ಮೊದಲ ಅರಬ್ ಮುಖ್ಯಾಧಿಕಾರಿಯ ಆಯ್ಕೆ ಇಸ್ರಯೇಲ್‌ಗೆ 'ಭರವಸೆಯ ಸಂದೇಶ'
ಜೋಸೆಫ್ ಟುಲ್ಲೊಚ್
2024ರಲ್ಲಿ, ಮೌನಾ ಮರೂನ್ ರವರನ್ನು ಹೈಫಾ ವಿಶ್ವವಿದ್ಯಾಲಯದ ಮುಖ್ಯಾಧಿಕಾರಿಯಾಗಿ ನೇಮಿಸಲಾಯಿತು, ಇವರು ಇಸ್ರಯೇಲ್‌ನ ಅರಬ್ ಅಲ್ಪಸಂಖ್ಯಾತರ ಮೊದಲ ಸದಸ್ಯರಾದರು, ಹಕ್ಕುಗಳ ಸಂಘಟನೆಗಳ ಪ್ರಕಾರ, ರಚನಾತ್ಮಕ ತಾರತಮ್ಯವನ್ನು ಎದುರಿಸುತ್ತಿರುವ ಒಂದು ಹಿಂದುಳಿದ ಗುಂಪು, ಇಸ್ರಯೇಲ್ ನ ವಿಶ್ವವಿದ್ಯಾಲಯದಲ್ಲಿ ಈ ಪಾತ್ರವನ್ನು ನಿರ್ವಹಿಸಿದ ಮೊದಲ ಸದಸ್ಯರಾದರು.
ಮಾರೌನ್ ಕೂಡ ಒಬ್ಬ ಕ್ರೈಸ್ತರು, ಕಾರ್ಮೆಲ್ ಪರ್ವತದ ಇಳಿಜಾರಿನಲ್ಲಿರುವ ಒಂದು ಪುಟ್ಟ ಮರೋನೈಟ್ ಕಥೋಲಿಕ ಹಳ್ಳಿಯಿಂದ ಬಂದವರು. ಇಸ್ರಯೇಲ್ ಅರಬ್ ಜನಸಂಖ್ಯೆಯ ಒಟ್ಟು ಜನಸಂಖ್ಯೆಯಲ್ಲಿ ಕ್ರೈಸ್ತರು ಕೇವಲ 7% ರಷ್ಟಿದ್ದಾರೆ, ಇದು ಇಸ್ರಯೇಲ್‌ನ ಒಟ್ಟು ಜನಸಂಖ್ಯೆಯು ಐದನೇ ಒಂದು ಭಾಗವನ್ನು ಪ್ರತಿನಿಧಿಸುತ್ತದೆ ಮತ್ತು ಆದ್ದರಿಂದ ಅರಬ್ ನ ಒಬ್ಬ ಮಹಿಳೆಯಾಗಿ ಮತ್ತು ಕ್ರೈಸ್ತಳಾಗಿ ಮಾರೌನ್‌ರವರ ಕಥೆ, ಯಶಸ್ಸಿನ ಕಥೆಯ ಗಮನಾರ್ಹವಾಗಿದೆ.
ಅವರ ಆಯ್ಕೆಯು "ಒಂದು ಪವಾಡ" ಎಂದು ಮಾರೌನ್ ರವರು ವ್ಯಾಟಿಕನ್ ಸುದ್ದಿಯೊಂದಿಗೆ ಹೇಳುತ್ತಾರೆ, ಹಮಾಸ್‌ನ ಅಕ್ಟೋಬರ್ 7ರ ದಾಳಿಗಳು ಮತ್ತು ಇಸ್ರಯೇಲ್‌ನೊಳಗೆ ಅರಬ್ಬರು ಮತ್ತು ಯೆಹೂದ್ಯರ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಕೆಲವೇ ತಿಂಗಳುಗಳ ನಂತರ ಇದು ಸಂಭವಿಸಿದೆ. ಏಪ್ರಿಲ್ 2024ರಲ್ಲಿ, ಅವರನ್ನು ಹೈಫಾ ವಿಶ್ವವಿದ್ಯಾಲಯದ ಮುಖ್ಯಾಧಿಕಾರಿಯಾಗಿ ಅಥವಾ ಮುಖ್ಯ ಶೈಕ್ಷಣಿಕ ಅಧಿಕಾರಿಯಾಗಿ ನೇಮಿಸಲಾಯಿತು, ಇದು ವಿಶ್ವವಿದ್ಯಾಲಯದ ಉತ್ತರಾಧಿಕಾರದಲ್ಲಿ ಅಧ್ಯಕ್ಷರ ನಂತರ ಎರಡನೇ ಸ್ಥಾನವಾಗಿದೆ.
ಮಾರೌನ್ ರವರು ತನ್ನ ನೇಮಕಾತಿಯನ್ನು "ಭರವಸೆಯ ಸಂದೇಶ" ಮತ್ತು "ಇಸ್ರಯೇಲ್‌ನಲ್ಲಿ ವಿಷಯಗಳು ವಿಭಿನ್ನವಾಗಿರಬಹುದು", ಯೆಹೂದ್ಯರು ಮತ್ತು ಅರಬ್ಬರು "ಒಟ್ಟಿಗೆ ಯಶಸ್ವಿಯಾಗಬಹುದು ಮತ್ತು ಒಟ್ಟಿಗೆ ಬದುಕಬಹುದು" ಎಂಬುದರ ಸಂಕೇತವೆಂದು ವಿವರಿಸುತ್ತಾರೆ.
ಇಸ್ರಯೇಲ್‌ನ ಶೈಕ್ಷಣಿಕ ಬಹಿಷ್ಕಾರಗಳು
ಮಾರೌನ್ ರವರು ಇಸ್ರಯೇಲ್‌ನ ಉತ್ತರ ಭಾಗದವರಾಗಿದ್ದು, ಹೆಚ್ಚಿನ ಅರಬ್ ಜನಸಂಖ್ಯೆಗೆ ನೆಲೆಯಾಗಿದೆ ಮತ್ತು ಅವರ ವಿಶ್ವವಿದ್ಯಾಲಯದಲ್ಲಿ ಸುಮಾರು 45 ಪ್ರತಿಶತ ವಿದ್ಯಾರ್ಥಿಗಳು ಅರಬ್ಬರು.
ಗಾಜಾದಲ್ಲಿ ಇಸ್ರಯೇಲ್ ನಡೆಸಿದ ಯುದ್ಧದಿಂದ ಉಂಟಾದ ಅಪಾರ ನಾಗರಿಕ ಸಾವಿನ ಸಂಖ್ಯೆಗೆ ಪ್ರತಿಕ್ರಿಯೆಯಾಗಿ, ಕೆಲವು ವಿದೇಶಿ ವಿಶ್ವವಿದ್ಯಾಲಯಗಳು ತಮ್ಮ ಇಸ್ರಯೇಲ್ ಸಹವರ್ತಿಗಳೊಂದಿಗೆ ಸಂಬಂಧವನ್ನು ಕಡಿತಗೊಳಿಸಿರುವುದನ್ನು ಕಂಡ ಬಹಿಷ್ಕಾರಗಳನ್ನು ಮಾರೌನ್ ರವರು ವಿರೋಧಿಸಲು ಇದು ಒಂದು ಕಾರಣವಾಗಿದೆ.
ಬಹಿಷ್ಕಾರ ಯಾರಿಗೂ ಸಹಾಯ ಮಾಡುವುದಿಲ್ಲ, ವಿಶೇಷವಾಗಿ ಶೈಕ್ಷಣಿಕ ಬಹಿಷ್ಕಾರವಲ್ಲ, ಏಕೆಂದರೆ ಇಸ್ರಯೇಲ್ ಶೈಕ್ಷಣಿಕ ಸಮುದಾಯವು ಅರಬ್ಬರನ್ನು ಸಬಲೀಕರಣಗೊಳಿಸಲು ಮತ್ತು ಅವರ ಸಾಮಾಜಿಕ ಚಲನಶೀಲತೆಯನ್ನು ಹೆಚ್ಚಿಸಲು ಅದ್ಭುತವಾದ ಕೆಲಸವನ್ನು ಮಾಡುತ್ತಿದೆ" ಎಂದು ಅವರು ಹೇಳುತ್ತಾರೆ.
ದೇಶದೊಳಗಿನ "ಉದಾರವಾದಿ" ಅಂಶಗಳನ್ನು "ಸಬಲೀಕರಣಗೊಳಿಸುವ" ಒಂದು ಮಾರ್ಗವಾಗಿ ವಿದೇಶಿ ವಿಶ್ವವಿದ್ಯಾಲಯಗಳು ಇಸ್ರಯೇಲ್ ತಮ್ಮ ಸಹವರ್ತಿಗಳೊಂದಿಗೆ ನೇರವಾಗಿ ತೊಡಗಿಸಿಕೊಳ್ಳಬೇಕು ಎಂದು ನಾನು ಭಾವಿಸುತ್ತೇನೆ ಎಂದು ಮಾರೌನ್ ರವರು ಹೇಳುತ್ತಾರೆ.
ಮಾನವೀಯತೆಯನ್ನು ಕಾಪಾಡಿಕೊಳ್ಳುವುದು
ಇಸ್ರಯೇಲ್, ಅರಬ್ ಮಹಿಳೆಯಾಗಿ, ಗಾಜಾದಲ್ಲಿನ ಪ್ರಸ್ತುತ ಸಂಘರ್ಷದ ಬಗ್ಗೆ ತನಗೆ "ಎರಡೂ ಕಡೆಯಿಂದಲೂ ಸಹಾನುಭೂತಿ" ಇದೆ ಎಂದು ಮಾರೌನ್ ರವರು ಹೇಳುತ್ತಾರೆ.
ಅಕ್ಟೋಬರ್ 7ರಂದು ಏನಾಯಿತು ಎಂಬುದರ ಬಗ್ಗೆ ಭಯಭೀತರಾಗಲು ನೀವು ಯೆಹೂದ್ಯಯಾಗಿರಬೇಕಾಗಿಲ್ಲ" ಎಂದು ಅವರು ಹೇಳುತ್ತಾರೆ. ಗಾಜಾದಲ್ಲಿನ ಮಾನವೀಯ ಪರಿಸ್ಥಿತಿ ಮತ್ತು ಅಮಾಯಕರ ಹತ್ಯೆಯ ಬಗ್ಗೆ ಭಯಭೀತರಾಗಲು ನೀವು ಅರಬ್ ರವರು ಆಗಿರಬೇಕಾಗಿಲ್ಲ.
ಅವರು ಹೇಳುವ ಪ್ರಕಾರ, ಮನುಷ್ಯರಾಗಿರುವುದು ಎಂದರೆ "ಎರಡೂ ಕಡೆಯ ಸಂತ್ರಸ್ತರುಗಳ ಬಗ್ಗೆ ಸಹಾನುಭೂತಿ ಹೊಂದಿರುವುದು.
ಈ ಪ್ರದೇಶದಲ್ಲಿ ಶಾಂತಿಯನ್ನು ಉತ್ತೇಜಿಸುವಲ್ಲಿ ಧರ್ಮಸಭೆಯು ಮತ್ತು ಪವಿತ್ರ ಪೀಠಧೀಕಾರಿಯು ವಹಿಸಬೇಕಾದ ಪಾತ್ರ "ತಟಸ್ಥ ಏಜೆಂಟ್" ಆಗಿರುವುದು ಎಂದು ಮಾರೌನ್ ರವರು ಒತ್ತಿ ಹೇಳಿದರು. ಇದರಲ್ಲಿ "ಇಸ್ರೇಲರು ಮತ್ತು ಪ್ಯಾಲಸ್ತೀನಿಯದವರ ಮೇಲೆ" ಪ್ರಭಾವ ಬೀರುವುದರಿಂದ ಅಮೆರಿಕದಲ್ಲಿ ಟ್ರಂಪ್ ಆಡಳಿತದೊಂದಿಗೆ ಸಹಕರಿಸುವುದು ಸೇರಿರಬೇಕು ಎಂದು ಅವರು ಹೇಳಿದರು.
"ಸಮನ್ವಯ, ಕ್ಷಮೆ ಮತ್ತು ಶಾಂತಿ ಸ್ಥಾಪನೆ, ಇದು ನಮ್ಮ ವಿಶ್ವಾಸ," ಎಂದು ಮಾರೌನ್ ರವರು ತೀರ್ಮಾನಿಸುತ್ತಾರೆ”.