ಯುರೋಪ್ ಒಕ್ಕೂಟ–ಅಮೇರಿಕ ಉಕ್ರೇನ್ ಶಾಂತಿ ಯೋಜನೆ ಕುರಿತು ಫ್ರಾನ್ಸ್ ಮಾತುಕತೆಗಳನ್ನು ಆಯೋಜಿಸಿದೆ
ಸ್ಟೀಫನ್ ಜೆ. ಬೋಸ್
ಎರಡೂ ರಾಷ್ಟ್ರಗಳ ನಡುವಿನ ಉದ್ವಿಗ್ನತೆಯ ಹೊರತಾಗಿಯೂ, ಪ್ಯಾರಿಸ್‌ನ ಎಲಿಸೀ ಅರಮನೆಯಲ್ಲಿ ಅಮೇರಿಕದ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ರವರು ಮತ್ತು ಅಮೇರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊರವರು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ರವರನ್ನು ಭೇಟಿಯಾದಾಗ ನಗು ಮತ್ತು ಹಸ್ತಲಾಘವಗಳು ಮೊಳಗಿದವು.
ಆದರೂ ಮುಚ್ಚಿದ ಬಾಗಿಲುಗಳ ಹಿಂದೆ, ಯುದ್ಧಪೀಡಿತ ಉಕ್ರೇನ್‌ಗೆ ಶಾಂತಿಯ ಹಾದಿಯಲ್ಲಿ ಕಠಿಣ ಮಾತುಕತೆಗಳನ್ನು ನಿರೀಕ್ಷಿಸಲಾಗಿತ್ತು.
ಮೂರು ವರ್ಷಗಳ ಕಾಲ ನಡೆದ ರಷ್ಯಾ-ಉಕ್ರೇನ್ ಯುದ್ಧದಲ್ಲಿ ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಜೆ. ಟ್ರಂಪ್ ಇಲ್ಲಿಯವರೆಗೆ ಕದನ ವಿರಾಮವನ್ನು ಏರ್ಪಡಿಸಲು ವಿಫಲವಾದ ನಂತರ, ಯುರೋಪ್ ಮತ್ತು ಉಕ್ರೇನಿಯದ ಅಧಿಕಾರಿಗಳು ಉಕ್ರೇನ್ ನ್ನು ರಕ್ಷಿಸಲು ಸಹಾಯ ಮಾಡುವಂತೆ ಅಮೇರಿಕಕ್ಕೆ ಮನವಿ ಮಾಡುವ ನಿರೀಕ್ಷೆಯಿತ್ತು.
ಉನ್ನತ ಮಟ್ಟದ ರಾಜತಾಂತ್ರಿಕತೆಯು ಯುರೋಪ್ ಮತ್ತು ಕೈ,ವ್, ಮಾಸ್ಕೋ ಕಡೆಗೆ ಅಮೇರಿಕದ ಆಡಳಿತದ ಸ್ನೇಹಶೀಲ ನಡೆಗಳ ಬಗ್ಗೆ ಹೆಚ್ಚುತ್ತಿರುವ ಕಳವಳವನ್ನು ಪ್ರತಿಬಿಂಬಿಸುತ್ತದೆ ಎಂದು ವಿಶ್ಲೇಷಕರು ಹೇಳುತ್ತಾರೆ.
ಉಕ್ರೇನಿನ ವಿದೇಶಾಂಗ ಸಚಿವ ಆಂಡ್ರಿ ಸಿಬಿಹಾರವರು, ಪ್ಯಾರಿಸ್‌ನಲ್ಲಿ ಫ್ರೆಂಚ್, ಬ್ರಿಟಿಷ್ ಮತ್ತು ಜರ್ಮನ್ ಪಾಲುದಾರರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದ ನಂತರ, ಉಕ್ರೇನ್‌ನಲ್ಲಿ ನ್ಯಾಯಯುತ ಮತ್ತು ಶಾಶ್ವತ ಶಾಂತಿ" ಕುರಿತು ಚರ್ಚಿಸಲಾಗಿದೆ ಎಂದು ಹೇಳಿದರು, ಇದರಲ್ಲಿ ಪೂರ್ಣ ಕದನ ವಿರಾಮ ಮತ್ತು ಬಹುರಾಷ್ಟ್ರೀಯ ಮಿಲಿಟರಿ ತುಕಡಿ ಮತ್ತು ಉಕ್ರೇನ್‌ಗೆ ಭದ್ರತಾ ಖಾತರಿಗಳು ಸೇರಿವೆ.
ಕ್ಷಿಪಣಿ ದಾಳಿಗಳು
ಆದರೂ, ಉಕ್ರೇನಿಯದ ನಗರಗಳಾದ ಡ್ನಿಪ್ರೊ, ಒಡೆಸಾ, ಸುಮಿ, ಖಾರ್ಕಿವ್ ಮತ್ತು ಡೊನೆಟ್ಸ್ಕ್ ಮೇಲೆ ರಷ್ಯಾದ ದಾಳಿಯಲ್ಲಿ ಹಲವಾರು ಜನರು ಸಾವನ್ನಪ್ಪಿದ್ದಾರೆ ಮತ್ತು ಡಜನ್ಗಟ್ಟಲೆ ಗಾಯಗೊಂಡಿದ್ದಾರೆ ಎಂದು ಕೈವ್ ಹೇಳಿದ ನಂತರ, ಈಸ್ಟರ್ ಸಮೀಪಿಸುತ್ತಿರುವಾಗಲೂ ಶಾಂತಿ ದೂರದಲ್ಲಿದೆ ಎಂದು ತೋರುತ್ತದೆ.
ಇತ್ತೀಚಿನ ವಾರಗಳಲ್ಲಿ ಮಕ್ಕಳು ಸೇರಿದಂತೆ ಡಜನ್ಗಟ್ಟಲೆ ನಾಗರಿಕರನ್ನು ಕೊಂದ ರಷ್ಯಾದ ಕ್ಷಿಪಣಿ ದಾಳಿಗಳ ನಂತರ ಇದು ಸಂಭವಿಸಿದೆ.
ಗುರುವಾರ ಪ್ಯಾರಿಸ್‌ನಲ್ಲಿ ಫ್ರಾನ್ಸ್ ಮತ್ತು ಅದರ ಮಿತ್ರರಾಷ್ಟ್ರಗಳ ನಡುವಿನ ಸಭೆಗೆ ಮುಂಚಿತವಾಗಿ, ಉಕ್ರೇನಿಯದ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿರವರು ರಷ್ಯಾವನ್ನು ಉಲ್ಲೇಖಿಸಿ "ಕೊಲೆಗಾರರ ಮೇಲೆ ಒತ್ತಡ ಹೇರಲು" ಪಾಲುದಾರರನ್ನು ಒತ್ತಾಯಿಸಿದರು.
ಫೆಬ್ರವರಿ 2022ರಲ್ಲಿ ರಷ್ಯಾ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಆಕ್ರಮಣವನ್ನು ಪ್ರಾರಂಭಿಸಿದ ನಂತರ ಒಂದು ದಶಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಗಾಯಗೊಂಡಿದ್ದಾರೆ ಎಂದು ನಂಬಲಾಗಿದೆ.
ತಮ್ಮ ಧ್ವಂಸಗೊಂಡ ನಾಡಿನ ದೇವಾಲಯಗಳಲ್ಲಿ ಈಸ್ಟರ್ ಆಚರಣೆಗಳಿಗೆ ಅನೇಕರು ತಯಾರಿ ನಡೆಸುತ್ತಿರುವಾಗ, ಉಕ್ರೇನಿಯದ ಅಧ್ಯಕ್ಷ ಝೆಲೆನ್ಸ್ಕಿರವರು "ಈ ಯುದ್ಧವನ್ನು ಕೊನೆಗೊಳಿಸಿ ಮತ್ತು ವಿಶ್ವಾಸಾರ್ಹ ಶಾಂತಿಯನ್ನು ಖಾತರಿಪಡಿಸಿ" ಎಂದು ಮನವಿ ಮಾಡಿದರು.