ಮಹಾರಾಜ ಚಾರ್ಲ್ಸ್ ರವರು ಇಟಲಿಗೆ ರಾಜ್ಯ ಭೇಟಿ ನೀಡಿದ್ದಾರೆ
ಕ್ರಿಸ್ಟೋಫರ್ ವೆಲ್ಸ್
ಮಹಾರಾಜ ಮೂರನೇ ಚಾರ್ಲ್ಸ್ ರವರು 2025ರಲ್ಲಿ ತಮ್ಮ ಮೊದಲ ವಿದೇಶ ಪ್ರವಾಸದ ಸಮಯದಲ್ಲಿ ಇಟಾಲಿಯದ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವ ಮೊದಲ ಬ್ರಿಟಿಷ್ ದೊರೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ರಾಜ ದಂಪತಿಗಳ ಇಪ್ಪತ್ತನೇ ವಿವಾಹ ವಾರ್ಷಿಕೋತ್ಸವದೊಂದಿಗೆ ಹೊಂದಿಕೆಯಾಗುವ ನಾಲ್ಕು ದಿನಗಳ ರಾಜ್ಯ ಭೇಟಿಯನ್ನು ಪ್ರಾರಂಭಿಸಲು ರಾಜ ಮತ್ತು ಅವರ ಪತ್ನಿ ರಾಣಿ ಕ್ಯಾಮಿಲ್ಲಾರವರು ಸೋಮವಾರ ಸಂಜೆ ರೋಮ್‌ಗೆ ಆಗಮಿಸಿದರು. ಇದು ಮಹಾರಾಜ ಮೂರನೇ ಚಾರ್ಲ್ಸ್ ರವರು ಇಟಲಿಗೆ ನೀಡುವ ಭೇಟಿಯು, 17ನೇ ಅಧಿಕೃತ ಭೇಟಿಯಾಗಿದೆ ಮತ್ತು ಕ್ಯಾನ್ಸರ್ ಚಿಕಿತ್ಸೆಗಳ ಅಡ್ಡಪರಿಣಾಮಗಳಿಂದಾಗಿ ಸಂಕ್ಷಿಪ್ತ ಆಸ್ಪತ್ರೆಗೆ ದಾಖಲಾದ ನಂತರದ ಅವರ ಮೊದಲ ಪ್ರಮುಖ ಪ್ರಯಾಣವಾಗಿದೆ.
ರೋಮ್‌ನಲ್ಲಿ ರಾಜ ಮತ್ತು ರಾಣಿ
ತಮ್ಮ ಭೇಟಿಯ ಮೊದಲ ದಿನದಂದು, ರಾಜರು ಇಟಲಿಯ ಅಧ್ಯಕ್ಷ ಸೆರ್ಗಿಯೊ ಮ್ಯಾಟರೆಲ್ಲಾರವರನ್ನು ಅಧ್ಯಕ್ಷೀಯ ಭವನದಲ್ಲಿ ಭೇಟಿಯಾದರು, ನಂತರ ರೋಮ್‌ನ ಹೃದಯಭಾಗದಲ್ಲಿರುವ ಭವ್ಯವಾದ ವಿಕ್ಟರ್ ಎಮ್ಯಾನುಯೆಲ್ II ಸ್ಮಾರಕಕ್ಕೆ ಭೇಟಿ ನೀಡಿದರು. ಅಲ್ಲಿರುವಾಗ, ರಾಜ ಚಾರ್ಲ್ಸ್ ರವರು ಇಟಲಿಯ ಅಜ್ಞಾತ ಸೈನಿಕನ ಸಮಾಧಿಗೆ ಪುಷ್ಪಗುಚ್ಛವನ್ನು ಅರ್ಪಿಸಿದರು ಮತ್ತು ಇಟಾಲಿಯದ ವಾಯುಪಡೆಯ ಏರೋಬ್ಯಾಟಿಕ್ ತಂಡ "ಫ್ರೆಕ್ಸ್ ಟ್ರೈಕೊಲೊರಿ" ಮತ್ತು ಅವರ ರಾಯಲ್ ವಾಯುಪಡೆಯ ಪ್ರತಿರೂಪಗಳಾದ "ರೆಡ್ ಆರೋಸ್" ಜಂಟಿಯಾಗಿ ಹಾರಿಸಿ ಗೌರವಿಸಿದರು.
ಮಧ್ಯಾಹ್ನದ ನಂತರ, ರಾಜ ಮತ್ತು ರಾಣಿ, ಇಬ್ಬರು ಕೊಲೋಸಿಯಮ್‌ನಲ್ಲಿರುವ ಪುರಾತತ್ವ ಉದ್ಯಾನವನಕ್ಕೆ ಭೇಟಿ ನೀಡಿದರು.
ಬುಧವಾರ, ಮಹಾರಾಜ ಮೂರನೇ ಚಾರ್ಲ್ಸ್ ರವರು ಇಟಾಲಿಯದ ಪ್ರಧಾನಿಯನ್ನು ಭೇಟಿ ಮಾಡಲಿದ್ದು, ನಂತರ ಯುಕೆ ವಿದೇಶಾಂಗ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ "ಶುದ್ಧ ಇಂಧನ ಪೂರೈಕೆ ಸರಪಳಿಗಳು" ಕುರಿತು ಒಂದು ಸುತ್ತಿನ ಸಭೆಗೆ ಭೇಟಿ ನೀಡಲಿದ್ದಾರೆ.
ನಂತರ ಅವರು ಇಟಾಲಿಯದ ಸೆನೆಟ್‌ನ ಸ್ಥಾನವಾದ ಪಲಾಝೊ ಮಡಾಮಾಗೆ ತೆರಳುತ್ತಾರೆ, ಅಲ್ಲಿ ಅವರು ಸಂಸತ್ತಿನ ಜಂಟಿ ಅಧಿವೇಶನದ ಮುಂದೆ ಮಾತನಾಡುತ್ತಾರೆ. ಸಂಜೆ, ರಾಜರು ಖಾಸಗಿ ಸಭೆಗಳಲ್ಲಿ ಭಾಗವಹಿಸುವುದರ ಜೊತೆಗೆ ಅಧ್ಯಕ್ಷೆ ಮಟರೆಲ್ಲಾರವರು ಆಯೋಜಿಸುವ ರಾಜ್ಯ ಔತಣಕೂಟದಲ್ಲಿ ಭಾಗವಹಿಸಲಿದ್ದಾರೆ.
ರವೆನ್ನಾಗೆ ಭೇಟಿ
ಗುರುವಾರ ಮತ್ತು ಶುಕ್ರವಾರದಂದು ರಾಜ ಮತ್ತು ರಾಣಿ ಉತ್ತರ ಇಟಲಿಯ ರವೆನ್ನಾ ನಗರಕ್ಕೆ ಪ್ರಯಾಣಿಸುತ್ತಾರೆ, ಅಲ್ಲಿ ಅವರು ಡಾಂಟೆಯ ಸಮಾಧಿಗೆ ಭೇಟಿ ನೀಡುತ್ತಾರೆ. ರವೆನ್ನಾದಲ್ಲಿ ತಮ್ಮ ವಾಸ್ತವ್ಯದ ಸಮಯದಲ್ಲಿ, ರಾಜ ಚಾರ್ಲ್ಸ್ ರವರು ಸ್ಯಾನ್ ವಿಟಾಲೆಯ ಮಹಾದೇವಾಲಯವಾದ ಮತ್ತು ಪಕ್ಕದ ಗಲ್ಲಾ ಪ್ಲಾಸಿಡಿಯಾದ ಸಮಾಧಿಯಲ್ಲಿರುವ 5ನೇ ಮತ್ತು 6ನೇ ಶತಮಾನದ ಮೊಸಾಯಿಕ್‌ಗಳನ್ನು ಭೇಟಿ ಮಾಡುತ್ತಾರೆ ಮತ್ತು ರವೆನ್ನಾದ ಅಕಾಡೆಮಿ ಆಫ್ ಫೈನ್ ಆರ್ಟ್ಸ್‌ನ ಸಭೆಯಲ್ಲಿ ಭಾಗವಹಿಸುತ್ತಾರೆ.
ಎರಡನೇ ಮಹಾಯುದ್ಧದ ಸಮಯದಲ್ಲಿ ಬ್ರಿಟಿಷ್ ಮತ್ತು ಕೆನಡಾದ ಪಡೆಗಳು ಸೇರಿದಂತೆ ಮಿತ್ರಪಕ್ಷಗಳು ರವೆನ್ನಾ ಪ್ರಾಂತ್ಯವನ್ನು ವಿಮೋಚನೆಗೊಳಿಸಿದ 80ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಸ್ವಾಗತ ಸಮಾರಂಭದಲ್ಲಿ ರಾಜ ಮತ್ತು ರಾಣಿಯವರು ಭಾಗವಹಿಸಲಿದ್ದಾರೆ.
ಈ ಭೇಟಿಯು ರಾಜ ಮತ್ತು ರಾಣಿಗೆ ಸಾಂಪ್ರದಾಯಿಕ ಪಾಕಪದ್ಧತಿಯನ್ನು ಆಚರಿಸುವ ಪ್ರಾದೇಶಿಕ ಉತ್ಸವದಲ್ಲಿ ಭಾಗವಹಿಸಲು ಅವಕಾಶವನ್ನು ಒದಗಿಸುತ್ತದೆ, ರಾಜ ಚಾರ್ಲ್ಸ್ ರವರು ಇತ್ತೀಚಿನ ವರ್ಷಗಳಲ್ಲಿ ರವೆನ್ನಾವನ್ನು ಬಾಧಿಸಿರುವ ಪ್ರವಾಹದಿಂದ, ಪೀಡಿತರು ಸೇರಿದಂತೆ ಸ್ಥಳೀಯ ರೈತರನ್ನು ಭೇಟಿಯಾಗುತ್ತಾರೆ.