ಗಾಜಾದಲ್ಲಿ ಯುದ್ಧ ಮತ್ತೆ ಆರಂಭ
ರಾಬರ್ಟೊ ಸೆಟೆರಾ
ಹದಿನೈದು ದಿನಗಳ ಹಿಂದೆ, ನಾವು ಇಸ್ರಯೇಲ್ ವಿಶ್ಲೇಷಕ ಮತ್ತು ಮಧ್ಯವರ್ತಿ ಗೆರ್ಶನ್ ಬಾಸ್ಕಿನ್ ರವರೊಂದಿಗಿನ 'ಕದನ ವಿರಾಮ ಮುಗಿದಿದೆ' ('ಲಾ ಟ್ರೆಗುವಾ ಎ ಫಿನಿಟಾ', ಇಟಾಲಿಯದ ಭಾಷೆಯಲ್ಲಿ ಇಲ್ಲಿ ಲಭ್ಯವಿದೆ) ಎಂಬ ಶೀರ್ಷಿಕೆಯ ಸಂಭಾಷಣೆಯನ್ನು ಪ್ರಕಟಿಸಿದ್ದೇವೆ. ಕೆಲವರಿಗೆ ಅದು ದುಡುಕಿನ ಕೆಲಸದಂತೆ ತೋರಿತು. ಆದರೆ ಅದು ಅತಿಯಾದ ನಿರಾಶಾವಾದದಿಂದ ಹುಟ್ಟಿಲ್ಲ. ಬದಲಿಗೆ, ಗಾಜಾದ ಭವಿಷ್ಯಕ್ಕಾಗಿ ಒಂದು ಯೋಜನೆ ಇನ್ನೂ ರೂಪುಗೊಂಡಿಲ್ಲ ಮತ್ತು ದೇಶೀಯ ರಾಜಕೀಯ ಕಾರಣಗಳು ಪರಿಣಾಮಕಾರಿ ಮತ್ತು ಶಾಶ್ವತವಾದ ಶಾಂತಿಯನ್ನು ಸಾಧಿಸುವಲ್ಲಿ ಅಡ್ಡಿಯಾಗಿ ನಿಂತಿವೆ ಎಂಬ ಸರಳ ಪರಿಗಣನೆಯಿಂದ ಇದು ಬಂದಿತು.
ಜನವರಿ 19ರ ಒಪ್ಪಂದದಲ್ಲಿ ಯೋಜಿಸಿದಂತೆ, ಕದನ ವಿರಾಮದ ಎರಡನೇ ಹಂತಕ್ಕೆ ತೆರಳುವಲ್ಲಿ ಇಸ್ರಯೇಲ್ ಕಡೆಯ ತೊಂದರೆಗಳು ಒಳ್ಳೆಯ ಸೂಚನೆ ನೀಡಲಿಲ್ಲ. ಎರಡನೇ ಹಂತಕ್ಕೆ ಪರಿವರ್ತನೆಯು ಹೆಚ್ಚು ಕಾಲ್ಪನಿಕವಾಗಿತ್ತು ಎಂಬ ಅಂಶವು, ಬೆಂಜಮಿನ್ ನೆತನ್ಯಾಹುರವರ ಸರ್ಕಾರಕ್ಕೆ ಸಂಸತ್ತಿನ ಬಹುಮತವನ್ನು ಖಾತರಿಪಡಿಸುವಲ್ಲಿ ಅನಿವಾರ್ಯವಾದ ಮಂತ್ರಿಗಳಾದ ಬೆಜಲೆಲ್ ಸ್ಮೋಟ್ರಿಚ್ ಮತ್ತು ಇಟಮಾರ್ ಬೆನ್ ಗ್ವಿರ್ ರವರು ಪ್ರತಿನಿಧಿಸುವ ತೀವ್ರ ಧಾರ್ಮಿಕ ರಾಷ್ಟ್ರೀಯವಾದಿ ಬಲಪಂಥೀಯರ ಪ್ರತಿನಿಧಿಗಳು ಹೇರಿದ ಒತ್ತಡದಿಂದ ಸೂಚಿಸಲ್ಪಟ್ಟಿದೆ.
ಅದೇ ರೀತಿ, ಗಾಜಾದ ಪ್ಯಾಲಸ್ತೀನಿಯದವರು ಇತರ ಅರಬ್ ದೇಶಗಳಿಗೆ ವಲಸೆ ಹೋಗುವಂತೆ ಒತ್ತಡ ಹೇರುವ ಅಮೆರಿಕ ಅಧ್ಯಕ್ಷ ಟ್ರಂಪ್ ರವರ ಆಘಾತಕಾರಿ ಪ್ರಸ್ತಾಪದಿಂದ ಪಕ್ಷಗಳ ನಡುವಿನ ಸಂವಾದಕ್ಕೆ ಅಡ್ಡಿಯಾಯಿತು. ಇದು ಅಂತರರಾಷ್ಟ್ರೀಯ ಸಮುದಾಯದ ಬಹುಪಾಲು ಭಾಗದಿಂದ ಮತ್ತು ಈ ದೇಶದಲ್ಲಿ, ಫೆಬ್ರವರಿ 13 ರಂದು ಯಾವುದೇ ರೀತಿಯ 'ಗಡೀಪಾರು'ಗೆ ಪವಿತ್ರ ಪೀಠಾಧಿಕಾರದ ವಿರೋಧವನ್ನು ದೃಢವಾಗಿ ಘೋಷಿಸಿದ ಕಾರ್ಡಿನಲ್ ಸೆಕ್ರೆಟರಿ ಆಫ್ ಸ್ಟೇಟ್ ಪಿಯೆಟ್ರೊ ಪರೋಲಿನ್ ರವರ ಅಸಮ್ಮತಿಯನ್ನು ಹುಟ್ಟುಹಾಕಿದ ಪ್ರಸ್ತಾಪವಾಗಿತ್ತು.
ದುರದೃಷ್ಟವಶಾತ್, ಬಾಸ್ಕಿನ್ ರವರ ಭವಿಷ್ಯವಾಣಿಯು ಸರಿಯಾಗಿದೆ ಮತ್ತು ಇಸ್ರಯೇಲ್ ನ ಸಶಸ್ತ್ರ ಪಡೆಗಳು (ಈಗ ಪ್ರಧಾನ ಅಧಿಕಾರಿ ಜಮೀರ್ ರವರ ನೇತೃತ್ವದಲ್ಲಿದ್ದಾರೆ, ಅವರನ್ನು ನೆತನ್ಯಾಹುರವರ ಹಿಂದಿನ ಹರ್ಜಿ ಹಲೇವಿಗಿಂತ ಹೆಚ್ಚು ಹತ್ತಿರವೆಂದು ಪರಿಗಣಿಸಲಾಗಿದೆ) ಏಕಪಕ್ಷೀಯವಾಗಿ ಹೊಸ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ, ಇದು ವೈಮಾನಿಕ ಬಾಂಬ್ ದಾಳಿಯೊಂದಿಗೆ ಪ್ರಾರಂಭವಾಯಿತು. ನಾನು ಬರೆಯುತ್ತಿರುವಂತೆ, ಸಂತ್ರರಸ್ತರುಗಳ ಸಂಖ್ಯೆ ಈಗಾಗಲೇ 800ಕ್ಕೆ ತಲುಪಿದೆ ಎಂದು ವರದಿಯಾಗಿದೆ, ಅದರಲ್ಲಿ ಗಮನಾರ್ಹ ಸಂಖ್ಯೆಯ ಮಕ್ಕಳೂ ಸೇರಿದ್ದಾರೆ. ಆ ಗಡಿಯಲ್ಲಿ ಉಳಿದಿರುವ ಕೆಲವೇ ವರದಿಗಾರರು ನಮಗೆ ನೀಡುವ ವೀಡಿಯೊಗಳು ಭಯಾನಕವಾಗಿದ್ದು, ಅವಶೇಷಗಳಲ್ಲಿ ಹೂತುಹೋಗಿರುವ ಮಕ್ಕಳ, ಶಿಶುಗಳ ಶವಗಳ ಮುಂದೆ ಹತಾಶರಾದ ತಾಯಂದಿರನ್ನು ತೋರಿಸುತ್ತವೆ. ಯೆಮೆನ್‌ನಲ್ಲಿ ಹೌಟಿಸ್ ಉಡಾಯಿಸಿದ ರಾಕೆಟ್‌ಗಳನ್ನು ತಡೆದ ಕೂಡಲೇ, ಹಮಾಸ್ ಟೆಲ್ ಅವೀವ್ ಕಡೆಗೆ ರಾಕೆಟ್‌ಗಳನ್ನು ಉಡಾಯಿಸುವ ಮೂಲಕ ಪ್ರತಿಕ್ರಿಯಿಸಿತು.
ಇಸ್ರಯೇಲ್ ಹೆಚ್ಚಿನ ಆಂತರಿಕ ಉದ್ವಿಗ್ನತೆಯನ್ನು ಅನುಭವಿಸುತ್ತಿದೆ. ನೆತನ್ಯಾಹುರವರ ಸರ್ಕಾರದ ವಿರುದ್ಧ ಬೀದಿ ಪ್ರದರ್ಶನಗಳು ಬೃಹತ್ ಪ್ರಮಾಣದಲ್ಲಿದ್ದವು ಮತ್ತು ಪೊಲೀಸರು ಜನಸಮೂಹವನ್ನು ಚದುರಿಸಲು ನೀರಿನ ಫಿರಂಗಿಗಳನ್ನು ಬಳಸುವ ಮೂಲಕ ಪ್ರತಿಕ್ರಿಯಿಸಿದರು. ಗಾಜಾದಲ್ಲಿ ಮತ್ತೆ ಬಾಂಬ್ ದಾಳಿ ಆರಂಭವಾಗುವುದರಿಂದ ಗಾಜಾದೊಳಗೆ ಹಮಾಸ್ ಕೈಯಲ್ಲಿರುವ ಇಸ್ರಯೇಲ್ ಒತ್ತೆಯಾಳುಗಳ ಬಿಡುಗಡೆಗೆ ಅಪಾಯ ಎದುರಾಗಬಹುದು ಎಂದು ಇಸ್ರಯೇಲ್ ನಾಗರಿಕರು ಕಳವಳ ವ್ಯಕ್ತಪಡಿಸಿದ್ದಾರೆ.
ಆದರೆ ಕಳೆದ ಕೆಲವು ಗಂಟೆಗಳಲ್ಲಿ ಸರ್ಕಾರದ ಮೇಲೆ ಮತ್ತೊಂದು ಭಾರೀ ಮೋಡ ಕಾಣಿಸಿಕೊಂಡಿದೆ. ಇಸ್ರಯೇಲ್‌ನ ಉನ್ನತ ನ್ಯಾಯಾಲಯದ ಭಿನ್ನಾಭಿಪ್ರಾಯದ ಹೊರತಾಗಿಯೂ, ಆಂತರಿಕ ಗುಪ್ತಚರ ಸೇವೆಯ ಮುಖ್ಯಸ್ಥ ಶಿನ್ ಬೆಟ್ ವಿರುದ್ಧ ಹೋರಾಡಲು ನೆತನ್ಯಾಹುರವರು ಬಯಸುತ್ತಿರುವ ದ್ವೇಷ ಇದು. ಶಿನ್ ಬೆಟ್ ರವರನ್ನು ರಾಜೀನಾಮೆ ನೀಡುವಂತೆ ಅವರು ಒತ್ತಾಯಿಸುತ್ತಿದ್ದಾರೆ. ಅಕ್ಟೋಬರ್ 7 ಕ್ಕಿಂತ ಮೊದಲು ಗುಪ್ತಚರ ಸೇವೆಯು ಒಂದು ವಿಶ್ಲೇಷಣೆಯನ್ನು ಮಂಡಿಸಿತ್ತು, ಅದರಲ್ಲಿ ನಿಜವಾಗಿ ನಡೆದಂತಹ ಘಟನೆಯ ಸಾಧ್ಯತೆಯ ಬಗ್ಗೆ ಕಾರ್ಯನಿರ್ವಾಹಕರಿಗೆ ಎಚ್ಚರಿಕೆ ನೀಡಲಾಗಿತ್ತು, ಆದರೆ ನೆತನ್ಯಾಹುರವರು ಅದನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದ್ದರು. ಶಿನ್ ಬೆಟ್ ರವರ ವರದಿಯು, ಹಮಾಸ್‌ಗೆ ಗಣನೀಯ ಪ್ರಮಾಣದ ಕತಾರ್ ನಿಧಿಯನ್ನು ರವಾನಿಸಲು ಅವಕಾಶ ನೀಡುವ ಪ್ರಧಾನಿಯವರ ನೀತಿಯ ಅಪಾಯಕಾರಿತ್ವವನ್ನು ಎತ್ತಿ ತೋರಿಸಿದೆ ಎಂದು ಹೇಳಲಾಗಿದೆ, ಈ 'ಅನುಗ್ರಹ'ವು ಹಮಾಸ್ ಇಸ್ರಯೇಲ್ ನ ವಿರುದ್ಧ ಪ್ರಮುಖ ದಾಳಿಗಳನ್ನು ನಡೆಸುವುದನ್ನು ತಡೆಯುತ್ತದೆ ಎಂದು ನಂಬಿದ್ದರು. ಇತ್ತೀಚಿನ ಗಂಟೆಗಳಲ್ಲಿ, ಇಸ್ರಯೇಲ್ ನ ಪತ್ರಿಕಾ ಮತ್ತು ದೂರದರ್ಶನಗಳು ಶಿನ್ ಬೆಟ್ ರವರ ತನಿಖೆಗಳು ಕತಾರ್‌ನಿಂದ ನೆತನ್ಯಾಹುರವರ ಮಿಲಿಟರಿ ವ್ಯವಹಾರಗಳ ವಕ್ತಾರ ಎಲಿ ಫೆಲ್ಡೆಸ್ಟೈನ್‌ಗೆ ಹಣದ ವರ್ಗಾವಣೆಯನ್ನು ಸಾಬೀತುಪಡಿಸುತ್ತವೆ ಎಂದು ಬಹಿರಂಗಪಡಿಸಿವೆ.