ಗಾಜಾದ ಸನ್‌ಬರ್ಡ್ಸ್: ಪ್ರತಿಕೂಲ ಪರಿಸ್ಥಿತಿಯಲ್ಲಿ ಸೈಕ್ಲಿಂಗ್
ರಾಬರ್ಟೊ ಸೆಟೆರಾ
ಅಲಾ ಅಲ್ ಡಾಲಿರವರು ಒಬ್ಬ ವೃತ್ತಿಪರ ಸೈಕ್ಲಿಸ್ಟ್ ಆಗಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಪ್ರತಿಭೆ ಮತ್ತು ದೃಢನಿಶ್ಚಯ ಹೊಂದಿದ್ದಾರೆ. ಜಕಾರ್ತದಲ್ಲಿ ನಡೆಯುವ ಏಷ್ಯಾದ ಕ್ರೀಡಾಕೂಟದಲ್ಲಿ ಪ್ಯಾಲಸ್ತೀನನ್ನು ಪ್ರತಿನಿಧಿಸುವುದು ಅವರ ಕನಸಾಗಿತ್ತು. ಅಲಾ ಹುಟ್ಟಿ ಬೆಳೆದದ್ದು ಗಾಜಾ ಗಡಿಯಲ್ಲಿ, ಈ ಸ್ಥಳವು ಆಗಾಗ್ಗೆ ಸಂಘರ್ಷ ಮತ್ತು ಕಷ್ಟಗಳಿಂದ ಕೂಡಿತ್ತು.
ಮೇ 2018ರಲ್ಲಿ, ಇಸ್ರಯೇಲ್ ತನ್ನ ಸ್ಥಾಪನೆಯ 70ನೇ ವಾರ್ಷಿಕೋತ್ಸವವನ್ನು ಆಚರಿಸಿದರೆ, ಪ್ಯಾಲಸ್ತೀನಿಯದವರು 1948ರ ಲಕ್ಷಾಂತರ ಪ್ಯಾಲಸ್ತೀನಿಯದವರ ವಲಸೆಯನ್ನು ಸ್ಮರಿಸಲು - ಯಾವ್ಮ್ ಅಲ್-ನಕ್ಬಾ - ದುರಂತದ ದಿನವನ್ನು ಆಚರಿಸಿದರು.
ಅದೇ ಅವಧಿಯಲ್ಲಿ, ಇಸ್ರಯೇಲ್‌ನಲ್ಲಿ ಗಿರೊ ಡಿ'ಇಟಾಲಿಯಾ ಸೈಕ್ಲಿಂಗ್ ರೇಸ್ ಪ್ರಾರಂಭವಾದಾಗ ಅಂತರರಾಷ್ಟ್ರೀಯ ಗಮನವು ಸಂಕ್ಷಿಪ್ತವಾಗಿ ಈ ಪ್ರದೇಶದ ಕಡೆಗೆ ತಿರುಗಿತು. ಗಾಜಾದಲ್ಲಿ ಪ್ಯಾಲಸ್ತೀನಿಯದವರು ನಡೆಸುತ್ತಿದ್ದ "ಗ್ರೇಟ್ ಮಾರ್ಚ್ ಆಫ್ ರಿಟರ್ನ್" ಎಂದು ಕರೆಯಲ್ಪಡುವ ವಾರಕ್ಕೊಮ್ಮೆ ನಡೆಯುವ ಪ್ರದರ್ಶನಗಳು ಬಲವಾಗಿ ಎದುರಿಸಲ್ಪಟ್ಟವು. ಕೊನೆಯ ಪ್ರತಿಭಟನೆಯ ಹೊತ್ತಿಗೆ, 200 ಕ್ಕೂ ಹೆಚ್ಚು ಪ್ಯಾಲಸ್ತೀನಿಯದವರು ಪ್ರಾಣ ಕಳೆದುಕೊಂಡಿದ್ದರು, ಅವರಲ್ಲಿ ಅನೇಕ ಮಕ್ಕಳೂ ಸೇರಿದ್ದರು.
ಗಾಜಾದ ಕಠಿಣ ರಸ್ತೆಗಳಲ್ಲಿ ಆಲಾ ಭರವಸೆಯನ್ನು ಇಟ್ಟುಕೊಂಡು ತರಬೇತಿ ಮುಂದುವರಿಸಿದರು. ಆದರೆ ಇಸ್ರಯೇಲ್ ನ ಸ್ನೈಪರ್ ಒಬ್ಬ ಆತನ ಕಾಲಿಗೆ ಹೊಡೆದಾಗ ಆತನ ಕನಸು ಭಗ್ನವಾಯಿತು. ಅಪಾರ ಪ್ರಮಾಣದಲ್ಲಿ ಹಾನಿಯನ್ನುಂಟುಮಾಡಲು ವಿನ್ಯಾಸಗೊಳಿಸಲಾದ ಗುಂಡು ಆತನ ಕಾಲನ್ನು ಛಿದ್ರಗೊಳಿಸಿತು. ವೈದ್ಯಕೀಯ ಸೌಲಭ್ಯಗಳು ತುಂಬಿ ತುಳುಕುತ್ತಿದ್ದವು ಮತ್ತು ಗಡಿಗಳು ಮುಚ್ಚಲ್ಪಟ್ಟವು, ಎರಡು ವಾರಗಳ ನಂತರ ವೈದ್ಯರು ಆತನ ಜೀವ ಉಳಿಸಲು, ಆತನ ಅಂಗಾಂಗ ಕತ್ತರಿಸಬೇಕಾಯಿತು.
ಜಕಾರ್ತಾದ ಆತನ ಕನಸು ನಾಶವಾಯಿತು - ಆದರೆ ಆತನ ಚೈತನ್ಯತೆಯಲ್ಲ.
ಸೂರ್ಯಪಕ್ಷಿಗಳು
ಅಸಾಧಾರಣ ಸ್ಥಿತಿಸ್ಥಾಪಕತ್ವದಿಂದ, ಅಲಾ ವೈಯಕ್ತಿಕ ದುರಂತವನ್ನು ಹೊಸ ಧ್ಯೇಯವಾಗಿ ಪರಿವರ್ತಿಸಿದರು. ಸಹಚರನಾದ ಸೈಕ್ಲಿಸ್ಟ್ ಕರೀಮ್ ಅಲಿ ಮತ್ತು ಇತರ 18 ಜನರೊಂದಿಗೆ, ಆತನು ಪ್ಯಾರಾ-ಸೈಕ್ಲಿಂಗ್ ತಂಡವನ್ನು ಸ್ಥಾಪಿಸಿದರು: ಸನ್‌ಬರ್ಡ್ಸ್(ಸೂರ್ಯಪಕ್ಷಿಗಳು). ಈ ಹೆಸರು ಪ್ಯಾಲಸ್ತೀನಿಯದ ರಾಷ್ಟ್ರೀಯ ಲಾಂಛನದಲ್ಲಿ ಕಾಣಿಸಿಕೊಂಡಿರುವ ಈ ಪ್ರದೇಶಕ್ಕೆ ಸ್ಥಳೀಯವಾಗಿರುವ ಒಂದು ಸಣ್ಣ ಹಕ್ಕಿಯನ್ನು ಸೂಚಿಸುತ್ತದೆ – ಅದು ತನ್ನನ್ನು ಹೊತ್ತುಕೊಳ್ಳಲು ಕಾಲುಗಳಿಲ್ಲದೆ ಎತ್ತರಕ್ಕೆ ಹಾರುವುದನ್ನು ಸೂಚಿಸುತ್ತದೆ. ಇದರ “ಸಾಂಕೇತಿಕತೆ ಪ್ರಬಲವಾಗಿದೆ: ಕೈಕಾಲುಗಳಿಲ್ಲದಿದ್ದರೂ ಹಾರಾಡಬಹುದು ಎಂಬ ಸಂದೇಶ.”
ಯುದ್ಧದ ಹೊರತಾಗಿಯೂ ಕಾರ್ಯಾಚರಣೆ ಮುಂದುವರಿಯುತ್ತದೆ
ಅಕ್ಟೋಬರ್ 7ರ ಘಟನೆಗಳು ಮತ್ತು ನಂತರದ ಸಂಘರ್ಷವು ಗಾಜಾಗೆ ಹೊಸ ದುಃಖವನ್ನು ತಂದಿತು, ಆದರೆ ತಂಡದ ಬದ್ಧತೆ ಸ್ಥಿರವಾಗಿ ಉಳಿದಿದೆ. ಅಂತರರಾಷ್ಟ್ರೀಯ ನೆರವು ಕ್ಷೀಣಿಸುತ್ತಿದ್ದಂತೆ ಮತ್ತು ಬೆಲೆಗಳು ಗಗನಕ್ಕೇರುತ್ತಿದ್ದಂತೆ, ಸನ್‌ಬರ್ಡ್ಸ್ ತಮ್ಮ ಧ್ಯೇಯವನ್ನು ಮುಂದುವರೆಸಿದೆ - ಅತ್ಯಂತ ದುರ್ಬಲರಿಗೆ: ಅಂಗವಿಕಲರು, ಬಡವರು ಮತ್ತು ಮಕ್ಕಳಿಗೆ ನೆರವನ್ನು ಒದಗಿಸುತ್ತಿದೆ.
ಫೆಬ್ರವರಿ 2024 ರಲ್ಲಿ, ಅಲಾರವರು ಗಾಜಾವನ್ನು ತೊರೆಯಲು ಸಾಧ್ಯವಾಯಿತು ಮತ್ತು ಈಗ ಬೆಲ್ಜಿಯಂನ ಬ್ರಸೆಲ್ಸ್‌ನಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿಂದ ಅವರು ಸನ್‌ಬರ್ಡ್ಸ್ ಕಾರ್ಯಾಚರಣೆಗಳನ್ನು ಸಂಘಟಿಸುತ್ತಾರೆ ಮತ್ತು ಪ್ಯಾರಾ-ಸೈಕ್ಲಿಂಗ್ ಕಾರ್ಯಕ್ರಮಗಳಲ್ಲಿ ತರಬೇತಿ ಮತ್ತು ಸ್ಪರ್ಧಿಸುವುದನ್ನು ಮುಂದುವರಿಸುತ್ತಾರೆ.