ್‌ಬುಲ್‌ನಲ್ಲಿ ನೂರಾರು ಪತ್ರಕರ್ತರು ಜಮಾಯಿಸಿದ್ದರು, ಏಕೆಂದರೆ ಉಕ್ರೇನ್ ಮತ್ತು ರಷ್ಯಾ 3 ವರ್ಷಗಳಿಗೂ ಹೆಚ್ಚು ಕಾಲದ ಯುದ್ಧದ ನಂತರ ತಮ್ಮ ಮೊದಲ ಬಾರಿಗೆ ನೇರವಾಗಿ ಶಾಂತಿ ಮಾತುಕತೆಯನ್ನು ನಡೆಸಲು ನಿರ್ಧರಿಸಲಾಗಿತ್ತು. ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರವರೂ ಮಾತುಕತೆಗೆ ಕರೆ ನೀಡಿದ್ದರೂ, ಅವರು ಸ್ವತಃ ಮಾತುಕತೆಗೆ ಭಾಗವಹಿಸುವುದಿಲ್ಲ ಎಂದು ರಷ್ಯಾ ದೃಢಪಡಿಸಿದೆ.

ಲಿಂಡಾ ಬೋರ್ಡೋನಿ

ರಷ್ಯಾ ಮತ್ತು ಉಕ್ರೇನಿಯದ ನಿಯೋಗಗಳ ನಡುವೆ ಅಭೂತಪೂರ್ವ ನೇರ ಮಾತುಕತೆ ನಡೆಯಲಿರುವ ಇಸ್ತಾನ್‌ಬುಲ್‌ಗೆ ಪುಟಿನ್ ರವರು ಪ್ರಯಾಣಿಸುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಕ್ರೆಮ್ಲಿನ್ ಗುರುವಾರ ದೃಢಪಡಿಸಿದೆ.

ಟೆಲಿಗ್ರಾಮ್‌ನಲ್ಲಿನ ಪೋಸ್ಟ್‌ನಲ್ಲಿ, ಇಸ್ತಾನ್‌ಬುಲ್‌ನಲ್ಲಿರುವ ರಷ್ಯಾದ ಉನ್ನತ ಸಮಾಲೋಚಕ ವ್ಲಾಡಿಮಿರ್ ಮೆಡಿನ್ಸ್ಕಿರವರು, ಮಾಸ್ಕೋ "ಸಂಘರ್ಷದ ಮೂಲಗಳನ್ನು ತೆಗೆದುಹಾಕುವ ಮೂಲಕ ದೀರ್ಘಾವಧಿಯ ಮತ್ತು ಶಾಶ್ವತ ಶಾಂತಿಯನ್ನು" ಸಾಧಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.

ಆದರೆ ಪಾಶ್ಚಿಮಾತ್ಯ ನಾಯಕರು ಇಸ್ತಾನ್‌ಬುಲ್‌ಗೆ ಕಿರಿಯ ನಿಯೋಗದ ಪ್ರತಿನಿಧಿಯನ್ನು ಕಳುಹಿಸುವ ರಷ್ಯಾದ ನಿರ್ಧಾರವನ್ನು ಟೀಕಿಸಿದ್ದಾರೆ, ಆದರೆ ಉಕ್ರೇನಿಯದ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿರವರು ರಷ್ಯಾದ ಕಡೆಯಿಂದ ಯಾರು ಭಾಗವಹಿಸುತ್ತಿದ್ದಾರೆ ಎಂಬುದರ ಕುರಿತು ಅಧಿಕೃತವಾಗಿ ತಿಳಿಸಲಾಗಿಲ್ಲ ಮತ್ತು ರಷ್ಯಾದ ನಿಯೋಗವನ್ನು "ಮೂರ್ಖತನ" ಎಂದು ಬಣ್ಣಿಸಿದ್ದಾರೆ.

ಇದರ ನಡುವೆ, ಅಂಕಾರಾದಲ್ಲಿ, ಉಕ್ರೇನಿಯದ ಅಧ್ಯಕ್ಷರು ತಮ್ಮ ಟರ್ಕಿಶ್ ಪ್ರತಿರೂಪವಾದ ಅಧ್ಯಕ್ಷ ಎರ್ಡೋಗನ್ ರವರನ್ನು ಭೇಟಿಯಾದರು, ಆದರೆ ದಕ್ಷಿಣ ಟರ್ಕಿಶ್ ಪ್ರಾಂತ್ಯದ ಅಂತಲ್ಯದಲ್ಲಿ ಅನೌಪಚಾರಿಕ ನ್ಯಾಟೋ ವಿದೇಶಾಂಗ ಮಂತ್ರಿಗಳ ಸಭೆ ನಡೆಯಿತು.

ಇತ್ತೀಚಿನ ತಿಂಗಳುಗಳಲ್ಲಿ ಟ್ರಂಪ್ ರವರ ಆಡಳಿತ ಮತ್ತು ಪಶ್ಚಿಮ ಯುರೋಪಿನ ನಾಯಕರು ನೀಡಿದ್ದ ಶಾಂತಿ ಪ್ರಯತ್ನಗಳಲ್ಲಿ ಪ್ರಗತಿ ಸಾಧಿಸುವ ಭರವಸೆಯನ್ನು ಪುಟಿನ್ ರವರ ಅನುಪಸ್ಥಿತಿಯು ಛಿದ್ರಗೊಳಿಸಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.

ಪಶ್ಚಿಮ ದೇಶಗಳಿಂದ ಬೆದರಿಕೆಗೆ ಒಳಗಾಗಿರುವ ರಷ್ಯಾದ ಮೇಲೆ ಅಂತರರಾಷ್ಟ್ರೀಯ ನಿರ್ಬಂಧಗಳನ್ನು ತೀವ್ರಗೊಳಿಸುವ ಸಾಧ್ಯತೆಯನ್ನೂ ಇದು ಹೆಚ್ಚಿಸಿದೆ.

ವಿಶ್ವಸಂಸ್ಥೆಯ ಪ್ರಕಾರ, ಯುದ್ಧವು ಎರಡೂ ಕಡೆಗಳಲ್ಲಿ ಹತ್ತಾರು ಸಾವಿರ ಸೈನಿಕರನ್ನು ಮತ್ತು 12,000ಕ್ಕೂ ಹೆಚ್ಚು ಉಕ್ರೇನಿಯದ ನಾಗರಿಕರನ್ನು ಕೊಂದಿದೆ ಮತ್ತು ರಷ್ಯಾದ ಪಡೆಗಳು ಹೊಸ ಮಿಲಿಟರಿ ದಾಳಿಯನ್ನು ಸಿದ್ಧಪಡಿಸುತ್ತಿರುವಾಗ ಸುಮಾರು 1,000 ಕಿಲೋಮೀಟರ್ ಮುಂಚೂಣಿಯಲ್ಲಿ ಮುಂದುವರೆದಿದೆ ಎಂದು ವರದಿಯಾಗಿದೆ.

ರಷ್ಯಾದ ಸೈನ್ಯವು ಮುನ್ನಡೆಯಲು ಪ್ರಯತ್ನಿಸುತ್ತಿರುವ ಉಕ್ರೇನ್‌ನ ಐದು ಪೂರ್ವ ಪ್ರದೇಶಗಳಲ್ಲಿ ಅಧಿಕಾರಿಗಳ ಪ್ರಕಾರ, ಕಳೆದ ದಿನದಲ್ಲಿ ಕನಿಷ್ಠ ಐದು ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 29 ಮಂದಿ ಗಾಯಗೊಂಡಿದ್ದಾರೆ.

ಯುರೋಪಿನ ನಾಯಕರು ಕೈವ್‌ನಲ್ಲಿ ಝೆಲೆನ್ಸ್ಕಿಯನ್ನು ಭೇಟಿಯಾಗಿ ಕ್ರೆಮ್ಲಿನ್ ರವರನ್ನು ಶಾಂತಿಯತ್ತ ಮೊದಲ ಹೆಜ್ಜೆಯಾಗಿ ಸಂಪೂರ್ಣವಾಗಿ, ಯಾವುದೇ ಷರತ್ತುಗಳಿಲ್ಲದೆ 30 ದಿನಗಳ ಕದನ ವಿರಾಮಕ್ಕೆ ಒಪ್ಪಿಕೊಳ್ಳುವಂತೆ ಒತ್ತಾಯಿಸಿದಾಗ ವಾರಾಂತ್ಯದಲ್ಲಿ ಪ್ರಸ್ತುತ ರಾಜತಾಂತ್ರಿಕ ಪ್ರಯತ್ನಗಳು ಪ್ರಾರಂಭವಾದವು. ನಂತರ ಪುಟಿನ್ ರವರು ಇಸ್ತಾನ್‌ಬುಲ್‌ನಲ್ಲಿ ಉಕ್ರೇನ್‌ನಿನೊಂದಿಗೆ ನೇರ ಮಾತುಕತೆಯನ್ನು ಪ್ರಸ್ತಾಪಿಸುವ ಮೂಲಕ ಪ್ರತಿಕ್ರಿಯಿಸಿದರು, ಈ ನೇರ ಶಾಂತಿ ಮಾತುಕತೆಯ ಇಬ್ಬರು ನಾಯಕರ ನಡುವೆ ಮುಖಾಮುಖಿಯಾಗಬೇಕೆಂದು ಝೆಲೆನ್ಸ್ಕಿರವರು ಒತ್ತಾಯಿಸುತ್ತಾರೆ.

ಅಮೇರಿಕ ಅಧ್ಯಕ್ಷರು ಸ್ವತಃ ಪುಟಿನ್ ರವರನ್ನು ಭೇಟಿಯಾಗುವವರೆಗೂ ಯಾವುದೇ ಪ್ರಗತಿ ಸಾಧ್ಯವಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಮತ್ತು ಸೂಕ್ತವಾಗಿದ್ದರೆ ಟರ್ಕಿಗೆ ಪ್ರವಾಸ ಇನ್ನೂ ಉತ್ತಮವಾದದ್ದು ಎಂದು ಸೂಚಿಸಿದರು.
 

15 ಮೇ 2025, 12:36