MAP

 traffico esseri umani, tratta traffico esseri umani, tratta  (Copyright Marlon Lopez MMG1design. All rights reserved.)

ಆಗ್ನೇಯ ಏಷ್ಯಾ: ಕಳ್ಳಸಾಗಣೆದಾರರು ಸಂತ್ರಸ್ತರುಗಳನ್ನು ಶೋಷಿಸಲು ಕ್ರೈಸ್ತ ಧರ್ಮಪ್ರಚಾರಕಂತೆ, ವೇಷ ಧರಿಸುತ್ತಿದ್ದಾರೆ

ಫಿಲಿಪೈನ್ಸ್ ಮತ್ತು ಥಾಯ್ ಪೊಲೀಸರ ಸಂಶೋಧನೆಗಳ ಪ್ರಕಾರ, ಆಗ್ನೇಯ ಏಷ್ಯಾದಲ್ಲಿ ಮಾನವ ಕಳ್ಳಸಾಗಣೆದಾರರು ಸಂತ್ರಸ್ತರುಗಳನ್ನು ಆಕರ್ಷಿಸಲು ಮತ್ತು ಗಡಿಯಾಚೆಗಿನ ಕಳ್ಳಸಾಗಣೆ ಕಾರ್ಯಾಚರಣೆಗಳನ್ನು ಸುಗಮಗೊಳಿಸಲು ಧಾರ್ಮಿಕ ಧರ್ಮಪ್ರಚಾರಕರೆಂದು ಹೇಳಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.

ಲಿಕಾಸ್ ಸುದ್ದಿ

ಅಧಿಕಾರಿಗಳನ್ನು ವಂಚಿಸಲು ಮತ್ತು ಅಂತರರಾಷ್ಟ್ರೀಯ ಗಡಿಗಳಲ್ಲಿ ಪತ್ತೆಯಾಗುವುದನ್ನು ತಪ್ಪಿಸಲು ಕಳ್ಳಸಾಗಣೆದಾರರು ಧರ್ಮಪ್ರಚಾರಕಂತೆ ಅಥವಾ ಯಾತ್ರಿಕರಾಗಿ ನಟಿಸುವುದು ಹೆಚ್ಚಾಗುತ್ತಿದೆ ಎಂದು ತನಿಖೆಗಳು ಬಹಿರಂಗಪಡಿಸಿವೆ.

ವ್ಯಾಟಿಕನ್‌ನ ಫೈಡ್ಸ್ ಸುದ್ದಿಯ ಏಜೆನ್ಸಿಯ ವರದಿಯ ಪ್ರಕಾರ, ಈ ಹೊರಹೊಮ್ಮುತ್ತಿರುವ ತಂತ್ರವು ಸಂತ್ರಸ್ತರುಗಳು ಮತ್ತು ಕಳ್ಳಸಾಗಣೆದಾರರು ಕ್ರೈಸ್ತ ಧರ್ಮಪ್ರಚಾರಕರು ಅಥವಾ ವಿದೇಶಗಳಲ್ಲಿ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿರುವ ಸ್ವಯಂಸೇವಕರ ವೇಷ ಧರಿಸುವುದನ್ನು ಒಳಗೊಂಡಿರುತ್ತದೆ.

ದೂರವಾಣಿ ಕದ್ದಾಲಿಕೆ ಮತ್ತು ಸಂಘಟಿತ ತನಿಖೆಗಳ ಬೆಂಬಲದೊಂದಿಗೆ ಪೊಲೀಸ್ ಕಾರ್ಯಾಚರಣೆಗಳು ಈ "ಧಾರ್ಮಿಕ ಕದ್ದಾಲಿಕೆ"ಯನ್ನು ಬಳಸಿಕೊಂಡು ಹಲವಾರು ಪ್ರಕರಣಗಳನ್ನು ಬಯಲು ಮಾಡಿವೆ.

ಅಂತಹ ಒಂದು ಪ್ರಕರಣದಲ್ಲಿ 23, 25 ಮತ್ತು 50 ವರ್ಷ ವಯಸ್ಸಿನ ಮೂವರು ಫಿಲಿಪಿನೋ ಮಹಿಳೆಯರು ಥೈಲ್ಯಾಂಡ್‌ನಲ್ಲಿ ನಿಲುಗಡೆಯೊಂದಿಗೆ ಸಿಂಗಾಪುರಕ್ಕೆ ವಿಮಾನ ಹತ್ತಲು ಪ್ರಯತ್ನಿಸಿದ್ದರು.

ಅವರು "ಧರ್ಮಪ್ರಚಾರಕರು", ಥೈಲ್ಯಾಂಡ್‌ನಲ್ಲಿ ಧರ್ಮಪ್ರಚಾರಕ ಕೆಲಸಕ್ಕಾಗಿ ಕಥೋಲಿಕ ಧರ್ಮಸಭೆಗೆ ಸೇರಿದ ಸ್ವಯಂಸೇವಕರು ಎಂದು ಹೇಳಿಕೊಂಡರು. ಆದಾಗ್ಯೂ, ಅಧಿಕಾರಿಗಳು ತಮ್ಮ ದಾಖಲೆಗಳಲ್ಲಿ ಅಸಂಗತತೆಗಳನ್ನು ಗುರುತಿಸಿದ್ದಾರೆ.

ಹೆಚ್ಚಿನ ವಿಚಾರಣೆ ನಡೆಸಿದಾಗ, "ಪ್ರಭೋದಕಿ" ಎಂದು ಹೇಳಿಕೊಂಡ ವಯಸ್ಸಿನಲ್ಲಿ ಅತ್ಯಂತ ಹಿರಿಯ ಮಹಿಳೆ ವಾಸ್ತವವಾಗಿ ಮಾನವ ಕಳ್ಳಸಾಗಣೆ ಕಾರ್ಯಾಚರಣೆಯ ಸಂಘಟಕಿಯಾಗಿದ್ದರು ಎಂದು ತಿಳಿದುಬಂದಿದೆ.

ಪೊಲೀಸರ ಪ್ರಕಾರ, ಇಬ್ಬರು ಕಿರಿಯ ಮಹಿಳೆಯರಿಗೆ "ಬೋಧನಾ ಕೆಲಸ" ನೀಡುವ ಭರವಸೆ ನೀಡಿ ಆಮಿಷ ಒಡ್ಡಲಾಗಿತ್ತು, ಆದರೆ ತಿಳಿಯದೆಯೇ ಲೈಂಗಿಕ ಕಳ್ಳಸಾಗಣೆಯಲ್ಲಿ ತೊಡಗಿರುವ ಕ್ರಿಮಿನಲ್ ಜಾಲಕ್ಕೆ ಬಿದ್ದಿದ್ದರು.

ಒಬ್ಬ ನಿಯಮಿತ ಪ್ರಯಾಣಿಕನು ಕಳ್ಳಸಾಗಣೆದಾರನಂತೆ ವರ್ತಿಸುತ್ತಾ, ಸುಳ್ಳು ನೆಪದಲ್ಲಿ ಪ್ರಯಾಣಿಕರ ಗುಂಪುಗಳೊಂದಿಗೆ ಹೋಗುತ್ತಾನೆ, ಅವರು ಕಳ್ಳಸಾಗಣೆಗೆ ಬಲಿಯಾಗುತ್ತಾರೆ ಎಂದು ಪೊಲೀಸರು ಒಂದು ವಿಧಾನವನ್ನು ವಿವರಿಸಿದರು.

ಫಿಲಿಪೈನ್ಸ್, ಇಂಡೋನೇಷ್ಯಾ, ಮಲೇಷ್ಯಾ, ಥೈಲ್ಯಾಂಡ್ ಮತ್ತು ಕಾಂಬೋಡಿಯಾ ಸೇರಿದಂತೆ ಆಗ್ನೇಯ ಏಷ್ಯಾದಾದ್ಯಂತ ಕಾನೂನು ಜಾರಿ ಸಂಸ್ಥೆಗಳು ಈ ಜಾಲಗಳನ್ನು ಎದುರಿಸಲು ಜಂಟಿ ಕಾರ್ಯಾಚರಣೆಗಳನ್ನು ತೀವ್ರಗೊಳಿಸಿವೆ.

ಧಾರ್ಮಿಕ ಪ್ರಯಾಣದ ನೆಪದಲ್ಲಿ ಸಂತ್ರಸ್ತರುಗಳನ್ನು ಕಳ್ಳಸಾಗಣೆ ಮಾಡುವವರನ್ನು ಗುರಿಯಾಗಿಸಿಕೊಂಡು ಬಂಧನಗಳು ನಡೆದಿವೆ.

ಫಿಲಿಪೈನ್ ವಲಸೆ ಬ್ಯೂರೋ, 2024ರ ಅಂತ್ಯದ ವರದಿಯಲ್ಲಿ, 998 ಮಾನವ ಕಳ್ಳಸಾಗಣೆ ಪ್ರಕರಣಗಳನ್ನು ದಾಖಲಿಸಿದೆ.

ಯೋಜನೆಗಳಲ್ಲಿ ಹೆಚ್ಚಾಗಿ "ನಕಲಿ ತೀರ್ಥಯಾತ್ರೆಗಳು, ವ್ಯವಸ್ಥಿತ ವಿವಾಹಗಳು ಮತ್ತು ಸರೊಗಸಿ(ಬಾಡಿಗೆ ತಾಯ್ತನ)" ಸೇರಿವೆ ಎಂದು ಸಂಸ್ಥೆ ಎತ್ತಿ ತೋರಿಸಿದೆ ಹಾಗೂ ಅನೇಕ ಸಂತ್ರಸ್ತರುಗಳು ಸಾಮಾಜಿಕ ಮಾಧ್ಯಮದ ಮೂಲಕ ಗುರಿಯಾಗುತ್ತಾರೆ ಎಂದು ಗಮನಿಸಿದೆ.

ಒಮ್ಮೆ ನೇಮಕಗೊಂಡ ನಂತರ, ಸಂತ್ರಸ್ತರುಗಳನ್ನು "ಥೈಲ್ಯಾಂಡ್, ಕಾಂಬೋಡಿಯಾ ಮತ್ತು ಮ್ಯಾನ್ಮಾರ್‌ನಲ್ಲಿರುವ 'ವಂಚನಾ ನಗರಗಳು' ಎಂದು ಕರೆಯಲ್ಪಡುವಲ್ಲಿ ಗುಲಾಮಗಿರಿ ಕೆಲಸಕ್ಕೆ" ಒತ್ತಾಯಿಸಲಾಗುತ್ತದೆ.
 

11 ಏಪ್ರಿಲ್ 2025, 11:54