MAP

Service to beatify Jozef and Wiktoria Ulma and their seven children in Markowa (September 2023) Service to beatify Jozef and Wiktoria Ulma and their seven children in Markowa (September 2023)   (ANSA)

WWIIನಲ್ಲಿ ಯೆಹೂದ್ಯರನ್ನು ರಕ್ಷಿಸಲು ಪ್ರಾಣ ಕಳೆದುಕೊಂಡವರನ್ನು ಪೋಲೆಂಡ್ ಗೌರವಿಸುತ್ತದೆ

ಯೆಹೂದ್ಯರನ್ನು ರಕ್ಷಿಸಲು ಪ್ರಾಣ ಕಳೆದುಕೊಂಡವರನ್ನು ರಾಷ್ಟ್ರೀಯ ದಿನದಂದು, ವಿಶ್ವಗುರು ದ್ವಿತೀಯ ಸಂತ ಜಾನ್ ಪೌಲ್ ರವರ ಕ್ಯಾಥೋಲಿಕ್ ಯೂನಿವರ್ಸಿಟಿ ಆಫ್ ಲುಬ್ಲಿನ್ (KUL) ದೈವಾರಾಧನಾ ವಿಧಿಯ ಮೂಲಕ ಸ್ಮರಾಣಾರ್ಥಕ ದಿನವನ್ನು ಆಚರಿಸುತ್ತದೆ ಮತ್ತು ಇತರರ ಪ್ರಾಣವನ್ನು ಉಳಿಸಲು ತಮ್ಮ ಪ್ರಾಣವನ್ನು ಕಳೆದುಕೊಂಡ ಎಲ್ಲರ ನೆನಪಿಗಾಗಿ ಪತ್ರಿಕಾಗೋಷ್ಠಿಯನ್ನು ಆಯೋಜಿಸುತ್ತದೆ.

ಮೋನಿಕಾ ಸ್ಟೋಜೊವ್ಸ್ಕಾ

ಮಾರ್ಚ್ 24 ಆಳವಾದ ಸಾಂಕೇತಿಕ ಮಹತ್ವವನ್ನು ಹೊಂದಿದೆ. 1944ರಲ್ಲಿ ಈ ದಿನದಂದು, ಉಲ್ಮಾ ಕುಟುಂಬವನ್ನು ಜರ್ಮನ್ ಜೆಂಡರ್ಮೆರಿಯು ಗಲ್ಲಿಗೇರಿಸಲಾಯಿತು. ಜೋಸೆಫ್ ಉಲ್ಮಾರವರ ಗರ್ಭಿಣಿ ಪತ್ನಿ ವಿಕ್ಟೋರಿಯಾ ಮತ್ತು ಅವರ ಆರು ಚಿಕ್ಕ ಮಕ್ಕಳನ್ನು, ಅವರು ಆಶ್ರಯಿಸುತ್ತಿದ್ದ ಎಂಟು ಯೆಹೂದ್ಯರೊಂದಿಗೆ ಕೊಲ್ಲಲ್ಪಟ್ಟರು: ಗೊಲ್ಡಾ ಗ್ರುನ್‌ಫೆಲ್ಡ್, ಲೀ ಡಿಡ್ನರ್ ಮತ್ತು ಅವಳ ಮಗಳು, ಹಾಗೆಯೇ ಸಾಲ್ ಗೋಲ್ಡ್‌ಮನ್ ಮತ್ತು ಅವನ ನಾಲ್ಕು ಗಂಡು ಮಕ್ಕಳು ಕೊಲ್ಲಲ್ಪಟ್ಟರು. 2018ರಿಂದ, ಪೋಲೆಂಡ್ ಮಾರ್ಚ್ 24 ನ್ನು ಜರ್ಮನ್ ಆಕ್ರಮಣದ ಅಡಿಯಲ್ಲಿ ಯೆಹೂದ್ಯರನ್ನು ರಕ್ಷಿಸಿದವರ ದಿನವನ್ನು, ರಾಷ್ಟ್ರೀಯ ಸ್ಮರಣಾರ್ಥ ದಿನವಾಗಿ ಸ್ಮರಿಸುತ್ತದೆ.

ಮಾರ್ಚ್ 24, 1941, ಇತಿಹಾಸದಲ್ಲಿ ಮತ್ತೊಂದು ಕರಾಳ ಅಧ್ಯಾಯವನ್ನು ಸಹ ಗುರುತಿಸುತ್ತದೆ. ಲುಬ್ಲಿನ್ ಘೆಟ್ಟೋ ಸ್ಥಾಪನೆಯಾದ ಯೆಹೂದ್ಯರ ವಿರೋಧಿ ದ್ವೇಷದ ಸಂಪೂರ್ಣ ಸಂಕೇತವಾಗಿದೆ. ಒಂದು ಕಾಲದಲ್ಲಿ ವೈವಿಧ್ಯಮಯ ಸಂಸ್ಕೃತಿಗಳು ಮತ್ತು ಧರ್ಮಗಳನ್ನು ಸ್ವೀಕರಿಸಿದ, ವಿವಿಧ ಹಿನ್ನೆಲೆಯ ನಾಗರಿಕರನ್ನು ಸಂಯೋಜಿಸುವ ನಗರವು ಈಗ ಛದುರಿಹೋಗಿದೆ. ಒಂದು ಸಂಸ್ಕೃತಿ, ಒಂದು ಧರ್ಮವನ್ನು ಬಲವಂತವಾಗಿ ತೆಗೆದುಹಾಕಲಾಯಿತು ಮತ್ತು ಬೇಲಿಯ ಹಿಂದೆ ಬೀಗ ಹಾಕಲಾಯಿತು" ಎಂದು ಲುಬ್ಲಿನ್ (KUL) ವಿಶ್ವಗುರು ದ್ವಿತೀಯ ಸಂತ ಜಾನ್ ಪೌಲ್ ರವರ ವಿಶ್ವವಿದ್ಯಾಲಯದ ಮೇಲ್ವಿಚಾರಕರಾದ ಧರ್ಮಗುರು ಪ್ರೊಫಸರ್. ಮಿರೊಸ್ಲಾವ್ ಕಲಿನೋವ್ಸ್ಕಿರವರು ಹೇಳಿದರು.

ಧೈರ್ಯ ಮತ್ತು ನಿರ್ಣಯದ ಕಾರ್ಯಗಳು
ಸೋಮವಾರದಂದು, ಸ್ಮರಾಣಾರ್ಥಕ ದಿನವನ್ನು ಗುರುತಿಸುವ ಪತ್ರಿಕಾಗೋಷ್ಠಿಯು ಲುಬ್ಲಿನ್‌ನಲ್ಲಿ ಅಧಿಕೃತ ಸ್ಮರಣಾರ್ಥಗಳಿಗೆ ಮುಂಚಿತವಾಗಿ, ಸ್ಥಳೀಯ ಮತ್ತು ಪ್ರಾದೇಶಿಕ ಅಧಿಕಾರಿಗಳು ಹಾಗೂ ಇನ್‌ಸ್ಟಿಟ್ಯೂಟ್ ಆಫ್ ನ್ಯಾಷನಲ್ ರಿಮೆಂಬರೆನ್ಸ್‌ನ ಲುಬ್ಲಿನ್ ಶಾಖೆಯ ಪ್ರತಿನಿಧಿಗಳು ಹಾಜರಿದ್ದರು. ಈ ದಿನದ ಕಾರ್ಯಕ್ರಮಗಳು ಲುಬ್ಲಿನ್‌ನ ಮಹಾಪ್ರಧಾನಾಲಯದಲ್ಲಿ ದಿವ್ಯಬಲಿಪೂಜೆಯೊಂದಿಗೆ ಪ್ರಾರಂಭವಾಯಿತು, ನಂತರ ಉಲ್ಮಾರವರ ಕುಟುಂಬಕ್ಕೆ ಸಮರ್ಪಿತವಾದ ಅಥವಾ ಮೀಸಲಾದ ಪ್ರದರ್ಶನವನ್ನು ತೆರೆಯಲಾಯಿತು. ಸ್ಲೋನಿಮ್ ಬಳಿ ಯೆಹೂದ್ಯರಿಗೆ ಆಶ್ರಯ ನೀಡಿದ್ದಕ್ಕಾಗಿ ಮರಣದಂಡನೆಗೆ ಒಳಗಾದ ಸಿಸ್ಟರ್ ಮಾರ್ಟಾ ವೊಲೊವ್ಸ್ಕಾರವರ ಮನೆಯಲ್ಲಿ ಹೂವುಗಳನ್ನು ಹಾಕಲಾಯಿತು.

ರಾಷ್ಟ್ರೀಯ ಸ್ಮರಣಾರ್ಥ ದಿನವನ್ನು ಉಲ್ಲೇಖಿಸಿ, "ಈ ದಿನವು ವಿಶೇಷ ಅರ್ಥವನ್ನು ಹೊಂದಿದೆ, ಏಕೆಂದರೆ ಇದು ಜೀವನದ ಪವಿತ್ರತೆಯ ದಿನವಾಗಿದೆ ಎಂದು ಪ್ರೊಫೆಸರ್. ಕಲಿನೋವ್ಸ್ಕಿರವರು ಒತ್ತಿಹೇಳಿದರು. ಕಿರುಕುಳಕ್ಕೊಳಗಾದ ಯೆಹೂದ್ಯರಿಗೆ ಸಹಾಯ ಮಾಡಲು ತಮ್ಮ ಪ್ರಾಣವನ್ನು ಪಣಕ್ಕಿಟ್ಟವರನ್ನು ನಾವು ಗೌರವಿಸುತ್ತೇವೆ. ಏಕೆಂದರೆ, ಅವರು ಅಪಾರ ಧೈರ್ಯ ಮತ್ತು ದೃಢತೆಯನ್ನು ಪ್ರದರ್ಶಿಸಿದರು, ಅವರು ಮತ್ತು ಅವರ ಪ್ರೀತಿಪಾತ್ರರು ಮರಣದಂಡನೆಯನ್ನು ಎದುರಿಸುತ್ತಾರೆ ಎಂದು ಸಂಪೂರ್ಣವಾಗಿ ತಿಳಿದಿದ್ದರು. ಈ ನೀತಿವಂತರ ಉದಾಹರಣೆ, ಈ ಗುಪ್ತ ವೀರರು, ಅವರ ಧೈರ್ಯಶಾಲಿ ಕಾರ್ಯಗಳ ಮುಖಾಂತರ ಅವರ ಸಾಧನೆಯು ಹಾಗೂ ತ್ಯಾಗದ ಕಾರ್ಯವು ವಿಶ್ವದೆಲ್ಲೆಡೆ ಪ್ರಕಾಶಮಾನವಾಗಿ ಹೊಳೆಯುತ್ತದೆ. ಇತರರು ನಮ್ಮ ಸಹಾಯವನ್ನು ಕೇಳಿದಾಗ ಹಿಂಜರಿಯಬೇಡಿ ಎಂದು ನಮ್ಮನ್ನು ಪ್ರೋತ್ಸಾಹಿಸುತ್ತದೆ.

ವಿದೇಶದಲ್ಲಿ ಅಷ್ಟಾಗಿ ತಿಳಿದಿಲ್ಲ
ಪೋಲೆಂಡ್‌ನಲ್ಲಿ ವ್ಯಾಪಕವಾಗಿ ತಿಳಿದಿರುವ ಉಲ್ಮಾರವರ ಕುಟುಂಬದ ಕಥೆಯು ಇತ್ತೀಚಿನವರೆಗೂ ವಿದೇಶದಲ್ಲಿ ವಾಸ್ತವಿಕವಾಗಿ ಪಸರಿಸಿಲ್ಲ, ಲುಬ್ಲಿನ್ ಕ್ಯಾಥೋಲಿಕ್ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ನಿರ್ಮಿಸಲಾದ ʼದೆ ಈವೆನ್ ಕಿಲ್ಡ್ ದಿ ಚಿಲ್ಡ್ರನ್: ದಿ ಸ್ಟೋರಿ ಆಫ್ ದಿ ಉಲ್ಮಾ ಫ್ಯಾಮಿಲಿʼ, ರಕ್ತಸಾಕ್ಷಿಗಳು ಯೆಹೂದ್ಯರಿಗೆ ಸಹಾಯ ಮಾಡಿದ ಪುಸ್ತಕದ ಸಹ-ಲೇಖಕರಾದ ಮ್ಯಾನುಯೆಲಾ ಟುಲ್ಲಿರವರು, ಅವರ ತ್ಯಾಗದ ಬಗ್ಗೆ ಒತ್ತಿ ಮಾಡಿದ್ದಾರೆ. ಯೆಹೂದ್ಯರನ್ನು ರಕ್ಷಿಸಿದವರ ಬಗ್ಗೆ ವಿದೇಶದಲ್ಲಿ ಬಹಳ ಕಡಿಮೆ ಹೇಳಲಾಗಿದೆ. ಧರ್ಮಗುರು ಪಾವೆಲ್‌ ರೈಟೆಲ್‌ ಎಂಡ್ರೈನಿಕ್‌ ರವರ ಜೊತೆಯಲ್ಲಿ ನಾವು ಇಟಲಿಯದವರಿಗೆ ಉಲ್ಮಾಸ್ ರವರ ಕಥೆಯನ್ನು ಪರಿಚಯಿಸಿದ್ದೇವೆ. ಈಗ, ಇದು ನಂಬಲಾಗದಷ್ಟು ಪ್ರಸಿದ್ಧವಾಗಿದೆ. ನಾವು ಇಂತಹ ವೀರ ಮಹಾತ್ಮರ ಕಥೆಗಳನ್ನು ಇತರ ದೇಶಗಳಿಗೆ ಹರಡುವುದರ ಮೂಲಕ, ಇಡೀ ದೇಶವನ್ನು ಈ ಸುದ್ಧಿಯನ್ನು ತಿಳಿದುಕೊಳ್ಳುವತ್ತಾ ಸ್ಥಳಾಂತರಿಸಿದ್ದೇವೆ ಎಂದು ಪತ್ರಕರ್ತ ಹಂಚಿಕೊಂಡಿದ್ದಾರೆ.

ವೀರ ಮಹಿಳೆಯರು
ಧಾರ್ಮಿಕ ಸಹೋದರಿಯರ ಯುದ್ಧಕಾಲದ ಚಟುವಟಿಕೆಗಳು ಮತ್ತು ಯೆಹೂದ್ಯ ಮಕ್ಕಳು ಹಾಗೂ ಕುಟುಂಬಗಳಿಗೆ ಅವರ ಸಹಾಯದ ಕುರಿತು ಹಲವಾರು ಅಧ್ಯಯನಗಳನ್ನು ಪ್ರಕಟಿಸಲಾಗಿದೆ. ಆದರೂ, ಸಿಸ್ಟರ್ ಮಾರ್ಟಾ ವೊಲೊವ್ಸ್ಕಾರವರಂತಹ ವ್ಯಕ್ತಿಗಳು ಹೆಚ್ಚಾಗಿ ವಿಶ್ವಕ್ಕೆ ಪರಿಚಯವಿಲ್ಲ. ಐತಿಹಾಸಿಕ ಆಯೋಗದೊಳಗೆ ಸನ್ಯಾಸಿನಿಯರ ತಂಡವು ನಡೆಸಿದ ಸಂಶೋಧನೆಯು ಪ್ರತಿ ಸಹೋದರಿಯನ್ನು ಅವರ ಹೆಸರಿನಿಂದ ಗುರುತಿಸುವ ಗುರಿಯನ್ನು ಹೊಂದಿದೆ. ಯೆಹೂದ್ಯರಿಗೆ ಸಹಾಯ ಮಾಡುವುದರಲ್ಲಿ 2,345 ಸಹೋದರಿಯರು ತಮ್ಮನ್ನು ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆಂದು ನಮಗೆ ಈಗ ತಿಳಿದಿದೆ. ಲುಬ್ಲಿನ್ ಮೂಲದ ಸಂಶೋಧಕರು ತಮ್ಮ ಜೀವನ ಮತ್ತು ಪ್ರಯತ್ನಗಳನ್ನು ದಾಖಲಿಸುವುದನ್ನು ಮುಂದುವರೆಸಿದ್ದಾರೆ ಎಂದು ಕುಲ್‌ ನಲ್ಲಿನ ಧರ್ಮಸಭೆಯ ಐತಿಹಾಸಿಕ ಭೂಗೋಳದ ಕೇಂದ್ರದ, ಸಹೋದರಿ ಡಾ. ಮೋನಿಕಾ ಕುಪ್‌ಜೆವ್ಸ್ಕಾರವರು ವಿವರಿಸಿದರು, ಅವರು ಪೋಲೆಂಡ್‌ನಲ್ಲಿನ ಸ್ತ್ರೀ ಧಾರ್ಮಿಕ ಆದೇಶಗಳ ಪ್ರಮುಖ ಉನ್ನತಾಧಿಕಾರಿಗಳ ಸಮ್ಮೇಳನದ ಐತಿಹಾಸಿಕ ಆಯೋಗದ ಅಧ್ಯಕ್ಷರೂ ಆಗಿದ್ದಾರೆ.

ಈ ಕೆಚ್ಚೆದೆಯ ಮಹಿಳೆಯರು ಪೋಲೆಂಡ್‌ನ ಹಲವಾರು ಸಭೆಗಳಿಂದ ಬಂದಿದ್ದಾರೆ ಎಂದು ಅವರು ಹೇಳಿದರು - ಎರಡೂ ಸಭೆಗಳು ಏಕಾಂತ ಮಠವಾಸಿಗಳು ಮತ್ತು ಅವರ ಸೇವೆಯಲ್ಲಿ ಸಕ್ರಿಯರಾಗಿದ್ದರು, ಸನ್ಯಾಸಿನಿಯರು ಧರಿಸುವ ಬಟ್ಟೆಗಳನ್ನು ಧರಿಸಿದ್ದರು. ಇತರ ಯುರೋಪಿನ ದೇಶಗಳಲ್ಲಿ ಯೆಹೂದ್ಯರನ್ನು ರಕ್ಷಿಸುವುದು ತುಂಬಾ ಸುಲಭವಾಗಿತ್ತು, ಆದರೆ ಪೋಲೆಂಡ್‌ನಲ್ಲಿ ಅಂತಹ ಕೃತ್ಯಗಳಿಗೆ ಮರಣದಂಡನೆ ವಿಧಿಸಲಾಯಿತು.

ಯಾಜಕರು ಯೆಹೂದ್ಯರನ್ನು ರಕ್ಷಿಸುವ ವಿಶಿಷ್ಟ ಸಾಕ್ಷ್ಯಗಳು
ಕಥೋಲಿಕ-ಯೆಹೂದ್ಯ ಸಂಬಂಧಗಳಿಗಾಗಿ ಅಬ್ರಹಾಂ ಜೆ. ಹೆಸ್ಚೆಲ್ ಕೇಂದ್ರದ ಕೆಲಸದ ಮೂಲಕ, ಲುಬ್ಲಿನ್‌ನ ಕಥೋಲಿಕ ವಿಶ್ವವಿದ್ಯಾಲಯವು ಪೋಲೆಂಡ್‌ನಲ್ಲಿ ಮಾತ್ರವಲ್ಲದೆ ಜಾಗತಿಕವಾಗಿ ಯೆಹೂದ್ಯರ ಪರಂಪರೆಯ ಸ್ಮರಣೆಯನ್ನು ಸಂರಕ್ಷಿಸುತ್ತದೆ. ಅಂತಹ ಒಂದು ಪ್ರಯತ್ನವೆಂದರೆ ಉಲ್ಮಾರವರ ಕುಟುಂಬದ ಪುಸ್ತಕ, ಹಾಗೆಯೇ ವಕೀಲ ಮತ್ತು ಇತಿಹಾಸಕಾರ ರಿಸ್ಜಾರ್ಡ್ ಟಿಂಡಾರ್ಫ್ ರವರ ಎರಡು-ಸಂಪುಟಗಳ ಇಂಗ್ಲಿಷ್ ಭಾಷೆಯ ಮೊನೊಗ್ರಾಫ್, "ಪೋಲೆಂಡ್‌ನ ಕಥೋಲಿಕ ಯಾಜಕರಿಂದ ಯೆಹೂದ್ಯರ ಯುದ್ಧಕಾಲದ ರಕ್ಷಣೆ" ಎಂಬ ಶೀರ್ಷಿಕೆಯನ್ನು ಹೊಂದಿದೆ. ಈ ವಿಸ್ತಾರವಾದ, 1,200-ಪುಟದ ಕೆಲಸವು ಆನ್‌ಲೈನ್‌ನಲ್ಲಿ https://tiny.pl/s8xxn5vc ನಲ್ಲಿ ಉಚಿತವಾಗಿ ಲಭ್ಯವಿದೆ. ಪುಸ್ತಕವು ಪ್ರಾಥಮಿಕವಾಗಿ ಹತ್ಯಾಕಾಂಡದ ಸಮಯದಲ್ಲಿ ಪೋಲೆಂಡ್‌ನಲ್ಲಿ ಧಾರ್ಮಿಕ ಸಹೋದರಿಯರು ಮತ್ತು ಯಾಜಕರಿಂದ ರಕ್ಷಿಸಲ್ಪಟ್ಟ ಯೆಹೂದ್ಯರ ಸಾಕ್ಷ್ಯಗಳನ್ನು ಒಳಗೊಂಡಿದೆ.
 

24 ಮಾರ್ಚ್ 2025, 12:59