MAP

Image of the head of the PKK announcing dissolution Image of the head of the PKK announcing dissolution   (AFP or licensors)

ದಶಕಗಳ ಕಾಲದ ಸಂಘರ್ಷಕ್ಕೆ ಅಂತ್ಯ ಹಾಡುವ ಮೂಲಕ ಪಿಕೆಕೆ ವಿಸರ್ಜನೆಯನ್ನು ಘೋಷಿಸಿದೆ

ಟರ್ಕಿಯ ವಿರುದ್ಧ 40 ವರ್ಷಗಳ ಕಾಲ ದಂಗೆ ಎದ್ದಿದ್ದ ನಿಷೇಧಿತ ಕುರ್ದಿಶ್ ಗುಂಪು ಪಿಕೆಕೆ ವಿಸರ್ಜಿಸಲಾಗುತ್ತಿದೆ.

ನಾಥನ್ ಮಾರ್ಲಿ

1984 ರಿಂದ ಟರ್ಕಿಶ್ ರಾಜ್ಯದ ವಿರುದ್ಧ ಹೋರಾಡುತ್ತಿರುವ ಕುರ್ದಿಸ್ತಾನ್ ವರ್ಕರ್ಸ್ ಪಾರ್ಟಿ (ಪಿಕೆಕೆ) ಸೋಮವಾರ ತನ್ನ ವಿಸರ್ಜನೆಯನ್ನು ಘೋಷಿಸಿತು, ಇದರಿಂದಾಗಿ ಸುಮಾರು ಐದು ದಶಕಗಳ ಸಶಸ್ತ್ರ ಹೋರಾಟಕ್ಕೆ ಅಂತ್ಯ ಹಾಡಿತು.

ಪಿಕೆಕೆ-ಸಂಯೋಜಿತ ಫಸ್ಟ್ ಸುದ್ದಿ ಸಂಸ್ಥೆ (AND) ಪ್ರಕಟಿಸಿದ ಹೇಳಿಕೆಯಲ್ಲಿ, ಗುಂಪು, ತನ್ನ ಐತಿಹಾಸಿಕ ಧ್ಯೇಯವನ್ನು ಪೂರ್ಣಗೊಳಿಸಿದೆ ಮತ್ತು ಸಶಸ್ತ್ರ ಹೋರಾಟದ ವಿಧಾನವನ್ನು ಕೊನೆಗೊಳಿಸುವುದಾಗಿ ಹೇಳಿದೆ.

ಟರ್ಕಿ, ಯುರೋಪಿನ ಒಕ್ಕೂಟ, ಕೆನಡ ಮತ್ತು ಅಮೇರಿಕದಲ್ಲಿ ಭಯೋತ್ಪಾದಕ ಗುಂಪು ಎಂದು ನಿಷೇಧಿಸಲ್ಪಟ್ಟ ಸಂಘಟನೆಯು, ಇಂದಿನಿಂದ ಕುರ್ದಿಶ್ ಸಮಸ್ಯೆಯನ್ನು "ಪ್ರಜಾಪ್ರಭುತ್ವ ರಾಜಕೀಯದ ಮೂಲಕ ಪರಿಹರಿಸಬಹುದು" ಎಂದು ಹೇಳಿದೆ.

ಆಗ್ನೇಯ ತುರ್ಕಿಯೆಯಲ್ಲಿ ಕೇಂದ್ರೀಕೃತವಾದ ಈ ಯುದ್ಧವು ಅಂದಾಜು 40,000 ಸಾವುಗಳಿಗೆ ಕಾರಣವಾಗಿದೆ, ಹೆಚ್ಚಾಗಿ ಕುರ್ದಿಗಳು, ಸಾವಿರಾರು ಹಳ್ಳಿಗಳು ನಾಶವಾಗಿ ಲಕ್ಷಾಂತರ ಜನರು ಸ್ಥಳಾಂತರಗೊಂಡಿದ್ದಾರೆ.

ಮರ್ಮರ ಸಮುದ್ರದಲ್ಲಿರುವ ಇಮ್ರಾಲಿ ದ್ವೀಪದಲ್ಲಿ 26 ವರ್ಷಗಳ ಕಾಲ ಜೈಲಿನಲ್ಲಿದ್ದ ಪಿಕೆಕೆ ಸಂಸ್ಥಾಪಕ ಅಬ್ದುಲ್ಲಾ ಓಕಲನ್ ರವರು ತಮ್ಮ ಚಳವಳಿಗೆ ಶಸ್ತ್ರಾಸ್ತ್ರ ತ್ಯಜಿಸುವಂತೆ ಕರೆ ನೀಡಿದ ಎರಡು ತಿಂಗಳ ನಂತರ ಈ ನಿರ್ಧಾರ ಬಂದಿದೆ.

ಫೆಬ್ರವರಿ 27 ರಂದು ಸಾರ್ವಜನಿಕಗೊಳಿಸಲಾದ ಅವರ ಮನವಿಯು ವಿಶ್ಲೇಷಕರು ಮತ್ತು ವಿಶಾಲ ಸಾರ್ವಜನಿಕರನ್ನು ಅಚ್ಚರಿಗೊಳಿಸಿತು.

ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ರವರ ಅತಿರಾಷ್ಟ್ರೀಯವಾದಿ ಮಿತ್ರ ಡೆವ್ಲೆಟ್ ಬಹ್ಚೆಲಿ, ಟರ್ಕಿಯ ಮೂರನೇ ಅತಿದೊಡ್ಡ ರಾಜಕೀಯ ಪಕ್ಷವಾದ ಪೀಪಲ್ಸ್ ಈಕ್ವಾಲಿಟಿ ಅಂಡ್ ಡೆಮಾಕ್ರಸಿ ಪಾರ್ಟಿಯ (ಡಿಇಎಂ) ಮೂಲಕ ಶರತ್ಕಾಲದಲ್ಲಿ ಪ್ರಾರಂಭಿಸಿದ ಮಧ್ಯಸ್ಥಿಕೆಯ ಪ್ರಯತ್ನದ ನಂತರ ದಶಕಗಳ ಕಾಲದ ಸಂಘರ್ಷ ಮುಕ್ತಾಯಗೊಳ್ಳಲಿದೆ.
 

12 ಮೇ 2025, 12:43