ಇಥಿಯೋಪಿಯಾದ ಟೈಗ್ರೇನಲ್ಲಿನ ಉದ್ವಿಗ್ನತೆಗಳು ಹೊಸ ಸಂಘರ್ಷದ ಕಳವಳವನ್ನು ಹೆಚ್ಚಿಸುತ್ತಿವೆ
ಲಿಸಾ ಝೆಂಗಾರಿನಿ
ಇಥಿಯೋಪಿಯಾದ ಟೈಗ್ರೇನಲ್ಲಿ ಎರಡು ವರ್ಷಗಳ ಅಂತರ್ಯುದ್ಧವನ್ನು ಕೊನೆಗೊಳಿಸಿದ ಇಥಿಯೋಪಿಯಾ ಸರ್ಕಾರ ಮತ್ತು ಟೈಗ್ರೇ ಪೀಪಲ್ಸ್ ಲಿಬರೇಶನ್ ಫ್ರಂಟ್ (ಟಿಪಿಎಲ್ಎಫ್) ನಡುವೆ 2022ರಲ್ಲಿ ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದರೂ, ರಾಜಕೀಯ ಅಸ್ಥಿರತೆಯು ಈ ಪ್ರದೇಶದಲ್ಲಿ ಶಾಂತಿಗೆ ಬೆದರಿಕೆ ಹಾಕುತ್ತಿದೆ.
ಟೈಗ್ರೇಯ ಪರಿವರ್ತನೆಯ ಅಧಿಕಾರದ ನಾಯಕತ್ವದ ಮೇಲೆ ಉದ್ವಿಗ್ನತೆಯನ್ನು ಹೆಚ್ಚಿಸುವುದು
ಕಳೆದ ವರ್ಷದಿಂದ ನಿರ್ಮಾಣವಾಗುತ್ತಿರುವ ಇತ್ತೀಚಿನ ಉದ್ವಿಗ್ನತೆಗಳಿಗೆ ಕಾರಣವೆಂದರೆ ಟಿಪಿಎಲ್ಎಫ್ ನಲ್ಲಿಯೇ ಅಧಿಕಾರದ ಹೋರಾಟವಾಗಿದೆ, ಅದರ ದೀರ್ಘಕಾಲದ ನಾಯಕ ಡೆಬ್ರೆಶನ್ ಗೆಬ್ರಾಮೈಕಲ್ ರವರನ್ನು, ಅವರ ಮಾಜಿ ಉಪ ಮತ್ತು ಟೈಗ್ರೇ ಮಧ್ಯಂತರ ಆಡಳಿತದ (ಟಿಐಎ) ಮುಖ್ಯಸ್ಥ ಗೆಟಾಚೆವ್ ರೆಡಾರವರ ವಿರುದ್ಧ ಸ್ಪರ್ಧಿಸಿದ್ದಾರೆ.
ಭಿನ್ನಾಭಿಪ್ರಾಯವು ಬಹುಮಟ್ಟಿಗೆ ಇಥಿಯೋಪಿಯಾದ ಫೆಡರಲ್ ರಚನೆಯಲ್ಲಿ ಟೈಗ್ರೇ ನ್ನು ಮರುಸಂಯೋಜಿಸಲು ವಿನ್ಯಾಸಗೊಳಿಸಲಾದ ಹಗೆತನದ ಒಪ್ಪಂದದ (COHA) ಅನುಷ್ಠಾನದ ಮೇಲೆ ಕೇಂದ್ರೀಕೃತವಾಗಿದೆ. ಈ ಒಪ್ಪಂದವು ನಿಧಾನ ಮತ್ತು ನಿಷ್ಪರಿಣಾಮಕಾರಿ ಜಾರಿಗೊಳಿಸುವಿಕೆ ಎಂದು ಅವರು ಗ್ರಹಿಸಿದ್ದಕ್ಕಾಗಿ ಗೆಟಚೆವ್ ರವರನ್ನು ಡೆಬ್ರೆಶನ್ ರವರು ಬಲವಾಗಿ ಟೀಕಿಸಿದ್ದಾರೆ. ಅವರು ಟಿಐಎ ವಿಸರ್ಜನೆಗೆ ಕರೆ ನೀಡಿದ್ದು ಮಾತ್ರವಲ್ಲದೆ ಗೆಟಚೆವ್ ರವರ ಅಧಿಕಾರವನ್ನು ಅಮಾನ್ಯಗೊಳಿಸಲು ಸಕ್ರಿಯವಾಗಿ ಪ್ರಯತ್ನಿಸುತ್ತಿದ್ದಾರೆ.
ಮಾರ್ಚ್ ತಿಂಗಳ ಮಧ್ಯದಲ್ಲಿ ಉದ್ವಿಗ್ನತೆಗಳು ಅತಿ ತೀವ್ರವಾದ ಅಥವಾ ಕುದಿಯುವ ಹಂತವನ್ನು ತಲುಪಿದವು, ಡೆಬ್ರೆಶನ್‌ಗೆ ನಿಷ್ಠರಾಗಿರುವ ಟೈಗ್ರೇ ಡಿಫೆನ್ಸ್ ಫೋರ್ಸ್ (ಟಿಡಿಎಫ್) ನ ಕೆಲವು ಸದಸ್ಯರು ಟೈಗ್ರೆಯಲ್ಲಿ ಪ್ರಾದೇಶಿಕ ಆಕಾಶವಾಣಿ ಕಚೇರಿ, ಮೆಕೆಲ್ಲೆಯಲ್ಲಿನ ಮೇಯರ್ ಕಚೇರಿ ಮತ್ತು ಎರಿಟ್ರಿಯನ್ ಗಡಿಯುದ್ದಕ್ಕೂ ಪಟ್ಟಣಗಳನ್ನು ಒಳಗೊಂಡಂತೆ ಪ್ರಮುಖ ಸ್ಥಳಗಳನ್ನು ವಶಪಡಿಸಿಕೊಂಡರು.
ಗೆಟಾಚೆವ್ ರವರು, ಅದಕ್ಕೆ ಪ್ರತಿಕ್ರಿಯೆಯಾಗಿ, ಮೂರು ಟಿಡಿಎಫ್ ಕಮಾಂಡರ್‌ಗಳನ್ನು ಅಮಾನತುಗೊಳಿಸುವ ಮೂಲಕ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಂಡರು ಮತ್ತು ಫೆಡರಲ್ ಮಧ್ಯಸ್ಥಿಕೆಗೆ ಮನವಿ ಮಾಡಿದರು. ಈ ಉಲ್ಬಣವು ಉತ್ತರ ಇಥಿಯೋಪಿಯಾ ಮತ್ತೊಮ್ಮೆ ಪೂರ್ಣ ಪ್ರಮಾಣದ ಯುದ್ಧಕ್ಕೆ ಒಳಗಾಗಬಹುದೆಂಬ ಭಯವನ್ನು ಹೆಚ್ಚಿಸಿದೆ, ಬಹುಶಃ ಎರಿಟ್ರಿಯಾದ ನೇರ ಒಳಗೊಳ್ಳುವಿಕೆಯಿಂದ ಪೂರ್ಣ ಪ್ರಮಾಣದ ಯುದ್ಧ ಮರುಪ್ರಾರಂಭವಾಗಬಹುದು.
ಧರ್ಮಾಧ್ಯಕ್ಷರಾದ ಮೆಧಿನ್: ಮತ್ತೊಂದು ಯುದ್ಧವು ವಿನಾಶಕಾರಿ ಪರಿಣಾಮಗಳನ್ನು ಉಂಟುಮಾಡುತ್ತದೆ
ಅಡಿಗ್ರಾಟ್‌ನ ಕಥೋಲಿಕ ಪ್ರಾಂತ್ಯಾಧಿಕಾರರಾದ ಧರ್ಮಾಧ್ಯಕ್ಷ ಟೆಸ್ಫಾಸೆಲಾಸ್ಸಿ ಮೆಧಿನ್ ರವರು ಈ ಬೆಳವಣಿಗೆಗಳ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಫಿಡೆಸ್ ಏಜೆನ್ಸಿಯೊಂದಿಗೆ ಮಾತನಾಡುತ್ತಾ, ಈಗಾಗಲೇ ಅಪಾರವಾದ ನೋವನ್ನು ಸಹಿಸಿಕೊಂಡಿರುವ ಜನಸಂಖ್ಯೆಗೆ ಮತ್ತೊಂದು ಯುದ್ಧವು ತರುವ ವಿನಾಶಕಾರಿ ಪರಿಣಾಮಗಳನ್ನು ನಾನು ಎತ್ತಿ ತೋರಿಸಿದ್ದೇನೆ.
USAID ನಿಧಿಯ ಹಠಾತ್ ನಿಲುಗಡೆಯಿಂದ ಮತ್ತಷ್ಟು ಉಲ್ಬಣಗೊಂಡಿರುವ ಟೈಗ್ರೇನಲ್ಲಿನ ಭೀಕರ ಮಾನವೀಯ ಪರಿಸ್ಥಿತಿಯನ್ನು ಧರ್ಮಾಧ್ಯಕ್ಷರು ಸೂಚಿಸಿದರು.
USAID ನಿಧಿಯ ಹಠಾತ್ ನಿಲುಗಡೆಯಿಂದ ಮಾನವೀಯ ಬಿಕ್ಕಟ್ಟು ಇನ್ನಷ್ಟು ಉಲ್ಬಣಗೊಂಡಿದೆ
ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರು ನಿರ್ಧರಿಸಿದ ಈ ಅಡಚಣೆಯು ಎನ್‌ಜಿಒಗಳು, ಧಾರ್ಮಿಕ ಸಂಸ್ಥೆಗಳು ಮತ್ತು ಸರ್ಕಾರಿ ಏಜೆನ್ಸಿಗಳು ನಡೆಸುವ ನಿರ್ಣಾಯಕ ಸಹಾಯ ಕಾರ್ಯಕ್ರಮಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಕಥೋಲಿಕ ಪರಿಹಾರ ಸೇವೆಯು ಅಮೇರಿಕದ ಕಥೋಲಿಕ ಧರ್ಮಸಭೆಯ ಅಂತರಾಷ್ಟ್ರೀಯ ಮಾನವೀಯ ಸಂಸ್ಥೆಯಾಗಿದೆ, ಇದು ಇಥಿಯೋಪಿಯಾದಲ್ಲಿ ತುರ್ತು ಆಹಾರ ಸಹಾಯದ ಪ್ರಮುಖ ಪೂರೈಕೆದಾರರಲ್ಲಿ ಒಂದಾಗಿದೆ, ಅದರ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲಾಗಿದೆ, ಸಣ್ಣ ಉಪಕ್ರಮಗಳಿಗೆ ಸೀಮಿತ ಖಾಸಗಿ ಹಣ ಮಾತ್ರ ಲಭ್ಯವಿದೆ. ಈ ಮಾನವೀಯ ಅಗತ್ಯಗಳನ್ನು ಪರಿಹರಿಸಲು ಪರ್ಯಾಯ ಕಾರ್ಯತಂತ್ರದ ಕೊರತೆಯು ಬಿಕ್ಕಟ್ಟನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತದೆ, ಲಕ್ಷಾಂತರ ದುರ್ಬಲ ಜನರನ್ನು ಬೆಂಬಲವಿಲ್ಲದೆ ಅನಾಥರನ್ನಾಗಿಸಿದೆ, ಅವರ ಜನಸಂಖ್ಯೆಯ 15 ಪ್ರತಿಶತವನ್ನು ಪ್ರತಿನಿಧಿಸುವ ಆಂತರಿಕವಾಗಿ ಸ್ಥಳಾಂತರಗೊಂಡವರು ಸೇರಿದಂತೆ ಭಾರಿ ಪ್ರಮಾಣದ ಬಿಕ್ಕಟ್ಟನ್ನು ಸೃಷ್ಟಿಸುತ್ತಿದೆ.
ಟೈಗ್ರೇನಲ್ಲಿ ಜನಸಂಖ್ಯೆಯನ್ನು ಬೆಂಬಲಿಸಲು ಮುಂಚೂಣಿಯಲ್ಲಿರುವ ಧರ್ಮಸಭೆಯು
ಅಗಾಧ ಕಷ್ಟಗಳ ಹೊರತಾಗಿಯೂ, ಪೀಡಿತರಿಗೆ ಭೌತಿಕ ನೆರವು ಮತ್ತು ಆಧ್ಯಾತ್ಮಿಕ ಮಾರ್ಗದರ್ಶನ ಎರಡನ್ನೂ ಒದಗಿಸುವಲ್ಲಿ ಧರ್ಮಸಭೆಯು ನಿರ್ಣಾಯಕ ಪಾತ್ರವನ್ನು ವಹಿಸುತ್ತಿದೆ. ನಾವೆಲ್ಲಾ ಒಂದೇ ಧರ್ಮಸಭೆಯಾಗಿ ಮುಂದುವರಿಯಲು ಪ್ರಯತ್ನಿಸುತ್ತಿದ್ದೇವೆ, ಅಂತೆಯೇ, ಜನರಿಗೆ ಭರವಸೆಯನ್ನು ನೀಡಲು ಮತ್ತು ಅವರಿಗೆ ಭರವಸೆಯ ಸಂಕೇತವಾಗಿರಲು ಪ್ರಯತ್ನಿಸುತ್ತಿದ್ದೇವೆ. ಕಷ್ಟಕಾಲದಲ್ಲಿ ನಾವು ಅವರೊಂದಿಗೆ ನಿಲ್ಲಲು ಪ್ರಯತ್ನಿಸುತ್ತೇವೆ ಮತ್ತು ಯುದ್ಧದ ಆಘಾತದಿಂದ ಅವರನ್ನು ಗುಣಮುಖರಾಗಿಸಲು ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ.