ಮಾನವ ಭ್ರಾತೃತ್ವ ಸಹಭಾಗಿತ್ವದ ಕಾರ್ಯಕ್ರಮಕ್ಕೆ ಅರ್ಜಿಗಳು ತೆರೆದಿವೆ
ವ್ಯಾಟಿಕನ್ ಸುದ್ದಿ
ಮಾನವ ಭ್ರಾತೃತ್ವಕ್ಕಾಗಿ ಜಾಯೆದ್ ಪ್ರಶಸ್ತಿಯು ತನ್ನ ಮಾನವ ಭ್ರಾತೃತ್ವ ಸಹಭಾಗಿತ್ವದ ಕಾರ್ಯಕ್ರಮದ ಎರಡನೇ ಆವೃತ್ತಿಯನ್ನು ಪ್ರಾರಂಭಿಸುತ್ತಿದೆ, ಯುವ ವಿದ್ವಾಂಸರಲ್ಲಿ ಜಾಗತಿಕ ಸಂವಾದ, ಶಾಂತಿ ನಿರ್ಮಾಣ ಮತ್ತು ಅಂತರಧರ್ಮದ ಸಹಯೋಗವನ್ನು ಬೆಳೆಸುವ ತನ್ನ ಧ್ಯೇಯವನ್ನು ಮುಂದುವರೆಸಿದೆ.
ಈ ಪ್ರಶಸ್ತಿಯನ್ನು ಫೆಬ್ರವರಿ 4, 2019 ರಂದು ಅಬುಧಾಬಿಯಲ್ಲಿ ಅಲ್-ಅಝರ್‌ನ ಗ್ರ್ಯಾಂಡ್ ಇಮಾಮ್ ಪ್ರೊಫೆಸರ್ ಅಹ್ಮದ್ ಅಲ್-ತಾಯೆಬ್ ಮತ್ತು ವಿಶ್ವಗುರು ಫ್ರಾನ್ಸಿಸ್ ರವರ ನಡುವಿನ ಐತಿಹಾಸಿಕ ಭೇಟಿಯನ್ನು ಗುರುತಿಸಲು ಸ್ಥಾಪಿಸಲಾಯಿತು, ಈ ಸಂದರ್ಭದಲ್ಲಿ ಅವರು ಮಾನವ ಭ್ರಾತೃತ್ವದ ದಾಖಲೆಗೆ ಸಹ-ಸಹಿ ಹಾಕಿದರು.
ವಿಶ್ವದಾದ್ಯಂತ, ಜನರು ಮತ್ತು ಸಂಸ್ಥೆಗಳು ಈ ಕಾರ್ಯಕ್ರಮದ ಮಹತ್ವವನ್ನು ಗುರುತಿಸುತ್ತವೆ, ಅಮೇರಿಕದ ಜಾರ್ಜ್‌ಟೌನ್‌ನ ಬರ್ಕ್ಲಿ ಧಾರ್ಮಿಕ ಕೇಂದ್ರದ ನಿರ್ದೇಶಕ ಥಾಮಸ್ ಬ್ಯಾಂಚೋಫ್ ರವರು ಸೇರಿದ್ದಾರೆ.
ಜಾರ್ಜ್‌ಟೌನ್ ವಿಶ್ವವಿದ್ಯಾಲಯದ ಬರ್ಕ್ಲಿ ಧಾರ್ಮಿಕ ಕೇಂದ್ರ, ಶಾಂತಿ ಮತ್ತು ವಿಶ್ವ ವ್ಯವಹಾರಗಳ ಸಹಭಾಗಿತ್ವದಲ್ಲಿ 2024ರಲ್ಲಿ ಮೊದಲ ಬಾರಿಗೆ ಪ್ರಾರಂಭಿಸಲಾದ ಈ ಕಾರ್ಯಕ್ರಮವು, ಮಾನವ ಭ್ರಾತೃತ್ವ, ಒಳಗೊಳ್ಳುವಿಕೆ ಮತ್ತು ಅಂತರಸಾಂಸ್ಕೃತಿಕ ತಿಳುವಳಿಕೆಯ ತತ್ವಗಳಿಗೆ ಆಳವಾಗಿ ಬದ್ಧರಾಗಿರುವ ಹೊಸ ಪೀಳಿಗೆಯ ನಾಯಕರನ್ನು ಬೆಳೆಸುವ ಗುರಿಯೊಂದಿಗೆ ವಿಶ್ವದಾದ್ಯಂತದ ಪದವಿಪೂರ್ವ ಮತ್ತು ಪದವಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡಿದೆ.
ಮಾನವ ಭ್ರಾತೃತ್ವಕ್ಕಾಗಿ ಜಾಯೆದ್ ಪ್ರಶಸ್ತಿಯ ಪ್ರಧಾನ ಕಾರ್ಯದರ್ಶಿ ನ್ಯಾಯಾಧೀಶ ಮೊಹಮ್ಮದ್ ಅಬ್ದೆಲ್ಸಲಾಮ್ ರವರು ವಿವರಿಸಿದಂತೆ, ಈ ಪಾಲುದಾರಿಕೆಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಸಹಭಾಗಿತ್ವ ತುಂಬಾ ಮುಖ್ಯವಾಗಿವೆ.
ಅರ್ಜಿದಾರರು ಈ ಎರಡನೇ ಆವೃತ್ತಿಗೆ ಮೇ 16, 2025ರ ಗಡುವಿನ ಮೊದಲು ಕಾರ್ಯಕ್ರಮದ ಆನ್‌ಲೈನ್(ಮಿನ್ನೇರದ) ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲು ಕೇಳಿಕೊಳ್ಳಲಾಗುತ್ತದೆ:
https://humanfraternitydialogues.georgetown.edu/projects/human-fraternity-fellows program
ಈ ಕಾರ್ಯಕ್ರಮವು ಜೂನ್ 2025ರಲ್ಲಿ ವರ್ಚುವಲ್ ಅವಧಿಗಳೊಂದಿಗೆ ನಡೆಯಲಿದ್ದು, ಆಗಸ್ಟ್ 2025 ರಲ್ಲಿ ಇಂಡೋನೇಷ್ಯಾದ ಜಕಾರ್ತದಲ್ಲಿ ಒಂದು ವಾರದ ಅಧ್ಯಯನ ಪ್ರವಾಸದೊಂದಿಗೆ ಮುಕ್ತಾಯಗೊಳ್ಳುತ್ತದೆ. ಜಾಗತಿಕ ಗೆಳೆಯರು, ಧಾರ್ಮಿಕ ನಾಯಕರು, ನೀತಿ ನಿರೂಪಕರು ಮತ್ತು ಮಾನವ ಭ್ರಾತೃತ್ವಕ್ಕಾಗಿ ಜಾಯೆದ್ ಪ್ರಶಸ್ತಿಯ ಹಿಂದಿನ ಪುರಸ್ಕೃತರ ಕ್ರಿಯಾತ್ಮಕ ಮಿಶ್ರಣದೊಂದಿಗೆ ತೊಡಗಿಸಿಕೊಳ್ಳಲು ಸಹಭಾಗಿತ್ವದ ಅವಕಾಶವನ್ನು ನೀಡುತ್ತದೆ.
ಯುನೈಟೆಡ್ ಅರಬ್ ಎಮಿರೇಟ್ಸ್‌ನ 2024ರ ಸದಸ್ಯೆಯಾದ ಆಯಿಷಾ ಅಲ್ಯಾಸ್ಸಿರವರು, ಮಾನವ ಭ್ರಾತೃತ್ವ ಸಹಭಾಗಿತ್ವದ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನನ್ನ ಸಮಯವನ್ನು ವೈಯಕ್ತಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆ ಸಹಾಯಕವಾಗಿದೆ ಎಂದು ಬಣ್ಣಿಸಿದ್ದಾರೆ.
2024 ರಲ್ಲಿ ಮೊದಲ ಆವೃತ್ತಿ
ಫೆಬ್ರವರಿ 2024ರಲ್ಲಿ ಅಬುಧಾಬಿಯಲ್ಲಿ ನಡೆದ ಮೊದಲ ಆವೃತ್ತಿಯಲ್ಲಿ, ಎಂಟು ದೇಶಗಳು ಮತ್ತು ಐದು ವಿಭಿನ್ನ ಧಾರ್ಮಿಕ ಸಂಪ್ರದಾಯಗಳ ವಿದ್ಯಾರ್ಥಿಗಳನ್ನು ಆಹ್ವಾನಿಸಲಾಯಿತು. ಈ ವೈವಿಧ್ಯಮಯ ಸಮೂಹವು ಮೊಟ್ಟಮೊದಲ ಮಾನವ ಭ್ರಾತೃತ್ವ ಮಜ್ಲಿಸ್‌ನಲ್ಲಿ ಭಾಗವಹಿಸಿತು, ಜಾಯೆದ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿತು ಮತ್ತು ಗ್ರ್ಯಾಂಡ್ ಇಮಾಮ್ ಅಹ್ಮದ್ ಅಲ್-ತಾಯೆಬ್ ಮತ್ತು ಪೂರ್ವ ತಿಮೋರ್ ಅಧ್ಯಕ್ಷ ಜೋಸ್ ರಾಮೋಸ್-ಹೋರ್ಟಾ ರವರಂತಹ ಪ್ರತಿಷ್ಠಿತ ನಾಯಕರನ್ನು ಭೇಟಿಯಾಯಿತು.