ದಕ್ಷಿಣ ಸುಡಾನ್ ನಲ್ಲಿ ಸಂಘರ್ಷದ ಹೊಸ ಬೆದರಿಕೆ
ನಾಥನ್ ಮೊರ್ಲೆ
ನಿಕೋಲಸ್ ಹೇಸಮ್ ನ ಪರಿಸ್ಥಿತಿಯನ್ನು "ಭಯಾನಕ" ಎಂದು ವಿವರಿಸಿದರು, ಅಧ್ಯಕ್ಷ ಸಾಲ್ವಾ ಕಿರ್ ರವರು ಮತ್ತು ಉಪಾಧ್ಯಕ್ಷ ರಿಕ್ ಮಚಾರ್ ರವರ ವೈಯಕ್ತಿಕ ಹಿತಾಸಕ್ತಿಗಳಿಗಿಂತ ತಮ್ಮ ಜನರ ಅಗತ್ಯಗಳಿಗೆ ಆದ್ಯತೆ ನೀಡುವಂತೆ ಒತ್ತಾಯಿಸಿದರು.
ಹಲವು ವರ್ಷಗಳ ಸಂಘರ್ಷದ ನಂತರ ದಕ್ಷಿಣ ಸುಡಾನ್ 2011ರಲ್ಲಿ ಸುಡಾನ್‌ನಿಂದ ಸ್ವಾತಂತ್ರ್ಯವನ್ನು ಗಳಿಸಿತು, ಆದರೆ ಜನಾಂಗೀಯ ವಿಭಜನೆಗಳು 2013ರಲ್ಲಿ ದೇಶವನ್ನು ಮತ್ತೆ ಅಂತರ್ಯುದ್ಧದಲ್ಲಿ ಮುಳುಗಿಸಿತು.
ಸುಡಾನ್‌ನಲ್ಲಿ, ನಡೆಯುತ್ತಿರುವ ಅಂತರ್ಯುದ್ಧದಲ್ಲಿ ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆಗಳ (ಆರ್‌ಎಸ್‌ಎಫ್) ವಿರುದ್ಧ ಮಹತ್ವದ ವಿಜಯವನ್ನು ಗುರುತಿಸುವ ಮೂಲಕ, ಖಾರ್ಟೂಮ್‌ನಲ್ಲಿರುವ ಅಧ್ಯಕ್ಷೀಯ ಅರಮನೆಯನ್ನು ಸೇನೆಯು ಪುನಃ ವಶಪಡಿಸಿಕೊಂಡಿತು.
ಸುಡಾನ್‌ನ ಮಾಹಿತಿ ಸಚಿವ ಖಲೀದ್ ಅಲ್-ಐಸರ್ ರವರು ಮಿಲಿಟರಿಯ ಯಶಸ್ಸನ್ನು ದೃಢಪಡಿಸಿ, ಧ್ವಜವನ್ನು ಎತ್ತಿ ಹಿಡಿದರು, ಅರಮನೆಯು ಹಿಂತಿರುಗಿದೆ ಮತ್ತು ವಿಜಯವು ಪೂರ್ಣಗೊಳ್ಳುವವರೆಗೆ ನಮ್ಮ ಪ್ರಯಾಣ ಮುಂದುವರಿಯುತ್ತಲೇ ಇರುತ್ತದೆ ಎಂದು ಹೇಳಿದರು.
ಸುಡಾನ್‌ನಲ್ಲಿನ ಸಂಘರ್ಷವನ್ನು ವಿಶ್ವಸಂಸ್ಥೆಯ ಮಕ್ಕಳ ಏಜೆನ್ಸಿಯ ಮುಖ್ಯಸ್ಥರು ವಿಶ್ವದ ಅತಿದೊಡ್ಡ ಮಾನವೀಯ ಬಿಕ್ಕಟ್ಟು ಎಂದು ವಿವರಿಸಿದ್ದಾರೆ.
ಹತ್ತು ಸಾವಿರ ಜನರು ಕೊಲ್ಲಲ್ಪಟ್ಟಿದ್ದಾರೆ, ಲಕ್ಷಾಂತರ ಜನರು ಸ್ಥಳಾಂತರಗೊಂಡಿದ್ದಾರೆ ಮತ್ತು ಕ್ಷಾಮವು, ಕೆಲವು ಕುಟುಂಬಗಳನ್ನು ಬದುಕಲು ಹುಲ್ಲು ತಿಂದು ಬದುಕುವ ಸ್ಥಿತಿಗೆ ಕೊಂಡುಬಂದಿದೆ.
ದೀರ್ಘಕಾಲದ ನಿರಂಕುಶಾಧಿಕಾರಿ ಅಧ್ಯಕ್ಷ ಒಮರ್ ಅಲ್-ಬಶೀರ್ ರವರನ್ನು 2019ರಲ್ಲಿ ಹೊರಹಾಕಿದ ನಂತರದ ವರ್ಷಗಳ ಅಸ್ಥಿರತೆಯಿಂದ ಬಿಕ್ಕಟ್ಟು ಉದ್ಭವಿಸಿದೆ.
2021ರಲ್ಲಿ ಮಿಲಿಟರಿಯ ಪ್ರಧಾನ ಅಧಿಕಾರಿಯ ನೇತೃತ್ವದ, ಮಿಲಿಟರಿ ದಂಗೆಯಿಂದ ಪ್ರಜಾಪ್ರಭುತ್ವಕ್ಕೆ ಸಂಕ್ಷಿಪ್ತ ಪರಿವರ್ತನೆ ಹಳಿತಪ್ಪಿತು. ಅಬ್ದೆಲ್ ಫತ್ತಾಹ್ ಅಲ್-ಬುರ್ಹಾನ್ ಮತ್ತು ಮೊಹಮ್ಮದ್ ಹಮ್ದಾನ್ ದಗಾಲೊರವರು. 2023ರ ಹೊತ್ತಿಗೆ, ಸುಡಾನ್ ಸೈನ್ಯ ಮತ್ತು ಆರ್‌ಎಸ್‌ಎಫ್ ನಡುವಿನ ಪೂರ್ಣ ಪ್ರಮಾಣದ ಹೋರಾಟಕ್ಕೆ ಉದ್ವಿಗ್ನತೆಗಳು ಉಲ್ಬಣಗೊಂಡವು.
ಎರಡೂ ಕಡೆಯವರು ಯುದ್ಧದ ಉದ್ದಕ್ಕೂ ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪಗಳನ್ನು ಎದುರಿಸಿದ್ದಾರೆ.