MAP

Palestinians flee areas in the eastern part of Gaza City Palestinians flee areas in the eastern part of Gaza City 

ರಫಾವನ್ನು ಗಾಜಾ ಗಡಿಯ ಉಳಿದ ಭಾಗದಿಂದ ಬೇರ್ಪಡಿಸುತ್ತಿರುವ ಇಸ್ರಯೇಲ್ ನ ಸೇನೆ

ಹೆಚ್ಚುತ್ತಿರುವ ಮಾನವೀಯ ದುರಂತದ ಮಧ್ಯೆ, ಇಸ್ರಯೇಲ್‌ ಸೈನ್ಯವು ದಕ್ಷಿಣ ಗಾಜಾದ ರಫಾವನ್ನು ಸಂಪೂರ್ಣವಾಗಿ ಸುತ್ತುವರೆದಿದೆ.

ಲಿಂಡಾ ಬೋರ್ಡೋನಿ

ರಫಾವನ್ನು ಗಾಜಾ ಗಡಿಯ ಉಳಿದ ಭಾಗಗಳಿಂದ ಬೇರ್ಪಡಿಸುವ ಮೂಲಕ, ಇಸ್ರಯೇಲ್ ಅದನ್ನು ತನ್ನ "ಭದ್ರತಾ ವಲಯ" ಎಂದು ಕರೆಯಲ್ಪಡುವ ಭಾಗವೆಂದು ಪರಿಣಾಮಕಾರಿಯಾಗಿ ಹೇಳಿಕೊಂಡಿದೆ.

ಇಸ್ರಯೇಲ್ ನ ರಕ್ಷಣಾ ಸಚಿವ ಇಸ್ರಯೇಲ್ ಕಾಟ್ಜ್ ರವರು ಈ ಕ್ರಮವನ್ನು ದೃಢಪಡಿಸಿದರು, ಮೊರಾಗ್ ಕಾರಿಡಾರ್ ಎಂದು ಕರೆಯಲ್ಪಡುವ ಸ್ಥಳವನ್ನು ವಶಪಡಿಸಿಕೊಂಡಿದೆ ಎಂದು ಹೇಳಿದರು. ಪ್ಯಾಲಸ್ತೀನಿಯದವರು ಹಮಾಸ್ ನ್ನು ಬಹಿಷ್ಕರಿಸಿ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿ ಯುದ್ಧವನ್ನು ನಿಲ್ಲಿಸದಿದ್ದರೆ, ಅವರ ಮಾತಿನಲ್ಲಿ ಹೇಳುವುದಾದರೆ, ಇಸ್ರಯೇಲ್ ಕಾರ್ಯಾಚರಣೆಗಳು ಗಾಜಾದ ಹೆಚ್ಚಿನ ಪ್ರದೇಶಗಳಿಗೆ ಹರಡುತ್ತವೆ ಎಂಬ ಬೆದರಿಕೆಯನ್ನೂ ಅವರು ಹಾಕಿದರು.

ಗಡಿಯನ್ನು ಎರಡು ಭಾಗಗಳಾಗಿ ವಿಭಜಿಸುವ ಮಾರ್ಗವಾದ ನೆಟ್ಜಾರಿಮ್ ಕಾರಿಡಾರ್ ಅನ್ನು ಸಹ ವಿಸ್ತರಿಸಲಾಗುವುದು ಎಂದು ಕ್ಯಾಟ್ಜ್ ರವರು ಹೇಳಿದರು. ಈ ವರ್ಷದ ಆರಂಭದಲ್ಲಿ ಕದನ ವಿರಾಮದ ಸಮಯದಲ್ಲಿ ಇಸ್ರಯೇಲ್ ಆ ಪ್ರದೇಶದಿಂದ ಸ್ವಲ್ಪ ಸಮಯದವರೆಗೆ ಹಿಂದೆ ಸರಿಯಿತು, ಆದರೆ ಅದು ಮತ್ತೆ ಯುದ್ಧವನ್ನು ಪ್ರಾರಂಭಿಸಿದಾಗ ಅದನ್ನು ಮತ್ತೆ ವಶಪಡಿಸಿಕೊಂಡಿತು.

ಇಸ್ರಯೇಲ್ ನ ಸೇನೆಯು ಖಾನ್ ಯೂನಿಸ್ ನೆರೆಹೊರೆಗಳ ಅನೇಕ ನಿವಾಸಿಗಳನ್ನು ಸ್ಥಳಾಂತರಿಸಲು ಆದೇಶಿಸಿ, "ಹೆಚ್ಚಿನ ಬಲದಿಂದ" ಸನ್ನಿಹಿತ ದಾಳಿಯ ಬಗ್ಗೆ ಎಚ್ಚರಿಸುತ್ತಿದ್ದಂತೆ ಇದು ಬಂದಿದೆ.

ಅಕ್ಟೋಬರ್ 2023ರಲ್ಲಿ ಹಮಾಸ್ ಇಸ್ರಯೇಲ್ ನ ಮೇಲೆ ದಾಳಿ ಮಾಡಿದ ನಂತರ ಮತ್ತು ಗಾಜಾದ ಮೇಲೆ ಪ್ರಸ್ತುತ ದಾಳಿ ಪ್ರಾರಂಭವಾದಾಗಿನಿಂದ, 50,900ಕ್ಕೂ ಹೆಚ್ಚು ಗಾಜಾ ನಿವಾಸಿಗಳು ಸಾವನ್ನಪ್ಪಿದ್ದಾರೆ ಮತ್ತು 116,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಮಾತ್ರ, 26 ಶವಗಳು ಮತ್ತು 106 ಗಾಯಾಳುಗಳನ್ನು ಎನ್ಕ್ಲೇವ್ನಾದ್ಯಂತ ಆರೋಗ್ಯ ಸೌಲಭ್ಯಗಳಿಗೆ ಸಾಗಿಸಲಾಗಿದೆ, ಆಹಾರ, ಔಷಧ ಮತ್ತು ಇಂಧನ ವಿತರಣೆಯಲ್ಲಿ ಅಡಚಣೆಯು ಈಗಾಗಲೇ ವಿನಾಶಕಾರಿ ಮಾನವೀಯ ತುರ್ತು ಪರಿಸ್ಥಿತಿಯನ್ನು ಉಲ್ಬಣಗೊಳಿಸಿದೆ.

ಗಾಜಾದಲ್ಲಿನ ನೀರಿನ ವ್ಯವಸ್ಥೆಗಳ ಮೇಲೆ ಇಸ್ರಯೇಲ್ ನಡೆಸಿದ ದಾಳಿಯನ್ನು ವಿಶ್ವಸಂಸ್ಥೆಯ ಮಾನವೀಯ ಅಧಿಕಾರಿಗಳು ಶನಿವಾರ ಖಂಡಿಸಿದ್ದಾರೆ, ಇದು "ಪ್ಯಾಲಸ್ತೀನಿಯದವರಿಗೆ ಸಂಪೂರ್ಣವಾಗಿ ದುರಂತದ ಪರಿಸ್ಥಿತಿಗಳಿಗೆ ಕಾರಣವಾಗಿದೆ" ಎಂದು ಅವರು ಹೇಳುತ್ತಾರೆ.
 

12 ಏಪ್ರಿಲ್ 2025, 10:50