MAP

DOG THERAPY DOG THERAPY  (AFP or licensors)

ಉಕ್ರೇನ್: ಒಬ್ಬ ಸ್ವಯಂಸೇವಕಿ ಮತ್ತು ಆಕೆಯ ಚಿಕಿತ್ಸಾ ಶ್ವಾನಗಳು ಮಕ್ಕಳನ್ನು ಗುಣಪಡಿಸುವ ಕ್ಷಣಗಳು

ಒಡೆಸಾದಲ್ಲಿರುವ ಕಾರಿತಾಸ್ ಕಚೇರಿಯು ಯುದ್ಧದಿಂದ ಪ್ರಭಾವಿತರಾದ ಮಕ್ಕಳಿಗೆ ಮಾನಸಿಕ ಮತ್ತು ದೈಹಿಕ ಪುನರ್ವಸತಿಯ ಅಧಿವೇಶನಗಳನ್ನು ನೀಡುವ ಕಾರ್ಯಕ್ರಮವನ್ನು ಪ್ರಾರಂಭಿಸುತ್ತದೆ. ಈ ಅಧಿವೇಶನಗಳನ್ನು ಒಲೆನಾ ವೆಲಿಚೆಂಕೊ ಮತ್ತು ವಿಶೇಷವಾಗಿ ತರಬೇತಿ ಪಡೆದ ಚಿಕಿತ್ಸಾ ಶ್ವಾನಗಳು ಮುನ್ನಡೆಸುತ್ತವೆ.

ಒಲೆನಾ ಕೊಮಿಸರೆಂಕೊ ಮತ್ತು ಸ್ವಿಟ್ಲಾನಾ ಡುಖೋವಿಚ್

ಒಲೆನಾ ವೆಲಿಚೆಂಕೊ ಒಬ್ಬ ಸಮರ್ಪಿತ ಸ್ವಯಂಸೇವಕರಾಗಿದ್ದು, ಮಕ್ಕಳು ಮತ್ತು ವಯಸ್ಕರು, ಇಬ್ಬರೂ ಶ್ವಾನಗಳಿಗೆ ತರಬೇತಿ ನೀಡಲು ಮತ್ತು ಅವುಗಳನ್ನು ನೋಡಿಕೊಳ್ಳಲು ಕಲಿಯಬಹುದಾದ ಸ್ಥಳವನ್ನು ಸೃಷ್ಟಿಸುವುದು ಅವರ ಜೀವಮಾನದ ಕನಸಾಗಿತ್ತು. ಯುದ್ಧದ ಕಷ್ಟಗಳ ನಡುವೆಯೂ, ಕರುಣೆ ಮತ್ತು ಸೃಜನಶೀಲತೆ, ಅಗತ್ಯವಿರುವವರಿಗೆ ಸಾಂತ್ವನ ಹಾಗೂ ಸೌಖ್ಯತೆಯನ್ನು ಹೇಗೆ ತರಲು ಸಹಾಯ ಮಾಡುತ್ತಿದೆ ಎಂಬುದನ್ನು ಅವರು ಹಂಚಿಕೊಳ್ಳುತ್ತಾರೆ.

ಸ್ಥಳಾಂತರಗೊಂಡ ಮತ್ತು ಅಂಗವಿಕಲ ಮಕ್ಕಳನ್ನು ಬೆಂಬಲಿಸುವುದು
ದಕ್ಷಿಣ ಉಕ್ರೇನ್‌ನ ಖೇರ್ಸನ್‌ನಲ್ಲಿ ಜನಿಸಿದ ಒಲೆನಾರವರು, ರಷ್ಯಾದ ಆಕ್ರಮಣ ಪ್ರಾರಂಭವಾಗುವವರೆಗೂ ಅಲ್ಲಿಯೇ ವಾಸಿಸುತ್ತಿದ್ದರು. ವ್ಯಾಟಿಕನ್ ಮಾಧ್ಯಮದ ಜೊತೆ ಮಾತನಾಡುತ್ತಾ, ಸಾಕುಪ್ರಾಣಿಗಳಿಲ್ಲದ ವ್ಯಕ್ತಿಗಳೂ ಸಹ ಜವಾಬ್ದಾರಿಯುತ ಪ್ರಾಣಿಗಳ ಆರೈಕೆಯ ಬಗ್ಗೆ ಕಲಿಯಬಹುದಾದ ವಿಷಯಗಳನ್ನು, ಶ್ವಾನದ ತರಬೇತಿ ಕೇಂದ್ರವನ್ನು ಸ್ಥಾಪಿಸುವ ಕನಸು ತಾನು ಬಹಳ ದಿನಗಳಿಂದ ಕಂಡಿದ್ದನ್ನು ಅವರು ನೆನಪಿಸಿಕೊಳ್ಳುತ್ತಾರೆ. ಸ್ನೇಹಿತರು ಮತ್ತು ದಾನಿಗಳ ಬೆಂಬಲದೊಂದಿಗೆ, ಆಕೆಯು ಈ ದಾರ್ಶನಿಕತೆಯನ್ನು ಅರಿತುಕೊಂಡರು ಯುದ್ಧದ ಕಾರಣದಿಂದಾಗಿ ಒಡೆಸ್ಸಾಗೆ ಸ್ಥಳಾಂತರಗೊಳ್ಳಲು ಒತ್ತಾಯಿಸಲ್ಪಟ್ಟಳು.

ಅಲ್ಲಿ, ಕಾರಿತಾಸ್ ಒಲೆನಾಳನ್ನು ಅಂಗವಿಕಲ ಮಕ್ಕಳಿಗೆ ಮತ್ತು ಸಂಘರ್ಷದಿಂದ ಸ್ಥಳಾಂತರಗೊಂಡವರಿಗೆ "ಶ್ವಾನದ ಚಿಕಿತ್ಸೆ" ಅಧಿವೇಶನಗಳನ್ನು ಆಯೋಜಿಸಲು ಆಹ್ವಾನಿಸಿತು. "ಮೊದಲಿಗೆ ನನಗೆ ಭಯವಾಗಿತ್ತು," ಎಂದು ಅವರು ಒಪ್ಪಿಕೊಳ್ಳುತ್ತಾರೆ. ಹಿಂದೆ, ನಾನು ಮಾನಸಿಕ ಅಸಾಮರ್ಥ್ಯ ಹೊಂದಿರುವ ಮಗುವಿನೊಂದಿಗೆ ಮುಖಾಮುಖಿಯಾಗಿ ಕೆಲಸ ಮಾಡಿದ್ದೆ, ಆದರೆ ಈಗ ನಾನು ಎಂಟರಿಂದ ಹತ್ತು ಮಕ್ಕಳ ಗುಂಪುಗಳೊಂದಿಗೆ ನಾನು ನನ್ನ ಕಾರ್ಯವನ್ನು ತೊಡಗಿಸಿಕೊಂಡಿದ್ದೇನೆ. ಕೆಲವು ಮಕ್ಕಳು ನನ್ನ ಸ್ವಂತ ಊರಾದ ಖೆರ್ಸನ್‌ನಿಂದ ಪಲಾಯನ ಮಾಡಿದ್ದರು, ಇದು ನನಗೆ ಆ ಅನುಭವವನ್ನು ತುಂಬಾ ವೈಯಕ್ತಿಕವಾಗಿಸಿತು. ಅವರ ತಾಯಂದಿರು ಅವರೊಂದಿಗೆ ಬಂದರು, ಮಕ್ಕಳು ಮತ್ತು ಅವರ ಪೋಷಕರು ಇಬ್ಬರೂ ಸಮಾಧಾನ ಮತ್ತು ಶಾಂತಿಯ ಕ್ಷಣಗಳನ್ನು ಕಂಡುಕೊಳ್ಳುವುದು ಎಷ್ಟು ಮುಖ್ಯ ಎಂದು ನಾನು ನೋಡಿದೆ.

ಶ್ವಾನದ ಚಿಕಿತ್ಸೆಯ ಶಕ್ತಿ
ಶ್ವಾನ-ನೆರವಿನ ಚಿಕಿತ್ಸೆಯು, ಮಾನಸಿಕ ಮತ್ತು ದೈಹಿಕ ಪುನರ್ವಸತಿಯನ್ನು ಗುರುತಿಸಲ್ಪಟ್ಟ ವಿಧಾನವಾಗಿದ್ದು, ಇದು ಭಾವನಾತ್ಮಕ ಮತ್ತು ಶಾರೀರಿಕ ಬೆಂಬಲವನ್ನು ಒದಗಿಸಲು ವಿಶೇಷವಾಗಿ ತರಬೇತಿ ಪಡೆದ ನಾಯಿಗಳನ್ನು ಬಳಸಿಕೊಳ್ಳುತ್ತದೆ. ಈ ಪ್ರಾಣಿಗಳೊಂದಿಗಿನ ಸಂವಹನವು ನರಮಂಡಲವನ್ನು ಸ್ಥಿರಗೊಳಿಸಲು, ಒತ್ತಡವನ್ನು ಕಡಿಮೆ ಮಾಡಲು ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇವು ಉಕ್ರೇನ್‌ನಲ್ಲಿ ವಿಶೇಷವಾಗಿ ನಿರ್ಣಾಯಕ ಪ್ರಯೋಜನಗಳಾಗಿವೆ, ಅಲ್ಲಿನ ದೈನಂದಿನ ವಾಯುದಾಳಿ ಸೈರನ್‌ಗಳು ಮತ್ತು ನಡೆಯುತ್ತಿರುವ ಹಿಂಸಾಚಾರವು ಮಾನಸಿಕ ಹಾನಿಯನ್ನುಂಟುಮಾಡುತ್ತಿದೆ.

ಚಿಕಿತ್ಸಾ ಶ್ವಾನ ಶಾಂತವಾಗಿರಬೇಕು, ಆಕ್ರಮಣಕಾರಿಯಲ್ಲದ ಮತ್ತು ಬೆರೆಯುವಂತಿರಬೇಕು ಎಂದು ಒಲೆನಾ ವಿವರಿಸುತ್ತಾರೆ. ಶ್ವಾನಗಳು ಹೆಚ್ಚಿನ ಒತ್ತಡದ ವಾತಾವರಣವನ್ನು ನಿಭಾಯಿಸಬಲ್ಲವು ಎಂದು ಖಚಿತಪಡಿಸಿಕೊಳ್ಳಲು ನಾವು ಅವುಗಳನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿ ತರಬೇತಿ ನೀಡುತ್ತೇವೆ. ನಮ್ಮ ಶ್ವಾನಗಳು ತಾವು ಒಂದು ಕಾರ್ಯಾಚರಣೆಯಲ್ಲಿದ್ದೇವೆ ಎಂದು ತಿಳಿದಿವೆ. ಅವು ಉತ್ಸಾಹದಿಂದ ಕಾರನ್ನು ಹತ್ತುತ್ತವೆ, ಅಗತ್ಯವಿರುವವರಿಗೆ ಸಾಂತ್ವನ ನೀಡಲು ಸಿದ್ಧವಾಗಿರುತ್ತವೆ.

ಸಂತೋಷ ಮತ್ತು ಸೌಖ್ಯವನ್ನು ತರುವುದು
ಚಿಕಿತ್ಸಾ ಅಧಿವೇಶನಗಳಲ್ಲಿ ಭಾಗವಹಿಸುವ ಮಕ್ಕಳು ಉತ್ಸಾಹದಿಂದ ಪ್ರತಿಕ್ರಿಯಿಸುತ್ತಾರೆ. ಅವರು ಶ್ವಾನಗಳನ್ನು ಮುದ್ದಿಸುತ್ತಾರೆ ಮತ್ತು ಅಪ್ಪಿಕೊಳ್ಳುತ್ತಾರೆ, ಫೋಟೋಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ಮುಂದಿನ ಭೇಟಿಗಾಗಿ ಕುತೂಹಲದಿಂದ ಕಾಯುತ್ತಾರೆ. ಒಡೆಸಾದಲ್ಲಿ ಟ್ರಾಮ್‌ನಲ್ಲಿ ನಡೆದ ಘಟನೆಯನ್ನು ಒಲೆನಾ ನೆನಪಿಸಿಕೊಳ್ಳುತ್ತಾಳೆ. ತಿಂಗಳುಗಳ ಹಿಂದೆ ಕೇವಲ ಒಂದು ಅಧಿವೇಶನಕ್ಕೆ ಹಾಜರಾಗಿದ್ದ ಕಟ್ಯಾ ಎಂಬ ಯುವತಿಯು ಆಕೆಯನ್ನು ಗುರುತಿಸಿ ಸಂತೋಷದಿಂದ ಕೈ ಬೀಸಿದಳು. ಆಕೆಯ ಮಾತಿನ ತೊಂದರೆಗಳ ಹೊರತಾಗಿಯೂ, ಆಕೆಯು ನನ್ನನ್ನು ನೆನಪಿಸಿಕೊಂಡಳು.

ದಯೆಯ ಅಲ್ಪ ಕ್ಷಣಗಳು ಸಹ ಶಾಶ್ವತವಾದ ಪ್ರಭಾವ ಬೀರುತ್ತವೆ ಎಂಬುದರ ಸುಂದರವಾದ ಜ್ಞಾಪನೆಯಾಗಿತ್ತು.
ತಕ್ಷಣದ ಸಂತೋಷವನ್ನು ಮೀರಿ, ಈ ಸಂವಹನಗಳು ದೀರ್ಘಕಾಲೀನ ಪ್ರಯೋಜನಗಳನ್ನು ಬೆಳೆಸುತ್ತವೆ. ಯುದ್ಧದಿಂದಾಗಿ ಅನೇಕ ಮಕ್ಕಳು ತಮ್ಮ ಮನೆಗಳು, ಶಾಲೆಗಳು ಮತ್ತು ಸ್ನೇಹಿತರನ್ನು ಕಳೆದುಕೊಂಡಿದ್ದಾರೆ ಎಂದು ಒಲೆನಾರವರು ವಿವರಿಸುತ್ತಾರೆ. ಯುದ್ದದಿಂದ ಪ್ರಭಾವಿತರಾದ ಈ ಮಕ್ಕಳು ಹೆಚ್ಚಾಗಿ ಒಂಟಿತನ ಮತ್ತು ಆತಂಕವನ್ನು ಅನುಭವಿಸುತ್ತಾರೆ. ನಮ್ಮ ಅಧಿವೇಶನಗಳ ಮೂಲಕ, ಅವರು ಆತ್ಮವಿಶ್ವಾಸವನ್ನು ಗಳಿಸುತ್ತಾರೆ, ಹೊಸ ಸ್ನೇಹಿತರನ್ನು ಮಾಡಿಕೊಳ್ಳುತ್ತಾರೆ ಮತ್ತು ಶ್ವಾನಗಳೊಂದಿಗೆ ತಂಡದ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಈ ಕ್ರಿಯೆಯಿಂದ ಅವರಿಗೆ ಸಿಗುವ ಭಾವನಾತ್ಮಕ ಬೆಂಬಲವು ಅವರ ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತದೆ ಮತ್ತು ಆತಂಕ ಹಾಗೂ ಖಿನ್ನತೆಯ ಭಾವನೆಗಳನ್ನು ಕಡಿಮೆ ಮಾಡುತ್ತದೆ.

ಯುದ್ಧದ ಕಷ್ಟಗಳ ನಡುವೆಯೂ ಇತರರಿಗೆ ಸೇವೆ ಸಲ್ಲಿಸುವುದು
ಹೊಸ ದಾಳಿಗಳ ವಿನಾಶವು ಮತ್ತು ದೈನಂದಿನ ಸುದ್ದಿಗಳ ಹೊರತಾಗಿಯೂ, ಒಲೆನಾರವರಂತಹ ಸ್ವಯಂಸೇವಕರು ಇತರರ ಸೇವೆ ಮಾಡಲು ಬದ್ಧರಾಗಿದ್ದಾರೆ. ನಾನು ಯಾರೊಬ್ಬರ ಜೀವನಕ್ಕೆ ಸ್ವಲ್ಪ ಸಂತೋಷವನ್ನು ತಂದರೂ ಸಹ, ಆ ಸೇವೆಯಲ್ಲಿ ನಾನು ತೃಪ್ತಿಯನ್ನು ಅನುಭವಿಸುತ್ತೇನೆ ಎಂದು ಅವರು ಹೇಳುತ್ತಾರೆ. "ನಾವು ಯಾವಾಗ ಹಿಂತಿರುಗುತ್ತೇವೆ ಎಂದು ಮಕ್ಕಳು ಮತ್ತು ಪೋಷಕರು ನನ್ನನ್ನು ಕೇಳಿದಾಗ, ನಾವು ಅವರಲ್ಲಿ ಒಂದು ಬದಲಾವಣೆಯನ್ನು ತಂದಿದ್ದೇವೆ ಎಂದು ನನಗೆ ತಿಳಿದಿದೆ. ಈ ಕೆಲಸವು ಕೇವಲ ಚಿಕಿತ್ಸೆಯ ಬಗ್ಗೆ ಅಲ್ಲ, ಇದು ಪ್ರಕ್ಷುಬ್ಧತೆಯ ಮಧ್ಯೆ ಭರವಸೆ ಮತ್ತು ಮಾನವ ಸಂಪರ್ಕವನ್ನು ಪುನಃಸ್ಥಾಪಿಸುವ ಬಗ್ಗೆಯಾಗಿದೆ.
 

11 ಮಾರ್ಚ್ 2025, 12:44