ಇಸ್ರಯೇಲ್‌ನ ಗಾಜಾ ನೆರವು ಕಡಿತವನ್ನು 'ಹಸಿವು ನೀತಿ' ಎನ್ನಲಾಗಿದೆ
ಲಿಂಡಾ ಬೋರ್ಡೋನಿ
ಗಾಜಾದ 2 ಮಿಲಿಯನ್ ಜನರಿಗೆ ಆಹಾರ, ಇಂಧನ, ಔಷಧ ಮತ್ತು ಇತರ ಸರಬರಾಜುಗಳನ್ನು ಇಸ್ರಯೇಲ್ ಕಡಿತಗೊಳಿಸಿರುವುದರಿಂದ ಬೆಲೆಗಳು ಗಗನಕ್ಕೇರಿವೆ ಮತ್ತು ಮಾನವೀಯ ಗುಂಪುಗಳು ಕ್ಷೀಣಿಸುತ್ತಿರುವ ದಾಸ್ತಾನುಗಳನ್ನು ಅತ್ಯಂತ ದುರ್ಬಲರಿಗೆ ವಿತರಿಸಲು ಪ್ರಯತ್ನಿಸುತ್ತಿವೆ.
ಜನವರಿಯಲ್ಲಿ ಇಸ್ರಯೇಲ್ ಮತ್ತು ಹಮಾಸ್ ಒಪ್ಪಿಕೊಂಡ ಕದನ ವಿರಾಮ ಒಪ್ಪಂದದ ಮೊದಲ ಹಂತದ ಅವಧಿಯಲ್ಲಿ ಕಳೆದ ಆರು ವಾರಗಳಲ್ಲಿ ಬರಗಾಲವನ್ನು ನಿವಾರಿಸಲು ನೆರವು ಕಾರ್ಯಕರ್ತರು ಸಾಧಿಸಿರುವ ಪ್ರಗತಿಗೆ, ʻಈ ನೆರವು ಸ್ಥಗಿತವುʼ ಅಡ್ಡಿಯಾಗಿದೆ.
16 ತಿಂಗಳಿಗೂ ಹೆಚ್ಚು ಕಾಲ ನಡೆದ ಯುದ್ಧದ ನಂತರ, ಗಾಜಾದ ಜನಸಂಖ್ಯೆಯು ಸಂಪೂರ್ಣವಾಗಿ ಟ್ರಕ್‌ಗಳಲ್ಲಿ ಸಾಗಿಸಲಾದ ಆಹಾರ ಮತ್ತು ಇತರ ಸಹಾಯದ ಮೇಲೆ ಅವಲಂಬಿತವಾಗಿದೆ. ಹೆಚ್ಚಿನವರು ತಮ್ಮ ಮನೆಗಳಿಂದ ಸ್ಥಳಾಂತರಗೊಂಡಿದ್ದಾರೆ ಮತ್ತು ಹಲವರಿಗೆ ಆಶ್ರಯದ ಅಗತ್ಯವಿದೆ. ಟ್ರಕ್‌ಗಳು ನೆರವು ನೀಡಲು ಮಾತ್ರವಲ್ಲದೆ ಆಸ್ಪತ್ರೆಗಳು, ನೀರಿನ ಪಂಪ್‌ಗಳು, ಬೇಕರಿಗಳು ಮತ್ತು ದೂರಸಂಪರ್ಕಗಳನ್ನು ಕಾರ್ಯನಿರ್ವಹಿಸುವಂತೆ ಮಾಡಲು ಇಂಧನವು ಅಗತ್ಯವಾಗಿರುತ್ತದೆ.
ಅಮೇರಿಕದ ಕದನ ವಿರಾಮ ವಿಸ್ತರಣೆಯ ಪ್ರಸ್ತಾಪವನ್ನು ಒಪ್ಪಿಕೊಳ್ಳುವಂತೆ ಹಮಾಸ್ ಮೇಲೆ ಒತ್ತಡ ಹೇರುವುದು ಈ ಮುತ್ತಿಗೆಯ ಉದ್ದೇಶವಾಗಿದೆ ಎಂದು ಇಸ್ರಯೇಲ್ ಹೇಳುತ್ತಿದೆ. ಇಸ್ರಯೇಲ್ ಹಮಾಸ್ ಜೊತೆ ಮಾಡಿಕೊಂಡ ಒಪ್ಪಂದದ ಎರಡನೇ ಹಂತಕ್ಕೆ ತೆರಳುವುದನ್ನು ವಿಳಂಬ ಮಾಡಿದೆ, ಈ ಸಮಯದಲ್ಲಿ ಸಹಾಯದ ಹರಿವು ಮುಂದುವರಿಯಬೇಕಿತ್ತು.
'ಹಸಿವು ನೀತಿ'
ಇಸ್ರಯೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಂಗಳವಾರ, ಹಮಾಸ್ ಒಪ್ಪದಿದ್ದರೆ ಗಾಜಾಗೆ ಎಲ್ಲಾ ವಿದ್ಯುತ್ ಕಡಿತಗೊಳಿಸುವ ಸಾಧ್ಯತೆಯನ್ನು ತಳ್ಳಿಹಾಕುವುದಿಲ್ಲ ಮತ್ತು ಒತ್ತಡವನ್ನು ಹೆಚ್ಚಿಸಲು ಸಿದ್ಧರಿರುವುದಾಗಿ ಹೇಳಿದರು.
ಮಾನವ ಹಕ್ಕುಗಳ ಗುಂಪುಗಳು ಕಡಿತವನ್ನು "ಹಸಿವು ನೀತಿ" ಎಂದು ಕರೆದಿವೆ. ನಾಲ್ಕು ದಿನಗಳ ನಂತರ, ವಿಶ್ವಸಂಸ್ಥೆಯ ಪ್ರಮುಖ ಆಹಾರ ಸಂಸ್ಥೆಯಾದ ವಿಶ್ವ ಆಹಾರ ಕಾರ್ಯಕ್ರಮವು, ಒಪ್ಪಂದದ 1ನೇ ಹಂತದಲ್ಲಿ ಹಸಿದ ಜನರಿಗೆ, ಎಲ್ಲಾ ಒಳಬರುವ ಆಹಾರವನ್ನು ವಿತರಿಸುವತ್ತ ಗಮನಹರಿಸಿದ್ದರಿಂದ ಗಾಜಾದಲ್ಲಿ ಯಾವುದೇ ಪ್ರಮುಖ ಆಹಾರ ದಾಸ್ತಾನು ಇಲ್ಲ ಎಂದು ಹೇಳಿದೆ. ಬೇಕರಿಗಳು ಮತ್ತು ಅಡುಗೆಮನೆಗಳು ಎರಡು ವಾರಗಳಿಗಿಂತ ಕಡಿಮೆ ದಿನಗಳವರೆಗೆ ಕಾರ್ಯನಿರ್ವಹಿಸಲು ಅಸ್ತಿತ್ವದಲ್ಲಿರುವ ಶೇಖರಿಸಲ್ಪಟ್ಟಿರುವ ಸಾಮಾಗ್ರಿಗಳು ಸಾಕಾಗುತ್ತವೆ ಎಂದು ಹೇಳಿದೆ.
ನಾರ್ವೇಜಿಯದ ನಿರಾಶ್ರಿತರ ಮಂಡಳಿಯ ಪ್ರಕಾರ, ಗಾಜಾದಲ್ಲಿ ಡೇರೆಗಳ ದೊಡ್ಡ ದಾಸ್ತಾನು ಇಲ್ಲ ಮತ್ತು ಕದನ ವಿರಾಮದ ಮೊದಲ ಹಂತದ ಸಮಯದಲ್ಲಿ ಬಂದ ಆಶ್ರಯ ಸಾಮಗ್ರಿಗಳು ಸಾಕಷ್ಟಿಲ್ಲ ಎಂದು ಗಮನಸೆಳೆದರು.
ಆ ಸಾಮಾಗ್ರಗಳು ಸಾಕಾಗುವಂತಿದ್ದರೆ, "ಆಶ್ರಯ ಸಾಮಗ್ರಿಗಳು, ಬೆಚ್ಚಗಿನ ಬಟ್ಟೆಗಳು ಮತ್ತು ಚಿಕಿತ್ಸೆ ನೀಡಲು ಸರಿಯಾದ ವೈದ್ಯಕೀಯ ಉಪಕರಣಗಳ ಕೊರತೆಯಿಂದಾಗಿ ನವ ಕೂಸುಗಳು ಸಾಯುತ್ತಿರಲಿಲ್ಲ" ಎಂದು ಸಂಸ್ಥೆಯ ಸಂವಹನ ಮುಖ್ಯಸ್ಥರು ಹೇಳಿದರು.