MAP

MYANMAR-THAILAND-EARTHQUAKE MYANMAR-THAILAND-EARTHQUAKE  (AFP or licensors)

ಭೂಕಂಪದ ಆಘಾತಕ್ಕೊಳಗಾದ ಮ್ಯಾನ್ಮಾರ್‌ಗೆ ನೆರವು ನೀಡಲು ಸಹಾಯ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ

ಮ್ಯಾನ್ಮಾರ್‌ನಲ್ಲಿ ಶುಕ್ರವಾರ ಸಂಭವಿಸಿದ 7.7 ತೀವ್ರತೆಯ ಭೂಕಂಪದ ನಂತರ 2,700ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ, ಆದರೆ 4,500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಮತ್ತು ನೂರಾರು ಜನರು ನಾಪತ್ತೆಯಾಗಿದ್ದಾರೆ.

ಕ್ರಿಸ್ಟೋಫರ್ ವೆಲ್ಸ್

ಮ್ಯಾನ್ಮಾರ್‌ನ ಅಧಿಕಾರಿಗಳು ಕಳೆದ ವಾರದ ಭೂಕಂಪದಲ್ಲಿ 2,700ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದ್ದಾರೆ, ಆದರೆ ಒಟ್ಟು ಸತ್ತವರ ಸಂಖ್ಯೆ ಹೆಚ್ಚಾಗುವ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ರಾಷ್ಟ್ರದ ಎರಡನೇ ಅತಿದೊಡ್ಡ ನಗರವಾದ ಮ್ಯಾಂಡಲೆ ಬಳಿ ಸಂಭವಿಸಿದ ಭೂಕಂಪದಲ್ಲಿ 4,500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 440ಕ್ಕೂ ಹೆಚ್ಚು ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ.

ನಿರ್ಣಾಯಕ ಹುಡುಕಾಟ ಮತ್ತು ಪಾರುಗಾಣಿಕಾ ಸಮಯದ ಗವಾಕ್ಷಿಯು ಕಿರಿದಾಗುತ್ತಿದೆ ಎಂದು ಮ್ಯಾನ್ಮಾರ್ ನಿವಾಸಿ ಮತ್ತು ಮಾನವೀಯ ವ್ಯವಹಾರಗಳ ಸಮನ್ವಯಕ್ಕಾಗಿ ವಿಶ್ವಸಂಸ್ಥೆಯ ಕಚೇರಿಯ ಮಾನವೀಯ ಸಂಯೋಜಕ ಮಾರ್ಕೊಲುಗಿ ಕೊರ್ಸಿರವರು ಹೇಳಿದರು. ಯಾಂಗೂನ್‌ನಿಂದ ವೀಡಿಯೊ ಲಿಂಕ್ ಮೂಲಕ ಸುದ್ದಿಗಾರರೊಂದಿಗೆ ಮಾತನಾಡಿದ ಕೊರ್ಸಿರವರು, ಆಶ್ರಯ, ಶುದ್ಧ ನೀರು, ಔಷಧಿಗಳ ಕೊರತೆಯನ್ನು ಗಮನಿಸಿದರು. ವಿದ್ಯುತ್ ಅಥವಾ ಹರಿಯುವ ನೀರು ಇಲ್ಲದ ಕಾರಣ ಪೀಡಿತ ಪ್ರದೇಶಗಳಲ್ಲಿ ಜನರು ರಾತ್ರಿಯನ್ನು ಬಯಲಿನಲ್ಲಿ ಕಳೆದರು ಎಂದು ಅವರು ಹೇಳಿದರು.

ಅಂತರರಾಷ್ಟ್ರೀಯ ರೆಡ್ ಕ್ರಾಸ್ ಆ ಕಳವಳಗಳನ್ನು ಪ್ರತಿಧ್ವನಿಸಿತು, ಒಬ್ಬ IRC ಕೆಲಸಗಾರನು ಹೇಳುತ್ತಾನೆ, "ಭೂಕಂಪದ ಭಯದಿಂದ ಬದುಕಿದ ಜನರು ಈಗ ನಂತರದ ಆಘಾತಗಳಿಗೆ ಹೆದರುತ್ತಾರೆ ಮತ್ತು ರಸ್ತೆಗಳಲ್ಲಿ ಅಥವಾ ತೆರೆದ ಮೈದಾನಗಳಲ್ಲಿ ಹೊರಗೆ ಮಲಗುತ್ತಿದ್ದಾರೆ.

ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಅಂತರ್ಯುದ್ಧವು ಸಹಾಯ ಪ್ರಯತ್ನಗಳಿಗೆ ಅಡ್ಡಿಯಾಗುತ್ತಿದೆ ಎಂದು ನೆರವು ಸಂಸ್ಥೆಗಳು ಆತಂಕ ವ್ಯಕ್ತಪಡಿಸಿವೆ. ಬಂಡುಕೋರರ ಹಿಡಿತದಲ್ಲಿರುವ ದೇಶದ ಪ್ರದೇಶಗಳಿಗೆ ನೆರವು ಕಳುಹಿಸಲು ದೇಶದ ಆಡಳಿತಾರೂಢ ಸೇನಾ ಜುಂಟಾ ಅನುಮತಿ ನೀಡಬೇಕಾಗಿದೆ ಎಂದು ಅಂತರರಾಷ್ಟ್ರೀಯ ಅಮ್ನೆಸ್ಟಿಯು ಹೇಳಿದೆ.

ಮ್ಯಾನ್ಮಾರ್‌ನ ಮಿಲಿಟರಿಯು ಅದನ್ನು ವಿರೋಧಿಸುವ ಗುಂಪುಗಳು ಸಕ್ರಿಯವಾಗಿರುವ ಪ್ರದೇಶಗಳಿಗೆ ಸಹಾಯವನ್ನು ನಿರಾಕರಿಸುವ ದೀರ್ಘಕಾಲದ ಅಭ್ಯಾಸವನ್ನು ಹೊಂದಿದೆ ಎಂದು ಅಮ್ನೆಸ್ಟಿಯ ಮ್ಯಾನ್ಮಾರ್ ಸಂಶೋಧಕ ಜೋ ಫ್ರೀಮನ್ ರವರು ಹೇಳಿದ್ದಾರೆ. ಸರ್ಕಾರವು ಎಲ್ಲಾ ಮಾನವೀಯ ಸಂಸ್ಥೆಗಳಿಗೆ ಅಡೆತಡೆಯಿಲ್ಲದ ಪ್ರವೇಶವನ್ನು ತಕ್ಷಣವೇ ಅನುಮತಿಸಬೇಕು ಮತ್ತು ಅಗತ್ಯ ಮೌಲ್ಯಮಾಪನಗಳನ್ನು ವಿಳಂಬಗೊಳಿಸುವ ಆಡಳಿತಾತ್ಮಕ ಅಡೆತಡೆಗಳನ್ನು ತೆಗೆದುಹಾಕಬೇಕು ಎಂದು ಅವರು ಒತ್ತಾಯಿಸಿದರು.
 

01 ಏಪ್ರಿಲ್ 2025, 11:16