ವಿನಾಶಕಾರಿ ಪ್ರವಾಹದ ನಂತರ ಪರಿಸರ ಕಾಳಜಿಗೆ ಡಿಆರ್‌ಸಿಯ ಕಾರಿತಾಸ್ ಕರೆ ನೀಡಿದೆ
ಕೀಲ್ಸ್ ಗುಸ್ಸಿ
ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಪೂರ್ವ ಭಾಗದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ, 50 ಜನರು ಕಾಣೆಯಾಗಿದ್ದಾರೆ ಮತ್ತು ಕನಿಷ್ಠ 28 ಜನರು ಗಾಯಗೊಂಡಿದ್ದಾರೆ. ಧಾರಾಕಾರ ಸುರಿದ ಮಳೆಯಿಂದಾಗಿ ಕಸಬಾ ನದಿ ಉಕ್ಕಿ ಹರಿಯಿತು, ಈ ಕಾರಣ ಟ್ಯಾಂಗನಿಕಾ ಸರೋವರದ ಸುತ್ತಮುತ್ತಲಿನ ಹಲವಾರು ಹಳ್ಳಿಗಳು ಕೊಚ್ಚಿಹೋದವು.
ಹೆಚ್ಚಿನ ಪ್ರಮಾಣದಲ್ಲಿ ಸತ್ರಂಸ್ತರುಗಳಾದವರು ಮಕ್ಕಳು ಮತ್ತು ವೃದ್ಧರು ಎಂದು ಪ್ರಾದೇಶಿಕ ಆಡಳಿತಾಧಿಕಾರಿಯೊಬ್ಬರು ದೃಢಪಡಿಸಿದರು. ಮಳೆನೀರು ಅಗಾಧವಾದ ವಸ್ತು ಹಾನಿಯನ್ನು ಉಂಟುಮಾಡುತ್ತಿದೆ.
ವಿನಾಶಕಾರಿ ಪರಿಣಾಮಗಳು
ಕ್ರಕ್ಸ್‌ಗೆ ನೀಡಿದ ಸಂದರ್ಶನದಲ್ಲಿ, ಕಾರಿತಾಸ್‌ನ ಬುಟೆಂಬೊ-ಬೆನಿಯ ಸಂವಹನ ನಿರ್ದೇಶಕಿ ಎಲೀ ಎಂಬುಲೆಘೆಟಿರವರು, ಪ್ರವಾಹವು ಸಮುದಾಯಗಳ ಮೇಲೆ ಬೀರಿದ ವಿನಾಶಕಾರಿ ಪರಿಣಾಮವನ್ನು ಒತ್ತಿ ಹೇಳಿದರು.
ಹಲವಾರು ಮೂಲಸೌಕರ್ಯಗಳು ನಾಶವಾಗುವುದರ ಜೊತೆಗೆ, ಪ್ರವಾಹದ ನೀರು ನಗರಕ್ಕೂ ನುಗ್ಗಿತು. ಆದ್ದರಿಂದ, ಮಾನವೀಯ ಪರಿಣಾಮವಾಗಿ, ಹಲವಾರು ನೈರ್ಮಲ್ಯ ಮೂಲಸೌಕರ್ಯಗಳು ನೀರಿನಿಂದ ನಾಶವಾಗಿವೆ ಎಂದು ಎಂಬುಲೆಘೆಟಿರವರು ವಿವರಿಸಿದರು.
ರಾಜಕೀಯ, ಸಂಘರ್ಷ ಮತ್ತು ಪರಿಸರ ಸಮಸ್ಯೆ
ಆಫ್ರಿಕಾ ರಾಷ್ಟ್ರದ ಮೇಲೆ ಪರಿಣಾಮ ಬೀರಿದ ಮೊದಲ ನೈಸರ್ಗಿಕ ವಿಕೋಪ ಇದಲ್ಲ. ಕಳೆದ ವರ್ಷ ಪಶ್ಚಿಮ ಮತ್ತು ಮಧ್ಯ ಆಫ್ರಿಕಾದಾದ್ಯಂತ ಪ್ರವಾಹಗಳು ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರಿವೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ (OCHA) ವರದಿ ಮಾಡಿದೆ. ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯವೊಂದರಲ್ಲಿಯೇ, 1.2 ಮಿಲಿಯನ್ ಜನರು ತೀವ್ರ ಪ್ರವಾಹದ ಪರಿಣಾಮಗಳನ್ನು ಅನುಭವಿಸಿದರು.
ನೈಸರ್ಗಿಕ ವಿಕೋಪಗಳ ಪರಿಣಾಮವನ್ನು ಕಡಿಮೆ ಮಾಡುವಲ್ಲಿ ಡಿಆರ್‌ಸಿ ಹೊಂದಿರುವ ಸಮಸ್ಯೆಯ ಒಂದು ಭಾಗವೆಂದರೆ ಅಸ್ತಿತ್ವದಲ್ಲಿರುವ ಶಾಸನವನ್ನು ಜಾರಿಗೆ ತರುವಲ್ಲಿ ವಿಫಲವಾಗಿದೆ ಎಂದು ಕ್ಯಾರಿಟಾಸ್‌ನ ಸಂವಹನ ನಿರ್ದೇಶಕ ಬುಟೆಂಬೊ-ಬೆನಿ ವಾದಿಸಿದರು.
ಭವಿಷ್ಯದಲ್ಲಿ ಪ್ರವಾಹದಂತಹ ವಿಪತ್ತುಗಳನ್ನು ತಡೆಗಟ್ಟಲು, ಜವಾಬ್ದಾರಿಯುತ ನಗರ ಯೋಜನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು, ಅವರು ದೇಶದ ಅಧಿಕಾರಿಗಳನ್ನು ಪ್ರೋತ್ಸಾಹಿಸಿದರು. ಸುಸ್ಥಿರ ಅಭಿವೃದ್ಧಿಗೆ ಆದ್ಯತೆ ನೀಡುವುದು ಮತ್ತು ಸರಿಯಾದ ವಲಯ ಕಾನೂನುಗಳನ್ನು ಜಾರಿಗೊಳಿಸುವುದು, ಭವಿಷ್ಯದ ಅಪಾಯಗಳನ್ನು ತಗ್ಗಿಸಲು, ಸಹಾಯ ಮಾಡುತ್ತದೆ ಎಂದು ಎಂಬುಲೆಘೆಟಿರವರು ಒತ್ತಿ ಹೇಳಿದರು.