MAP

Aftermath of an Israeli strike at a school sheltering displaced people, in Jabalia refugee camp Aftermath of an Israeli strike at a school sheltering displaced people, in Jabalia refugee camp  (MAHMOUD ISSA)

ಗಾಜಾ ಮುತ್ತಿಗೆಯನ್ನು ತಕ್ಷಣವೇ ಕೊನೆಗೊಳಿಸಲು UNRWA ತುರ್ತು ಮನವಿ ಮಾಡಿದೆ

UNRWA ಸಂವಹನದ ನಿರ್ದೇಶಕಿ ಜೂಲಿಯೆಟ್ ತೌಮಾರವರು, ಗಾಜಾದಲ್ಲಿ ಹದಗೆಡುತ್ತಿರುವ ಮಾನವೀಯ ಬಿಕ್ಕಟ್ಟನ್ನು ಎತ್ತಿ ತೋರಿಸುತ್ತಾರೆ ಮತ್ತು ಅಂತರರಾಷ್ಟ್ರೀಯ ಸಮುದಾಯವು ಕದನ ವಿರಾಮವನ್ನು ತಲುಪಲು ಮತ್ತು ನೆರವು ವಿತರಣೆಯನ್ನು ಖಚಿತಪಡಿಸಿಕೊಳ್ಳಲು "ಸಾಧ್ಯವಾದ ಎಲ್ಲಾ ಕ್ರಿಯೆಗಳನ್ನೂ" ಮಾಡಬೇಕೆಂದು ಒತ್ತಾಯಿಸುತ್ತಾರೆ.

ಬೀಟ್ರಿಸ್ ಗೌರೆರಾ

ಪ್ಯಾಲಸ್ತೀನಿಯದ ನಿರಾಶ್ರಿತರಿಗಾಗಿ ವಿಶ್ವಸಂಸ್ಥೆಯ ಸಂಸ್ಥೆಯಾದ UNRWA ನಲ್ಲಿ ಸಂವಹನ ನಿರ್ದೇಶಕಿ ಜೂಲಿಯೆಟ್ ತೌಮಾರವರು "ನಮ್ಮ ಹಂಚಿಕೆಯ ಮಾನವೀಯತೆಯನ್ನು ಉಳಿಸಲು" ಒಂದು ಹೃತ್ಪೂರ್ವಕ ಮನವಿಯನ್ನು ಮಾಡಿದ್ದಾರೆ. ವ್ಯಾಟಿಕನ್ ಸುದ್ಧಿ ಜೊತೆ ಮಾತನಾಡಿದ ತೌಮಾರವರು, ಗಾಜಾ ಗಡಿಯಲ್ಲಿ ಜೀವನ ಪರಿಸ್ಥಿತಿಗಳು ದುರಂತಮಯವಾಗಿದ್ದು, "ಕದನ ವಿರಾಮವನ್ನು ಸಾಧಿಸಲು ಸಾಧ್ಯವಿರುವ ಎಲ್ಲಾ ಕ್ರಿಯೆಗಳನ್ನೂ " ಮಾಡಬೇಕೆಂದು ಜಗತ್ತಿಗೆ ಕರೆ ನೀಡಿದರು.

ನಮಗೆ ಬಾಂಬ್ ದಾಳಿಗಳು ನಿಲ್ಲಬೇಕು ಎಂದು ಅವರು ಹೇಳಿದರು. ಜನರಿಗೆ ಸ್ವಲ್ಪ ಪರಿಹಾರ ಬೇಕು. ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು ಮತ್ತು ಮಾನವೀಯ ಮತ್ತು ವಾಣಿಜ್ಯ ನೆರವು ಒಳಗೆ ಬರಲು ಅವಕಾಶ ನೀಡಬೇಕು.

ಯುದ್ಧ ಆರಂಭವಾಗಿ 580 ದಿನಗಳಿಗೂ ಹೆಚ್ಚು ಸಮಯವಾಗಿದೆ, ಇಸ್ರೇಲಿ ವೈಮಾನಿಕ ದಾಳಿಯಲ್ಲಿ 52,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 120,000 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ, ಪ್ಯಾಲೆಸ್ಟೀನಿಯನ್ ಸಂಸ್ಥೆ WAFA ಪ್ರಕಾರ ಗಾಜಾ ಸಂಪೂರ್ಣ ನಾಶದ ಅಂಚಿನಲ್ಲಿದೆ.

ಯಾವ ಸ್ಥಳವೂ ಸುರಕ್ಷಿತವಾಗಿಲ್ಲ
ಗಾಜಾದಲ್ಲಿ ಪರಿಸ್ಥಿತಿ ಭೀಕರವಾಗಿದೆ, ಎರಡು ತಿಂಗಳಿಗೂ ಹೆಚ್ಚು ಕಾಲ ನಡೆಯುತ್ತಿರುವ ಮುತ್ತಿಗೆಯಿಂದ ಇದು ಇನ್ನಷ್ಟು ಹದಗೆಟ್ಟಿದೆ ಎಂದು ತೌಮಾರವರು ವಿವರಿಸಿದರು. ಅವರ ಮೂಲಭೂತ ಸರಬರಾಜುಗಳಾದ ಆಹಾರ, ನೈರ್ಮಲ್ಯ ಉತ್ಪನ್ನಗಳು, ಔಷಧಗಳು ಖಾಲಿಯಾಗುತ್ತಿವೆ ಎಂದು ಹೇಳಿದರು. ಆದರೆ, ಅವರ ತಂಡಗಳು ಇನ್ನೂ ಅಲ್ಲೇ ಇವೆ ಮತ್ತು ಇನ್ನೂ ಕೆಲಸ ಮಾಡುತ್ತಿವೆ. UNRWA ಗಾಜಾದಲ್ಲಿ ಅತಿ ದೊಡ್ಡ ಮಾನವೀಯ ಉಪಸ್ಥಿತಿಯಾಗಿದ್ದು, 10,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ಹೊಂದಿದೆ.

ಎಲ್ಲದರ ಹೊರತಾಗಿಯೂ, ಅವರು ಅಸಾಧಾರಣ ಕೆಲಸ ಅಥವಾ ಸೇವೆ ಮಾಡುವುದನ್ನು ಮುಂದುವರಿಸುತ್ತಾರೆ. ನಾವು ಅವರೊಂದಿಗೆ ಸಂಪರ್ಕ ಸಾಧಿಸಿದಾಗ, ಇಂಟರ್ನೆಟ್ ಇದ್ದರೆ, ಅವರು ಎಷ್ಟು ಮತ್ತು ಹೇಗೆ ತಮ್ಮ ತೂಕ ಇಳಿಸಿಕೊಳ್ಳುತ್ತಿದ್ದಾರೆಂದು ನಾವು ನೋಡಬಹುದು. ಏಕೆಂದರೆ, ಅವರು ತಮ್ಮ ಇಡೀ ಕುಟುಂಬದೊಂದಿಗೆ ಒಂದೇ ಒಂದು ಹೊತ್ತಿನ ಊಟವನ್ನು ಹಂಚಿಕೊಳ್ಳಲು ಸಿದ್ಧರಿದ್ದಾರೆ ಎಂದು ನಮಗೆ ಹೇಳುತ್ತಾರೆ.

ಒಂದು ಕಾಲದಲ್ಲಿ ಶಿಕ್ಷಕರಾಗಿದ್ದ ಅನೇಕರು ಈಗ ಮಾನವೀಯ ಪ್ರತಿಕ್ರಿಯೆಯನ್ನು ಬೆಂಬಲಿಸುತ್ತಿದ್ದಾರೆ ಎಂದು ತೌಮಾರವರು ಹೇಳಿದರು. ಅವರು ಆಶ್ರಯ ತಾಣಗಳನ್ನು ನಡೆಸುತ್ತಾರೆ, ವಾಹನಗಳನ್ನು ಓಡಿಸುತ್ತಾರೆ ಮತ್ತು ಆಹಾರವನ್ನು ವಿತರಿಸುತ್ತಾರೆ. ಬಾಂಬ್ ದಾಳಿ ಮುಂದುವರಿಯುತ್ತಲ್ಲೇ ಇದೆ. ಜನರು ಸುರಕ್ಷತೆಗಾಗಿ ಹತಾಶರಾಗಿದ್ದಾರೆ, ಆದರೆ ಅವರಿಗೆ ಯಾವುದೇ ಸುರಕ್ಷತೆ ಇಲ್ಲ. ಶಾಲೆಗಳು, ವಿಶ್ವಸಂಸ್ಥೆಯ ಕಟ್ಟಡಗಳು ಅಥವಾ ಆಸ್ಪತ್ರೆಗಳು ಸೇರಿದಂತೆ ಎಲ್ಲಿಯೂ ಸುರಕ್ಷಿತವಾಗಿಲ್ಲ. ಅವೆಲ್ಲವನ್ನೂ ಧಾಳಿಯಲ್ಲಿ ಗುರಿಯಾಗಿಸಲಾಗಿದೆ.

ಪ್ರದೇಶದಾದ್ಯಂತ ಬೆಂಬಲ
ಯುಎನ್‌ಆರ್‌ಡಬ್ಲ್ಯೂಎ ಪಶ್ಚಿಮ ದಂಡೆಯಲ್ಲಿ 50,000 ಮಕ್ಕಳಿಗೆ ಯಾವುದೇ ಅಡೆತಡೆಯಿಲ್ಲದೆ ಶಿಕ್ಷಣವನ್ನು ಒದಗಿಸುವುದನ್ನು ಮುಂದುವರೆಸಿದೆ. ಆದರೆ ಸಿಬ್ಬಂದಿಗೆ ಇನ್ನು ಮುಂದೆ ವೀಸಾಗಳನ್ನು ನೀಡದ ಕಾರಣ ಮೇಲ್ವಿಚಾರಣೆ ಕಾರ್ಯಾಚರಣೆಗಳು ಹೆಚ್ಚು ಕಷ್ಟಕರವಾಗಿದೆ.

ಇಸ್ರಯೇಲ್ ಅಧಿಕಾರಿಗಳು UNRWA ಜೊತೆ ಸಂವಹನ ನಡೆಸುವುದನ್ನು ಸಹ ನಿಷೇಧಿಸಲಾಗಿದೆ ಎಂದು ತೌಮಾರವರು ವಿವರಿಸಿದರು. "ಯಾವುದೇ ಸಮನ್ವಯವಿಲ್ಲ. ಆಕ್ರಮಿತ ಪೂರ್ವ ಜೆರುಸಲೇಮ್‌ನಲ್ಲಿ, ನಮ್ಮ ಸೇವೆಗಳು ನಿರಂತರವಾಗಿ ಬೆದರಿಕೆಗೆ ಒಳಗಾಗುತ್ತಿವೆ, ಸುಮಾರು 800 ಮಕ್ಕಳ ಶಾಲೆಗಳು ಸೇರಿದಂತೆ ನಿರಂತರವಾಗಿ ಬೆದರಿಕೆಗೆ ಒಳಗಾಗುತ್ತಿವೆ.

UNRWA ನೆರೆಯ ರಾಷ್ಟ್ರಗಳಾದ ಜೋರ್ಡಾನ್, ಸಿರಿಯಾ ಮತ್ತು ಲೆಬನಾನ್‌ನಲ್ಲಿರುವ ಪ್ಯಾಲಸ್ತೀನಿಯದ ನಿರಾಶ್ರಿತರನ್ನು ಸಹ ಬೆಂಬಲಿಸುತ್ತದೆ. ಅವರಲ್ಲಿ ಅನೇಕರು ತೀವ್ರ ಬಡತನ ಮತ್ತು ದುರ್ಬಲತೆಯಲ್ಲಿ ವಾಸಿಸುತ್ತಿದ್ದಾರೆ. "ನಾವು ಅವರಿಗೆ ನಮ್ಮ ಚಿಕಿತ್ಸಾಲಯಗಳಲ್ಲಿ ಮೂಲಭೂತ, ಮಾನವೀಯ ನೆರವು, ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯ ಸೇವೆಗಳನ್ನು ಒದಗಿಸುತ್ತೇವೆ.

ಹಲವು ಸವಾಲುಗಳ ಹೊರತಾಗಿಯೂ, ಪ್ಯಾಲಸ್ತೀನಿಯದ ನಿರಾಶ್ರಿತರು ಎಲ್ಲೇ ಇದ್ದರೂ, ವಿಶೇಷವಾಗಿ ಗಾಜಾದಲ್ಲಿ, ಪರಿಸ್ಥಿತಿ ದಿನದಿಂದ ದಿನಕ್ಕೆ ಹೆಚ್ಚು ಹತಾಶವಾಗುತ್ತಿರುವಾಗ ಅವರನ್ನು ಬೆಂಬಲಿಸಲು ಸಂಸ್ಥೆ ಬದ್ಧವಾಗಿದೆ.
 

14 ಮೇ 2025, 12:40