ಶಾಂತಿ ಮತ್ತು ಏಕತೆಗಾಗಿ ಒಂದು ಕವಿತೆ
ಫ್ರಾನ್ಸೆಸ್ಕಾ ಮೆರ್ಲೊ
ಕತ್ತಲೆಯಿಂದ ಬಂದ ಒಂದು ಧ್ವನಿಯು,
‘ವಿಪತ್ತಿನ ತೀವ್ರ, ಪರಿಚಿತ ಕಲ್ಪನೆಯನ್ನು ಹೊರಹಾಕಲು ಕವಿಗಳು
ನಮಗೆ ಶಾಂತಿಯ ಕಲ್ಪನೆಯನ್ನು ನೀಡಬೇಕು.
ಶಾಂತಿಯೆಂದರೆ, ಕೇವಲ ಯುದ್ಧವಿಲ್ಲದೆ ಇರುವುದಲ್ಲ.
ಇಂದು ನಾವು ಒಗ್ಗಿಕೊಂಡಿರುವ ವಿಪತ್ತಿನ ದೃಷ್ಟಿಕೋನವನ್ನು ಮರೆಮಾಚಲು ಮತ್ತು ನಮಗೆ ಸಹಾಯ ಮಾಡಲು, ಕವಿಗಳು ತಮ್ಮ ಪದಗಳನ್ನು ಬುದ್ಧಿವಂತಿಕೆಯಿಂದ ಬಳಸುವಂತೆ ಡೆನಿಸ್ ಲೆವರ್ಟೋವ್ ರವರು ಕವಿಗಳಿಗೆ ಒಂದು ಸರಳ ವಿನಂತಿಯನ್ನು ಮಾಡುತ್ತಾರೆ. ಅವರ ಮನವಿಯು ಈ ವರ್ಷದ ವಿಶ್ವ ಕಾವ್ಯ ದಿನದ ಧ್ಯೇಯವಾಕ್ಯವಾದ "ಶಾಂತಿ ಮತ್ತು ಏಕತೆಗಾಗಿ ಕಾವ್ಯ" ವನ್ನು ಪ್ರತಿಧ್ವನಿಸುತ್ತದೆ. ಯುದ್ಧದ ಅನುಪಸ್ಥಿತಿ ಮಾತ್ರವಲ್ಲ, ಶಾಂತಿಯನ್ನು ಬಯಸಿದ ಏಕೈಕ ಕವಿ ಬರೀ ಆಕೆ ಮಾತ್ರ ಅಲ್ಲ ಅಥವಾ ವಿಪತ್ತಿನ ವೈಭವೀಕರಣವನ್ನು ಪ್ರಶ್ನಿಸಿದ ವ್ಯಕ್ತಿಗಳಲ್ಲಿ ಅವರೇ ಮೊದಲಿಗರೂ ಅಲ್ಲ.
ಲೆವರ್ಟೋವ್ ರವರು ಸ್ಪಷ್ಟತೆಯೊಂದಿಗೆ ಬರೆದಂತೆ ಇದೆ, ಇತರರು ಯುದ್ಧದ ಹುಚ್ಚುತನ ಮತ್ತು ಅದರ ಸಾಮಾನ್ಯೀಕರಣವನ್ನು ಇದೇ ರೀತಿ ಖಂಡಿಸಿದ್ದಾರೆ. "ಓ ಸಿಡಿಗುಂಡೇ, ನಾನು ನಿನ್ನನ್ನು ಪ್ರೀತಿಸುತ್ತೇನೆ ಮತ್ತು ನಿನ್ನ ಘರ್ಜನೆಯನ್ನು ಚುಂಬಿಸಲು ಬಯಸುತ್ತೇನೆ" ಎಂದು ಗ್ರೆಗೊರಿ ಕೊರ್ಸೊರವರು ಬರೆಯುತ್ತಾರೆ. ಈ ವ್ಯಂಗ್ಯದೊಂದಿಗೆ, ಕೊರ್ಸೊರವರು ಕೂಡ ಸಂಘರ್ಷದ ದುರಂತ ಅಸಂಬದ್ಧತೆಯನ್ನು ಎತ್ತಿ ತೋರಿಸುತ್ತಾರೆ.
ಪಶ್ಚಿಮದ ರಾಜಕೀಯ ನಾಯಕರು ಶಸ್ತ್ರಾಸ್ತ್ರಗಳನ್ನು ಮರುಸಜ್ಜುಗೊಳಿಸುವ ಮತ್ತು ಸಂಗ್ರಹಿಸುವ ಬಗ್ಗೆ ಮಾತನಾಡುತ್ತಿದ್ದರೂ, ಯುದ್ಧದ ಹಾಗೂ ಸಂಘರ್ಷಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೂ, ಪ್ರಪಂದಾದ್ಯಂತದ ಕವಿಗಳು ಶಾಂತಿಗಾಗಿ ಪ್ರತಿಪಾದಿಸುವುದನ್ನು ಮುಂದುವರೆಸುತ್ತಾರೆ. ಮಾರ್ಚ್ 21 ರಂದು ವಿಶ್ವ ಕಾವ್ಯ ದಿನವು ಶಾಂತಿ ಮತ್ತು ಮರು-ಮಾನವೀಕರಣದ ಶಕ್ತಿಯಾಗಿ ಕಾವ್ಯ ಅಥವಾ ಕವಿತೆಗಳನ್ನು ಸೇರಿದಂತೆ ಕಲೆಯ ಪಾತ್ರದ ಮೇಲೆ ಬೆಳಕು ಚೆಲ್ಲುತ್ತದೆ.
ಸಾರ್ವತ್ರಿಕ ಭಾಷೆಯಾಗಿ ಕಾವ್ಯ
ಪದಗಳು ಪ್ರಬಲವಾದ ಸಾರ್ವತ್ರಿಕ ಸಾಧನವಾಗಿದ್ದು, ಪದಗಳನ್ನು ಸರಿಯಾಗಿ ಬಳಸಿದಾಗ ಅವು ಮಾನವೀಯತೆಗೆ ಶಾಂತಿಯುತ ಭವಿಷ್ಯವನ್ನು ರೂಪಿಸುವ ಶಕ್ತಿಯನ್ನು ಹೊಂದಬಹುದು. ಅದು ನ್ಯಾಯಕ್ಕಾಗಿ ಕರೆ ನೀಡುವ ಪದ್ಯಗಳ ಸಾಮೂಹಿಕ ಪಠಣವಾಗಲಿ, ಕಾವ್ಯವು ನೇರವಾಗಿ ಹೃದಯಕ್ಕೆ ಮಾತನಾಡುತ್ತದೆ, ವಿಭಜನೆಯ ಮೇಲೆ ಏಕತೆ ಜಯಗಳಿಸುವ ಪ್ರಪಂದ ಕನಸು ಕಾಣಲು ನಮ್ಮನ್ನು ಆಹ್ವಾನಿಸುತ್ತದೆ. ಈ ಒಗ್ಗಟ್ಟಿನ ಭಾವನೆಯನ್ನು ಬೆಳೆಸುವಲ್ಲಿ ಧಾರ್ಮಿಕ ವಚನಗಳು ಬಹಳ ಹಿಂದಿನಿಂದಲೂ ಪ್ರಮುಖ ಪಾತ್ರ ವಹಿಸಿವೆ. ದಾವೀದನ ಕೀರ್ತನೆಗಳಿಂದ ಹಿಡಿದು “ದೇವರು ನನ್ನ ಕುರುಬ; ನನಗೆ ಕೊರತೆಯಾಗುವುದಿಲ್ಲ” - ರೂಮಿಯ ಅತೀಂದ್ರಿಯ ಕಾವ್ಯದವರೆಗೆ - “ನೀವು ನಿಜವಾಗಿಯೂ ಪ್ರೀತಿಸುವ ವಿಚಿತ್ರ ಆಕರ್ಷಣೆಯಿಂದ ಮೌನವಾಗಿ ಆಕರ್ಷಿತರಾಗಲು ನಿಮ್ಮನ್ನು ಮುಕ್ತರನ್ನಾಗಿ ಬಿಡಿ. ಕಾವ್ಯ ರೂಪದ ಪ್ರಾರ್ಥನೆಯು, ನಿಮ್ಮನ್ನು ದಾರಿ ತಪ್ಪಿಸುವುದಿಲ್ಲ, ದೈವಿಕ ಸಂಪರ್ಕ ಮತ್ತು ಮಾನವ ಐಕ್ಯತೆಯ ಹಂಬಲವು ನಮ್ಮೆಲ್ಲರನ್ನೂ ಸಂಪರ್ಕಿಸುವ ಮಾರ್ಗವಾಗಿದೆ. ಕಾವ್ಯವು ಹಾಡು ಮತ್ತು ಪ್ರಾರ್ಥನೆ ಹಾಗೂ ನಾವು ಜೀವಿಸುತ್ತಿರುವ ಪ್ರಪಂದ ಎಚ್ಚರಿಕೆಯ ಪ್ರತಿಬಿಂಬವಾಗಿದೆ.
ವಿಶ್ವಗುರುಗಳಿಗೆ ತನ್ನ ಹೆಸರನ್ನು ನೀಡಿದ ಅಸ್ಸಿಯ ಸಂತ ಫ್ರಾನ್ಸಿಸ್ ರವರು, ಅತ್ಯಂತ ಪ್ರೀತಿಯ ಕಾವ್ಯಾತ್ಮಕ ಪ್ರಾರ್ಥನೆಗಳನ್ನು ಬರೆದರು, ಕಾವ್ಯ ರೂಪದಲ್ಲಿ ಶಾಂತಿಗಾಗಿ ಒಂದು ಪ್ರಾರ್ಥನೆಯನ್ನು ಬರೆದರು, ಇದು ಕ್ರೈಸ್ತ ಧರ್ಮದ ಏಕತೆ ಮತ್ತು ಮಾನವ ಸಮನ್ವಯದ ಸಾರವನ್ನು ಸಾಕಾರಗೊಳಿಸುತ್ತದೆ:
"ಪ್ರಭುವೇ, ನನ್ನನ್ನು ನಿನ್ನ ಶಾಂತಿಯ ಸಾಧನವನ್ನಾಗಿ ಮಾಡು.
ದ್ವೇಷವಿರುವಲ್ಲಿ ಪ್ರೀತಿಯನ್ನು ಬಿತ್ತಲು ನನಗೆ ಅವಕಾಶ ಕೊಡು;
ನೋವಿರುವೆಡೆಯಲ್ಲಿ ಕ್ಷಮೆಯನ್ನು;
ಸಂದೇಹವಿರುವಲ್ಲಿ ವಿಶ್ವಾಸವನ್ನು;
ಹತಾಶೆ ಇರುವಲ್ಲಿ ಭರವಸೆಯನ್ನು;
ಕತ್ತಲೆ ಇರುವಲ್ಲಿ ಬೆಳಕನ್ನು;
ದುಃಖವಿರುವಲ್ಲಿ ಸಂತೋಷವನ್ನು ಬಿತ್ತಲು ನನಗೆ ಅವಕಾಶ ಕೊಡು."
ಕ್ರಿಯೆಗೆ ಕರೆ
ಹಾಗಾದರೆ, ಶಾಂತಿಯನ್ನು ನಿರ್ಮಿಸುವ ಮತ್ತು ಸತ್ಯವನ್ನು ಹಂಚಿಕೊಳ್ಳುವ ಸಾಧನವಾಗಿ ಬರೆಯುವುದು, ಮಾತನಾಡುವುದು ಮತ್ತು ಕಾವ್ಯವನ್ನು ಹಂಚಿಕೊಳ್ಳುವುದನ್ನು ಮುಂದುವರಿಸೋಣ. ಶಸ್ತ್ರಾಸ್ತ್ರಗಳ ಸದ್ದು ಶಾಂತಿಯ ಕೂಗನ್ನು ಮುಳುಗಿಸುವ ಬೆದರಿಕೆ ಹಾಕುವ ಜಗತ್ತಿನಲ್ಲಿ ನಾವು ಪ್ರಬಲವಾದ ಉತ್ತಮ ಪದಗಳನ್ನು ಆಯ್ಕೆ ಮಾಡಿಕೊಳ್ಳೋಣ. ಕಾವ್ಯವು ಒಂದು ಪ್ರಮುಖ ಶಕ್ತಿಯಾಗಿ ಉಳಿದಿದೆ, ಶಾಂತಿ ಕೇವಲ ಒಂದು ಆದರ್ಶವಲ್ಲ, ಬದಲಾಗಿ ನಾವು ನಮ್ಮ ಮಾತುಗಳ ಮೂಲಕ ಸಕ್ರಿಯವಾಗಿ ಬೆಳೆಸಬೇಕಾದ ಮತ್ತು ರಕ್ಷಿಸಬೇಕಾದ ಒಂದು ವಿಷಯ ಎಂಬುದನ್ನು ನಮಗೆ ನೆನಪಿಸುತ್ತದೆ. ನಾವು ಏನು ಮಾಡುತ್ತೇವೆ ಮತ್ತು ಏನು ಹೇಳುತ್ತೇವೆ ಎಂಬುದು ನಮ್ಮ ಪದಗಳು ನಮ್ಮನ್ನು ರೂಪಿಸುತ್ತದೆ. ರೂಮಿಯವರು ಹೇಳಿದಂತೆ "ಸೂಕ್ಷ್ಮ ಸತ್ಯ" ಎಂದರೆ: "ನೀವು ಏನನ್ನು ಪ್ರೀತಿಸುತ್ತೀರೋ ಅದು ನೀವೇ ಆಗುವಿರಿ."