MAP

More than a million minors trapped by gang violence in Haiti More than a million minors trapped by gang violence in Haiti  (ANSA)

ಹೈಟಿಯ ಮಕ್ಕಳಿಗೆ ಏನಾಗುತ್ತಿದೆ?

ಹೈಟಿಯಲ್ಲಿ ಉಗ್ರರ ಗುಂಪಿನ ಹಿಂಸಾಚಾರ ಹೆಚ್ಚುತ್ತಿರುವಂತೆ, ಮಕ್ಕಳನ್ನು ತರಗತಿಗಳಿಂದ ಹೊರಗೆಳೆದು ಅವ್ಯವಸ್ಥೆಗೆ ದೂಡಲಾಗುತ್ತಿದೆ. ಕಾನ್ಫಿಯನ್ಸ್ ಹೈಟಿಯು, ಶಿಕ್ಷಣ, ಸುರಕ್ಷತೆ ಮತ್ತು ಭರವಸೆಯನ್ನು ನೀಡುತ್ತಿದೆ, ಜಗತ್ತು ತಿರುಗಿಬಿದ್ದಿದೆ.

ಫ್ರಾನ್ಸೆಸ್ಕಾ ಮೆರ್ಲೊ

ಜಗತ್ತನ್ನು ಆವರಿಸುತ್ತಿರುವ ಅಗಾಧ ಹಿಂಸಾಚಾರವು, ಇತರ ವಿಷಯಗಳ ಜೊತೆಗೆ, ಅಂತರರಾಷ್ಟ್ರೀಯ ಸಮುದಾಯದ ವೈಫಲ್ಯವನ್ನು ಪ್ರತಿಬಿಂಬಿಸುತ್ತದೆ ಮತ್ತು ಪಾಶ್ಚಿಮಾತ್ಯ ಮಾಧ್ಯಮಗಳ ಮೌನದಿಂದ ಮೂರ್ಖರಾಗಬೇಡಿ ಎಂಬ ಆಹ್ವಾನವನ್ನು ಪ್ರತಿಬಿಂಬಿಸುತ್ತದೆ. ಬದಲಿಗೆ, ಪ್ರಪಂದ ಕೆಲವು ಬಡ ರಾಷ್ಟ್ರಗಳಲ್ಲಿ ಏನಾಗುತ್ತಿದೆ ಎಂಬುದನ್ನು ನಮ್ಮನ್ನು ನಾವು ಪ್ರಶ್ನೆಸಿಕೊಳ್ಳುವುದು ಕಡ್ಡಾಯವಾಗಬೇಕು.

ಇಂದಿನ ಪ್ರಶ್ನೆ: ಹೈಟಿಯ ಮಕ್ಕಳಿಗೆ ಏನಾಗುತ್ತಿದೆ?

ಮಾಧ್ಯಮದ ಗಮನದ ಹೊರಗಿನ ವಿಷಯಗಳು
ಉತ್ತರವು ಭಯಾನಕವಾಗಿದೆ, ದೃಶ್ಯಗಳು ಅಪೋಕ್ಯಾಲಿಪ್ಟಿಕ್/ಕಾಲಜ್ಞಾನವನ್ನು ವಿವರಿಸವಂತದ್ದು. ಹೈಟಿಯ ನಗರಗಳನ್ನು ಉಗ್ರರ ಗುಂಪುಗಳು ಆಳುತ್ತಿವೆ ಮತ್ತು ದೇಶವು ತೀವ್ರ ಬಡತನಕ್ಕೆ ಕುಸಿದಿದೆ. ಪೋಷಕರು ತಮ್ಮ ಮಕ್ಕಳಿಗೆ ಊಟ ಹಾಕಲು ಸಾಧ್ಯವಾಗುತ್ತಿಲ್ಲ, ಇದರಿಂದಾಗಿ ಮಕ್ಕಳು ಹಣ ಮತ್ತು ಸುರಕ್ಷತೆಯ ಸುಳ್ಳು ಭರವಸೆಗಳೊಂದಿಗೆ ಮಕ್ಕಳನ್ನು ಆಕರ್ಷಿಸುವ ಗುಂಪುಗಳಿಗೆ ಸೇರುತ್ತಾರೆ. ಮಕ್ಕಳು ಆ ಗುಂಪುಗಳನ್ನು ಸೇರುವುದರಿಂದ, ತಾಯಂದಿರ ಕರುಳಿನ ಚಿಂತೆ, ತಮ್ಮ ಮಕ್ಕಳನ್ನು ತಿಂಗಳುಗಟ್ಟಲೆ ನೋಡಲಿಲ್ಲ ಎಂದು ನೆನಪಿಸಿಕೊಳ್ಳುತ್ತಾರೆ, ಅವರು ಸತ್ತಿದ್ದಾರೋ ಅಥವಾ ಜೀವಂತವಾಗಿದ್ದಾರೋ ಎಂಬುದು ಅನೇಕ ಬಾರಿ ಖಚಿತವಿರುವುದಿಲ್ಲ.

ಪಾಶ್ಚಿಮಾತ್ಯ ಮಾಧ್ಯಮಗಳು ಹೆಚ್ಚಾಗಿ ತಕ್ಷಣದ ರಾಜಕೀಯ ಅಥವಾ ಆರ್ಥಿಕ ಸಂಬಂಧಗಳನ್ನು ಹೊಂದಿರುವ ಪ್ರದೇಶಗಳ ಮೇಲೆ ಕೇಂದ್ರೀಕರಿಸುತ್ತವೆ ಎಂಬುದನ್ನು, ಕೆರಿಬಿಯನ್ ರಾಷ್ಟ್ರದಲ್ಲಿ ಶಿಕ್ಷಣ ಮತ್ತು ಸ್ಥಿತಿಸ್ಥಾಪಕತ್ವವನ್ನು ಬೆಳೆಸಲು ಅವಿಶ್ರಾಂತವಾಗಿ ಶ್ರಮಿಸುತ್ತಿರುವ ಕಾನ್ಫಿಯನ್ಸ್ ಹೈಟಿ ಎಂಬ ಸರ್ಕಾರೇತರ ಸಂಸ್ಥೆಯ ಅಧ್ಯಕ್ಷೆ ಆನ್ ಮೇರಿ ಬೆರ್ಲಿಯರ್ ರವರು ಗಮನಿಸುತ್ತಾರೆ. ಮಾಧ್ಯಮಗಳ ಆಯ್ದ ವರದಿಗಳು ಹೈಟಿಯನ್ನು ಜಾಗತಿಕ ವೇದಿಕೆಯಲ್ಲಿ ಹೆಚ್ಚಾಗಿ ನಿರ್ಲಕ್ಷಿಸಲು ಮತ್ತು ಅದರ ಹಿಂಸೆ, ಹತಾಶೆ ಮತ್ತು ಭರವಸೆಯ ಕಥೆಗಳು ಕಡಿಮೆ ವರದಿಯಾಗಲು ಕಾರಣವಾಗಿವೆ, ಇದರಿಂದಾಗಿ ಒಂದು ದೇಶವು ಅಂತರರಾಷ್ಟ್ರೀಯ ಒಗ್ಗಟ್ಟಿನ ತುರ್ತು ಅಗತ್ಯವನ್ನು ಎದುರಿಸುತ್ತಿದೆ ಆದರೆ ಅದಕ್ಕೆ ಅರ್ಹವಾದ ಜಾಗತಿಕ ಬೆಂಬಲವಿಲ್ಲದೆ ಉಳಿದಿದೆ.

ಆಗಾಗ್ಗೆ ಸಂಭವಿಸಿದಂತೆ, ದೇಶಾದ್ಯಂತ ಶಾಲೆಗಳು ಪೋಷಕರಿಗೆ ಮತ್ತು ಅವರ ಮಕ್ಕಳಿಗೆ ಸುರಕ್ಷಿತ ತಾಣಗಳಾಗಿವೆ. ಅಲ್ಪಾವಧಿಯಲ್ಲಿ, ಶಾಲೆಗಳು ದಿನಕ್ಕೆ ಕನಿಷ್ಠ ಪಕ್ಷ ಒಂದು ಹೊತ್ತಿನ ಊಟವನ್ನು ಖಚಿತಪಡಿಸುತ್ತವೆ ಮತ್ತು ಭವಿಷ್ಯವನ್ನು ನೋಡುತ್ತಾ, ಅವು ಉಜ್ವಲ ಭವಿಷ್ಯದ ಭರವಸೆಯನ್ನು ನೀಡುತ್ತವೆ.

15 ವರ್ಷಗಳ ಸೇವೆ
2010ರಲ್ಲಿ ಹೈಟಿಯನ್ನು ಧ್ವಂಸಗೊಳಿಸಿದ ಭೂಕಂಪದ ನಂತರ, ಹೈಟಿಯು, ಕಾನ್ಫಿಯನ್ಸ್ ಹೈಟಿಯ ನೆರವಿನ ಅವಕಾಶದ ಮೂಲಕ ರಕ್ಷಣೆ ಪಡೆಯುವುದನ್ನು ಖಾತರಿಪಡಿಸುವಲ್ಲಿ ಮುಂಚೂಣಿಯಲ್ಲಿದೆ. ಹದಿನೈದು ವರ್ಷಗಳಿಂದ ನಾವು ಶಿಕ್ಷಣ ಕ್ಷೇತ್ರದಲ್ಲಿ ಬೆಳೆಯುತ್ತಿದ್ದೇವೆ, ಶಾಲೆಗಳ ನಿರ್ಮಾಣ ಮತ್ತು ಕಾರ್ಯಾಚರಣೆಯ ಮೇಲೆ ಕೇಂದ್ರೀಕರಿಸುತ್ತಿದ್ದೇವೆ, ಅದೇ ಸಮಯದಲ್ಲಿ ಹೈಟಿಯ ಜನರು ಸ್ವಾವಲಂಬನೆಗಾಗಿ ಪ್ರಮುಖ ಕೌಶಲ್ಯಗಳನ್ನು ಪಡೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದೇವೆ. ಪೋರ್ಟ್-ಔ-ಪ್ರಿನ್ಸ್‌ನ ಉತ್ತರಕ್ಕೆ ಇರುವ ಸಂಘದ ಎರಡು ಪ್ರಮುಖ ಶಾಲೆಗಳು ಈ ನೀತಿಯನ್ನು ಸಾಕಾರಗೊಳಿಸುತ್ತವೆ. ಒಂದು ಕೆನನ್‌ನ ಬೆಟ್ಟದ ಮೇಲೆ ನರ್ಸರಿ ಮತ್ತು ಪ್ರಾಥಮಿಕ ಶಿಕ್ಷಣವನ್ನು ನೀಡುತ್ತಿದ್ದರೆ, ಇನ್ನೊಂದು ಕೆಳಗೆ ಇದ್ದು, ಮಾಧ್ಯಮಿಕ ಶಾಲೆಯನ್ನು ಹೊಂದಿದೆ.

ಆದರೆ ಕಾನ್ಫಿಯನ್ಸ್ ಹೈಟಿಯ ಕೆಲಸವು ಶೈಕ್ಷಣಿಕ ಕ್ಷೇತ್ರವನ್ನು ಮೀರಿ, ವೃತ್ತಿಪರ ತರಬೇತಿಗೆ ತನ್ನನ್ನು ತಾನು ಬದ್ಧಗೊಳಿಸಿಕೊಳ್ಳುವುದು ಮತ್ತು ತನ್ನ ವಿದ್ಯಾರ್ಥಿಗಳನ್ನು ಪ್ರಾಯೋಗಿಕ ಕೌಶಲ್ಯಗಳಿಂದ ಸಜ್ಜುಗೊಳಿಸುವುದನ್ನು ಮೀರಿ ತಮ್ಮ ಸೇವೆಯನ್ನು ವಿಸ್ತರಿಸುತ್ತದೆ. "ಕೆನಾನ್‌ನಲ್ಲಿ, ನಾವು ಪ್ಲಂಬಿಂಗ್ ಮತ್ತು ನಿರ್ಮಾಣದಂತಹ ವೃತ್ತಿಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ, ಆದರೆ ಸ್ಯಾಂಟೋ ಶಾಲೆಯಲ್ಲಿ, ಕೃಷಿಗೆ ಆದ್ಯತೆ ನೀಡಲಾಗುತ್ತದೆ, ತರಕಾರಿ ಕೃಷಿ ಮತ್ತು ಪ್ರಾಣಿಗಳನ್ನು ಸಾಕುವಂತಹ ಯೋಜನೆಗಳಿಗೆ ಫ್ರೆಂಚ್ ರಾಯಭಾರ ಕಚೇರಿಯ ಬೆಂಬಲದೊಂದಿಗೆ" ಈ ಯೋಜನೆಗಳು ಮುಂದುವರೆಯುತ್ತಿವೆ ಎಂದು ಬೆರ್ಲಿಯರ್ ರವರು ವ್ಯಾಟಿಕನ್ ಸುದ್ಧಿಗೆ ಹೇಳುತ್ತಾರೆ.

ಕ್ಯಾಂಟೀನ್‌ಗೆ ಕೋಳಿ ಮತ್ತು ಮೊಲಗಳನ್ನು ಸರಬರಾಜು ಮಾಡುವುದರಿಂದ ಆಹಾರದ ಕೊರತೆಯನ್ನು ತಗ್ಗಿಸಲು ಸಹಾಯವಾಗುತ್ತದೆ ಮತ್ತು ಮಕ್ಕಳಿಗೆ ಪ್ರಕೃತಿಯ ಸಂಪನ್ಮೂಲಗಳ ಮೌಲ್ಯ ಮತ್ತು ಪರಿಸರ ಜವಾಬ್ದಾರಿಯ ಮಹತ್ವವನ್ನು ಕಲಿಸುತ್ತದೆ. ವೃತ್ತಿಪರ ಕಾರ್ಯಕ್ರಮಗಳು ಪ್ರಮುಖ ಕೌಶಲ್ಯಗಳನ್ನು ಒದಗಿಸುವುದಲ್ಲದೆ, ಸ್ಥಳೀಯ ಕುಟುಂಬಗಳಿಗೆ ಜೀವನೋಪಾಯವನ್ನು ಸುರಕ್ಷಿತಗೊಳಿಸಲು ಸಹಾಯ ಮಾಡುತ್ತದೆ, ಸಮುದಾಯ ಸಬಲೀಕರಣದ ವಿಶಾಲ ಗುರಿಗೆ ಅಥವಾ NGO ಹೆಸರೇ ಸೂಚಿಸುವಂತೆ ಆತ್ಮವಿಶ್ವಾಸಕ್ಕೆ ಕೊಡುಗೆ ನೀಡುತ್ತದೆ.

ಆದಾಗ್ಯೂ, ಹೈಟಿಯ ಪ್ರಸ್ತುತ ಹಿಂಸಾಚಾರದ ವಾತಾವರಣ, ವಿಶೇಷವಾಗಿ ರಾಜಧಾನಿ ಪೋರ್ಟ್-ಔ-ಪ್ರಿನ್ಸ್‌ನಲ್ಲಿ, ನಡೆಯುತ್ತಿರುವ ದುರ್ಬಲ ಪ್ರಗತಿಗೆ ಬೆದರಿಕೆ ಹಾಕುತ್ತಿದೆ. ಹೈಟಿಯಲ್ಲಿ ಮಕ್ಕಳು ಎದುರಿಸುತ್ತಿರುವ ಹೋರಾಟಗಳಿಗೆ ಅಂತ್ಯವಿಲ್ಲ. ಅನೇಕರು ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ ಮತ್ತು ಲೆಕ್ಕವಿಲ್ಲದಷ್ಟು ಇತರರು ಮುರಿದ ಅಥವಾ ಚದುರಿ ಹೋದ ಕುಟುಂಬದ ಹಿನ್ನೆಲೆಯ ಮನೆಗಳಿಂದ ಬಂದವರು ಅಥವಾ ಮುಂದುವರೆಯುತ್ತಿರುವ ಸಂಘರ್ಷದಿಂದಾಗಿ ಅನಾಥರಾಗಿದ್ದಾರೆ.

ಕಾನೂನುಬಾಹಿರ ಪರಿಸ್ಥಿತಿ
ಅಭೂತಪೂರ್ವ ಮಟ್ಟದಲ್ಲಿ ಗುಂಪಿನ ಹಿಂಸಾಚಾರ ನಡೆಯುತ್ತಿರುವುದರಿಂದ, ಶಾಲೆಗಳು ಇನ್ನು ಮುಂದೆ ಕಾರ್ಯಸಾಧ್ಯವಾದ ಆಯ್ಕೆಯಾಗಿಲ್ಲ. "ರಾಜಧಾನಿಯಲ್ಲಿ ಅನೇಕ ಶಾಲೆಗಳು ಇನ್ನು ಮುಂದೆ ಕಾರ್ಯನಿರ್ವಹಿಸುವುದಿಲ್ಲ" ಎಂದು ಬರ್ಲಿಯರ್ ರವರು ಹೇಳುತ್ತಾರೆ, "ಪೋರ್ಟ್-ಔ-ಪ್ರಿನ್ಸ್‌ನಲ್ಲಿ ಇದು ವಿಶೇಷವಾಗಿ ನೈಜವಾಗಿದೆ, ಅಲ್ಲಿನ ಬಡ ಕುಟುಂಬಗಳು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಅಥವಾ ಅವರನ್ನು ಮನೆಯಲ್ಲಿಯೇ ಇರಿಸಲು ಮತ್ತು ಕೆಲಸಕ್ಕೆ ಕಳುಹಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಡುವ ಸಂಕಟದ ನಿರ್ಧಾರವನ್ನು ಎದುರಿಸುತ್ತವೆ" ಎಂದು ವಿವರಿಸುತ್ತಾರೆ. ಈ ಪರಿಸ್ಥಿತಿಯನ್ನು "ಕಾನೂನುಬಾಹಿರ" ಎಂದು ವಿವರಿಸಿದ ಬರ್ಲಿಯರ್ ರವರು, ಇದು ಇನ್ನು ಮುಂದೆ “ಬದುಕುವ ಬಗ್ಗೆ ಅಲ್ಲ – ಬದುಕುಳಿಯುವುದು ಹೇಗೆ” ಎಂಬುದರ ಬಗ್ಗೆ ಎಚ್ಚರಿಸಿದ್ದಾರೆ.

ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿದೆ. ಕಳೆದ ವಾರ, ನಮ್ಮ ಎರಡು ಶಾಲೆಗಳು ಇನ್ನೂ ತೆರೆದಿದ್ದವು, ಆದರೆ ದೇಶಾದ್ಯಂತ ಇನ್ನೂ ಅನೇಕ ಶಾಲೆಗಳು ಮುಚ್ಚಿವೆ, ವಿಶೇಷವಾಗಿ ದೊಡ್ಡ ನಗರಗಳಲ್ಲಿ ಶಾಲೆಗಳು ಮುಚ್ಚಿವೆ. ಈ ಪರಿಸ್ಥಿತಿಯಲ್ಲಿ ಮಕ್ಕಳು ಶಾಲೆಗೆ ಹೋಗುವುದು ಕೂಡ ಅನೇಕರಿಗೆ ಅಪಾಯಕಾರಿ ಪ್ರಯಾಣವಾಗಿದೆ ಎಂದು ಬರ್ಲಿಯರ್ ವಿವರಿಸುತ್ತಾರೆ. ಸಾರಿಗೆ ವ್ಯವಸ್ಥೆಗಳು ಇನ್ನು ಮುಂದೆ ಸುರಕ್ಷಿತವಾಗಿಲ್ಲ ಮತ್ತು ಮಕ್ಕಳು ತಮ್ಮ ಶಿಕ್ಷಣದ ಸ್ಥಳವಾದ ಶಾಲೆಗಳನ್ನು ತಲುಪಲು ಬಹಳ ದೂರ ನಡೆಯಬೇಕಾಗುತ್ತದೆ. ಪೋರ್ಟ್-ಔ-ಪ್ರಿನ್ಸ್ ಒಂದರಲ್ಲೇ 2,700 ಕ್ಕೂ ಹೆಚ್ಚು ಶಾಲೆಗಳು ಮುಚ್ಚಲ್ಪಟ್ಟಿವೆ ಮತ್ತು ನಗರದಲ್ಲಿ ಹೆಚ್ಚು ಹೆಚ್ಚು ಮಕ್ಕಳು ಯಾವುದೇ ಔಪಚಾರಿಕ ಶಿಕ್ಷಣವಿಲ್ಲದೆ ಶಾಲೆಗಳನ್ನು ಬಿಡುತ್ತಿದ್ದಾರೆ.

"ಇದರ ಪರಿಣಾಮಗಳು ಬಹಳ ದೂರಗಾಮಿ" ಎಂದು ಬರ್ಲಿಯರ್ ಎಚ್ಚರಿಸುತ್ತಾರೆ. ಕೆಲವು ಮಕ್ಕಳು ಒಂದು ಇಡೀ ಶೈಕ್ಷಣಿಕ ವರ್ಷ ಶಾಲೆಯಿಂದ ಹೊರಗುಳಿದಿದ್ದಾರೆ ಮತ್ತು ಸಮಯ ಕಳೆದಂತೆ, ಉಜ್ವಲ ಭವಿಷ್ಯದ ಭರವಸೆ ಹೆಚ್ಚು ದೂರದಲ್ಲಿದೆ ಎಂದು ತೋರುತ್ತದೆ. ಶಿಕ್ಷಣವಿಲ್ಲದೆ, ಮಕ್ಕಳು ಗ್ಯಾಂಗ್‌ಗಳಿಗೆ ಗುರಿಯಾಗುತ್ತಾರೆ, ಅವರನ್ನು ನೇಮಿಸಿಕೊಳ್ಳಬಹುದು. ಆ ರೀತಿಯ ಘಟನೆಗಳು ಸಂಭವಿಸುವುದನ್ನು ನಾವು ಈಗಾಗಲೇ ನೋಡುತ್ತಿದ್ದೇವೆ.
 

22 ಮೇ 2025, 13:18