ಯುನಿಸೆಫ್: ಒಂದು ಮಿಲಿಯನ್ ಪ್ಯಾಲಸ್ತೀನಿಯದ ಮಕ್ಕಳು ಅವಶ್ಯಕತೆಗಳಿಂದ ವಂಚಿತರಾಗಿದ್ದಾರೆ
ಕ್ರಿಸ್ಟೋಫರ್ ವೆಲ್ಸ್
"ಜೀವ ಉಳಿಸುವ ಮಾನವೀಯ ನೆರವು ಗಾಜಾ ಜನರನ್ನು ತಲುಪಲು, ಗಾಜಾ ಗಡಿಯ ಪ್ರವೇಶಕ್ಕೆ ಲಭ್ಯತೆಯಿಲ್ಲದೆ, ಸರಿಸುಮಾರು ಒಂದು ಮಿಲಿಯನ್ ಮಕ್ಕಳು ಬದುಕಲು ಅಗತ್ಯವಿರುವ ಮೂಲಭೂತ ಸೌಕರ್ಯಗಳಿಲ್ಲದೆ ಬದುಕುತ್ತಿದ್ದಾರೆ " ಎಂದು ಯುನಿಸೆಫ್‌ನ ಎಡ್ವರ್ಡ್ ಬೀಗ್ಬೆಡರ್ ರವರು ಹೇಳುತ್ತಾರೆ.
ಭಾನುವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆಯ ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ಪ್ರಾದೇಶಿಕ ನಿರ್ದೇಶಕರು, ಪಶ್ಚಿಮ ದಂಡೆ ಮತ್ತು ಗಾಜಾ ಗಡಿ ಸೇರಿದಂತೆ ಪ್ಯಾಲಸ್ತೀನಿಯದಲ್ಲಿರುವ 2.4 ಮಿಲಿಯನ್ ಮಕ್ಕಳಲ್ಲಿ ಬಹುತೇಕ ಎಲ್ಲರೂ, ಇಸ್ರಯೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಸಂಘರ್ಷದಿಂದ ಪ್ರಭಾವಿತರಾಗಿದ್ದಾರೆ ಎಂದು ಗಮನಿಸಿದರು. "ಎಲ್ಲಾ ಮಕ್ಕಳನ್ನು ರಕ್ಷಿಸಲೇಬೇಕು" ಎಂದು ಬೀಗ್ಬೆಡರ್ ರವರು ಒತ್ತಾಯಿಸುತ್ತಾರೆ.
ನವಜಾತ ಶಿಶುಗಳ ತೀವ್ರ ನಿಗಾ ಘಟಕಗಳಿಗೆ 180,000ಕ್ಕೂ ಹೆಚ್ಚು ಡೋಸ್‌ಗಳ ಲಸಿಕೆಗಳು ಮತ್ತು 20 ವೆಂಟಿಲೇಟರ್‌ಗಳನ್ನು ಗಾಜಾ ಪಟ್ಟಿಗೆ ತಲುಪಿಸಲು ಅನುಮತಿ ನಿರಾಕರಿಸಿದ್ದಕ್ಕೆ ಅವರು ವಿಷಾದ ವ್ಯಕ್ತಪಡಿಸಿದರು. ದುರಂತವೆಂದರೆ, ಗಾಜಾ ಗಡಿಯಲ್ಲಿ ವೈದ್ಯಕೀಯ ಸೌಲಭ್ಯಗಳ ಮೇಲಿನ ಪ್ರಮುಖ ಪರಿಣಾಮದಿಂದಾಗಿ ಸುಮಾರು 4,000 ನವಜಾತ ಶಿಶುಗಳು ಪ್ರಸ್ತುತವಾಗಿ ಅಗತ್ಯವಾದ ಜೀವ ಉಳಿಸುವ ಆರೈಕೆಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.
"ಕದನ ವಿರಾಮ ಜಾರಿಯಲ್ಲಿದ್ದರೂ ಅಥವಾ ಇಲ್ಲದಿದ್ದರೂ ಜೀವ ಉಳಿಸುವ ಕಾರ್ಯಕ್ರಮಗಳ ಸಹಾಯದ ಪ್ರವೇಶವನ್ನು ಸುಗಮಗೊಳಿಸುವುದು" ಸೇರಿದಂತೆ ನಾಗರಿಕರ ಅಗತ್ಯಗಳನ್ನು ಪೂರೈಸುವ ಅವಶ್ಯಕತೆಯನ್ನು ಬೀಗ್ಬೆಡರ್ ಗಮನಿಸಿದರು. ಮಕ್ಕಳ ಆರೋಗ್ಯ ಸರಬರಾಜುಗಳನ್ನು ಗಾಜಾಗೆ ತಲುಪಿಸಲು ಅನುಮತಿಸಬೇಕೆಂದು ಯುನಿಸೆಫ್ ಪ್ರತಿಪಾದಿಸುತ್ತಿದೆ ಎಂದು ಅವರು ಹೇಳಿದರು. ಮಕ್ಕಳ ಆರೋಗ್ಯ ಸರಬರಾಜುಗಳನ್ನು ಗಾಜಾಗೆ ಏಕೆ ತಲುಪಿಸಬಾರದು ಎಂಬುದಕ್ಕೆ ಯಾವುದೇ ಕಾರಣವಿಲ್ಲ" ಎಂದು ಹೇಳಿದರು.
ಅಕ್ಟೋಬರ್ 2023ರಲ್ಲಿ ಹೋರಾಟ ಪ್ರಾರಂಭವಾದಾಗಿನಿಂದ ಪಶ್ಚಿಮ ಜೆರುಸಲೇಮ್ ಸೇರಿದಂತೆ ಪಶ್ಚಿಮ ದಂಡೆಯಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳು ಸಾವನ್ನಪ್ಪಿದ್ದಾರೆ ಹಾಗೂ ಜೆನಿನ್ ಮತ್ತು ಪಶ್ಚಿಮ ದಂಡೆಯ ಉತ್ತರದಲ್ಲಿ 35,000ಕ್ಕೂ ಹೆಚ್ಚು ಮಕ್ಕಳು ತಮ್ಮ ಮನೆಗಳನ್ನು ತೊರೆಯಲು ಒತ್ತಾಯಿಸಲ್ಪಟ್ಟಿದ್ದಾರೆ ಎಂದು ಬೀಗ್ಬೆಡರ್ ರವರು ನೆನಪಿಸಿಕೊಂಡರು.
ಪ್ಯಾಲಸ್ತೀನಿಯದಲ್ಲಿ ಮಕ್ಕಳನ್ನು ರಕ್ಷಿಸಲು ಮತ್ತು ಬೆಂಬಲಿಸಲು ಯುನಿಸೆಫ್ ಕೆಲಸ ಮಾಡುತ್ತಿರುವಾಗ, ಈ ನೇರವು ಸಾಕಾಗುವುದಿಲ್ಲ ಎಂದು ಬೀಗ್ಬೆಡರ್ ರವರು ಹೇಳಿದರು: ಮಕ್ಕಳನ್ನು ಕೊಲ್ಲಬಾರದು, ಗಾಯಗೊಳಿಸಬಾರದು ಅಥವಾ ಸ್ಥಳಾಂತರಿಸಬಾರದು ಮತ್ತು ಎಲ್ಲಾ ಪಕ್ಷಗಳು ಅಂತರರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ತಮ್ಮ ಬಾಧ್ಯತೆಗಳನ್ನು ಗೌರವಿಸಬೇಕು ಎಂದು ಅವರು ಹೇಳಿದರು. ನಾಗರಿಕರ ಅವಶ್ಯಕತೆಗಳನ್ನು ಮತ್ತು ರಕ್ಷಣಾ ಅಗತ್ಯಗಳನ್ನು ಪೂರೈಸಬೇಕು ಹಾಗೂ ಮಾನವೀಯ ನೆರವಿನ ಕಾರ್ಯವು ವೇಗ ಪ್ರಮಾಣದಲ್ಲಿ ಹರಿಯಲು ಅವಕಾಶ ಮಾಡಿಕೊಡಬೇಕು. ಎಲ್ಲಾ ಒತ್ತೆಯಾಳುಗಳನ್ನು ತ್ವರಿತವಾಗಿ ಬಿಡುಗಡೆ ಮಾಡಬೇಕು ಮತ್ತು ಗಾಜಾ ಗಡಿಯಲ್ಲಿ ಕದನ ವಿರಾಮ ಮುಂದುವರಿಯಬೇಕು ಮತ್ತು ಸಂಘರ್ಷಕ್ಕೆ ಶಾಶ್ವತ ಪರಿಹಾರಗಳನ್ನು ಬೆಂಬಲಿಸಬೇಕು ಎಂದು ಹೇಳಿದರು.