MAP

Protest in Istanbul against the detention of Istanbul mayor Imamoglu Protest in Istanbul against the detention of Istanbul mayor Imamoglu  (ANSA)

ಟರ್ಕಿಯಲ್ಲಿ 1,133 ಜನರ ಬಂಧನ

ದೇಶಾದ್ಯಂತ ಐದು ದಿನಗಳ ಪ್ರತಿಭಟನೆಗಳಲ್ಲಿ 1,133 ಜನರನ್ನು ಬಂಧಿಸಲಾಗಿದೆ ಎಂದು ಟರ್ಕಿಶ್ ಸರ್ಕಾರ ವರದಿ ಮಾಡಿದೆ.

ನಾಥನ್ ಮೊರ್ಲೆ

ದೇಶಾದ್ಯಂತ ಐದು ದಿನಗಳ ಪ್ರತಿಭಟನೆಗಳಲ್ಲಿ 1,133 ಜನರನ್ನು ಬಂಧಿಸಲಾಗಿದೆ ಎಂದು ಟರ್ಕಿಶ್ ಸರ್ಕಾರ ವರದಿ ಮಾಡಿದೆ.

ವಿವಿಧ ನಗರಗಳು ಮತ್ತು ಪಟ್ಟಣಗಳಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ರಾತ್ರಿಯ ಘರ್ಷಣೆಗಳು ಭುಗಿಲೆದ್ದವು.

ಇಸ್ತಾಂಬುಲ್ ನ ಮೇಯರ್ ಎಕ್ರೆಮ್ ಇಮಾಮೊಗ್ಲುರವರು, ಅಧ್ಯಕ್ಷ ತಯ್ಯಿಪ್ ಎರ್ಡೊಗನ್ ರವರ ಪ್ರಮುಖ ವಿಮರ್ಶಕ, ಭ್ರಷ್ಟಾಚಾರದ ಆರೋಪದ ಮೇಲೆ ಬುಧವಾರ ಬಂಧಿಸಿದ ನಂತರ ಅಶಾಂತಿ ಪ್ರಾರಂಭವಾಯಿತು.ಇಮಾಮೊಗ್ಲುರವರು, ವಿರೋಧ ಪಕ್ಷದ ರಿಪಬ್ಲಿಕನ್ ಪೀಪಲ್ಸ್ ಪಾರ್ಟಿಯಲ್ಲಿ (ವಿರೋಧ ಪಕ್ಷದ ಜನರ ಗಣರಾಜ್ಯ ಪಕ್ಷ -CHP) ಪ್ರಮುಖ ವ್ಯಕ್ತಿ ಮತ್ತು ಟರ್ಕಿಯ ಅತಿದೊಡ್ಡ ನಗರದ ಮೇಯರ್, ಎರ್ಡೊಗನ್‌ನ ಅತ್ಯಂತ ಅಸಾಧಾರಣ ಪ್ರತಿಸ್ಪರ್ಧಿ ಎಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದ್ದಾರೆ.

ಕಳೆದ ವರ್ಷದ ಕೌನ್ಸಿಲ್ ಚುನಾವಣೆಗಳಲ್ಲಿ ಇಸ್ತಾನ್‌ಬುಲ್‌ನಲ್ಲಿ ಸತತ ಎರಡನೇ ಜನಾದೇಶವನ್ನು ಪಡೆಯುವ ಮೂಲಕ 54 ವರ್ಷದ ಎರ್ಡೋಗನ್ ಮತ್ತು ಅವರ ಆಡಳಿತಾರೂಢ ಎಕೆ ಪಕ್ಷವನ್ನು ದಿಗ್ಭ್ರಮೆಗೊಳಿಸಿದರು.

ಉಲ್ಬಣಗೊಳ್ಳುತ್ತಿರುವ ಪರಿಸ್ಥಿತಿಗೆ ಪ್ರತಿಕ್ರಿಯೆಯಾಗಿ, ಯುರೋಪಿನ ಆಯೋಗವು, ದೇಶವು ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿಹಿಡಿಯಲು ಕರೆ ನೀಡಿತು, ಯುರೋಪ್ ಕೌನ್ಸಿಲ್ ಸದಸ್ಯರಾಗಿ ಮತ್ತು ಯುರೋಪಿನ ಒಕ್ಕೂಟದ ಸದಸ್ಯತ್ವದ ಅಭ್ಯರ್ಥಿಯಾಗಿ ಅದರ ಜವಾಬ್ದಾರಿಗಳನ್ನು ಒತ್ತಿಹೇಳಿತು.

"ಟರ್ಕಿಯು ಯುರೋಪ್‌ಗೆ ಲಂಗರು ಹಾಕಬೇಕೆಂದು ನಾವು ಬಯಸುತ್ತೇವೆ, ಆದರೆ ಇದಕ್ಕೆ ಪ್ರಜಾಪ್ರಭುತ್ವದ ನಿಯಮಗಳು ಮತ್ತು ಅದರ ಅಭ್ಯಾಸಗಳಿಗೆ ಸ್ಪಷ್ಟ ಬದ್ಧತೆಯ ಅಗತ್ಯವಿದೆ" ಎಂದು ಆಯೋಗದ ವಕ್ತಾರ ಗುಯಿಲೌಮ್ ಮರ್ಸಿಯರ್ ರವರು ಹೇಳಿದರು.

ಗ್ರೀಕ್ ಸರ್ಕಾರವು ಸಹ ಕಳವಳ ವ್ಯಕ್ತಪಡಿಸಿತು, ಟರ್ಕಿಯಲ್ಲಿನ ಬೆಳವಣಿಗೆಗಳನ್ನು "ಆತಂಕಕಾರಿ" ಎಂದು ವಿವರಿಸುತ್ತದೆ ಮತ್ತು ಕಾನೂನು ಹಾಗೂ ನಾಗರಿಕ ಸ್ವಾತಂತ್ರ್ಯಗಳನ್ನು ದುರ್ಬಲಗೊಳಿಸುವುದನ್ನು "ಸಹಿಸಲು ಸಾಧ್ಯವಿಲ್ಲ" ಎಂದು ಹೇಳಿದೆ.
 

24 ಮಾರ್ಚ್ 2025, 12:43