MAP

MAP Leo XIV MAP Leo XIV  (ANSA)

ಬುರ್ಕಿನಾ ಫಾಸೊ ಅಧ್ಯಕ್ಷರಿಗೆ ಕೃತಕ ಬುದ್ಧಿಮತ್ತೆಯ ನಕಲಿ ಸಂದೇಶ

ಬುರ್ಕಿನಾ ಫಾಸೊದ ಅಧ್ಯಕ್ಷ ಇಬ್ರಾಹಿಂ ಟ್ರೋರೆ ರವರಿಗೆ ವಿಶ್ವಗುರು ಹದಿನಾಲ್ಕನೇ ಲಿಯೋರವರ ಪದಗಳನ್ನು ತಪ್ಪಾಗಿ ಆರೋಪಿಸಿ ಕೃತಕ ಬುದ್ಧಿಮತ್ತೆಯ ಸಹಾಯಯಿಂದ ರಚಿಸಲಾದ 36 ನಿಮಿಷಗಳ ಇಂಗ್ಲಿಷ್ ಭಾಷಣವನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಲಾಗಿದೆ.

ವ್ಯಾಟಿಕನ್ ಸುದ್ದಿ

"ಬುರ್ಕಿನಾ ಫಾಸೊದ ಸಾರ್ವಭೌಮ ರಾಷ್ಟ್ರದ ಅಧ್ಯಕ್ಷ, ಆಫ್ರಿಕಾದ ಮಣ್ಣಿನ ಮಗ, ತನ್ನ ಜನರ ರಕ್ಷಕ, ಘನತೆವೆತ್ತ ಅಧ್ಯಕ್ಷ ಇಬ್ರಾಹಿಂ ಟ್ರೋರೆರವರಿಗೆ, ಬುದ್ಧಿವಂತಿಕೆ, ಧೈರ್ಯ ಮತ್ತು ಸತ್ಯದ ಮೂಲಕ ನಿಮಗೆ ಅನುಗ್ರಹ ಮತ್ತು ಶಾಂತಿ ಹೆಚ್ಚಲಿ."

ಕೃತಕ ಬುದ್ಧಿಮತ್ತೆಯಿಂದ ರಚಿಸಲಾದ ಇಂಗ್ಲಿಷ್ ಭಾಷೆಯ ಸಂದೇಶವು ಹೀಗೆ ಪ್ರಾರಂಭವಾಗುತ್ತದೆ.

"ಪ್ಯಾನ್ ಆಫ್ರಿಕನ್ ಡ್ರೀಮ್ಸ್" ಖಾತೆಯಲ್ಲಿ ಸುಮಾರು 36 ನಿಮಿಷಗಳ ವೀಡಿಯೊವನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಲಾಗಿದೆ, ಇದನ್ನು ಮೇ 12, ಸೋಮವಾರ ಪತ್ರಕರ್ತರೊಂದಿಗೆ ವಿಶ್ವಗುರು ಹದಿನಾಲ್ಕನೇ ಲಿಯೋರವರು ಅವರ ಪ್ರೇಕ್ಷಕರ ದೃಶ್ಯಗಳನ್ನು ಬಳಸಿಕೊಂಡು ನಿರ್ಮಿಸಲಾಗಿದೆ.

"ಮಾರ್ಫಿಂಗ್" ತಂತ್ರವನ್ನು ಬಳಸಿಕೊಂಡು, ಅಂದರೆ, ತುಟಿಗಳ ಚಲನೆಯು AI- ರಚಿತವಾದ ಪದಗಳಿಗೆ ಹೊಂದಿಕೆಯಾಗುವಂತೆ ಚಿತ್ರವನ್ನು ಪರಿವರ್ತಿಸುವುದು.

ವಿಶ್ವಗುರು ಹದಿನಾಲ್ಕನೇ ಲಿಯೋರವರು ಕ್ಯಾಪ್ಟನ್ ಇಬ್ರಾಹಿಂ ಟ್ರೋರೆಗೆ ಪ್ರತಿಕ್ರಿಯಿಸುತ್ತಾರೆ, “ಸತ್ಯ, ನ್ಯಾಯ ಮತ್ತು ಸಾಮರಸ್ಯದ ಸಂದೇಶ" ಎಂಬ ಶೀರ್ಷಿಕೆಯಡಿಯಲ್ಲಿ ಈ ನಕಲಿ ವೀಡಿಯೊ ಇದೆ.

ನೂತನ ವಿಶ್ವಗುರು ಬುರ್ಕಿನಾ ಫಾಸೊ ಅಧ್ಯಕ್ಷ ಇಬ್ರಾಹಿಂ ಟ್ರೋರೆರವರಿಗೆ ತಮ್ಮ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಸಂಪೂರ್ಣ ಸಾರ್ವಜನಿಕ ಭಾಷಣ ಮಾಡಿದ್ದಾರೆ ಎಂದು ವೀಕ್ಷಕರು ನಂಬುವಂತೆ ಮಾಡಲಾಗಿದೆ ಮತ್ತು ವೀಡಿಯೊ ದೃಶ್ಯದಲ್ಲಿ ವಿಶ್ವಗುರು ಹದಿನಾಲ್ಕನೇ ಲಿಯೋರವರು, ಹೀಗೆ ಹೇಳುವಂತೆ ಮಾಡಲಾಗಿದೆ: “ನಾನು ನಿಮ್ಮ ಮಾತುಗಳನ್ನು ಒಮ್ಮೆ ಅಲ್ಲ, ಹಲವು ಬಾರಿ ಓದಿದ್ದೇನೆ ಮತ್ತು ಪ್ರತಿ ಬಾರಿಯು ಓದಿದಾಗ ಅದು ಕೊನೆಯ ಬಾರಿ ಒದಿದಕ್ಕಿಂತ ಆಳವಾಗಿದೆ, ಏಕೆಂದರೆ ನಿಮ್ಮ ಧ್ವನಿಯಲ್ಲಿ ನಾನು ಅಧ್ಯಕ್ಷರ ಕೋಪವನ್ನು ಮಾತ್ರವಲ್ಲದೆ, ಪರಿತ್ಯಾಗ ಮತ್ತು ಶೋಷಣೆಯಿಂದ ದೀರ್ಘಕಾಲ ಗಾಯಗೊಂಡಿರುವ ಖಂಡದ ನೀತಿವಂತ ಕೂಗಿನ ಧ್ವನಿಯನ್ನು ಕೇಳಿದ್ದೇನೆ.

ಈ ವೀಡಿಯೊ ಮೇ 15 ರಂದು ಬಿಬಿಸಿ ನ್ಯೂಸ್ ಪ್ರಸಾರ ಮಾಡಿದ ನಕಲಿ ಸಂದೇಶಗಳ ಸರಣಿಯ ಭಾಗವಾಗಿದೆ (https://www.bbc.com/afrique/articles/c3rpw8n0zvxo), ಮತ್ತು "ನೌ ಸೆ ಲೆಗ್ಲಿಜ್" ಎಂಬ YouTube ಖಾತೆಯಿಂದ ಸ್ವಲ್ಪ ಚಿಕ್ಕದಾದ, ಕಡಿಮೆ-ಗುಣಮಟ್ಟದ ಆವೃತ್ತಿಯಲ್ಲಿ ಮರುಪೋಸ್ಟ್ ಮಾಡಲಾಗಿದೆ.

ವಿಶ್ವಗುರುಗಳ ಚಿತ್ರ ಪುನರಾವರ್ತನೆಯಾಗಿರುವುದು ಗಮನಾರ್ಹವಾಗಿದೆ, ಮತ್ತು ಲಿಯೋರವರು ಇಡೀ ಸಂದೇಶದುದ್ದಕ್ಕೂ ಅದೇ ಎರಡು ಕಾಗದದ ಹಾಳೆಗಳನ್ನು ಹಿಡಿದಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ನೂತನ ವಿಶ್ವಗುರುಗಳಿಗೆ ಸಂಬಂಧಿಸಿದ ಪಠ್ಯಗಳು ಮೂಲ ಸೂಚನೆಯಿಲ್ಲದೆ ಪ್ರಸಾರವಾಗುತ್ತಿರುವುದನ್ನು ಗಮನಿಸಿದರೆ, ವಿಶ್ವಗುರು ಹದಿನಾಲ್ಕನೇ ಲಿಯೋರವರ ಎಲ್ಲಾ ಭಾಷಣಗಳು, ಸಂದೇಶಗಳು ಮತ್ತು ಪಠ್ಯಗಳನ್ನು vatican.vaನಲ್ಲಿ ಪೂರ್ಣವಾಗಿ ಸಮಾಲೋಚಿಸಬಹುದು ಎಂಬುದನ್ನು ನೆನಪಿಸಿಕೊಳ್ಳುವುದು ಯೋಗ್ಯವಾಗಿದೆ.

ಅವರ ಚಟುವಟಿಕೆಗಳ ಸುದ್ದಿಗಳು ಮತ್ತು ವೀಡಿಯೊ ಸಂದೇಶಗಳು vaticannews.vaನಲ್ಲಿರುವ ವ್ಯಾಟಿಕನ್ ಸುದ್ಧಿಯ ಪೋರ್ಟಲ್‌ನಲ್ಲಿ ಬಹು ಭಾಷೆಗಳಲ್ಲಿ ಹಾಗೂ ವ್ಯಾಟಿಕನ್‌ನ ವೃತ್ತಪತ್ರಿಕೆ ವೆಬ್‌ಸೈಟ್ L’Osservatore Romano osservatoreromano.va ನಲ್ಲಿ ನೈಜ ಸಮಯದಲ್ಲಿ ಲಭ್ಯವಿದೆ.
 

21 ಮೇ 2025, 14:29