MAP

Several injured after Russian missile strikes hit Ukraine's Kharkiv Several injured after Russian missile strikes hit Ukraine's Kharkiv  (ANSA)

ತೀವ್ರಗೊಂಡ ದಾಳಿಗಳ ನಡುವೆ ಅಮೇರಿಕದ ಮಧ್ಯಸ್ಥಿಕೆ, ರಷ್ಯಾ-ಉಕ್ರೇನ್ ಮಾತುಕತೆ ನಿಗದಿಯಾಗಿದೆ

ಈ ವರ್ಷದ ಅತಿದೊಡ್ಡ ದಾಳಿಗಳಲ್ಲಿ ಒಂದಾದ, ರಷ್ಯಾದ ದಾಳಿಗಳಲ್ಲಿ ದೇಶಾದ್ಯಂತ ಕನಿಷ್ಠ 18 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾದ ನಂತರ, ಉಕ್ರೇನಿನ ಅಧ್ಯಕ್ಷರು ವಾಯು ಮತ್ತು ಸಮುದ್ರ ಕದನ ವಿರಾಮಕ್ಕೆ ತಮ್ಮ ಕರೆಯನ್ನು ಪುನರುಚ್ಚರಿಸಿದ್ದಾರೆ. ಇದರ ನಡುವೆ, ಮುಂದಿನ ವಾರ ಅಮೆರಿಕ ಮತ್ತು ಉಕ್ರೇನ್ ನಡುವೆ ಸಭೆಯನ್ನು ಆಯೋಜಿಸುವ ಅವಕಾಶವನ್ನು ಸೌದಿ ಅರೇಬಿಯಾವು ಸ್ವಾಗತಿಸುತ್ತದೆ.

ಲಿಂಡಾ ಬೋರ್ಡೋನಿ

ಉಕ್ರೇನಿಯದ ಬಿಕ್ಕಟ್ಟನ್ನು ಕೊನೆಗೊಳಿಸಲು ಶಾಶ್ವತ ಶಾಂತಿಯನ್ನು ಸಾಧಿಸಲು ಸಾಮ್ರಾಜ್ಯದ ನಿರಂತರ ಪ್ರಯತ್ನಗಳನ್ನು ದೃಢಪಡಿಸುವ ಮೂಲಕ, ಅಮೆರಿಕ-ಉಕ್ರೇನಿಯದ ನಡುವಿನ ಮಾತುಕತೆಗಳು ಕೆಂಪು ಸಮುದ್ರದ ನಗರವಾದ ಜೆಡ್ಡಾದಲ್ಲಿ ನಡೆಯಲಿವೆ ಎಂದು ಸೌದಿ ವಿದೇಶಾಂಗ ಸಚಿವಾಲಯದ ಸಂಕ್ಷಿಪ್ತ ಹೇಳಿಕೆ ತಿಳಿಸಿದೆ.

ಉಕ್ರೇನಿನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿರವರು ಗುರುವಾರ, ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ರವರನ್ನು ಭೇಟಿ ಮಾಡಲು ಸೋಮವಾರ ಅರೇಬಿಯನ್ ಪೆನಿನ್ಸುಲಾ ರಾಷ್ಟ್ರಕ್ಕೆ ಪ್ರಯಾಣಿಸುವುದಾಗಿ ಘೋಷಿಸಿದರು. ಅವರು ಈ ವಾರದ ಕೊನೆಯಲ್ಲಿ ಅಮೆರಿಕದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಅಮೇರಿಕದ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ರವರು ಕೂಡ ಸಭೆ ಯೋಜಿಸಲಾಗಿದೆ ಎಂದು ದೃಢಪಡಿಸಿದರು ಮತ್ತು ರಷ್ಯಾದೊಂದಿಗಿನ ಮೂರು ವರ್ಷಗಳ ಯುದ್ಧವನ್ನು ಕೊನೆಗೊಳಿಸಲು ಒಪ್ಪಂದದ ಚೌಕಟ್ಟಿನ ಕುರಿತು ಉಕ್ರೇನ್‌ನೊಂದಿಗೆ ಚರ್ಚೆ ನಡೆಸುತ್ತಿರುವುದಾಗಿ ಹೇಳಿದರು.

ಫೆಬ್ರವರಿಯಲ್ಲಿ, ಎರಡನೇ ಮಹಾಯುದ್ಧದ ನಂತರ ಯುರೋಪಿನಲ್ಲಿ ಸಂಭವಿಸಿದ ಅತ್ಯಂತ ಮಾರಕ ಸಂಘರ್ಷವನ್ನು ನಿಲ್ಲಿಸುವ ಮಾರ್ಗಗಳನ್ನು ಚರ್ಚಿಸಲು ರಿಯಾದ್ ರವರು, ಅಮೇರಿಕ ಮತ್ತು ರಷ್ಯಾದ ಅಧಿಕಾರಿಗಳ ನಡುವೆ ಸಭೆಯನ್ನು ಆಯೋಜಿಸಿತ್ತು. ಆ ಮಾತುಕತೆಗಳಲ್ಲಿ ಉಕ್ರೇನನ್ನು ಸೇರಿಸಲಾಗಿಲ್ಲ, ಇದು ಕೈವ್ ಮತ್ತು ಆ ಯುರೋಪಿನ ಮಿತ್ರರಾಷ್ಟ್ರಗಳಲ್ಲಿ ಕಳವಳವನ್ನು ಹೆಚ್ಚಿಸಿತು.

2022 ಇಸ್ತಾನ್‌ಬುಲ್ ಪ್ರೋಟೋಕಾಲ್
ಮಾರ್ಚ್ 2022ರಲ್ಲಿ ಟರ್ಕಿಯೆಯಲ್ಲಿ ರಷ್ಯಾ ಉಕ್ರೇನ್ ಮೇಲೆ ದೊಡ್ಡ ಪ್ರಮಾಣದ ಆಕ್ರಮಣ ಮಾಡಿದ ಆರಂಭಿಕ ವಾರಗಳಲ್ಲಿ ನಡೆದ ಅಮೆರಿಕ ಮತ್ತು ರಷ್ಯಾ ನಡುವಿನ ಮಾತುಕತೆಗಳ ಹೆಜ್ಜೆಗುರುತುಗಳನ್ನು ಅಥವಾ ಮುಖ್ಯ ವಿಷಯಗಳನ್ನು ಅನುಸರಿಸಿ ಈ ಸಭೆ ನಡೆಯಲಿದೆ.

ಆ ಮಾತುಕತೆಗಳು ಮತ್ತು ಅದರ ಪರಿಣಾಮವಾಗಿ ಬಂದ ಇಸ್ತಾನ್‌ಬುಲ್ ಪ್ರೋಟೋಕಾಲ್ ಒಪ್ಪಂದವನ್ನು ವಿಟ್ಕಾಫ್ ರವರು ವಿವರಿಸಿದರು, ರಷ್ಯಾ ಮತ್ತು ಅಮೇರಿಕ ಎರಡೂ, ಆ ಕರಡು ಒಪ್ಪಂದಗಳನ್ನು ಉಕ್ರೇನ್ ಶಾಂತಿ ಒಪ್ಪಂದಕ್ಕೆ ಸಂಭಾವ್ಯ ಆಧಾರವಾಗಿ ನೋಡುತ್ತವೆ ಎಂದು ದೃಢಪಡಿಸಿದರು, ಆದರೂ ಉಕ್ರೇನ್ ಅಧ್ಯಕ್ಷರು ಈ ಹಿಂದೆ ಅವುಗಳನ್ನು ಸ್ವೀಕಾರಾರ್ಹವಲ್ಲ ಎಂದು ತಿರಸ್ಕರಿಸಿದ್ದರು.

2022ರ ಇಸ್ತಾನ್‌ಬುಲ್ ಕರಡು ದಾಖಲೆಗಳು ಉಕ್ರೇನ್ ತನ್ನ NATO ಮಹತ್ವಾಕಾಂಕ್ಷೆಗಳನ್ನು ತ್ಯಜಿಸಲು ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಐದು ಖಾಯಂ ಸದಸ್ಯ ರಾಷ್ಟ್ರಗಳಾದ ಅಮೇರಿಕ, ರಷ್ಯಾ, ಚೀನಾ, ಬ್ರಿಟನ್ ಮತ್ತು ಫ್ರಾನ್ಸ್‌ನಿಂದ ಭದ್ರತಾ ಖಾತರಿಗಳಿಗೆ ಪ್ರತಿಯಾಗಿ ಶಾಶ್ವತ ತಟಸ್ಥ ಮತ್ತು ಪರಮಾಣು ಮುಕ್ತ ಸ್ಥಾನಮಾನವನ್ನು ಸ್ವೀಕರಿಸಲು ನಿರ್ಬಂಧಿಸುತ್ತಿತ್ತು.

ಆದಾಗ್ಯೂ, ದಾಳಿಯ ಸಂದರ್ಭದಲ್ಲಿ ಉಕ್ರೇನ್‌ಗೆ ಸಹಾಯ ಮಾಡಲು ಖಾತರಿ ನೀಡುವ ರಾಷ್ಟ್ರಗಳ ಕ್ರಮಗಳ ಮೇಲೆ ವೀಟೋ ಮಾಡುವ ಹಕ್ಕನ್ನು ಒಳಗೊಂಡ ರಷ್ಯಾದ ಬೇಡಿಕೆಗಳ ಬಗ್ಗೆ ಎರಡೂ ಕಡೆಯವರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರು.

ಮೂರು ವರ್ಷಗಳ ನಂತರ, ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ರವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸುತ್ತಾ, ಪ್ರಸ್ತುತ ಮಾತುಕತೆಗಳು ಇಸ್ತಾನ್‌ಬುಲ್ ಒಪ್ಪಂದಗಳನ್ನು ಆರಂಭಿಕ ಹಂತವಾಗಿ ಹೊಂದಿರಬಹುದು ಎಂದು ಹೇಳಿದರು.

ಉಕ್ರೇನ್‌ನ ವಿದೇಶಾಂಗ ಸಚಿವಾಲಯದ ವಕ್ತಾರರು ಕಳೆದ ವಾರ ಕೈವ್‌ಗೆ ಇಸ್ತಾನ್‌ಬುಲ್ ದಾಖಲೆಗಳನ್ನು ಶಾಂತಿ ಮಾತುಕತೆಗಳಿಗೆ ಆಧಾರವಾಗಿ ಬಳಸಲು ಅಮೇರಿಕದಿಂದ ಯಾವುದೇ ಪ್ರಸ್ತಾಪಗಳು ಬಂದಿಲ್ಲ ಎಂದು ಹೇಳಿದರು ಮತ್ತು ಡಿಸೆಂಬರ್‌ನಲ್ಲಿ ಅಧ್ಯಕ್ಷ ಝೆಲೆನ್ಸ್ಕಿರವರು ಇಸ್ತಾನ್‌ಬುಲ್ ವಿಧಾನವನ್ನು ತಿರಸ್ಕರಿಸಿದರು, ಇದು ಅವರ ದೇಶದ ಶರಣಾಗತಿಯ ಅಗತ್ಯವಿರುವ ಅಂತಿಮ ಎಚ್ಚರಿಕೆ ಎಂದು ವಿವರಿಸಿದರು.

2022ರ ಮಾತುಕತೆಗಳಲ್ಲಿ ಭಿನ್ನಾಭಿಪ್ರಾಯದ ಇತರ ಅಂಶಗಳೆಂದರೆ ಉಕ್ರೇನ್‌ನ ಸಶಸ್ತ್ರ ಪಡೆಗಳ ಗಾತ್ರ ಮತ್ತು ಅದರ ಟ್ಯಾಂಕ್‌ಗಳು, ಕ್ಷಿಪಣಿಗಳು, ಯುದ್ಧ ವಿಮಾನಗಳು ಮತ್ತು ಇತರ ಶಸ್ತ್ರಾಸ್ತ್ರಗಳ ಸಂಖ್ಯೆಯಲ್ಲಿ ಆಳವಾದ ಕಡಿತಕ್ಕಾಗಿ ರಷ್ಯಾದ ಬೇಡಿಕೆ.
 

07 ಮಾರ್ಚ್ 2025, 12:54