MAP

FILES-CAMEROON-POLITICS-ELECTION-BIYA

ಮೇ 7 ರಂದು ಅಪಹರಿಸಲ್ಪಟ್ಟ ಕ್ಯಾಮರೂನಿಯದ ಧರ್ಮಗುರುವನ್ನು ಬಿಡುಗಡೆ ಮಾಡಲಾಯಿತು

ಮೇ 7 ರಂದು ಸೆರೆಹಿಡಿಯಲಾದ ಆರು ಒತ್ತೆಯಾಳುಗಳಲ್ಲಿ ಬಿಡುಗಡೆಯಾದ ಕೊನೆಯವರಾದ ಧರ್ಮಗುರು ವ್ಯಾಲೆಂಟಿನ್ ಎಂಬೈಬರೆಮ್ ಮತ್ತು ಅವರು ಉತ್ತಮ ದೈಹಿಕ ಸ್ಥಿತಿಯಲ್ಲಿದ್ದಾರೆ ಎಂದು ಗರೂವಾದ ಮಹಾಧರ್ಮಾಧ್ಯಕ್ಷರು ಹೇಳುತ್ತಾರೆ.

ಕೀಲ್ಸ್ ಗುಸ್ಸಿ

ಮೇ 7 ರಂದು ಕ್ಯಾಮರೂನಿಯದ ಧರ್ಮಗುರುವಾದ ಫಾದರ್ ವ್ಯಾಲೆಂಟಿನ್ ಎಂಬೈಬರೆಮ್ ರವರನ್ನು ಇತರ ಐದು ಜನರೊಂದಿಗೆ ಅಪಹರಿಸಲಾಗಿತ್ತು, ಆದರೆ ಮ್ಯಾಡಿಂಗ್ರಿಂಗ್‌ನಲ್ಲಿರುವ ಸಂತ ಸ್ನಾನಿಕ ಯೋವಾನ್ನರ ದೇವಾಲಯ ಧರ್ಮಕೇಂದ್ರದ ಧರ್ಮಗುರುವನ್ನು (ಸೇಂಟ್ ಜಾನ್ ದಿ ಬ್ಯಾಪ್ಟಿಸ್ಟ್ ಚರ್ಚ್‌) ಈಗ ಬಿಡುಗಡೆ ಮಾಡಲಾಗಿದೆ.

ಮೇ 15ರಿಂದ 16ರ ರಾತ್ರಿ, ಧರ್ಮಗುರುವಾದ ಫಾದರ್ ವ್ಯಾಲೆಂಟಿನ್ ಎಂಬೈಬರೆಮ್ ರವರನ್ನು ಬಿಡುಗಡೆ ಮಾಡಲಾಯಿತು ಎಂದು ವ್ಯಾಟಿಕನ್‌ನ ಫೈಡ್ಸ್ ಸುದ್ದಿ ಸಂಸ್ಥೆ ಗರೋವಾದ ಮಹಾಧರ್ಮಾಧ್ಯಕ್ಷರಾದ ಫೌಸ್ಟಿನ್ ಅಂಬಾಸಾ ನಡ್ಜೋಡೊರವರೊಂದಿಗೆ ನಡೆಸಿದ ಸಂದರ್ಶನವೊಂದರಲ್ಲಿ ತಿಳಿಸಲಾಗಿದೆ. ಧರ್ಮಗುರುವು ವೈದ್ಯರನ್ನು ಭೇಟಿ ಮಾಡಿದ್ದಾರೆ ಮತ್ತು ಅವರು ಉತ್ತಮ ದೈಹಿಕ ಸ್ಥಿತಿಯಲ್ಲಿದ್ದಾರೆ ಎಂದು ವರದಿಯಾಗಿದೆ.

ಬಿಡುಗಡೆಯಾದ ಆರು ಒತ್ತೆಯಾಳುಗಳಲ್ಲಿ ಅವರು ಕೊನೆಯವರು. ಅವರಿಗಿಂತ ಮೊದಲು ನಾಲ್ವರನ್ನು ಬಿಡುಗಡೆ ಮಾಡಲಾಯಿತು ಮತ್ತು ಒಬ್ಬರು ಸೆರೆಯಲ್ಲಿ ನಿಧನರಾದರು.

ಧರ್ಮಗುರುವಿನ ಬಿಡುಗಡೆಗೆ ಸುಮಾರು $42,000 ಸುಲಿಗೆ ಹಣ ನೀಡುವಂತೆ ಬೇಡಿಕೆ ಇಡಲಾಗಿದೆ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿದ್ದವು. ಧರ್ಮಗುರುವಿನ ಮರಳುವಿಕೆಗೆ ಮಹಾಧರ್ಮಕ್ಷೇತ್ರವು ಸುಲಿಗೆ ಹಣ ಪಾವತಿಸಿಲ್ಲ ಎಂದು ಮಹಾಧರ್ಮಾಧ್ಯಕ್ಷರು ಸ್ಪಷ್ಟಪಡಿಸಿದರು, ಆದರೆ ಇತರರು ಅದನ್ನು ಪಾವತಿಸಿದ್ದಾರೆಯೇ ಎಂದು ತನಗೆ ತಿಳಿದಿಲ್ಲ ಎಂದು ಹೇಳಿದರು.

ಧರ್ಮಗುರುವಿನ ಬಿಡುಗಡೆಯನ್ನು ಘೋಷಿಸುವ ಹೇಳಿಕೆಯಲ್ಲಿ, ಮಹಾಧರ್ಮಕ್ಷೇತ್ರವು ಅವರ ಬಿಡುಗಡೆಗಾಗಿ "ಪ್ರಾರ್ಥಿಸಿದ ಎಲ್ಲರಿಗೂ" ಧನ್ಯವಾದಗಳನ್ನು ಅರ್ಪಿಸುತ್ತದೆ ಮತ್ತು "ಈ ಗುರಿಯತ್ತ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ದೇವರ ಆಶೀರ್ವಾದವನ್ನು ಕೋರುತ್ತದೆ" ಎಂದು ಹೇಳುತ್ತದೆ.
 

19 ಮೇ 2025, 14:21