MAP

Israeliano e palestinese pro-pace in Campidoglio con Gualtieri

ಪವಿತ್ರ ನಾಡಿನ ದುರಂತಗಳ ನಂತರ ಸ್ನೇಹ ಮತ್ತು ಶಾಂತಿಗೆ ಬದ್ಧತೆ

ವ್ಯಾಟಿಕನ್‌ನಲ್ಲಿ ವಿಶ್ವಗುರು ಹದಿನಾಲ್ಕನೇ ಲಿಯೋರವರನ್ನು ಭೇಟಿಯಾದ ತಕ್ಷಣ, ಪ್ಯಾಲಸ್ತೀನಿಯದ ಅಜೀಜ್ ಅಬು ಸಾರಾ ಮತ್ತು ಇಸ್ರಯೇಲ್ ಮಾವೋಜ್ ಇನಾನ್‌ ರವರು ವ್ಯಾಟಿಕನ್ ರೇಡಿಯೊದ ಸ್ಟುಡಿಯೋದಲ್ಲಿ ವಿಶೇಷ ಸಂದರ್ಶನಕ್ಕಾಗಿ ಕುಳಿತರು.

ರಾಬರ್ಟೊ ಸೆಟೆರಾ ಮತ್ತು ದೆಬೊರಾ ಕ್ಯಾಸ್ಟೆಲ್ಲಾನೊ ಲುಬೊವ್

"ಕ್ಷಮೆಯನ್ನು ಆರಿಸಿಕೊಳ್ಳುವ ಆಯ್ಕೆಯನ್ನು ನಾನು ಮಾಡಿದೆ, ಆ ವ್ಯಕ್ತಿಯು ಅದಕ್ಕೆ ಅರ್ಹನಾಗಿದ್ದರಿಂದ ಅಲ್ಲ, ಆದರೆ ಅದು ನನ್ನ ಆಯ್ಕೆಯಾಗಿದೆ ಮತ್ತು ನಾನು ಸ್ವತಂತ್ರನಾಗಿರಲು ಬಯಸುತ್ತೇನೆ."

ವ್ಯಾಟಿಕನ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ, ಜೆರುಸಲೇಮ್‌ನಲ್ಲಿ ಬೆಳೆದ ಪ್ಯಾಲಸ್ತೀನಿಯದ ಅಮೇರಿಕದ ಅಜೀಜ್ ಅಬು ಸಾರಾರವರು, ತಮ್ಮ ಸಹೋದರನನ್ನು 18 ವರ್ಷ ವಯಸ್ಸಿನಲ್ಲಿ ಬಂಧಿಸಲಾಯಿತು, ಆಗ ಅಜೀಜ್ ಕೇವಲ ಹತ್ತು ವರ್ಷದವನಾಗಿದ್ದಾಗ, ಚಿತ್ರಹಿಂಸೆ ಅನುಭವಿಸಿ ನಂತರ ಸಾವನ್ನಪ್ಪಿದ ಕ್ಷಣವನ್ನು ನೆನಪಿಸಿಕೊಂಡು ಈ ಹೇಳಿಕೆ ನೀಡಿದ್ದಾರೆ.

ಅಜೀಜ್ ಆ ಚಿಕ್ಕ ವಯಸ್ಸಿನಿಂದಲೂ, ಏನಾದರೂ ಬದಲಾಗುವವರೆಗೂ ತನಗೆ ಹೇಗೆ ಆ ಕಹಿ ಅನುಭವ, ಕೋಪ ಮತ್ತು ಸೇಡು ತೀರಿಸಿಕೊಳ್ಳುವ ಅಗತ್ಯವಿತ್ತು ಎಂಬುದನ್ನು ನೆನಪಿಸಿಕೊಳ್ಳುತ್ತಾರೆ. ಪ್ರತಿ ಬಾರಿ ನೀವು ಸೇಡು ತೀರಿಸಿಕೊಳ್ಳುವ ಆಯ್ಕೆ ಮಾಡಿಕೊಂಡಾಗ, ದ್ವೇಷವನ್ನು ಆರಿಸಿಕೊಳ್ಳುವಾಗ, ನನ್ನ ಸಹೋದರನನ್ನು ಕೊಂದ ವ್ಯಕ್ತಿಗೆ ನೀವು ಗುಲಾಮರಾಗುತ್ತಿದ್ದೀರಿ ಎಂದು ಅಂತಿಮವಾಗಿ ಅರ್ಥಮಾಡಿಕೊಳ್ಳಲು ನನಗೆ ಎಂಟು ವರ್ಷಗಳು ಬೇಕಾಯಿತು. ನಾನು ಆ ವ್ಯಕ್ತಿಗೆ ಗುಲಾಮನಾಗಿದ್ದೆ ಎಂದು ಆಗ ಅರಿವಾಯಿತು.

ಹೀಗಾಗಿ, ಅಜೀಜ್ ರವರು, ತನ್ನ ಸಹೋದರನ ಜೀವದ ನಷ್ಟವು ತನ್ನ ಜೀವನವನ್ನು ನಿಯಂತ್ರಿಸಲು ಇನ್ನು ಮುಂದೆ ಬಿಡುವುದಿಲ್ಲ, ಬದಲಿಗೆ ಶಾಂತಿಗಾಗಿ ಶ್ರಮಿಸಲು ನಿರ್ಧರಿಸಿದರು. ಅವರು ಇಸ್ರಯೇಲ್ ಮಾವೋಜ್ ಇನಾನ್ ರವರು, ಅವರ ಜೀವನದಲ್ಲೂ ಸಹ ಅಷ್ಟೇ ನಾಟಕೀಯ ಕಥೆಯನ್ನು ಹೊಂದಿದ್ದಾರೆ, ಅಕ್ಟೋಬರ್ 7 ರಂದು ತಮ್ಮ ಹೆತ್ತವರನ್ನು ಮತ್ತು ಬಾಲ್ಯದ ಅನೇಕ ಸ್ನೇಹಿತರನ್ನು ಕಳೆದುಕೊಂಡರು.

ಪವಿತ್ರ ನಾಡಿನಲ್ಲಿ ಧರ್ಮಗುರು ಫಾಲ್ಟಾಸ್ ರವರ ಸಮರ್ಪಣೆ
ಪ್ರವಾಸೋದ್ಯಮ ವೃತ್ತಿಪರರು ಮತ್ತು ಶಾಂತಿಗಾಗಿ ಕೆಲಸ ಮಾಡುವ ಇಂಟರ್‌ಆಕ್ಟ್‌ನ ಸಹ-ಅಧ್ಯಕ್ಷರಾಗಿರುವ ಈ ಇಬ್ಬರು ವ್ಯಕ್ತಿಗಳು ಈಗ ಪಾಲುದಾರರು ಮಾತ್ರವಲ್ಲ, ಸ್ನೇಹಿತರೂ ಸಹ ಆಗಿದ್ದಾರೆ ಎಂದು ಹೇಳುತ್ತಾರೆ.

ಇದಲ್ಲದೆ, ವ್ಯಾಟಿಕನ್ ರೇಡಿಯೊದ ಸ್ಟುಡಿಯೋ 9ರಲ್ಲಿ ನೀಡಿದ ಸಂದರ್ಶನದಲ್ಲಿ, ಅವರು ತಮ್ಮ ಪ್ರಯಾಣವನ್ನು ನೆನಪಿಸಿಕೊಂಡರು ಮತ್ತು 2030ರ ವೇಳೆಗೆ ಈ ಪ್ರದೇಶದಲ್ಲಿ ಶಾಂತಿಯನ್ನು ಸಾಧಿಸುವ ಗುರಿಯೊಂದಿಗೆ ಮತ್ತು ಜೆರುಸಲೇಮ್‌ನಲ್ಲಿ ಮುಂಬರುವ ಉಪಕ್ರಮದೊಂದಿಗೆ ಎದುರು ನೋಡುತ್ತಿದ್ದರು.

ಪವಿತ್ರ ನಾಡಿನ, ಧರ್ಮಪ್ರಾಂತ್ಯದ ಕಸ್ಟಡಿ ಶ್ರೇಷ್ಠಗುರುವಾದ ಇಬ್ರಾಹಿಂ ಫಾಲ್ಟಾಸ್ ರವರು ಕೂಡ ಸ್ಟುಡಿಯೋದಲ್ಲಿ ನಡೆದ ಚರ್ಚೆಯಲ್ಲಿ ಸೇರಿಕೊಂಡರು. ಅವರು ಪವಿತ್ರ ನಾಡಿನಾದ್ಯಂತ ಶಾಂತಿಗಾಗಿ ವ್ಯಾಪಕವಾಗಿ ಕೆಲಸ ಮಾಡಿದ್ದಾರೆ, ಹಲವಾರು ಯೋಜನೆಗಳನ್ನು ನಡೆಸುತ್ತಿದ್ದಾರೆ.

2030ರ ವೇಳೆಗೆ ಶಾಂತಿಗಾಗಿ ಅನ್ವೇಷಣೆ
ಸಂಭಾಷಣೆಯ ಸಮಯದಲ್ಲಿ, ಅಜೀಜ್ ಮತ್ತು ಮಾವೋಜ್ ರವರು ಪವಿತ್ರ ನಾಡಿನಲ್ಲಿ ಉಂಟಾದ ಭಯಾನಕತೆಯ ವೈಯಕ್ತಿಕ ಅನುಭವಗಳು ತಮ್ಮನ್ನು ಹೇಗೆ ರೂಪಿಸಿದವು ಎಂಬುದನ್ನು ವ್ಯಕ್ತಪಡಿಸಿದರು ಮತ್ತು ವಿಶೇಷ ರೀತಿಯಲ್ಲಿ, ಕಳೆದ ವರ್ಷ ವಿಶ್ವಗುರು ಫ್ರಾನ್ಸಿಸ್ ರವರೊಂದಿಗಿನ ಭೇಟಿಯ ನಂತರ, ಇಂದು ಬೆಳಿಗ್ಗೆ ವಿಶ್ವಗುರು ಹದಿನಾಲ್ಕನೇ ಲಿಯೋರವರೊಂದಿಗಿನ ತಮ್ಮ ಭೇಟಿಯನ್ನು ನೆನಪಿಸಿಕೊಂಡರು.

ಇಂದು ಬೆಳಿಗ್ಗೆ, ವಿಶ್ವಗುರು ಹದಿನಾಲ್ಕನೇ ಲಿಯೋರವರು ಇಟಾಲಿಯ ನಗರವಾದ ವೆರೋನಾದಲ್ಲಿ 2024ರ "ಶಾಂತಿ ರಂಗ" ದಲ್ಲಿ ಭಾಗವಹಿಸಿದ ಸಂಘಗಳು ಮತ್ತು ಚಳುವಳಿಗಳ 300ಕ್ಕೂ ಹೆಚ್ಚು ಪ್ರತಿನಿಧಿಗಳನ್ನು ಸ್ವಾಗತಿಸಿದರು. ವ್ಯಾಟಿಕನ್‌ನಲ್ಲಿ ನಡೆದ ಈ ಸಭೆಯು ಕಳೆದ ವರ್ಷದ ಕಾರ್ಯಕ್ರಮದಲ್ಲಿ ವಿಶ್ವಗುರು ಫ್ರಾನ್ಸಿಸ್ ರವರ ಭಾಗವಹಿಸುವಿಕೆಗೆ ಪ್ರತಿಫಲವಾಗಿ "ಮರು ಭೇಟಿ" ಎಂದು ಗುರುತಿಸಲ್ಪಟ್ಟಿತು.

ಅಜೀಜ್ ಕ್ಷಮಿಸಲು ಆಯ್ಕೆ ಮಾಡಿದ ನಂತರ, ಅವರು ಇಸ್ರಯೇಲ್‌ರೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದ ರೀತಿಯನ್ನು ನೆನಪಿಸಿಕೊಂಡರು, "ನಾವು ಸಮಾನತೆ, ನ್ಯಾಯ, ಶಾಂತಿ, ಒಟ್ಟಿಗೆ ಕೆಲಸ ಮಾಡುವ ಒಂದೇ ಮೌಲ್ಯಗಳನ್ನು ಒಪ್ಪಿಕೊಂಡರೆ ನಾವು ವಿರೋಧಿಗಳಾಗುವುದಿಲ್ಲ ಅಥವಾ ಅವರ ವಿರುದ್ಧ ಬದಿಗಳಲ್ಲಿ ಇರುವುದಿಲ್ಲ. ಆ ಮೌಲ್ಯಗಳನ್ನು ನಾವು ಒಪ್ಪಿಕೊಂಡರೆ, ನಾವು ಶತ್ರುಗಳಲ್ಲ" ಎಂದು ಗಮನಿಸಿದರು.

ಐದು ಹಂತದ ಯೋಜನೆ
2030ರ ವೇಳೆಗೆ ಜೋರ್ಡಾನ್‌ನಿಂದ ಮೆಡಿಟರೇನಿಯನ್ ಸಮುದ್ರದವರೆಗೆ ಶಾಂತಿಯನ್ನು ಸಾಧಿಸುವ ತಮ್ಮ ಯೋಜನೆಯನ್ನು ಮಾವೋಜ್ ರವರು ಮುಂದೆ ವಿವರಿಸಿದರು.

"ಇದು ನಮ್ಮ ಧ್ಯೇಯ" ಎಂದು ಅವರು ಹೇಳಿದರು, "ಇದನ್ನು ಹೇಗೆ ಸಾಧಿಸುವುದು ಎಂಬುದರ ಕುರಿತು ನಮಗೆ ಐದು ಹಂತದ ಯೋಜನೆ ಇದೆ" ಎಂದು ಹೇಳಿದರು.

ಮೊದಲನೆಯದಾಗಿ, "ನಾವು ಶಾಂತಿಯ ಬಗ್ಗೆ ಒಟ್ಟಾಗಿ ಕನಸು ಕಾಣಬೇಕು" ಎಂದು ಅವರು ಹೇಳಿದರು.

ಎರಡನೆಯದಾಗಿ, ನ್ಯಾಯ, ಕ್ಷಮೆ, ಸಮನ್ವಯ, ಭದ್ರತೆ ಮತ್ತು ಸುರಕ್ಷತೆಯ ನಮ್ಮ ಹಂಚಿಕೆಯ ಮೌಲ್ಯಗಳನ್ನು ನಾವು ಅಭ್ಯಾಸ ಮಾಡಬೇಕು.

ಮೂರನೆಯದಾಗಿ, "ನಾವು ಶಾಂತಿಗಾಗಿ ಸುರಕ್ಷಿತವಾಗಿ ಒಕ್ಕೂಟವನ್ನು ನಿರ್ಮಿಸಬೇಕು" ಅದಕ್ಕಾಗಿಯೇ, ಶಾಂತಿ ಆಂದೋಲನಕ್ಕೆ ವ್ಯಾಟಿಕನ್ ರೇಡಿಯೋ ಮತ್ತು ವ್ಯಾಟಿಕನ್ ಸುದ್ಧಿಯ ಬೆಂಬಲವು ತುಂಬಾ ಮುಖ್ಯವಾಗಿದೆ ಎಂದು ಅವರು ಹೇಳಿದರು.

ನಾಲ್ಕನೆಯದಾಗಿ, ಅವರು ತೀರ್ಮಾನಿಸಿದರು, ಈ ಜೋಡಿ ಮಾರ್ಗಸೂಚಿ, 2030ರ ವೇಳೆಗೆ ಒಟ್ಟಿಗೆ ಒಂದು ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ, ಮತ್ತು ಐದನೆಯದಾಗಿ, ಅವರು ಈಗಾಗಲೇ ಮಾರ್ಗಸೂಚಿಯನ್ನು ಕಾರ್ಯಗತಗೊಳಿಸುತ್ತಿದ್ದಾರೆ.

ಮೇ 8-9 ರಂದು ಜೆರುಸಲೇಮ್‌ನಲ್ಲಿ ನಡೆದ ನಾಗರಿಕರ ಶಾಂತಿ ಶೃಂಗಸಭೆಯಲ್ಲಿ, ಶಾಂತಿಗಾಗಿ ಅವರ ಕೆಲಸವನ್ನು ನೆನಪಿಸಿಕೊಂಡ ಅವರು, "ನಾವು ಜೆರುಸಲೇಮ್ ನಗರದಲ್ಲಿ 8,000ಕ್ಕೂ ಹೆಚ್ಚು ಇಸ್ರಯೇಲರನ್ನು ಮತ್ತು ಪ್ಯಾಲಸ್ತೀನಿಯದವರನ್ನು ಒಟ್ಟುಗೂಡಿಸಿದ್ದೇವೆ, ಮೂಲತಃ ಗಾಜಾ ಮತ್ತು ಪಶ್ಚಿಮ ದಂಡೆಯಲ್ಲಿ ನಡೆಯುತ್ತಿರುವ ವಿನಾಶಕಾರಿ ಮತ್ತು ಭಯಾನಕತೆಗಳಿಗಾಗಿ ಅಳುತ್ತಿದ್ದೆವು, ಒತ್ತೆಯಾಳುಗಳು ಮತ್ತು ಕೈದಿಗಳು, ಪ್ಯಾಲಸ್ತೀನಿಯದ ಕೈದಿಗಳನ್ನು ಬಿಡುಗಡೆ ಮಾಡಲು ಕರೆ ನೀಡುತ್ತಿದ್ದೆವು ಮತ್ತು ನಮ್ಮ ನಡುವೆ ಹಂಚಿಕೆಯ ಭವಿಷ್ಯವಾದ ಹೊಸ ವಾಸ್ತವವನ್ನು ಕಲ್ಪಿಸಿಕೊಂಡು ಸೃಷ್ಟಿಸಿದೆವು ಎಂದು ಹೇಳಿದರು.

ಜೆರುಸಲೇಮ್‌ನಲ್ಲಿ ಅಭೂತಪೂರ್ವ ಶಾಂತಿಗಾಗಿ ಮೆರವಣಿಗೆ
"ಇದಕ್ಕಾಗಿಯೇ ನಾವು ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇವೆ" ಎಂದು ಮಾವೋಜ್ ರವರು ಗಮನಿಸಿದರು, ಇಲ್ಲದಿದ್ದಲ್ಲಿ ನಾವು ನಮ್ಮ ಮಕ್ಕಳು ಮತ್ತು ಮೊಮ್ಮಕ್ಕಳ ಜೀವನವನ್ನು ಖಂಡಿಸುತ್ತೇವೆ" ಎಂದು ಅವರು ಎಚ್ಚರಿಸಿದ್ದಾರೆ. "ಇದು ಸ್ವೀಕಾರಾರ್ಹವಲ್ಲ" ಎಂದು ಅವರು ಹೇಳಿದರು.

ಈ ದೃಢನಿಶ್ಚಯದೊಂದಿಗೆ, ಅವರು ಶಾಂತಿಗಾಗಿ ಬೃಹತ್ ಮೆರವಣಿಗೆಯೊಂದಿಗೆ ಪ್ರಾರಂಭಿಸಿ ಬದಲಾವಣೆಯನ್ನು ಪ್ರೇರೇಪಿಸಲು ಕಾರ್ಯನಿರ್ವಹಿಸುತ್ತಿದ್ದಾರೆ.

ಮಾವೋಜ್ ಮತ್ತು ನಾನು ಇಬ್ಬರೂ ಇಂಟರ್ ಆಕ್ಟ್ ಎಂಬ ಸಂಘಟನೆಯನ್ನು ನಡೆಸುತ್ತಿದ್ದೇವೆ ಹಾಗೂ ಸೆಪ್ಟೆಂಬರ್ 21 ರಂದು, ಅಂತರರಾಷ್ಟ್ರೀಯ ಶಾಂತಿ ದಿನದಂದು ಪೂರ್ವ ಜೆರುಸಲೇಮ್ ಮತ್ತು ಪಶ್ಚಿಮ ಜೆರುಸಲೇಮ್‌ನಿಂದ ಮೆರವಣಿಗೆ ನಡೆಸಲು ನಾವು ಸಂಘಟನೆಗಳ ಗುಂಪನ್ನು ಮುನ್ನಡೆಸುತ್ತಿದ್ದೇವೆ, "ಕೇವಲ ಸಂಕೇತವಾಗಿ ಅಲ್ಲ, ನಿರ್ದಿಷ್ಟವಾಗಿ ಮುನ್ನಡೆಸುತ್ತಿದ್ದೇವೆ ಎಂದು ಅವರು ಘೋಷಿಸಿದರು.

ಅಂತರರಾಷ್ಟ್ರೀಯ ಶಾಂತಿ ದಿನ ಮತ್ತು ಶಾಂತಿಗಾಗಿ ವಿಶ್ವಗುರುಗಳು
ಸೆಪ್ಟೆಂಬರ್ 21 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 1981 ರಲ್ಲಿ ಸ್ಥಾಪಿಸಿದ ಅಂತರರಾಷ್ಟ್ರೀಯ ಶಾಂತಿ ದಿನವನ್ನು ಗುರುತಿಸುತ್ತದೆ ಎಂದು ಅವರು ನೆನಪಿಸಿಕೊಂಡರು. ಎರಡು ದಶಕಗಳ ನಂತರ, 2001ರಲ್ಲಿ, ಸಾಮಾನ್ಯ ಸಭೆಯು ಈ ದಿನವನ್ನು ಅಹಿಂಸೆ ಮತ್ತು ಕದನ ವಿರಾಮದ ಅವಧಿಯಾಗಿ ಗೊತ್ತುಪಡಿಸಲು ಸರ್ವಾನುಮತದಿಂದ ಮತ ಚಲಾಯಿಸಿತು.

ಸರ್ಕಾರಗಳು ಸೃಷ್ಟಿಸಿರುವ ನಮ್ಮ ನಡುವಿನ ಈ ವಿಭಜನೆಯನ್ನು ನಿಲ್ಲಿಸಬೇಕು ಮತ್ತು ಇಸ್ರಯೇಲರು ಮತ್ತು ಪ್ಯಾಲಸ್ತೀನಿಯದವರು ಮಾತ್ರವಲ್ಲದೆ ಸಾವಿರಾರು ಜನರು ನಮ್ಮೊಂದಿಗೆ ಮೆರವಣಿಗೆ ನಡೆಸಬೇಕೆಂದು ನಾವು ಬಯಸುತ್ತೇವೆ ಎಂದು ಅಜೀಜ್ ರವರು ಒತ್ತಿ ಹೇಳಿದರು. ಇದನ್ನು ಕೇಳುತ್ತಿರುವ ಪ್ರತಿಯೊಬ್ಬರೂ ಸೆಪ್ಟೆಂಬರ್‌ನಲ್ಲಿ ಜೆರುಸಲೇಮ್‌ಗೆ ಬರಬೇಕೆಂದು ನಾವು ಬಯಸುತ್ತೇವೆ.

ಮಾವೋಜ್ ರವರು, ನನಗೆ, ವಿಶ್ವಗುರು ಫ್ರಾನ್ಸಿಸ್ ರವರು ಒಬ್ಬ ಪ್ರವಾದಿಯಾಗಿದ್ದರು, ಸಂಭಾಷಣೆಗಾಗಿ ಮತ್ತು ಸಂಘರ್ಷವನ್ನು ಶಾಂತಿಯುತವಾಗಿ ಪರಿಹರಿಸುವುದಕ್ಕಾಗಿ ಅವರ ಮಾತುಗಳನ್ನು ನೆನಪಿಸಿಕೊಳ್ಳುತ್ತಾರೆ. ಈಗ ವಿಶ್ವಗುರು ಲಿಯೋರವರ ನಾಯಕತ್ವ, ಮಾರ್ಗದರ್ಶನ ಮತ್ತು ಬೆಂಬಲದೊಂದಿಗೆ, ನಾವು ವಾಗ್ದಾತ್ತ ನಾಡಿಗೆ ಪ್ರವೇಶಿಸಲಿದ್ದೇವೆ ಮತ್ತು ಪವಿತ್ರ ನಾಡಿಗೆ ಶಾಂತಿಯನ್ನು ತರಲಿದ್ದೇವೆ ಎಂದು ಹೇಳಿದರು.
 

30 ಮೇ 2025, 10:28