MAP

KAICIID Rome expert meeting KAICIID Rome expert meeting 

ಧರ್ಮ ಮತ್ತು ಸಾಮಾಜಿಕ ಒಗ್ಗಟ್ಟಿನತ್ತ ರೋಮ್ ಸಮ್ಮೇಳನದ ಕಾರ್ಯಾಚರಣೆ

ಹವಾಮಾನ ನ್ಯಾಯ, ಸಾಮಾಜಿಕ ಒಗ್ಗಟ್ಟು ಮತ್ತು ಅಂತರಧರ್ಮೀಯ ಸಂವಾದವನ್ನು ಚರ್ಚಿಸಲು ರೋಮ್‌ನಲ್ಲಿ ಒಟ್ಟುಗೂಡುತ್ತಿರುವವರಲ್ಲಿ ಕಾರ್ಡಿನಲ್ ರಾಯಭಾರಿ ಮತ್ತು ಲುಥೆರನ್ ಧರ್ಮಾಧ್ಯಕ್ಷರೂ ಸಹ ಸೇರಿದ್ದಾರೆ.

ಜೋಸೆಫ್ ಟುಲ್ಲೊಚ್

ಸಾಮಾಜಿಕ ಒಗ್ಗಟ್ಟು ಮತ್ತು ಹವಾಮಾನ ನ್ಯಾಯವನ್ನು ಉತ್ತೇಜಿಸಲು ಧರ್ಮಗಳು ಹೇಗೆ ಒಟ್ಟಾಗಿ ಕೆಲಸ ಮಾಡಬಹುದು?
ರೋಮ್‌ನ ಜಗದ್ಗುರುಗಳ ಆಂಟೋನಿಯನಮ್ ವಿಶ್ವವಿದ್ಯಾಲಯದಲ್ಲಿ ಏಪ್ರಿಲ್ 8 ರಿಂದ 9 ರವರೆಗೆ ನಡೆದ 'ಸಾಮಾನ್ಯ ದಿಗಂತಗಳು (Common Horizon) - ಯುರೋಪಿನಲ್ಲಿ ಸಾಮಾಜಿಕ ಒಗ್ಗಟ್ಟು ಮತ್ತು ಹವಾಮಾನ ನ್ಯಾಯಕ್ಕೆ ಅಂತರಧರ್ಮೀಯ ಮಾರ್ಗಗಳು' ಎಂಬ ಶೀರ್ಷಿಕೆಯು, ಸಭೆಯ ಮುಖ್ಯವಾದ ಪ್ರಶ್ನೆಯಾಗಿದೆ.

ಅಂತರ್ಧರ್ಮೀಯ ಸಂವಾದಕ್ಕಾಗಿ ಹೊಸದಾಗಿ ನೇಮಕಗೊಂಡ ಡಿಕ್ಯಾಸ್ಟರಿಯ ಪ್ರಿಫೆಕ್ಟ್ ಕಾರ್ಡಿನಲ್ ಜಾರ್ಜ್ ಕೂವಕಾಡ್ ರವರು ಮೊದಲ ಭಾಷಣಕಾರರಾಗಿದ್ದರು. ಜಾಗತೀಕರಣವು ನಮ್ಮನ್ನು "ನೆರೆಹೊರೆಯವರನ್ನಾಗಿ" ಮಾಡಿದ್ದರೂ, ಅದು "ನಮ್ಮನ್ನು ಸಹೋದರರನ್ನಾಗಿ ಮಾಡುವುದಿಲ್ಲ" ಎಂಬ ವಿಶ್ವಗುರು ಹದಿನಾರನೆಯ ಬೆನೆಡಿಕ್ಟ್ ರವರ ಅಭಿಪ್ರಾಯವನ್ನು ನಾನು ಉಲ್ಲೇಖಿಸಿದ್ದೇನೆ.

ನಮ್ಮ ಗ್ರಹ ಅಥವಾ ನಮ್ಮ ಸಹ ಮಾನವರ ಅಥವಾ ನಮ್ಮ ನೆರಹೊರೆಯವರ ಅಗತ್ಯತೆಗಳ ಬಗ್ಗೆ ಗಮನಹರಿಸಲು ದೇವರಲ್ಲಿ ಕೇವಲ ನಂಬಿಕೆಯಿಟ್ಟರೆ ಸಾಕಾಗುವುದಿಲ್ಲ ಎಂದು ಕಾರ್ಡಿನಲ್ ಕೂವಕಾಡ್ ರವರು ಒತ್ತಿ ಹೇಳಿದರು. ಇದರ ಬದಲಿಗೆ ಬೇಕಾಗಿರುವುದು ಆಧ್ಯಾತ್ಮಿಕತೆ ಹಾಗೂ "ತಾಂತ್ರಿಕ ಮಾದರಿ"ಯನ್ನು ವಿರೋಧಿಸುವ ಸಾಮರ್ಥ್ಯವಿರುವ ಜೀವನಶೈಲಿ ಎಂದು ಅವರು ಹೇಳಿದರು.

ಮುಂದೆ ಮಾತನಾಡಿದ ರಾಯಭಾರಿ ಆಂಟೋನಿಯೊ ಡಿ ಅಲ್ಮೇಡಾ-ರಿಬೇರೊರವರು, ಅಂತಾರಾಷ್ಟ್ರೀಯ ಸಂವಾದ ಕೇಂದ್ರವಾದ KAICIID ನ ಕಾರ್ಯಕಾರಿ ಪ್ರಧಾನ ಕಾರ್ಯದರ್ಶಿಯವರು. ಧಾರ್ಮಿಕ ಮತ್ತು ಜಾತ್ಯತೀತ ಸಂಸ್ಥೆಗಳ ನಡುವಿನ ಸಹಯೋಗದ ಮಹತ್ವವನ್ನು ನಾನು ಒತ್ತಿ ಹೇಳಿದ್ದೇನೆ.

ಧರ್ಮಗಳು, ಸಾಮಾಜಿಕ ಜಾಲತಾಣಗಳು ಮತ್ತು ಶತಮಾನಗಳ ಜ್ಞಾನಾರ್ಜನೆಯನ್ನು ನೀಡುತ್ತವೆಯಾದರೂ, ನೀತಿ ನಿರೂಪಕರು ತಮ್ಮ ಅಂತಃಪ್ರಜ್ಞೆಯನ್ನು ರಚನಾತ್ಮಕ ನೀತಿ ಪ್ರಸ್ತಾಪಗಳಾಗಿ ಪರಿವರ್ತಿಸಲು ಸಹಾಯ ಮಾಡುವ ಚೌಕಟ್ಟುಗಳನ್ನು ನೀಡಬಹುದು ಎಂದು ರಾಯಭಾರಿ ಅಲ್ಮೇಡಾ-ರಿಬೈರೊರವರು ಹೇಳಿದರು. ಈ ಎರಡೂ ಗುಂಪುಗಳು ಸಹಕರಿಸಿದಾಗ, "ಇದರ ಪರಿಣಾಮವು ಆಳವಾದದ್ದು" ಎಂದು ಅವರು ಒತ್ತಿ ಹೇಳಿದರು.

ನಾರ್ವೆ ಧರ್ಮಸಭೆಯ ಸದಸ್ಯ ಮತ್ತು ಯುರೋಪಿನ ಧಾರ್ಮಿಕ ನಾಯಕರುಗಳ ಮಂಡಳಿಯ ಅಧ್ಯಕ್ಷರಾದ ಧರ್ಮಾಧ್ಯಕ್ಷರಾದ ಕರಿ ಮಂಗ್ರುಡ್ ಅಲ್ವ್ಸ್ವಾಗ್ ರವರ ಮಾತುಗಳನ್ನು ಹಾಜರಿದ್ದವರೆಲ್ಲರು ಕೇಳಿದರು.

ಮದುವೆಗಳು, ದೀಕ್ಷಾಸ್ನಾನಗಳು ಮತ್ತು ವಿವಾಹಗಳ ಆಚರಣೆಯ ಜೊತೆಗೆ, ದೇಶದಲ್ಲಿ ಧರ್ಮಸಭೆಯ ಚಟುವಟಿಕೆಯ ಬಗ್ಗೆ ನಾರ್ವೇಯ ಪ್ರಜೆಗಳು ಹೆಚ್ಚು ಮೆಚ್ಚಿಕೊಂಡದ್ದು ಅದರ ಉಪಸ್ಥಿತಿಯ ಗಳಿಗೆಗಳು ಎಂದು ತೋರಿಸುವ ಸಮೀಕ್ಷೆಯನ್ನು ಧರ್ಮಾಧ್ಯಕ್ಷರಾದ ಅಲ್ವ್ಸ್‌ವಾಗ್‌ ರವರು ಉಲ್ಲೇಖಿಸಿದರು.

ಇಂದಿನ ಸಮಾಜದಲ್ಲಿನ ಧರ್ಮಗಳಿಗೆ ಇದು ವಿಶೇಷವಾಗಿ ಪ್ರಮುಖ ಪಾತ್ರವಾಗಿದೆ ಎಂದು ಅವರು ಸೂಚಿಸಿದರು. ಸಮುದಾಯವನ್ನು ನಿರ್ಮಿಸುವ ಮತ್ತು ಬೆಂಬಲಿಸುವ ಮೂಲಕ, ಧಾರ್ಮಿಕ ಸಂಸ್ಥೆಗಳು ನಮ್ಮ "ಒಂಟಿತನವೆಂಬ ಸಾಂಕ್ರಾಮಿಕ ರೋಗ" ವನ್ನು ಎದುರಿಸಬಹುದು.

ಸಂಭಾಷಣೆಯನ್ನು ಉತ್ತೇಜಿಸುವಲ್ಲಿ KAICIID ಯ "ವಿಶಿಷ್ಟ" ಪಾತ್ರ
ತಮ್ಮ ಪರಿಚಯಾತ್ಮಕ ಮಾತುಗಳನ್ನು ಹೇಳಿದ ನಂತರ ವ್ಯಾಟಿಕನ್‌ ಸುದ್ದಿಯ ಜೊತೆ ಮಾತನಾಡಿದ ರಾಯಭಾರಿ ಅಲ್ಮೇಡಾ-ರಿಬೈರೊರವರು, ಸಮ್ಮೇಳನವನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಅಂತರರಾಷ್ಟ್ರೀಯ ಸಂವಾದ ವೇದಿಕೆಯಾದ KAICIIDನ ಇತಿಹಾಸ ಮತ್ತು ಪಾತ್ರದ ಬಗ್ಗೆ ಚರ್ಚಿಸಿದರು.

ಈ ಸಂಸ್ಥೆಯನ್ನು 2012ರಲ್ಲಿ ಸ್ಪೇನ್, ಪೋರ್ಚುಗಲ್, ಸೌದಿ ಅರೇಬಿಯಾ ಮತ್ತು ಪವಿತ್ರ ಪೀಠಾಧಿಕಾರಿಯ ನಡುವಿನ ಪಾಲುದಾರಿಕೆಯಾಗಿ ಸ್ಥಾಪಿಸಲಾಯಿತು ಮತ್ತು ಅದರ ಆಡಳಿತ ಮಂಡಳಿಯು ಕ್ರೈಸ್ತ ಧರ್ಮ, ಮುಸ್ಲಿಂ, ಯೆಹೂದ್ಯ, ಹಿಂದೂ ಮತ್ತು ಬೌದ್ಧ ಸಂಪ್ರದಾಯಗಳ ಪ್ರತಿನಿಧಿಗಳಿಂದ ಕೂಡಿದೆ ಎಂದು ರಾಯಭಾರಿಯು ಹೇಳಿದರು.

ಇದರ ಜೊತೆಗೆ, ಈ ಸಂಸ್ಥೆಯು ವಿಶ್ವಸಂಸ್ಥೆ, ಅರಬ್ ಲೀಗ್, ಆಫ್ರಿಕಾದ ಒಕ್ಕೂಟ ಮತ್ತು ಅಂತರರಾಷ್ಟ್ರೀಯ ವಲಸೆ ಸಂಸ್ಥೆಯಂತಹ ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದಿದೆ ಎಂದು ರಾಯಭಾರಿಯಾದ ಅಲ್ಮೇಡಾ-ರಿಬೈರೊರವರು ವಿವರಿಸಿದರು.

ಈ "ವಿಶಿಷ್ಟ ರಚನೆ", ಧರ್ಮಗಳು ಮತ್ತು ಸಂಸ್ಕೃತಿಗಳ ನಡುವಿನ ಸಂವಾದವನ್ನು ಪರಿಣಾಮಕಾರಿಯಾಗಿ ಉತ್ತೇಜಿಸಲು KAICIID ಗೆ ಅವಕಾಶ ನೀಡುತ್ತದೆ ಎಂದು ರಾಯಭಾರಿಯು ಹೇಳಿದರು. ಯುದ್ಧ, ಸಾಮೂಹಿಕ ವಲಸೆ ಮತ್ತು ಸಾಮಾಜಿಕ ಉದ್ವಿಗ್ನತೆಗಳ ಯುಗದಲ್ಲಿ ಇದು ವಿಶೇಷವಾಗಿ ಮಹತ್ವದ ಕಾರ್ಯವಾಗಿದೆ ಎಂದು ಅವರು ಹೇಳಿದರು.

ಜನರು, ಸಮಾಜಗಳು, ಸಂಸ್ಕೃತಿಗಳು ಮತ್ತು ಧರ್ಮಗಳ ನಡುವೆ ಸೇತುವೆಗಳನ್ನು ಕಂಡುಹಿಡಿಯಲು ಸಹಾಯ ಮಾಡುವುದು, ಎಲ್ಲರೂ ವಾಸಿಸಬಹುದಾದ ಸಾಮಾನ್ಯ ಮನೆಯನ್ನು ನಿರ್ಮಿಸುವುದು KAICIID ಯ ಮುಖ್ಯ ಗುರಿಯಾಗಿದೆ ಎಂದು ರಾಯಭಾರಿ ಅಲ್ಮೇಡಾ-ರಿಬೈರೊರವರು ವಿವರಿಸಿದರು.
 

09 ಏಪ್ರಿಲ್ 2025, 12:47