'ಇವರು ಅದೃಷ್ಟವಂತರು': ರೋಮ್‌ನ ಆಸ್ಪತ್ರೆಯಲ್ಲಿ ಗಾಜಾದ ಮಕ್ಕಳು
ರಾಬರ್ಟೊ ಸೆಟೆರಾ
ಚಿನ್ನದ ಕಿವಿಯೋಲೆಗಳು ನಾಲ್ಕು ವರ್ಷದ ಜೀನಾಳ ಮುಖವನ್ನು ಮೃದುಗೊಳಿಸುತ್ತವೆ, ಅದು ಅನಾರೋಗ್ಯದಿಂದ ಬಳತ್ತಿರುವ ಮಗು. ಗಾಜಾದ ಧಾಳಿಯ ಸಮಯದಲ್ಲಿ ಬಾಂಬ್‌ಗಳಿಂದ ತಪ್ಪಿಸಿಕೊಳ್ಳುವಾಗ ಅವಳು ತನ್ನೊಂದಿಗೆ ತಂದಿದ್ದು ಆ ಚಿನ್ನದ ಕಿವಿಯೋಲೆಗಳು ಮಾತ್ರ. ಕಳೆದ ಫೆಬ್ರವರಿಯಿಂದ, ಅವರು ತಮ್ಮ ತಾಯಿ ಮನಾರ್ ಮತ್ತು ಎರಡು ವರ್ಷದ ಸಹೋದರಿ ಡಾನಾರವರೊಂದಿಗೆ ರೋಮ್‌ನ ಉಂಬರ್ಟೊ I ಪಾಲಿಕ್ಲಿನಿಕ್‌ನಲ್ಲಿ ಮಕ್ಕಳ ಆಂಕೊಲಾಜಿ ವಾರ್ಡ್‌ನಲ್ಲಿ ವಾಸಿಸುತ್ತಿದ್ದಾರೆ. ನಾವು ಆಕೆಯನ್ನು ಕೆಲವು ಮೀಟರ್ ದೂರದಿಂದಲೇ ಸ್ವಾಗತಿಸಿದರು, ಆಕೆಯ ರೋಗನಿರೋಧಕ ಶಕ್ತಿ ತುಂಬಾ ದುರ್ಬಲವಾಗಿದ್ದು ನಾವು ಹತ್ತಿರ ಹೋಗಲು ಸಾಧ್ಯವಿಲ್ಲ. ಆದರೆ ಆಕೆಗೆ ನಮ್ಮ ಪರಿಚಯವಿಲ್ಲದಿದ್ದರೂ, ಆಕೆಯು ಕೈ ಬೀಸುತ್ತಾಳೆ ಮತ್ತು ಚುಂಬಿಸುತ್ತಾಳೆ. ಇದೆಲ್ಲವೂ ವೈದ್ಯಕೀಯ ಸಿಬ್ಬಂದಿಯ ಕಣ್ಗಾವಲಿನಲ್ಲಿ ನಡೆಯುತ್ತಿದೆ, ಅವರು ಈ ಮಕ್ಕಳನ್ನು ಪ್ರೀತಿಯಿಂದ, ತೀಕ್ಷ್ಣವಾದ ಕಾಳಜಿ ಮತ್ತು ಸೂಕ್ಷ್ಮ ಗಮನ ಹಾಗೂ ವೃತ್ತಿಪರತೆಯಿಂದ ನೋಡಿಕೊಳ್ಳುತ್ತಾರೆ.
ಡಾನಾ ಮೇಲೆ ಒಂದು ಕಣ್ಣಿಟ್ಟು, ಮಕ್ಕಳ ತಾಯಿ, 29 ವರ್ಷದ ಮನಾರ್ ಫರ್ಹತ್ ಮುರ್ತಾಜಾ ನನಗೆ ಹೀಗೆ ಹೇಳುತ್ತಾರೆ: “ನಾವು ನಾಲ್ಕು ತಿಂಗಳಿನಿಂದ ಇಲ್ಲಿದ್ದೇವೆ, ನಾನು ಈ ಸ್ಥಳವನ್ನು ಬಿಟ್ಟು ಹೋಗಿಲ್ಲ. ನಾವು ಮೂವರೂ ಈ ಕೋಣೆಯಲ್ಲಿಯೇ ಊಟ ಮಾಡುತ್ತೇವೆ ಮತ್ತು ಮಲಗುತ್ತೇವೆ. ಮಾನವೀಯ ಕಾರಿಡಾರ್‌ನಿಂದಾಗಿ ನಾವು ರೋಮ್ ತಲುಪಿದ್ದೇವೆ. ಝೀನಾಳ ದೇಹದ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ನಾವು ಗಾಜಾದಲ್ಲಿದ್ದಾಗ ಆಕೆಯು ಈಗಾಗಲೇ ಅಸ್ವಸ್ಥಳಾಗಿದ್ದಳು, ಆದರೆ ಆಕೆಗೆ ಚಿಕಿತ್ಸೆ ನೀಡಲು ಅಥವಾ ಆಕೆಗೆ ಯಾವ ಕಾಯಿಲೆಯಿದೆ ಎಂದು ಕಂಡುಹಿಡಿಯಲು ಯಾವುದೇ ಮಾರ್ಗವಿರಲಿಲ್ಲ. ಧಾಳಿಯಿಂದ ಹತ್ತಿರದ ಆಸ್ಪತ್ರೆಗಳು ನಾಶವಾದವು ಮತ್ತು ಚಿಕಿತ್ಸೆ ಪಡೆಯಲು ಯಾವುದೇ ಮಾರ್ಗ ದೊರೆಯಲಿಲ್ಲ. ಇನ್ನೂ ಕಾರ್ಯನಿರ್ವಹಿಸುತ್ತಿರುವ ಕೆಲವು ಸೌಲಭ್ಯಗಳು, ಅವಶೇಷಗಳಿಂದ ಹೊರತೆಗೆಯಲಾದ ಜನರಿಗೆ ಆದ್ಯತೆ ನೀಡುತ್ತಿದ್ದವು, ಅವರು ಸಾವಿನ ತಕ್ಷಣದ ಅಪಾಯದಲ್ಲಿದ್ದರು. ತಿಂಗಳುಗಟ್ಟಲೆ ನಮಗೆ ಜೀನಾಗೆ ಯಾವ ಕಾಯಿಲೆ ಇದೆ ಎಂದು ತಿಳಿದಿರಲಿಲ್ಲ, ಮತ್ತು ಗೆಡ್ಡೆಯ(ಕಟ್ಟಿಯ) ವಿರುದ್ಧ ಹೋರಾಡುವಲ್ಲಿ ನಾವು ಅಮೂಲ್ಯ ಸಮಯವನ್ನು ಕಳೆದುಕೊಂಡೆವು. ಗಾಜಾದ ಹೊರಗೆ ನನ್ನ ಮಗಳಿಗೆ ಚಿಕಿತ್ಸೆ ನೀಡಬಹುದಾದ ಆಸ್ಪತ್ರೆಗಳಿದ್ದರೂ, ನಾವು ಇಲ್ಲಿಗೆ ತಲುಪಲು 3,000 ಕಿಲೋಮೀಟರ್ ಪ್ರಯಾಣಿಸಿದೆವು. ನನ್ನ ಗಂಡನಿಗೆ ನಮ್ಮೊಂದಿಗೆ ಬರಲು ಅವಕಾಶ ಸಿಗಲಿಲ್ಲ, ಮತ್ತು ಇದು ಇಲ್ಲಿ ತುಂಬಾ ಕಷ್ಟಕರವಾದ ಪರಿಸ್ಥಿತಿ, ಸಾಮಾನ್ಯ ಪರಿಸ್ಥಿತಿಗಳಲ್ಲಿಯೂ ಸಹ ಯಾರಿಗಾದರೂ ಇದು ಕಷ್ಟಕರವಾಗಿರುತ್ತದೆ. ನಾನು ಕೆಲವೊಮ್ಮೆ ನನ್ನ ಪತಿಯೊಂದಿಗೆ ಫೋನ್ ಮೂಲಕ ಮಾತನಾಡುತ್ತೇನೆ. ನಾವು ಎಲ್ಲವನ್ನೂ ಕಳೆದುಕೊಂಡಿದ್ದೇವೆ, ನಮ್ಮ ಮನೆ ಮತ್ತು ನನ್ನ ತಂದೆ ಕೂಡ ಇಲ್ಲ. ಅವರು ಇಸ್ರಯೇಲ್ ಬಾಂಬ್ ದಾಳಿಯಿಂದ ಕೊಲ್ಲಲ್ಪಟ್ಟರು.
ಮಕ್ಕಳ ವಾರ್ಡ್‌ನ ಪ್ರವೇಶದ್ವಾರದ ಹೊರಗೆ ಪೊಲೀಸ್ ಕಾರುಗಳ ಬೆಂಗಾವಲು ನಿಲ್ಲುತ್ತದೆ. ಅವರಲ್ಲಿ ಒಬ್ಬ ಮಹಿಳೆ ಹೊರಗೆ ಬಂದು ತನ್ನ ಭದ್ರತಾ ತಂಡಕ್ಕಿಂತ ವೇಗ, ವೇಗವಾಗಿ ಹೆಜ್ಜೆ ಹಾಕುತ್ತಾ, ಮನಾರ್, ಝೀನಾ ಮತ್ತು ಪುಟ್ಟ ಡಾನಾ ತಂಗಿರುವ ಕೋಣೆಯ ಕಡೆಗೆ ಮೆಟ್ಟಿಲುಗಳನ್ನು ಹತ್ತುತ್ತಾಳೆ. ಆ ಮಹಿಳೆಯು ಪ್ಯಾಲಸ್ತೀನಿಯ ರಾಜ್ಯದ ವಿದೇಶಾಂಗ ಸಚಿವೆಯಾದ ವರ್ಸೆನ್ ಅಘಾಬೆಕಿಯನ್ ರವರು. ನಾನು ವಿಶ್ವಗುರು ಹದಿನಾಲ್ಕನೇ ಲಿಯೋರವರ ಉದ್ಘಾಟನಾ ದೈವಾರಾಧನಾ ವಿಧಿಯ ಪ್ರಾರ್ಥನೆಯಲ್ಲಿ ಭಾಗವಹಿಸಲು ರೋಮ್‌ಗೆ ಬಂದಿದ್ದೇನೆ, ಆದರೆ ನನ್ನ ಸಹ ಪ್ಯಾಲಸ್ತೀನಿಯದವರನ್ನು ಭೇಟಿ ಮಾಡಲು ನಾನು ಬರದಿದ್ದರೆ ನನ್ನ ಪ್ರವಾಸವು ಪೂರ್ಣಗೊಳ್ಳುತ್ತಿರಲಿಲ್ಲ ಎಂದು ಹೇಳಿದರು.
ಈ ಪುಟ್ಟ ಹುಡುಗಿಯರನ್ನು ಭೇಟಿ ಮಾಡುವುದು 'ಶಾಂತಿ' ಎಂಬ ಪದದೊಂದಿಗೆ ತಮ್ಮ ಸೇವೆಯನ್ನು ಪ್ರಾರಂಭಿಸಿದ ನೂತನ ವಿಶ್ವಗುರುಗಳಿಗೆ ಗೌರವವಾಗಿದೆ ಎಂದು ಕ್ರೈಸ್ತ ಧರ್ಮಕ್ಕೆ ಸೇರಿರುವ ವಿದೇಶಾಂಗ ಸಚಿವರು ಹೇಳುತ್ತಾರೆ. ಗಾಜಾದಲ್ಲಿ ಕೊಲ್ಲಲ್ಪಟ್ಟ ಸಾವಿರಾರು ಮಕ್ಕಳಿಗೆ ಹೋಲಿಸಿದರೆ, ಈ ಮಕ್ಕಳು, ಅವರ ಗಂಭೀರ ಸ್ಥಿತಿಯ ಹೊರತಾಗಿಯೂ, ನಿಜವಾಗಿಯೂ ಅದೃಷ್ಟವಂತರು ಎಂದು ಹೇಳುವುದು ವಿರೋಧಾಭಾಸ ಮತ್ತು ಅಸಂಬದ್ಧವಾಗಿದೆ.
ಈ ಮಕ್ಕಳು ಮತ್ತು ಅವರ ತಾಯಂದಿರಿಗೆ ನೀಡಿದ ಸ್ವಾಗತಕ್ಕಾಗಿ ನಾವು ಇಟಾಲಿಯದ ಸರ್ಕಾರಕ್ಕೆ ತುಂಬಾ ಕೃತಜ್ಞರಾಗಿರುತ್ತೇವೆ ಎಂದು ಅಘಾಬೆಕಿಯನ್ ರವರು ಮುಂದುವರಿಸುತ್ತಾರೆ. ಈ ದುರಂತದಲ್ಲಿ ಅತ್ಯಂತ ಒಗ್ಗಟ್ಟನ್ನು ತೋರಿಸಿದ ಯುರೋಪಿನ ದೇಶ ಇಟಲಿ, ಸುಮಾರು 200 ಮಕ್ಕಳನ್ನು ಇಲ್ಲಿ ಸ್ವೀಕರಿಸಲಾಗಿದೆ. ಈಜಿಪ್ಟ್, ಕತಾರ್ ಮತ್ತು ಇತರ ಕೆಲವು ಅರಬ್ ರಾಷ್ಟ್ರಗಳು ಮಾತ್ರ ಇದೇ ರೀತಿಯ ಸಂಖ್ಯೆಯಲ್ಲಿ ಬಂದಿವೆ.
ನಾವು ಮಾತನಾಡುತ್ತಿರುವಾಗ, ಜೆರುಸಲೇಮ್‌ನಿಂದ ವೀಡಿಯೊ ಕರೆ ಬರುತ್ತದೆ. ಮತ್ತೊಬ್ಬ ಸಂದರ್ಶಕ ವರ್ಚುವಲ್ ಆಗಿ, ಅವರೊಂದಿಗೆ ಸಂಭಾಷಣೆಯಲ್ಲಿ ಸೇರುತ್ತಾರೆ: ಪುಟ್ಟ ಜೀನಾಳನ್ನು ಇಟಲಿಗೆ ಕರೆತಂದ ಮಾನವೀಯ ಕಾರಿಡಾರ್‌ಗಳನ್ನು ಸ್ಥಾಪಿಸಲು ಫಾದರ್ ಇಬ್ರಾಹಿಂ ಫಾಲ್ಟಾಸ್ ರವರು ಬಹಳವಾಗಿ ಶ್ರಮಿಸಿದರು. ಈಗ ನಾವು ನನ್ನ ಇಟಾಲಿಯ ಪ್ರತಿರೂಪವಾದ ಅನೋಟ್ನಿಯೊ ತಜಾನಿರವರೊಂದಿಗೆ ಮತ್ತೊಂದು ಪ್ರಮುಖ ವಿಷಯವನ್ನು ಚರ್ಚಿಸಬೇಕು ಎಂದು ಅಘಾಬೆಕಿಯನ್ ಹೇಳುತ್ತಾರೆ: "ಆಸ್ಪತ್ರೆಗಳಿಂದ ಬಿಡುಗಡೆಯಾದವರಿಗೆ ಮತ್ತು ಸ್ಪಷ್ಟವಾಗಿ ಗಾಜಾಗೆ ಹಿಂತಿರುಗಲು ಸಾಧ್ಯವಾಗದವರಿಗೆ, ತಂಗಲು ನಿವಾಸ ಪರವಾನಗಿಗಳು. ಅಲ್ಲದೆ, ಅವರ ಪರಿವಾರದವರೊಂದಿಗೆ ತಂದೆಗಳಿಗೆ ಕುಟುಂಬಗಳ ಪುನರ್ಮಿಲನವಾಗುವುದರ ಬಗ್ಗೆ ಚರ್ಚಿಸಿದರು.