MAP

I rifugiati sudanesi in Ciad ricevono aiuti da Caritas Mongo I rifugiati sudanesi in Ciad ricevono aiuti da Caritas Mongo 

ಕಾರಿತಾಸ್ ಸುಡಾನ್: ದೇಶವು 'ನೆರವಿನ ಅವಶ್ಯಕತೆಯಲ್ಲಿದೆ'

ಮುಂದುವರೆಯುತ್ತಿರುವ ಸಂಘರ್ಷದಿಂದ ಸ್ಥಳಾಂತರಗೊಂಡ ಲಕ್ಷಾಂತರ ಸುಡಾನ್‌ ನಾಗರಿಕರಿಗೆ ಕಾರಿತಾಸ್ ಒದಗಿಸುತ್ತಿರುವ ಆಹಾರ ಮತ್ತು ನೆರವಿನ ಬಗ್ಗೆ ಹಿರಿಯ ತುರ್ತು ಪ್ರತಿಕ್ರಿಯೆ ಅಧಿಕಾರಿ ವಿವರಿಸುತ್ತಾರೆ.

ಕೀಲ್ಸ್ ಗುಸ್ಸಿ

ದುರ್ಘಟನೆ ನಡೆದು ಎರಡು ವರ್ಷಗಳ ವಾರ್ಷಿಕೋತ್ಸವವನ್ನು ಗುರುತಿಸಲು ಸುಡಾನ್ ನಾಚಿಕೆಪಡುತ್ತಿದೆ. ಸಂಘರ್ಷದ ಪ್ರಾರಂಭವನ್ನು ವಿಶ್ವಸಂಸ್ಥೆಯು ವಿಶ್ವದ ಅತ್ಯಂತ ಕೆಟ್ಟ ಮಾನವೀಯ ಬಿಕ್ಕಟ್ಟು ಎಂದು ಕರೆದಿದೆ.

ವಿಶ್ವಸಂಸ್ಥೆಯ ವಕ್ತಾರರಾದ ಸ್ಟೀಫನ್ ಡುಜಾರಿಕ್ ರವರು ಸುಡಾನ್‌ನಲ್ಲಿ ಮಾನವೀಯ ಮತ್ತು ಭದ್ರತಾ ಪರಿಸ್ಥಿತಿಯು ಭೀಕರವಾಗಿದೆ ಮತ್ತು ಹದಗೆಡುತ್ತಿದೆ ಎಂದು ಎಚ್ಚರಿಸಿದ್ದಾರೆ. 25 ಮಿಲಿಯನ್ ಸುಡಾನಿನ ಜನರು ತೀವ್ರ ಆಹಾರ ಅಭದ್ರತೆಯನ್ನು ಎದುರಿಸುತ್ತಿದ್ದಾರೆ, ಜೂನ್ ಮತ್ತು ಸೆಪ್ಟೆಂಬರ್ ನಡುವೆ ಈ ಸಂಖ್ಯೆಯು ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ.

ವ್ಯಾಟಿಕನ್ ಸುದ್ಧಿಗೆ ನೀಡಿದ ಸಂದರ್ಶನದಲ್ಲಿ, ಕಾರಿತಾಸ್‌ ಸುಡಾನಿನ ಹಿರಿಯ ತುರ್ತು ಪ್ರತಿಕ್ರಿಯೆ ಅಧಿಕಾರಿ ಫಿಲೆಮನ್ ಹೆಮಾಡಿರವರು, ತಮ್ಮ ಮನೆಗಳಿಂದ ಸ್ಥಳಾಂತರಗೊಂಡ ಲಕ್ಷಾಂತರ ಜನರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ವಿವರಿಸಿದ್ದಾರೆ.

ಯಾವುದೇ ಆಸ್ತಿ, ಹಣ ಮತ್ತು ಉದ್ಯೋಗವಿಲ್ಲದೆ
2023ರಲ್ಲಿ ಯುದ್ಧ ಪ್ರಾರಂಭವಾದಾಗ, ದೇಶದ ರಾಜಧಾನಿಯಾದ ಖಾರ್ಟೌಮ್‌ನಲ್ಲಿ ಹೆಚ್ಚುತ್ತಿರುವ ಹಿಂಸಾಚಾರದಿಂದ ತಪ್ಪಿಸಿಕೊಳ್ಳಲು ಸಾವಿರಾರು ಜನರು "ಆಸ್ತಿ ಇಲ್ಲದೆ, ಹಣವಿಲ್ಲದೆ, ಉದ್ಯೋಗವಿಲ್ಲದೆ" ತಮ್ಮ ಮನೆಗಳನ್ನು ಬಿಟ್ಟು ಹೇಗೆ ಓಡಿಹೋದರು ಎಂಬುದನ್ನು ಹೆಮಾಡಿ ವಿವರಿಸಿದರು. ಈ ಜನರು ನಂತರ ಖಾರ್ಟೂಮ್ ಸುತ್ತಮುತ್ತಲಿನ ನಗರಗಳಲ್ಲಿನ ಶಾಲೆಗಳಲ್ಲಿ ಆಶ್ರಯ ಪಡೆದರು. ಅವರು ಮಾನವನ ಮೂಲಭೂತ ಅಗತ್ಯಗಳಾದ : ಆಹಾರ, ನೀರು ಮತ್ತು ವಸತಿಯನ್ನು ಪಡೆಯಲು ತಮ್ಮ ಹೋರಾಟವನ್ನು ಮುಂದುವರೆಸಿದ್ದಾರೆ.

ಒಬ್ಬ ತಾಯಿಯ ಕಥೆ
ಸುಡಾನ್‌ನಲ್ಲಿ ಸುಮಾರು 770,000 ಮಕ್ಕಳು ತೀವ್ರವಾದ ಅಪೌಷ್ಟಿಕತೆಯನ್ನು ಅನುಭವಿಸುತ್ತಿದ್ದಾರೆ - ಜೀವಕ್ಕೆ-ಬೆದರಿಕೆಯ ಸ್ಥಿತಿ. ಹೇಮಾಡಿಯವರು ಒಬ್ಬ ತಾಯಿ ಮತ್ತು ಆಕೆಯ ಮಗುವಿನ ಅಂಗವೈಕಲ್ಯದ ಕಥೆಯನ್ನು ಹಂಚಿಕೊಂಡರು ಮತ್ತು ಅವರು ಹೇಗೆ ತಮ್ಮ ಮನೆಗಳಿಂದ ಸ್ಥಳಾಂತರಗೊಂಡರು. "ಆಕೆಯು ಯಾವುದೇ ಆದಾಯವನ್ನು ಹೊಂದಿಲ್ಲದೆ ತನ್ನ, ಮಗುವಿಗೆ ಸ್ವಲ್ಪ ಚಿಕಿತ್ಸೆ, ಕೊಡಿಸಲು ಎಷ್ಟು ಹೋರಾಡಿದಳು ಎಂಬುದನ್ನು ಅವರು ವಿವರಿಸಿದರು.

ಸುಡಾನ್ ಈಗ ನೆರವಿನ ಅವಶ್ಯಕತೆಯಲ್ಲಿದೆ
ಮಳೆಗಾಲ ಸಮೀಪಿಸುತ್ತಿದ್ದಂತೆ, ಮಾನವೀಯ ವ್ಯವಹಾರಗಳ ಸಮನ್ವಯಕ್ಕಾಗಿ ವಿಶ್ವಸಂಸ್ಥೆಯ ಕಚೇರಿಯು ದೇಶದಲ್ಲಿ ವ್ಯಾಪಕವಾದ ಕ್ಷಾಮವನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲು ಕರೆ ನೀಡಿದೆ. ಸುಡಾನ್‌ನಲ್ಲಿ ಹೆಚ್ಚಿನ ಜನರು ಈಗ ಉತ್ಪಾದಿಸಲು ಅಸಮರ್ಥರಾಗಿದ್ದಾರೆ ಮತ್ತು ಅವರಿಗೆ ಯಾವುದೇ ಉದ್ಯೋಗ ಅಥವಾ ಆದಾಯದ ಮೂಲವಿಲ್ಲ ಎಂದು ಹೆಮಾಡಿರವರು ಎತ್ತಿ ತೋರಿಸಿದರು.

ಸುಡಾನ್‌ನಲ್ಲಿ ನೆರವಿನ ಅಗತ್ಯವಿರುವ ಜನರಿಗೆ ಸಹಾಯ ಮಾಡಲು ಅಂತರರಾಷ್ಟ್ರೀಯ ಸಮುದಾಯಕ್ಕೆ ಇದು ಒಂದು ಉತ್ತಮ ಸಮಯವಾಗಿದೆ ಎಂದು ಹೆಮಾಡಿರವರು ಒತ್ತಿ ಹೇಳಿದರು. ಅನೇಕ ಎನ್‌ಜಿಒಗಳು ತಮ್ಮ ಬೆಂಬಲವನ್ನು ನೀಡುತ್ತಿವೆ, ಸುಡಾನ್‌ಗೆ ಬೆಂಬಲ ನೀಡಲು ಅಂತರರಾಷ್ಟ್ರೀಯ ಸಮುದಾಯವನ್ನು ಒಗ್ಗೂಡಿಸಲು ನಾವು ಕರೆ ನೀಡುತ್ತೇವೆ ಮತ್ತು ವಿಷಯಗಳನ್ನು ಸುಧಾರಿಸಬೇಕೆಂದು ನಾವು ಪ್ರಾರ್ಥಿಸುತ್ತೇವೆ.
 

04 ಏಪ್ರಿಲ್ 2025, 12:56