MAP

Workshop Rebuilding Lebanon Ordine di Malta 10 aprile 2025 (c) Order of Malta Workshop Rebuilding Lebanon Ordine di Malta 10 aprile 2025 (c) Order of Malta 

ಲೆಬನಾನ್: ಆರ್ಡರ್ ಆಫ್ ಮಾಲ್ಟಾ "ಯಾವುದೇ ಬೆಲೆ ತೆತ್ತಾದರೂ" ಪರಿಹಾರದ ಭಾಗವಾಗಲು ಬದ್ಧವಾಗಿದೆ

ಕಳೆದ 70 ವರ್ಷಗಳಲ್ಲಿ ಲೆಬನಾನ್‌ನಲ್ಲಿ ಆರ್ಡರ್ ಆಫ್ ಮಾಲ್ಟಾದ ಕೆಲಸವು "ಪ್ರದೇಶಕ್ಕೆ ಒಂದು ಮಾದರಿ"ಯಾಗಬಹುದು ಎಂದು ರೋಮ್‌ನಲ್ಲಿ ನಡೆದ ಸಮ್ಮೇಳನವು ಬಹಿರಂಗಪಡಿಸಿದೆ, ಏಕೆಂದರೆ ಈ ಕೆಲಸವು ಅದರ ವೈವಿಧ್ಯತೆಯನ್ನು ಕಾಪಾಡಿಕೊಂಡು ದೇಶದ ಚೇತರಿಕೆಗೆ ಬೆಂಬಲ ನೀಡುತ್ತದೆ.

ಕ್ರಿಸ್ಟೀನ್ ಸ್ಯೂಸ್ ಮತ್ತು ಕೀಲ್ಸ್ ಗುಸ್ಸಿ

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ಮಧ್ಯೆ, ರೋಮ್‌ನಲ್ಲಿ ನಡೆದ, ಧಾರ್ಮಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಸಂರಕ್ಷಿಸುವಾಗ ಲೆಬನಾನ್ ನ್ನು ಪುನರ್ನಿರ್ಮಿಸುವುದು ಎಂಬ ಶೀರ್ಷಿಕೆಯ ಸಮ್ಮೇಳನವು ಲೆಬನಾನ್ ನ್ನು, ಈ ಪ್ರದೇಶದ ಅತ್ಯಂತ ದುರ್ಬಲ ಮತ್ತು ಸಾಂಕೇತಿಕ ದೇಶಗಳಲ್ಲಿ, ಒಂದಾಗಿ ಬೆಳಕು ಚೆಲ್ಲುವುದರ ಮೇಲೆ ಕೇಂದ್ರೀಕರಿಸಿತು ಮತ್ತು ಅದರ ಚೇತರಿಕೆಗೆ ಬೆಂಬಲ ನೀಡುವುದನ್ನು ಉತ್ತೇಜಿಸಿತು.

ಲೆಬನಾನ್ ಒಂದು ಕವಲುದಾರಿಯಲ್ಲಿದೆ
ರೋಮ್‌ನಲ್ಲಿರುವ ಆರ್ಡರ್ ಆಫ್ ಮಾಲ್ಟಾದ ಪ್ರಧಾನ ಕಛೇರಿಯು, ಪವಿತ್ರ ಪೀಠಾಧಿಕಾರಿ ಮತ್ತು ಆದೇಶದಲ್ಲಿರುವ ಜರ್ಮನ್ ರಾಯಭಾರ ಕಚೇರಿಯ ಸಹಯೋಗದೊಂದಿಗೆ ಸಮ್ಮೇಳನವನ್ನು ಆಯೋಜಿಸಿತು.

ಲೆಬನಾನ್‌ನ ನೂತನ ಅಧ್ಯಕ್ಷ ಜೋಸೆಫ್ ಔನ್ ರವರ ವೀಡಿಯೊ(ಓಡುತಿಟ್ಟ) ಸಂದೇಶವು ಕಾರ್ಯಕ್ರಮವನ್ನು ಉದ್ಘಾಟಿಸಿತು. ದೇಶದಲ್ಲಿ 70 ವರ್ಷಗಳ ಸೇವೆಯ ನಂತರ ಆರ್ಡರ್ ಆಫ್ ಮಾಲ್ಟಾ ತನ್ನ ಗೌರವ ಮತ್ತು ವಿಶ್ವಾಸವನ್ನು ವ್ಯಕ್ತಪಡಿಸಿತು. ಲೆಬನಾನ್ ಒಂದು ಕವಲುದಾರಿಯಲ್ಲಿದೆ ಎಂದು ಸಂದೇಶವು ಒತ್ತಿಹೇಳಿತು, ಆದರೆ ಇತ್ತೀಚಿನ ಬೆಳವಣಿಗೆಗಳು ಹಾಗೂ ಕಾರ್ಯಾಚರಣೆಗಳು, ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಗೆ ಭರವಸೆ ನೀಡುತ್ತವೆ.

ಅಧ್ಯಕ್ಷರು ಆದೇಶದ ಬದ್ಧತೆಯನ್ನು ವಿಶೇಷವಾಗಿ ಶ್ಲಾಘಿಸಿದರು, ಇದು ಮಾನವೀಯ ನೆರವನ್ನು ಮೀರಿದ್ದು ಸಮಾಜದೊಳಗೆ ಸಂವಾದವನ್ನು ಬೆಳೆಸುತ್ತದೆ ಎಂದು ವಿವರಿಸಿದರು. ಜನರನ್ನು ಅವರ ದೇಶದಲ್ಲಿ ಒಂದುಗೋಡಿಸಲು, ಸಹಾಯ ಮಾಡುವ ವಿವಿಧ ಮಾನವೀಯ ಯೋಜನೆಗಳಿಗೆ ಉದಾರ ಬೆಂಬಲ ನೀಡಿದ್ದಕ್ಕಾಗಿ ಅವರು ಜರ್ಮನ್ನಿನ ಸರ್ಕಾರಕ್ಕೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

ಪ್ರಮುಖ ಅಂಶವಾಗಿ ವೈವಿಧ್ಯತೆ
18 ಧಾರ್ಮಿಕ ಸಮುದಾಯಗಳಿಗೆ ನೆಲೆಯಾಗಿರುವ ಲೆಬನಾನ್‌ನಲ್ಲಿ ಆರ್ಡರ್ ಆಫ್ ಮಾಲ್ಟಾವು ಬಹಳ ಸಕ್ರಿಯವಾಗಿದೆ ಮತ್ತು ವ್ಯಕ್ತಿಯು ಯಾವುದೇ ವಿಶ್ವಾಸವನ್ನು ಹೊಂದಿದ್ದರೂ ಸಹ ನೆರವನ್ನು ನೀಡುತ್ತದೆ. ದೇಶದ ಧಾರ್ಮಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆಯು ಲೆಬನಾನ್‌ನ ರಾಷ್ಟ್ರೀಯ ಗುರುತಿನ ಕೇಂದ್ರಬಿಂದುವಾಗಿದೆ ಮತ್ತು ಪ್ರಾದೇಶಿಕ ಸ್ಥಿರತೆಯ ಆಧಾರಸ್ತಂಭವಾಗಿದೆ ಎಂದು ಅಧ್ಯಕ್ಷ ಔನ್ ರವರು ಒತ್ತಿ ಹೇಳಿದರು.

ಈ ಧಾರ್ಮಿಕ ಬಹುತ್ವವನ್ನು ಸಂರಕ್ಷಿಸಬೇಕು ಎಂದು ಅವರು ಒತ್ತಿ ಹೇಳಿದರು, ಲೆಬನಾನ್‌ನ ಪ್ರಮುಖ ಲಕ್ಷಣವನ್ನು ಎತ್ತಿ ತೋರಿಸಿದರು ಮತ್ತು ಇದು ಈ ಮಧ್ಯಪ್ರಾಚ್ಯ ರಾಷ್ಟ್ರದಲ್ಲಿ ಆರ್ಡರ್ ಆಫ್ ಮಾಲ್ಟಾದ ಗಮನದ ನಿರ್ಣಾಯಕ ಅಂಶವಾಗಿದೆ, ಇದು ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ.

ಹೊಸ ಅಧ್ಯಕ್ಷ, ಹೊಸ ಆರಂಭ
ಎರಡು ವರ್ಷಗಳಿಗೂ ಹೆಚ್ಚು ಕಾಲ ಖಾಲಿ ಹುದ್ದೆಯ ನಂತರ, ಲೆಬನಾನ್‌ನ ಸಂಸತ್ತು 2025ರ ಜನವರಿಯಲ್ಲಿ ಸಶಸ್ತ್ರ ಪಡೆಗಳ ಕಮಾಂಡರ್ ಜೋಸೆಫ್ ಔನ್ ರವರನ್ನು ದೇಶದ ಹೊಸ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತು. ಸಂಸ್ಥೆಯು ರಾಜಕೀಯವಾಗಿ ತಟಸ್ಥವಾಗಿ ಉಳಿದಿದ್ದರೂ ಸಹ, ಈ ಹೊಸ ಸರ್ಕಾರವು ಆರ್ಡರ್‌ ಆಫ್‌ ಮಾಲ್ಟಾವು ಮಾನವೀಯ ಕಾರ್ಯವನ್ನು ಸಾಧಿಸುವುದನ್ನು ಸುಲಭಗೊಳಿಸಿದೆ.

ಒಂದು ದೇಶದ ಎಲ್ಲಾ ಗಂಭೀರ ಸಮಸ್ಯೆಗಳನ್ನು ಆರ್ಡರ್‌ ಆಫ್‌ ಮಾಲ್ಟಾವು ಪರಿಹರಿಸಲು ಸಾಧ್ಯವಿಲ್ಲ ಎಂದು ಬ್ಲಾಟ್ಜ್ ರವರು ಒತ್ತಿ ಹೇಳಿದರು. ನಾವು ದೇಶವನ್ನು ಉಳಿಸಲು ಸಾಧ್ಯವಿಲ್ಲ, ಆದರೆ ದೇಶವನ್ನು ಸಮಾಧಾನಪಡಿಸುವಲ್ಲಿ, ಅಪಾರ ಮಾನವೀಯ ಅಗತ್ಯಗಳನ್ನು ಪೂರೈಸುವಲ್ಲಿ ನಾವು ಜೀವರಕ್ಷಕ ಸಹಾಯಕರಾಗಬಹುದು. ನಾವು ಪರಿಹಾರದ ಭಾಗವಾಗಲು ಬಯಸುತ್ತೇವೆ ಮತ್ತು "ಯಾವುದೇ ಬೆಲೆ ತೆತ್ತಾದರೂ" ನಾವು ಪರಿಹಾರದ ಭಾಗವಾಗಿಯೇ ಮುಂದುವರಿಯುತ್ತೇವೆ.

ರಾಷ್ಟ್ರೀಯ ಗುರುತಿನ ಭಾಗವಾಗಿ ಸಮಾನತೆ
ಲೆಬನಾನ್‌ನಲ್ಲಿ ಕ್ರೈಸ್ತರಿಗೆ ಸಮಾನ ಹಕ್ಕುಗಳಿವೆ. ಇದು ಈ ಪ್ರದೇಶದಲ್ಲಿ ಒಂದು ಅಪವಾದವಾಗಿದ್ದು, ಸ್ಥಳೀಯ ಧರ್ಮಸಭೆಯ ಪ್ರಮುಖ ಭಾಗವಾಗಿದೆ. ಪೂರ್ವ ಧರ್ಮಸಭೆಗಳ ಡಿಕ್ಯಾಸ್ಟ್ರಿಯ ಪ್ರಿಫೆಕ್ಟ್ ಕಾರ್ಡಿನಲ್ ಗುಗೆರೊಟ್ಟಿರವರು ಕೂಡ ಈ ಸಮ್ಮೇಳನದಲ್ಲಿ ಉಪಸ್ಥಿತರಾಗಿದ್ದರು. ಲೆಬನಾನ್‌ನ ವೈವಿಧ್ಯತೆಯಲ್ಲಿ ಈ ಸಹಬಾಳ್ವೆಯನ್ನು ಕಳೆದುಕೊಳ್ಳುವುದು ಎಂದರೆ ಬದಲಾಯಿಸಲಾಗದೆ ಇರುವ ಧರ್ಮಸಭೆಯ ಗುರುತಿನ ಒಂದು ಭಾಗವನ್ನು ಕಳೆದುಕೊಳ್ಳುವುದು ಎಂದು ಅವರು ಒತ್ತಿ ಹೇಳಿದರು.

ಆದ್ದರಿಂದ, ವ್ಯಾಟಿಕನ್ ವಿಶೇಷವಾಗಿ ಈ ಪ್ರದೇಶದ ಕ್ರೈಸ್ತರನ್ನು ಬೆಂಬಲಿಸಲು ಮತ್ತು ಅವರು ದೇಶದಲ್ಲಿ ಉಳಿಯಲು ಒಂದು ಕಾರಣವನ್ನು ನೀಡಲು ಬದ್ಧವಾಗಿದೆ ಎಂದು ಅವರು ಹೇಳಿದರು.
 

11 ಏಪ್ರಿಲ್ 2025, 12:08