MAP

Hamas releases Israeli-American hostage Edan Alexander Hamas releases Israeli-American hostage Edan Alexander 

ಕೊನೆಯ ಜೀವಂತ ಅಮೇರಿಕದ ಒತ್ತೆಯಾಳನ್ನು ಬಿಡುಗಡೆ ಮಾಡಲಿರುವ ಹಮಾಸ್

583 ದಿನಗಳ ಕಾಲ ಒತ್ತೆಯಾಳಾಗಿ ಇರಿಸಿಕೊಂಡಿದ್ದ 21 ವರ್ಷದ ಎಡಾನ್ ಅಲೆಕ್ಸಾಂಡರ್ ರವರನ್ನು ಬಿಡುಗಡೆಯಾಗಲಿದ್ದು, ಈ ಒಂದು ಕ್ರಮವು ಕದನ ವಿರಾಮದತ್ತ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಹಮಾಸ್ ಹೇಳುತ್ತದೆ.

ಕೀಲ್ಸ್ ಗುಸ್ಸಿ

ಗಾಜಾದಲ್ಲಿ ಬಂಧಿಸಲ್ಪಟ್ಟಿರುವ ಕೊನೆಯ ಜೀವಂತ ಅಮೆರಿಕದ ಒತ್ತೆಯಾಳು ಬಿಡುಗಡೆಗೊಳ್ಳಲಿದ್ದಾರೆ ಎಂದು ಹಮಾಸ್ ಹೇಳಿಕೆ ನೀಡಿದೆ. ಹಮಾಸ್‌ನ ಸಂಧಾನ ತಂಡದ ಮುಖ್ಯಸ್ಥರು, ಸಶಸ್ತ್ರ ಗುಂಪು "ಕಳೆದ ಕೆಲವು ದಿನಗಳಿಂದ" ಅಮೇರಿಕದ ಆಡಳಿತದೊಂದಿಗೆ ಸಂಪರ್ಕದಲ್ಲಿದೆ ಎಂದು ಘೋಷಿಸಿದರು ಹಾಗೂ “ಹೆಚ್ಚಿನ ಸಕಾರಾತ್ಮಕತೆಯನ್ನು ತೋರಿಸಿರುವ" ಮಾತುಕತೆಗಳನ್ನು ನಡೆಸಿದ್ದಾರೆ.

583 ದಿನಗಳು ಒತ್ತೆಯಾಳಾಗಿ
21 ವರ್ಷದ ಅಮೇರಿಕದ ಎಡಾನ್ ಅಲೆಕ್ಸಾಂಡರ್ ರವರು ಗಾಜಾದಲ್ಲಿ ಇನ್ನೂ ಬಂಧಿಸಲ್ಪಟ್ಟಿರುವ 59 ಒತ್ತೆಯಾಳರಲ್ಲಿ ಇವರೂ ಒಬ್ಬರು. ಗಾಜಾದಲ್ಲಿ 583 ದಿನಗಳ ಒತ್ತೆಯಾಳಾಗಿದ್ದ ನಂತರ ಅವರನ್ನು ಮೇ 12ರ ಸಂಜೆ ಬಿಡುಗಡೆ ಮಾಡಲಾಗಿದೆ. ಅವರ ಬಿಡುಗಡೆಯು ಕದನ ವಿರಾಮ ಒಪ್ಪಂದದತ್ತ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಹಮಾಸ್ ಘೋಷಿಸಿತು. ಇತರ ಹಂತಗಳಲ್ಲಿ ಗಾಜಾಗೆ ದಾಟುವ ದ್ವಾರಗಳನ್ನು ತೆರೆಯುವುದು ಮತ್ತು 70 ದಿನಗಳ ಕಾಲ ನಡೆದ ಇಸ್ರಯೇಲ್‌ ನ ದಿಗ್ಬಂಧನದ ನಂತರ ಮಾನವೀಯ ನೆರವು ಎನ್ಕ್ಲೇವ್‌ಗೆ ಪ್ರವೇಶಿಸಲು ಅನುವು ಮಾಡಿಕೊಡುವುದು.

ಪ್ಯಾಲಸ್ತೀನಿಯದ ರಾಜಕಾರಣಿ ಖಲೀಲ್ ಅಲ್-ಹಯ್ಯ ಈ ಮಹತ್ವದ ಹೆಜ್ಜೆಯನ್ನು "ತಕ್ಷಣವೇ ತೀವ್ರ ಮಾತುಕತೆಗಳನ್ನು ಪ್ರಾರಂಭಿಸಲು ಮತ್ತು ಯುದ್ಧವನ್ನು ನಿಲ್ಲಿಸಲು ಅಂತಿಮ ಒಪ್ಪಂದವನ್ನು ತಲುಪಲು ಗಂಭೀರ ಪ್ರಯತ್ನಗಳನ್ನು ಮಾಡಲು ಸಿದ್ಧತೆಯ ದೃಢತೆಯ ಕ್ರಮವಿದು" ಎಂದು ಬಣ್ಣಿಸಿದ್ದಾರೆ.

ಇಸ್ರಯೇಲ್‌ ನ ಪ್ರಧಾನ ಮಂತ್ರಿ ಕಚೇರಿಯು ಯಾವುದೇ ಕದನ ವಿರಾಮಕ್ಕೆ ಬದ್ಧವಾಗಿಲ್ಲ ಆದರೆ ಕೊನೆಯ ಜೀವಂತ ಅಮೆರಿಕದ ಒತ್ತೆಯಾಳನ್ನು ಬಿಡುಗಡೆ ಮಾಡಲು ಸುರಕ್ಷಿತ ಮಾರ್ಗಕ್ಕೆ ಮಾತ್ರ ಬದ್ಧವಾಗಿದೆ ಎಂದು ಹೇಳಿದೆ.

ಪ್ಯಾಲಸ್ತೀನಿಯದ ಸಶಸ್ತ್ರ ಗುಂಪು ಕತಾರ್‌ನಲ್ಲಿ ಅಮೆರಿಕದ ಆಡಳಿತ ಅಧಿಕಾರಿಯೊಂದಿಗೆ ನೇರ ಮಾತುಕತೆ ನಡೆಸುತ್ತಿದೆ ಮತ್ತು ಮೇ 13, ಮಂಗಳವಾರ ಅಮೆರಿಕದ ಅಧ್ಯಕ್ಷರು ಮಧ್ಯಪ್ರಾಚ್ಯಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಅಲೆಕ್ಸಾಂಡರ್ ರವರ ಬಿಡುಗಡೆಯು ಸೌಹಾರ್ದತೆಯ ಸೂಚಕವಾಗಿದೆ ಎಂದು ಹಿರಿಯ ಹಮಾಸ್ ಅಧಿಕಾರಿಯೊಬ್ಬರು ವರದಿ ಮಾಡಿದ್ದಾರೆ.

ಮುಂದುವರೆಯುತ್ತಿರುವ ಮಾನವೀಯ ಬಿಕ್ಕಟ್ಟು
ಗಾಜಾದಲ್ಲಿ ಪರಿಸ್ಥಿತಿ ವಿನಾಶಕಾರಿಯಾಗಿಯೇ ಇದೆ ಏಕೆಂದರೆ ಬರಗಾಲದ ಅಪಾಯ ಸನ್ನಿಹಿತವಾಗಿದೆ, ಮಾರಕ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚುತ್ತಿದೆ ಮತ್ತು ಕೃಷಿಯು ಸಂಪೂರ್ಣ ಕುಸಿತದ ಅಂಚಿನಲ್ಲಿದೆ.

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯು ಗಾಜಾ ಗಡಿಗೆ ಮಾನವೀಯ ನೆರವು ಪ್ರವೇಶಿಸಲು ಈ ದಿಗ್ಬಂಧನಗಳನ್ನು ತೆಗೆದುಹಾಕುವ ಮಹತ್ವವನ್ನು ಒತ್ತಿ ಹೇಳುತ್ತಲೇ ಇದೆ.

ವರ್ಷದ ಆರಂಭದಿಂದಲೂ, ಗಾಜಾದಲ್ಲಿ ಸುಮಾರು 10,000 ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆಯ ಪ್ರಕರಣಗಳು ಕಂಡುಬಂದಿವೆ ಎಂದು ವಿಶ್ವಸಂಸ್ಥೆ ವರದಿ ಮಾಡಿದೆ, ಏಕೆಂದರೆ ಆಹಾರದ ಬೆಲೆಗಳು 1,400% ರಷ್ಟು ಗಗನಕ್ಕೇರಿವೆ.
 

12 ಮೇ 2025, 12:39