ಕೈವ್‌ನಲ್ಲಿರುವ ಯುರೋಪಿನ ನಾಯಕರು ಶಾಂತಿಗಾಗಿ ಕರೆ ನೀಡುತ್ತಾರೆ
ಸ್ಟೀಫನ್ ಜೆ. ಬೋಸ್
ಫೆಬ್ರವರಿ 2022ರಲ್ಲಿ ರಷ್ಯಾ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಆಕ್ರಮಣವನ್ನು ಪ್ರಾರಂಭಿಸಿದಾಗಿನಿಂದ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಗಾಯಗೊಂಡಿದ್ದಾರೆ ಎಂದು ನಂಬಲಾಗಿದೆ ಎಂದು ಗುರುತಿಸಿ ನಾಯಕರು ಕೈವ್‌ನಲ್ಲಿ ಒಟ್ಟುಗೂಡಿದರು.
ಬ್ರಿಟಿಷ್ ನ ಪ್ರಧಾನಿ ಕೀರ್ ಸ್ಟಾರ್ಮರ್ ರವರು, ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ರವರು, ಇತ್ತೀಚೆಗೆ ಆಯ್ಕೆಯಾದ ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ರವರು ಮತ್ತು ಪೋಲಿಷ್ ಪ್ರಧಾನಿ ಡೊನಾಲ್ಡ್ ಟಸ್ಕ್ ರವರು ಕೈವ್‌ನ ಸ್ವಾತಂತ್ರ್ಯ ಚೌಕದಲ್ಲಿರುವ ರಾಷ್ಟ್ರೀಯ ಸ್ಮಾರಕದಲ್ಲಿ ಮೇಣದಬತ್ತಿಗಳನ್ನು ಇರಿಸಿ ಮಡಿದವರಿಗೆಲ್ಲರಿಗೂ ನಮನ ಸಲ್ಲಿಸಿದರು.
ಅವರೊಂದಿಗೆ ಉಕ್ರೇನಿಯದ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿರವರು ಮತ್ತು ಪ್ರಥಮ ಮಹಿಳೆ ಒಲೆನಾ ಝೆಲೆನ್ಸ್ಕಾರವರೂ ಇದ್ದರು, ಅವರ ರಾಷ್ಟ್ರವು ತಲೆಮಾರುಗಳನ್ನು ಅಳಿಸಿಹಾಕಿದ ವಿನಾಶಕಾರಿ ಯುದ್ಧವನ್ನು ಎದುರಿಸಿದೆ.
ನಾವು, ಫ್ರಾನ್ಸ್, ಜರ್ಮನಿ, ಪೋಲೆಂಡ್ ಮತ್ತು ಯುನೈಟೆಡ್ ಕಿಂಗ್‌ಡಮ್‌ನ ನಾಯಕರು, ಉಕ್ರೇನ್‌ನೊಂದಿಗೆ ಒಗ್ಗಟ್ಟಿನಿಂದ ಕೈವ್‌ನಲ್ಲಿ ನಿಲ್ಲುತ್ತೇವೆ" ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಶಾಂತಿ ಇತ್ಯರ್ಥಕ್ಕಾಗಿ ಯೋಜನೆಗಳನ್ನು ಚರ್ಚಿಸಲು, ಅವರು ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಜೆ. ಟ್ರಂಪ್ ರವರಿಗೆ ಜಂಟಿ "ಫಲಪ್ರದ" ಫೋನ್ ಕರೆ ಎಂದು ವಿವರಿಸಿದರು.
ನೇರ ಮಾತುಕತೆ
ಮಾಸ್ಕೋದ ಮೂರು ವರ್ಷಗಳ ಆಕ್ರಮಣದಲ್ಲಿ ಕದನ ವಿರಾಮದ ಸಂದರ್ಭದಲ್ಲಿ ಉಕ್ರೇನ್ ಮತ್ತು ರಷ್ಯಾ ನಡುವೆ "ನೇರ ಮಾತುಕತೆ"ಗೆ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ರವರು ಶನಿವಾರ ಕರೆ ನೀಡಿದರು.
30 ದಿನಗಳ ಕದನ ವಿರಾಮವಿದ್ದರೆ, ಉಕ್ರೇನ್ ಮತ್ತು ರಷ್ಯಾ ನಡುವೆ ನೇರ ಮಾತುಕತೆ ಸಾಧಿಸಲು ಫ್ರಾನ್ಸ್ ಮತ್ತು ಇತರರು ಸಹಾಯ ಮಾಡಲು ಸಿದ್ಧರಾಗಿರುತ್ತಾರೆ ಎಂದು ಅವರು ಹೇಳಿದರು.
ಅವರು ಮತ್ತು ಕೈವ್‌ನಲ್ಲಿರುವ ಇತರ ಯುರೋಪಿನ ನಾಯಕರು ಒಂದು ತಿಂಗಳ ಅವಧಿಯ ಕದನ ವಿರಾಮಕ್ಕೆ ಕರೆಗಳನ್ನು ಪುನರುಚ್ಚರಿಸಬೇಕಿತ್ತು, ಅಧ್ಯಕ್ಷ ಟ್ರಂಪ್ ರವರು ಸೂಚಿಸಿದ ಪ್ರಕಾರ, ಇದು ಸುಸ್ಥಿರ ಶಾಂತಿ ಒಪ್ಪಂದದತ್ತ ಮೊದಲ ಹೆಜ್ಜೆಯಾಗಿರಬಹುದು.
ಉಕ್ರೇನ್ ವಿದೇಶಾಂಗ ಸಚಿವ ಆಂಡ್ರಿ ಸಿಬಿಹಾರವರು, ಉಕ್ರೇನ್ ಮತ್ತು ಅದರ ಮಿತ್ರರಾಷ್ಟ್ರಗಳು ಸೋಮವಾರದಿಂದ ಕನಿಷ್ಠ 30 ದಿನಗಳವರೆಗೆ ಭೂಮಿ, ವಾಯು ಮತ್ತು ಸಮುದ್ರದಲ್ಲಿ ಸಂಪೂರ್ಣವಾಗಿ ಯಾವ ಷರತ್ತೂ ಇಲ್ಲದ ಕದನ ವಿರಾಮಕ್ಕೆ ಸಿದ್ಧವಾಗಿವೆ ಎಂದು ಹೇಳಿದರು.
ರಷ್ಯಾ ಒಪ್ಪಿಕೊಂಡರೆ ಮತ್ತು ಪರಿಣಾಮಕಾರಿ ಮೇಲ್ವಿಚಾರಣೆಯನ್ನು ಖಚಿತಪಡಿಸಿಕೊಂಡರೆ, ಬಾಳಿಕೆ ಬರುವ ಕದನ ವಿರಾಮ ಮತ್ತು ವಿಶ್ವಾಸ ವೃದ್ಧಿ ಕ್ರಮಗಳು ಶಾಂತಿ ಮಾತುಕತೆಗಳಿಗೆ ದಾರಿ ಮಾಡಿಕೊಡಬಹುದು ಎಂದು ಅವರು ಹೇಳಿದರು.