ಹೋರಾಟದ ನಡುವೆಯೂ ಉಕ್ರೇನಿಯದವರು ಶಾಂತಿಗಾಗಿ ಹಾತೊರೆಯುತ್ತಿದ್ದಾರೆ
ಸ್ಟೀಫನ್ ಜೆ. ಬೋಸ್
ಕ್ರಿವಿ ರಿಹ್ ನಗರದ 23 ವರ್ಷದ ಔಷಧಿಕಾರಿ ಎವೆಲಿನ್ ರವರು, ಯುದ್ಧದ ಕಾರಣದಿಂದಾಗಿ ಒಬ್ಬಂಟಿಯಾಗಿರಲು ಹೆದರುತ್ತಿರುವುದರಿಂದ ಈಗ ತನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದೇನೆ ಎಂದು ಹೇಳುತ್ತಾರೆ.
ರಾತ್ರಿಯಲ್ಲಿ ವಸತಿ ಕಟ್ಟಡಗಳಿಗೆ ಡ್ರೋನ್‌ಗಳು ಮತ್ತು ಕ್ಷಿಪಣಿಗಳು ಅಪ್ಪಳಿಸಿದಾಗ ಎಚ್ಚರಗೊಂಡಿದ್ದನ್ನು ಆಕೆಯು ನೆನಪಿಸಿಕೊಂಡು, ಇದು ಭಯಾನಕ ಮತ್ತು ತುಂಬಾ ಅಪಾಯಕಾರಯಾಗಿದೆ, ಏಕೆಂದರೆ ಇತ್ತೀಚಿನ ದಿನಗಳಲ್ಲಿ ಇಂತಹ ದಾಳಿಗಳು ಅವರ ಪ್ರದೇಶದಲ್ಲಿ ಕನಿಷ್ಠ ಒಬ್ಬರನ್ನು ಕೊಂದು ಐದು ಜನರನ್ನು ಗಾಯಗೊಳಿಸಿದ ಘಟನೆಗಳಾಗಿವೆ ಎಂದು ಹೇಳಿದರು.
ಆಕೆಯಲ್ಲಿ ಯಾವುದೋ ಒಂದು ಭರವಸೆ, ಇನ್ನೂ ಒಂದು ದಿನ ಕುಟುಂಬವನ್ನು ಪ್ರಾರಂಭಿಸಿ ಶಾಂತಿಯಿಂದ ಬದುಕುವ ಆಶಯವನ್ನು ಹೊಂದಿದ್ದಾಳೆ.
ಶನಿವಾರದಿಂದ ಉಕ್ರೇನ್‌ನ ಸುತ್ತಮುತ್ತ ರಷ್ಯಾದ ದಾಳಿಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿ 19 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುರಿಯಾಗಿಸಿಕೊಂಡ ಪ್ರದೇಶಗಳಲ್ಲಿ ದಕ್ಷಿಣ ಒಡೆಸಾ ಪ್ರದೇಶವೂ ಸೇರಿದೆ ಎಂದು ವರದಿಯಾಗಿದೆ, ಅಲ್ಲಿ ರಷ್ಯಾದ ಕ್ಷಿಪಣಿ ಒಡೆಸಾ ನಗರದ ಬಂದರು ಸೌಲಭ್ಯಗಳನ್ನು ಹೊಡೆದುರುಳಿಸಿ, ಮೂಲಸೌಕರ್ಯ ಮತ್ತು ಯುರೋಪಿನ ಕಂಪನಿಗೆ ಸೇರಿದ ಪನಾಮ ಧ್ವಜದ ಹಡಗನ್ನು ಹಾನಿಗೊಳಿಸಿತು.
ಶಾಂತಿಯ ಯೋಜನೆ
ಲಂಡನ್‌ನಲ್ಲಿ, ಹಲವಾರು ಯುರೋಪಿನ ಒಕ್ಕೂಟ ಮತ್ತು NATO ದೇಶಗಳು ಉಕ್ರೇನ್‌ನ ಭದ್ರತೆಯನ್ನು ಕೇಂದ್ರೀಕರಿಸುವ ಐತಿಹಾಸಿಕ ಭದ್ರತಾ ಶೃಂಗಸಭೆಯಲ್ಲಿ ಭಾಗವಹಿಸುತ್ತಿವೆ.
ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ರವರು, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿರವರೊಂದಿಗೆ ದೀರ್ಘ ಸಂಭಾಷಣೆ ನಡೆಸಿದ್ದಾರೆ ಮತ್ತು ನಂತರ ಅಮೇರಿಕದ ಅಧ್ಯಕ್ಷರಾದ ಡೊನಾಲ್ಡ್ ಜೆ. ಟ್ರಂಪ್ ರವರ ಹಾಗೂ ಫ್ರೆಂಚ್ ಅಧ್ಯಕ್ಷರಾದ ಎಮ್ಯಾನುಯೆಲ್ ಮ್ಯಾಕ್ರನ್ ರವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ ಎಂದು ಹೇಳಿದರು.
ಯುನೈಟೆಡ್ ಕಿಂಗ್‌ಡಮ್, ಫ್ರಾನ್ಸ್ ಮತ್ತು ಬಹುಶಃ ಒಂದು ಅಥವಾ ಎರಡು ಇತರರೊಂದಿಗೆ, ಹೋರಾಟವನ್ನು ನಿಲ್ಲಿಸುವ ಯೋಜನೆಯಲ್ಲಿ ಉಕ್ರೇನ್‌ನೊಂದಿಗೆ ಕೆಲಸ ಮಾಡಲಿದೆ ಮತ್ತು ನಂತರ ನಾವು ಆ ಯೋಜನೆಯನ್ನು ಅಮೇರಿಕದೊಂದಿಗೆ ಚರ್ಚಿಸುತ್ತೇವೆ ಎಂದು ಸ್ಟಾರ್ಮರ್ ರವರು ಹೇಳಿದರು.
ಆದರೂ ರಾಷ್ಟ್ರವನ್ನು ಪುನರ್ನಿರ್ಮಿಸುವುದು ಸುಲಭವಲ್ಲ, ತಜ್ಞರು ಹೇಳುವಂತೆ ಉಕ್ರೇನ್ ಈಗ ವಿಶ್ವದಲ್ಲೇ ಅತಿ ಹೆಚ್ಚು ಸ್ಫೋಟಗೊಳ್ಳದ ಸುಗ್ರೀವಾಜ್ಞೆಯನ್ನು ಹೊಂದಿದೆ, ದೇಶದ ಸುಮಾರು ಮೂರನೇ ಒಂದು ಭಾಗದಷ್ಟು ಗಣಿಗಾರಿಕೆ ಮಾಡುವ ಸಾಧ್ಯತೆಯಿದೆ.
ಫೆಬ್ರವರಿ 2022ರಲ್ಲಿ ರಷ್ಯಾ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಆಕ್ರಮಣವನ್ನು ಪ್ರಾರಂಭಿಸಿದ ನಂತರ ಕನಿಷ್ಠ ಒಂದು ಮಿಲಿಯನ್ ಜನರು ಸಾವನ್ನಪ್ಪಿದ್ದಾರೆ ಮತ್ತು ಗಾಯಗೊಂಡಿದ್ದಾರೆ ಎಂದು ನಂಬಲಾಗಿದೆ.
ಹೆಚ್ಚುವರಿಯಾಗಿ, ಉಕ್ರೇನ್ ಇನ್ನೂ 19,000ಕ್ಕೂ ಹೆಚ್ಚು ಉಕ್ರೇನಿಯದ ಮಕ್ಕಳನ್ನು ಹುಡುಕುತ್ತಿದೆ, ಅವರನ್ನು ಅಕ್ರಮವಾಗಿ ರಷ್ಯಾಕ್ಕೆ ವರ್ಗಾಯಿಸಲಾಗಿದೆ ಎಂದು ಅದು ಹೇಳುತ್ತದೆ.
ಇದು ಜನಸಂಖ್ಯೆಯ ಸುಮಾರು 25 ಪ್ರತಿಶತ ಜನರನ್ನು ಸ್ಥಳಾಂತರಗೊಳಿಸಿದೆ, ಯುದ್ಧ ಪ್ರಾರಂಭವಾದಾಗಿನಿಂದ ಸ್ಥಳಾಂತರಗೊಂಡಿರುವ, ಅಂದಾಜು 10.6 ಮಿಲಿಯನ್ ಉಕ್ರೇನಿಯದವರಲ್ಲಿ ಅವರು ಸೇರಿದ್ದಾರೆ.
ವಿಶ್ವಸಂಸ್ಥೆಯು 2025ಕ್ಕೆ ಮಾನವೀಯ ಮತ್ತು ನಿರಾಶ್ರಿತರ ಪ್ರತಿಕ್ರಿಯೆ ಯೋಜನೆಯನ್ನು ಪ್ರಾರಂಭಿಸುತ್ತಿದೆ ಹಾಗೂ ಬಿಕ್ಕಟ್ಟಿನಿಂದ ಪ್ರಭಾವಿತರಾದ ಲಕ್ಷಾಂತರ ಜನರನ್ನು ಬೆಂಬಲಿಸಲು $3.3 ಬಿಲಿಯನ್‌ಗೆ ಮನವಿ ಮಾಡುತ್ತಿದೆ.