ಸುಡಾನ್‌ನಲ್ಲಿ 2 ವರ್ಷಗಳ ಯುದ್ಧ: ವಿಶ್ವದ ಅತ್ಯಂತ ಭೀಕರ ಮಾನವೀಯ ಬಿಕ್ಕಟ್ಟು
ಕೀಲ್ಸ್ ಗುಸ್ಸಿ ಮತ್ತು ಜೀನ್-ಬೆನೊಯ್ಟ್ ಹರೆಲ್
ಎರಡು ವರ್ಷಗಳಿಂದ, ಇಡೀ ಸುಡಾನ್ ದೇಶವು ಭೀಕರ ಪರಿಸ್ಥಿತಿಯಲ್ಲಿ ಬದುಕುತ್ತಿದೆ. ಇಂದು, ಏಪ್ರಿಲ್ 15, ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ವಿನಾಶಕಾರಿ ಮಾನವೀಯ ಬಿಕ್ಕಟ್ಟಿನ ದುರಂತವನ್ನು ನೆನಪಿಸುವ, ಸುಡಾನ್‌ನ 2 ವರ್ಷಗಳ ಯುದ್ಧದ ಎರಡನೇ ವಾರ್ಷಿಕೋತ್ಸವವನ್ನು ಆಚರಿಸುತ್ತದೆ. ಆದರೂ, ಇದು ಹೆಚ್ಚಾಗಿ ಮರೆತುಹೋಗುವ ಸಂಘರ್ಷವಾಗಿದೆ.
ಭಾನುವಾರ, ವಿಶ್ವಗುರು ಫ್ರಾನ್ಸಿಸ್ ರವರು ಮತ್ತೊಮ್ಮೆ ಹಿಂಸಾಚಾರವನ್ನು ನಿಲ್ಲಿಸುವಂತೆ ಮನವಿ ಮಾಡಿದರು ಮತ್ತು ಅಗತ್ಯವಿರುವ ಜನರಿಗೆ ಪ್ರಮುಖ ನೆರವು ನೀಡುವಂತೆ ಅಂತರರಾಷ್ಟ್ರೀಯ ಸಮುದಾಯವನ್ನು ಕೇಳಿದರು.
ಸುಡಾನ್ ಸೈನ್ಯ ಮತ್ತು ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆಗಳ (RSF) ನಡುವಿನ ಅಧಿಕಾರಕ್ಕಾಗಿ ಪೈಪೋಟಿ ನಡೆಸುತ್ತಿರುವ ಈ ಸಂಘರ್ಷದ ಪರಿಣಾಮಗಳ ಮಧ್ಯೆ 51 ಮಿಲಿಯನ್ ಸುಡಾನಿನ ಜನರು ಬದುಕುತ್ತಿದ್ದಾರೆ. ಸಾವಿನ ಸಂಖ್ಯೆ ಹತ್ತಾರು ಸಾವಿರ ಎಂದು ವರದಿಯಾಗಿದೆ, ಕ್ಷಾಮವು ತೀವ್ರವಾಗಿದೆ ಮತ್ತು 13 ಮಿಲಿಯನ್ ಜನರು ಸ್ಥಳಾಂತರಗೊಂಡಿದ್ದಾರೆ.
ನಾವು ಕಣ್ಣು ಮುಚ್ಚಿಕೊಂಡು ಕುಳಿತುಕೊಳ್ಳಲು ಸಾಧ್ಯವಿಲ್ಲ
ಹಿಂಸಾಚಾರವನ್ನು ಕೊನೆಗೊಳಿಸಲು ಮತ್ತು ಸ್ಥಗಿತಗೊಂಡ ಶಾಂತಿ ಮಾತುಕತೆಗಳನ್ನು ಪುನರಾರಂಭಿಸಲು, ಲಂಡನ್‌ನಲ್ಲಿ ಸಮ್ಮೇಳನವನ್ನು ಕರೆಯಲಾಗುತ್ತಿದೆ. ಅದರ ಗುರಿ? ಇದರ ಗುರಿಯು, ಸುಡಾನ್‌ನಲ್ಲಿ ಶಾಂತಿ ಸಾಧಿಸಲು ಸಹಾಯ ಮಾಡುವ 20 ದೇಶಗಳ ಮಂತ್ರಿಗಳನ್ನು ಕರೆತರುವುದಾಗಿದೆ.
ಈ ಎರಡನೇ ವಾರ್ಷಿಕೋತ್ಸವದಂದು ಮತ್ತು ಮಂತ್ರಿಮಂಡಲ ಸಮ್ಮೇಳನದ ಆರಂಭಕ್ಕೂ ಮುನ್ನ, ವಿಶ್ವಾಸ ಆಧಾರಿತ ಜಾಲಗಳು ಮತ್ತು ಧಾರ್ಮಿಕ ಸಂಸ್ಥೆಗಳ ನಾಯಕರು ಸುಡಾನ್‌ನಲ್ಲಿನ ಪರಿಸ್ಥಿತಿಯನ್ನು "ಭಯಾನಕ" ಎಂದು ಬಣ್ಣಿಸುವ ಹೇಳಿಕೆಯನ್ನು ಬಿಡುಗಡೆ ಮಾಡಿದರು. ಶಾಂತಿ ಮಾತುಕತೆಗಳಿಗೆ ಸಂಘಟಿತ ಬಲವಾದ ಒತ್ತಡವಿಲ್ಲದಿದ್ದರೆ ಸಂಘರ್ಷ ಇನ್ನಷ್ಟು ಹದಗೆಡುತ್ತದೆ ಎಂದು ಅದು ಎಚ್ಚರಿಸಿದೆ.
ಇದಲ್ಲದೆ, ಗುಂಪುಗಳು ಅಂತರರಾಷ್ಟ್ರೀಯ ಸಮುದಾಯಕ್ಕೆ ಕ್ರಮ ಕೈಗೊಳ್ಳಲು ಸವಾಲು ಹಾಕಿದವು, ಅವರು ಸುಡಾನ್ ಕಡೆಗೆ ಕಣ್ಣು ಮುಚ್ಚಿಕೊಂಡು ಇರಲು ಸಾಧ್ಯವಿಲ್ಲ. ಈ ಕುರಿತು ಪಕ್ಷಗಳನ್ನು ಮಾತುಕತೆಯ ಮೇಜಿಗೆ ತರಲು ಮತ್ತು ಸಂಘರ್ಷದ ಸುಸ್ಥಿರ ಪರಿಹಾರಕ್ಕಾಗಿ ನಾವು ನಿರ್ಣಾಯಕವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಸುಡಾನ್‌ನಲ್ಲಿ ಅತ್ಯಂತ ಅಗತ್ಯವಿರುವವರಿಗೆ ಸಹಾಯ ಮಾಡಲು ಅಂತರರಾಷ್ಟ್ರೀಯ ಕಾರಿತಾಸ್, ACT ಅಲೈಯನ್ಸ್, ಸ್ಥಳೀಯ ಪಾಲುದಾರರು ಮತ್ತು ಸ್ಥಳೀಯ ಕಾರಿತಾಸ್ ಸದಸ್ಯರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಜಂಟಿ ಮನವಿಯ ಹೃದಯಭಾಗದಲ್ಲಿ, ಸುಡಾನ್ ನಾಗರಿಕ ಸಮಾಜ ಮತ್ತು ಪರಸ್ಪರ ಸಹಾಯ ಮಾಡುವ ವ್ಯಕ್ತಿಗಳ ಬೆಂಬಲವಿದೆ, ಅವರು ತಮ್ಮ ಸಮುದಾಯಗಳಿಗೆ ಸಹಾಯ ಮಾಡುವ ಬೆನ್ನೆಲುಬಾಗಿರುತ್ತಾರೆ.
ಯುದ್ಧವು ಇಡೀ ಪ್ರದೇಶದ ಮೇಲೆ ಪರಿಣಾಮ ಬೀರುತ್ತದೆ
ಲಕ್ಷಾಂತರ ಜನರಿಗೆ ಇಂತಹ ವಿನಾಶಕಾರಿ ಬಿಕ್ಕಟ್ಟನ್ನು ಸೃಷ್ಟಿಸಿದ ಸಂಘರ್ಷದ ಹೊರತಾಗಿಯೂ, ಮಾಧ್ಯಮ ವರದಿಗಳು ಕಡಿಮೆಯಿದ್ದವು. ವ್ಯಾಟಿಕನ್ ಸುದ್ದಿಗೆ ನೀಡಿದ ಸಂದರ್ಶನದಲ್ಲಿ, ಅಂತರರಾಷ್ಟ್ರೀಯ ಕಾರಿತಾಸ್ ನ ಮಾನವೀಯ ನಿರ್ದೇಶಕರು ಹಿಂಸಾಚಾರದ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಶಾಂತಿಗಾಗಿ ಪ್ರತಿಪಾದಿಸುವ ಮಹತ್ವವನ್ನು ಒತ್ತಿ ಹೇಳಿದರು. ಶಾಂತಿವಿಲ್ಲದಿದ್ದಲ್ಲಿ, ನಾನು ಸುಡಾನ್ ಜನರಿಗೆ ಮಾತ್ರವಲ್ಲ, ಅತ್ಯಂತ ಭೀಕರ ಮತ್ತು ವಿಪತ್ತು ಪರಿಸ್ಥಿತಿಯನ್ನು ಮಾತ್ರ ನೋಡಬಲ್ಲೆವು ಎಂದು ಅವರು ಎಚ್ಚರಿಸಿದರು.
ಇತರ ದೇಶಗಳಿಗೂ ಶಾಂತಿ ಬಹಳ ಮುಖ್ಯ. ಹಿಂಸಾಚಾರದಿಂದ ತಪ್ಪಿಸಿಕೊಳ್ಳಲು ಸುಮಾರು 4 ಮಿಲಿಯನ್ ಸುಡಾನ್ ಜನರು ನೆರೆಯ ದೇಶಗಳಿಗೆ ವಲಸೆ ಬಂದಿದ್ದಾರೆ. ಸುಡಾನ್‌ನಿಂದ ಹೆಚ್ಚು ಹೆಚ್ಚು ಜನರು ಪಲಾಯನ ಮಾಡುವುದರಿಂದ, "ಚಾಡ್ ಅಥವಾ ದಕ್ಷಿಣ ಸುಡಾನ್‌ನಂತಹ ನೆರೆಯ ರಾಷ್ಟ್ರಗಳು ಪ್ರಸ್ತುತ ಎದುರಿಸುತ್ತಿರುವ ಭೀಕರ ಪರಿಸ್ಥಿತಿಗಳನ್ನು ಅವರು ಹೆಚ್ಚು ವಿವರಿಸುತ್ತಾರೆ. ಏಕೆಂದರೆ ಅವೆಲ್ಲವೂ ಸಹ ಗಮನಾರ್ಹವಾದ ಮಾನವೀಯ ಬಿಕ್ಕಟ್ಟನ್ನು ಎದುರಿಸುತ್ತಿವೆ ಎಂದು ಹಾಕ್ ರವರು ವಿವರಿಸಿದರು.
ಈ ವಿನಾಶಕಾರಿ ಬಿಕ್ಕಟ್ಟಿನಿಂದ ಬಳಲುತ್ತಿರುವ ಲಕ್ಷಾಂತರ ಜನರಿಗೆ ಮುಂದಿನ ಏಕೈಕ ಮಾರ್ಗವೆಂದರೆ ಅಂತರರಾಷ್ಟ್ರೀಯ ಸಮುದಾಯವು "ಅಂತರರಾಷ್ಟ್ರೀಯ, ಮಾನವೀಯ ಕಾನೂನನ್ನು ರಕ್ಷಿಸುವಲ್ಲಿ" ತನ್ನ ಜವಾಬ್ದಾರಿಯನ್ನು ಗುರುತಿಸುವುದಾಗಿದೆ.
ಪರದೆಯ ಮೇಲೆ ಸಂಖ್ಯೆಗಳನ್ನು ನೋಡುವುದಕ್ಕಿಂತ, ಮನುಷ್ಯರ ಮುಖಗಳನ್ನು ನೋಡುವ ಮೂಲಕ ಮಾತ್ರ ಮೌನವಾಗಿ ಕೊಲ್ಲುವ, ಹಸಿವಿನಿಂದ ಸಾಯುವ ಮತ್ತು ಸಾಕ್ಷಿಗಳಿಲ್ಲದೆ ಧ್ವಂಸಗೊಳಿಸುವ ಈ ಯುದ್ಧವು ಕೊನೆಗೊಳ್ಳುತ್ತದೆ.