MAP

A man draws a mural Shireen Abu Akleh in Khan Younis, Southern Gaza Strip, in 2002 A man draws a mural Shireen Abu Akleh in Khan Younis, Southern Gaza Strip, in 2002 

ಶಿರೀನ್ ಅಬು ಅಕ್ಲೆಹ್ ಮತ್ತು ನ್ಯಾಯಕ್ಕಾಗಿ ಅನ್ವೇಷಣೆ

ಮೂರು ವರ್ಷಗಳ ಹಿಂದೆ ಗುಂಡು ಹಾರಿಸಿ ಕೊಲ್ಲಲ್ಪಟ್ಟ ಪ್ಯಾಲಸ್ತೀನಿಯದ ಕಥೋಲಿಕ ಪತ್ರಕರ್ತೆ ಮತ್ತು "ಪವಿತ್ರ ನಾಡಿನ ತುಳಿತಕ್ಕೊಳಗಾದ ಜನರ ಧ್ವನಿ"ಯಾಗಿದ್ದ ತಮ್ಮ ಸಹೋದರಿ ಶಿರೀನ್ ಬಗ್ಗೆ ಆಂಟನ್ ಅಬು ಅಕ್ಲೆಹ್ ರವರು ವ್ಯಾಟಿಕನ್ ಮಾಧ್ಯಮದೊಂದಿಗೆ ಮಾತನಾಡುತ್ತಿದ್ದಾರೆ.

ಜೋಸೆಫ್ ತುಲ್ಲೊಚ್ ಮತ್ತು ರಾಬರ್ಟೊ ಸೆಟೆರಾ

ಮೂರು ವರ್ಷಗಳ ಹಿಂದೆ, ವೆಸ್ಟ್ ಬ್ಯಾಂಕ್‌ನಿಂದ ವರದಿ ಮಾಡುವುದಕ್ಕೆ ಅರಬ್ ಪ್ರಪಂದಾದ್ಯಂತ ಹೆಸರುವಾಸಿಯಾಗಿದ್ದ ಪ್ಯಾಲಸ್ತೀನಿಯ-ಅಮೇರಿಕದ ಪತ್ರಕರ್ತೆ ಶಿರೀನ್ ಅಬು ಅಕ್ಲೆಹ್ ರವರ ತಲೆಯ ಹಿಂಭಾಗಕ್ಕೆ ಜೆನಿನ್ ನಿರಾಶ್ರಿತರ ಶಿಬಿರದ ಮೇಲೆ ಇಸ್ರಯೇಲ್ ದಾಳಿಯ ಸಮಯದಲ್ಲಿ ಗುಂಡು ಹಾರಿಸಲಾಯಿತು.

ಇಂದಿಗೂ ಆಕೆಯ ಹತ್ಯೆಗೆ ಯಾರನ್ನೂ ಹೊಣೆಗಾರರನ್ನಾಗಿ ಮಾಡಲಾಗಿಲ್ಲ.
ಆರಂಭದಲ್ಲಿ, ಇಸ್ರಯೇಲ್ ಆಕೆಯ ಸಾವಿನಲ್ಲಿ ಯಾವುದೇ ಪಾತ್ರವಿಲ್ಲ ಎಂದು ನಿರಾಕರಿಸಿತ್ತು, ಅಬು ಅಕ್ಲೆಹ್ ರವರ ಮೇಲೆ ಪ್ಯಾಲಸ್ತೀನಿಯದ ಉಗ್ರಗಾಮಿಗಳು ಆಕಸ್ಮಿಕವಾಗಿ ಗುಂಡು ಹಾರಿಸಿದ್ದಾರೆ ಎಂದು ಹೇಳಿತ್ತು. ನಾಲ್ಕು ತಿಂಗಳ ನಂತರ, ಐಡಿಎಫ್ ಅಂತಿಮವಾಗಿ ತನ್ನದೇ ಆದ ಸೈನಿಕರಲ್ಲಿ ಒಬ್ಬರು ಈ ಘಟನೆಗೆ ಬಹುತೇಕ ಜವಾಬ್ದಾರರು ಎಂದು ಒಪ್ಪಿಕೊಂಡರು, ಆದರೆ ಪತ್ರಕರ್ತರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡಿದ್ದಾರೆ ಎಂಬುದನ್ನು ನಿರಾಕರಿಸಿದರು.

ಹತ್ಯೆಯ ಕುರಿತು ಇಸ್ರಯೇಲ್ ನಡೆಸಿದ ತನಿಖೆಯ ವಿವರಗಳನ್ನು ಎಂದಿಗೂ ಬಹಿರಂಗಪಡಿಸಲಾಗಿಲ್ಲ, ಮತ್ತು ಇಸ್ರಯೇಲ್ ಅಧಿಕಾರಿಗಳ ಸಹಯೋಗದ ಕೊರತೆಯಿಂದಾಗಿ ಅಮೇರಿಕದ ತನಿಖೆಯು ಅನಿಶ್ಚಿತವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ ಜಜೀರಾ ಪತ್ರಕರ್ತೆಯು ಮತ್ತು ಕಥೊಲಿಕರಾಗಿರುವ ಅಬು ಅಕ್ಲೆಹ್, ವೆಸ್ಟ್ ಬ್ಯಾಂಕ್‌ನಿಂದ ವರದಿ ಮಾಡುತ್ತಿದ್ದ ಕೆಲವೇ ಕೆಲವು ಮಹಿಳಾ ಪ್ಯಾಲಸ್ತೀನಿಯದ ಪತ್ರಕರ್ತರಲ್ಲಿ ಒಬ್ಬರಾಗಿದ್ದರು. ಅವರು "ಪ್ಯಾಲಸ್ತೀನಿಯದ ಜನರ ಹೃದಯಗಳನ್ನು ಪ್ರವೇಶಿಸಿದರು" ಎಂದು ಅವರ ಸಹೋದರ ಆಂಟನ್ ರವರು ವ್ಯಾಟಿಕನ್ ಮಾಧ್ಯಮಕ್ಕೆ ತಿಳಿಸಿದರು. ಆಕೆಯು ಪ್ಯಾಲಸೀನಿಯದ ಧ್ವನಿಯಾಗಿದ್ದಳು, ಪವಿತ್ರ ನಾಡಿನ ದಮನಿತ ಜನರ ಧ್ವನಿಯಾಗಿದ್ದಳು."

ನ್ಯಾಯಕ್ಕಾಗಿ ಅನ್ವೇಷಣೆ
ಮೇ 11ರಂದು ರಾಬರ್ಟೊ ಸೆಟೆರಾರವರ ಸಹೋದರಿಯ ಮರಣದ ಮೂರು ವರ್ಷಗಳ ವಾರ್ಷಿಕೋತ್ಸವದಂದು ನಡೆಸಿದ ಸಂದರ್ಶನದಲ್ಲಿ, ಆಂಟನ್ ಅಬು ಅಕ್ಲೆಹ್ ರವರ ಕುಟುಂಬವು "[ಇಸ್ರಯೇಲ್] ಕಡೆಯಿಂದ ಯಾವುದೇ ತನಿಖೆಯನ್ನು ಸ್ವೀಕರಿಸುವುದಿಲ್ಲ" ಎಂದು ಒತ್ತಿ ಹೇಳಿದರು.

ಆಕೆಯು ಕೊಲ್ಲಲ್ಪಟ್ಟ ಸಮಯದಲ್ಲಿ, ಅಬು ಅಕ್ಲೆಹ್ 'ಪ್ರೆಸ್' ಎಂಬ ಪದದೊಂದಿಗೆ ಸ್ಪಷ್ಟವಾಗಿ ಗುರುತಿಸಲಾದ ನೀಲಿ ಗುಂಡು ನಿರೋಧಕ ಉಡುಪನ್ನು ಧರಿಸಿದ್ದಳು. ಇಸ್ರಯೇಲ್ ಸೈನ್ಯವು ತನ್ನ ಸಹೋದರಿಯನ್ನು "ಗುರಿಯಾಗಿರಿಸಿಕೊಂಡಿತು" ಎಂದು ಆಂಟನ್ ರವರು ಹೇಳಿದರು: "ಶಿರೀನ್ ರವರನ್ನು ಗುರಿಯಾಗಿಸಿಕೊಂಡವರೇ, ಆಕೆಯನ್ನು ಕೊಂದವರು ಅವರೇ."

"ಮೂರು ವರ್ಷಗಳ ನಂತರವೂ ಅವರು ನಮಗೆ ಯಾವುದೇ ಸಂಗತಿಗಳು ಅಥವಾ ತನಿಖೆಯನ್ನು ಒದಗಿಸಿಲ್ಲ" ಎಂದು ಅಬು ಅಕ್ಲೆಹ್ ರವರು ಒತ್ತಿ ಹೇಳಿದರು.

ಅವರ ಸಹೋದರಿ ಹುಟ್ಟಿನಿಂದ ಪ್ಯಾಲಸ್ತೀನಿಯದವರಾಗಿದ್ದರು, ಅವರು ನೈಸರ್ಗಿಕವಾಗಿ ಅಮೆರಿಕದ ಪ್ರಜೆಯಾಗಿದ್ದರು ಮತ್ತು ಅಬು ಅಕ್ಲೆಹ್ ರವರು ಅಮೇರಿಕದ ನ್ಯಾಯಾಂಗ ಇಲಾಖೆಯಿಂದ ನಡೆಯುತ್ತಿರುವ ತನಿಖೆಯತ್ತ ಗಮನಸೆಳೆದು, ಈ ತನಿಖೆಯು "ಜವಾಬ್ದಾರಿಯುತರನ್ನು ಗುರುತಿಸುತ್ತದೆ ಮತ್ತು ಅವರನ್ನು ಹೊಣೆಗಾರರನ್ನಾಗಿ ಮಾಡುತ್ತದೆ, ಅವರನ್ನು ನ್ಯಾಯದ ಕಟಕಟೆಗೆ ತರುತ್ತದೆ" ಎಂದು ಅವರು ಆಶಿಸುತ್ತಾರೆ.

ಆದರೆ ಈಗಾಗಲೇ ಮೂರು ವರ್ಷಗಳಾಗಿವೆ, ಈ ತನಿಖೆಯು ತುಂಬಾ ಸಮಯ ತೆಗೆದುಕೊಳ್ಳುತ್ತಿದೆ ಅವರು ಒತ್ತಿ ಹೇಳಿದರು.

200 ಪತ್ರಕರ್ತರ ಸಾವು
ಇಸ್ರಯೇಲ್ ಸೈನಿಕರು ತಮ್ಮ ಸಹೋದರಿಯ ಮುಖದ ಫೋಟೋಗಳನ್ನು ಗುರಿಯಾಗಿ ಬಳಸುತ್ತಿದ್ದಾರೆ ಎಂದು ಆರೋಪಿಸಿರುವ ಸ್ವತಂತ್ರ ಮಾಧ್ಯಮ ಸಂಸ್ಥೆ ಝೆಟಿಯೊ ಬಿಡುಗಡೆ ಮಾಡಿದ ಹೊಸ ಸಾಕ್ಷ್ಯಚಿತ್ರವನ್ನು ಅಬು ಅಕ್ಲೆಹ್‌ ರವರು ಬೆಟ್ಟು ಮಾಡಿದರು.

ಇಸ್ರಯೇಲ್‌ ರ ಮಿಲಿಟರಿಯೊಳಗಿನ "ಶಿಕ್ಷೆಯ ವಿನಾಯಿತಿಯ ವಾತಾವರಣ" ಮತ್ತು "ಹೊಣೆಗಾರಿಕೆಯ ಕೊರತೆ"ಯನ್ನು ಅವರು ಖಂಡಿಸಿದರು. ಇದರರ್ಥ ಅವರ ಸಹೋದರಿಯ ಸಾವು ಪ್ರತ್ಯೇಕ ಪ್ರಕರಣವಾಗಿ ಉಳಿದಿಲ್ಲ ಎಂದು ಅವರು ಹೇಳಿದರು.

ಗಡಿಯಿಲ್ಲದ ವರದಿಕಾರರ (ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್) ಪ್ರಕಾರ, 2023ರಲ್ಲಿ ಗಾಜಾದಲ್ಲಿ ಯುದ್ಧ ಪ್ರಾರಂಭವಾದಾಗಿನಿಂದ ಸುಮಾರು 200 ಪತ್ರಕರ್ತರು ಕೊಲ್ಲಲ್ಪಟ್ಟಿದ್ದಾರೆ. ಈ ಸ್ಥಿತಿಯನ್ನು ಸಂಸ್ಥೆಯು "ಹತ್ಯಾಕಾಂಡ" ಎಂದು ವಿವರಿಸುತ್ತದೆ.

ಸೋಮವಾರ, ವಿಶ್ವಗುರು ಸೇವಾಧಿಕಾರದ ಹುದ್ದೆಗೆ ಆಯ್ಕೆಯಾದ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ ವಿಶ್ವಗುರು ಹದಿನಾಲ್ಕನೇ ಲಿಯೋರವರು, ಇಂತಹ ಪತ್ರಕರ್ತರ "ಧೈರ್ಯ"ಕ್ಕೆ ನಮಸ್ಕರಿಸಿದರು.
ತಮ್ಮ ಕೆಲಸಕ್ಕಾಗಿ ಕೊಲ್ಲಲ್ಪಟ್ಟ ಅಥವಾ ಜೈಲಿನಲ್ಲಿರುವ ವರದಿಗಾರರೊಂದಿಗೆ "ಧರ್ಮಸಭೆಯ ಒಗ್ಗಟ್ಟನ್ನು ಪುನರುಚ್ಚರಿಸಲು" ಅವರು ಬಯಸಿದ್ದರು ಎಂದು ಅವರು ಹೇಳಿದರು.

ಅವರು "ಘನತೆ, ನ್ಯಾಯ ಮತ್ತು ಜನರ ಮಾಹಿತಿ ಪಡೆಯುವ ಹಕ್ಕನ್ನು ರಕ್ಷಿಸುತ್ತಾರೆ" ವಿಶ್ವಗುರು ಹದಿನಾಲ್ಕನೇ ಲಿಯೋರವರು ಹೇಳಿದರು, "ಏಕೆಂದರೆ ಮಾಹಿತಿಯುಳ್ಳ ವ್ಯಕ್ತಿಗಳು ಮಾತ್ರ ಮುಕ್ತ ಆಯ್ಕೆಗಳನ್ನು ಮಾಡಬಹುದು".
 

15 ಮೇ 2025, 12:30