ಈಕ್ವೆಡಾರ್‌ನ ಪುನರಾಯ್ಕೆಯಾದ ಅಧ್ಯಕ್ಷ ಡೇನಿಯಲ್ ನೊಬೊವಾ ಅಧಿಕಾರ ವಹಿಸಿಕೊಂಡಿದ್ದಾರೆ
ವರದಿ
ಇನ್ನೂ ಮೂವತ್ತೇಳು ವರ್ಷದ ಡೇನಿಯಲ್ ನೊಬೊವಾರವರು ಮತ್ತು ಕೇವಲ ಎರಡು ವರ್ಷ ದೊಡ್ಡವರಾದ ಉಪಾಧ್ಯಕ್ಷೆ ಮಾರಿಯಾ ಜೋಸ್ ಪಿಂಟೊರವರ ಮುಂದೆ ಕಠಿಣವಾದ ಸವಾಲುಗಳು ಮತ್ತು ಬಹು ಜವಾಬ್ದಾರಿಯು ಕಾರ್ಯಗಳಿವೆ. ಕ್ವಿಟೊದ ರಾಜಧಾನಿಯಲ್ಲಿ ತಾವು ಅಧಿಕಾರ ವಹಿಸಿಕೊಳ್ಳುವ ಉದ್ಘಾಟನಾ ಭಾಷಣದಲ್ಲಿ, ನೊಬೊವಾ ಭ್ರಷ್ಟಾಚಾರದ ವಿರುದ್ಧ ಹೋರಾಡುವುದನ್ನು ಮುಂದುವರಿಸುವುದಾಗಿ, ಮಾದಕವಸ್ತು ಕಳ್ಳಸಾಗಣೆಯನ್ನು ನಿವಾರಿಸುವುದಾಗಿ ಮತ್ತು ಖಾಸಗಿ ಉದ್ಯಮಕ್ಕೆ ಸಹಾಯ ಮಾಡುವುದಾಗಿ, ದೇಶೀಯ ಮತ್ತು ಅಂತರರಾಷ್ಟ್ರೀಯ ಹೂಡಿಕೆಯನ್ನು ಪ್ರೋತ್ಸಾಹಿಸುವುದಾಗಿ ಪ್ರತಿಜ್ಞೆ ಮಾಡಿದರು. ನಾವು ಇನ್ನೂ ನಾಲ್ಕು ವರ್ಷಗಳ ಪ್ರಗತಿಯ ಹೊಸ್ತಿಲಲ್ಲಿದ್ದೇವೆ ಎಂದು ಭರವಸೆ ಮತ್ತು ಉದ್ದೇಶದೊಂದಿಗೆ ಅವರು ಹೇಳಿದರು.
ಕಳೆದ ವರ್ಷ ಈಕ್ವೆಡಾರ್‌ನಲ್ಲಿ ಎಂಟು ಸಾವಿರಕ್ಕೂ ಹೆಚ್ಚು ಕೊಲೆಗಳು ನಡೆದಿವೆ ಮತ್ತು ಜನಸಂಖ್ಯೆಯ ಅರ್ಧಕ್ಕಿಂತ ಕಡಿಮೆ ಜನರು ಪೂರ್ಣ ಸಮಯದ ಉದ್ಯೋಗಗಳನ್ನು ಹೊಂದಿದ್ದಾರೆ.
ನೊಬೊವಾರವರು ಅಧಿಕಾರ ವಹಿಸಿಕೊಳ್ಳುವ ಉದ್ಘಾಟನೆಯ ಸಮಯದಲ್ಲಿ ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೊ ಪೆಟ್ರೋರವರು, ಪೆರುವಿನ ಅಧ್ಯಕ್ಷ ದಿನಾ ಬೊಲುವಾರ್ಟೆ ರವರು ಮತ್ತು ಯುಎಸ್ ಆರೋಗ್ಯ ಕಾರ್ಯದರ್ಶಿ ರಾಬರ್ಟೊ ಕೆನಡಿರವರು ಭಾಗವಹಿಸಿದ್ದರು. 2023ರಲ್ಲಿ, ನೊಬೊವಾ ಒಂದು ಕ್ಷಿಪ್ರ ಚುನಾವಣೆಯಲ್ಲಿ ಗೆದ್ದರು ಮತ್ತು ಅಧ್ಯಕ್ಷ ಗಿಲ್ಲೆರ್ಮೊ ಲಾಸ್ಸೊರವರ ಅವಧಿಯನ್ನು ಪೂರ್ಣಗೊಳಿಸಿದರು, ಅವರು ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜಿಸಿ ದೋಷಾರೋಪಣೆಯನ್ನು ತಪ್ಪಿಸಲು ರಾಜೀನಾಮೆ ನೀಡಿದರು. ಏಪ್ರಿಲ್ 13 ರಂದು ಅವರು ವಕೀಲೆ ಲೂಯಿಸಾ ಗೊನ್ಜಾಲೆಜ್ ವಿರುದ್ಧ ಎರಡನೇ ಸುತ್ತಿನ ರನ್ಆಫ್ ಅನ್ನು ಗೆದ್ದರು. ಅವರ ಪಕ್ಷವು ಕಾಂಗ್ರೆಸ್ ಅನ್ನು ನಿಯಂತ್ರಿಸುತ್ತದೆ, ಆದರೂ ಕೆಲವು ಸಂಕೀರ್ಣ ರಾಜಕೀಯ ಮೈತ್ರಿಗಳಿಗೆ ಧನ್ಯವಾದಗಳನ್ನು ಸಲ್ಲಿಸಿದರು.