ಮೆಡಿಟರೇನಿಯನ್ ಸಮುದ್ರದಲ್ಲಿ ಅನೇಕ ವಲಸಿಗರು ಕಾಣೆಯಾಗಿದ್ದಾರೆ
ಲಿಂಡಾ ಬೋರ್ಡೋನಿ
ಕೆಟ್ಟ ಹವಾಮಾನದಿಂದಾಗಿ ಕಾರ್ಯಾಚರಣೆ ಹೆಚ್ಚು ಕಷ್ಟಕರವಾಗಿರುವುದರಿಂದ, ಇಟಲಿಯ ಕರಾವಳಿ ರಕ್ಷಣಾ ಪಡೆ, ಸೇನೆ ಮತ್ತು ಪೊಲೀಸರು ಹಾಗೂ ಯುರೋಪಿನ ಒಕ್ಕೂಟದ ಗಡಿ ಸಂಸ್ಥೆ ಫ್ರಾಂಟೆಕ್ಸ್ ಪೂರೈಸಿದ ವಿಮಾನಗಳ ಬೆಂಬಲವನ್ನು ಪಡೆಯುತ್ತಿದೆ ಎಂದು ಹೇಳಿಕೊಂಡಿದ್ದು, ಸಮುದ್ರದ ಅಲೆಗಳಿಂದಾಗಿ ಡಜನ್ಗಟ್ಟಲೆ ಜನರು ಸಮುದ್ರಕ್ಕೆ ಬಿದ್ದಿದ್ದಾರೆ ಎಂದು ಆ ದುರಂತದಿಂದ ಬದುಕುಳಿದು ಬಂದ ಸಂತ್ರಸ್ತರು ತಿಳಿಸಿದ್ದಾರೆ.
ಸೋಮವಾರ ಟುನೀಷಿಯಾದ ಸ್ಫ್ಯಾಕ್ಸ್ ಬಂದರಿನಿಂದ ಹೊರಟಾಗ ಕ್ಯಾಮರೂನ್, ಐವರಿ ಕೋಸ್ಟ್, ಗಿನಿಯಾ ಮತ್ತು ಮಾಲಿಯ ಸುಮಾರು 56 ಜನರು ಡಿಂಗಿಯಲ್ಲಿದ್ದರು ಎಂದು ರಕ್ಷಿಸಲ್ಪಟ್ಟವರು ತಿಳಿಸಿದ್ದಾರೆ. ಕೆಲವೇ ಗಂಟೆಗಳ ನಂತರ ಅದು ಗಾಳಿ ತುಂಬಿಕೊಂಡು ಉಬ್ಬಿಕೊಳ್ಳಲು ಪ್ರಾರಂಭಿಸಿತು.
ಮಂಗಳವಾರ ನಡೆದ ಪ್ರತ್ಯೇಕ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ, ಅಪಾಯದಲ್ಲಿರುವ ರಬ್ಬರ್ ಡಿಂಗಿಯ ಬಗ್ಗೆ ಎಚ್ಚರಿಕೆ ನೀಡಿದ ನಂತರ ಕರಾವಳಿ ಕಾವಲು ಪಡೆ ಮತ್ತೊಂದು ದೋಣಿ ಮುಳುಗುವಿಕೆಯನ್ನು ತಡೆಯಿತು ಮತ್ತು 10 ಬದುಕುಳಿದವರನ್ನು ಪತ್ತೆ ಮಾಡಿತು.
ಲ್ಯಾಂಪೆಡುಸಾ: ವಿಶ್ವಗುರು ಫ್ರಾನ್ಸಿಸ್ ರವರ ಮೊದಲ ಪ್ರೇಷಿತ ಭೇಟಿ
ಲ್ಯಾಂಪೆಡುಸಾದಲ್ಲಿ ಅವರಿಗೆ ಸಹಾಯ ಮಾಡಲಾಗುತ್ತಿದೆ, ಇದು ಯುರೋಪಿನ ಒಕ್ಕೂಟವನ್ನು ತಲುಪಲು ಬಯಸುವ ಅನೇಕ ವಲಸಿಗರಿಗೆ ಮೊದಲ ಸಂಪರ್ಕ ತಾಣವಾಗಿದೆ. 2013ರಲ್ಲಿ ತಮ್ಮ ಜಗದ್ಗುರುಗಳ ಅಧಿಕಾರ ಪದವಿಗೇರಿದ ಆರಂಭದಲ್ಲಿ ವಿಶ್ವಗುರು ಫ್ರಾನ್ಸಿಸ್ ರವರ ಮೊದಲ ಪ್ರೇಷಿತ ಭೇಟಿಯ ತಾಣ ಲ್ಯಾಂಪೆಡುಸಾ ವಾಗಿದೆ. ಸಂಘರ್ಷ ಮತ್ತು ಬಡತನದಿಂದ ಪಲಾಯನ ಮಾಡುವವರಿಗೆ ರಕ್ಷಣೆ ಮತ್ತು ಗೌರವಕ್ಕಾಗಿ ಅವರು ಮನವಿ ಮಾಡಿಕೊಂಡರು. ಇದು ಅವರ ಬೋಧನಾಧಿಕಾರದ ಮೂಲಾಧಾರಗಳಲ್ಲಿ ಒಂದಾಗಿದೆ.
ವಿಶ್ವಸಂಸ್ಥೆಯು ಕಾಣೆಯಾದ ವಲಸೆ ಯೋಜನೆಯ ವರದಿಯ ಪ್ರಕಾರ, 2014 ಮತ್ತು 2024ರ ನಡುವೆ 31,500ಕ್ಕೂ ಹೆಚ್ಚು ಜನರು, ಅವರಲ್ಲಿ ಕನಿಷ್ಠ 1,300 ಮಕ್ಕಳು ಮತ್ತು ಅಪ್ರಾಪ್ತ ವಯಸ್ಕರು, ಅಪಾಯಕಾರಿ ಮೆಡಿಟರೇನಿಯನ್ ದಾಟುವ ಸಮಯದಲ್ಲಿ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಅನೇಕ ಸಾವುಗಳು ದಾಖಲಾಗದೆ ಹೋಗುವುದರಿಂದ ಸಂಖ್ಯೆ ಹೆಚ್ಚಿರಬಹುದು ಎಂದು ಯೋಜನೆಯು ಶಂಕಿಸುತ್ತಿದೆ.
ಇಟಾಲಿಯದ ವಲಸೆ ನೀತಿ
ಇಟಾಲಿಯದ ಆಂತರಿಕ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಕಳೆದ ವರ್ಷ 66,600ಕ್ಕೂ ಹೆಚ್ಚು ಸಮುದ್ರ ವಲಸಿಗರು ಇಟಲಿಗೆ ಆಗಮಿಸಿದ್ದಾರೆ, ಇದು 2023ರ ಅಂಕಿ ಅಂಶದ ಅರ್ಧಕ್ಕಿಂತ ಕಡಿಮೆ ಮತ್ತು ಈ ವರ್ಷ ಇಲ್ಲಿಯವರೆಗೆ ಸುಮಾರು 9,000 ಜನರು ಇಟಾಲಿಯದ ತೀರವನ್ನು ತಲುಪಿದ್ದಾರೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 4% ಹೆಚ್ಚಳವಾಗಿದೆ.
ವಲಸೆಯನ್ನು ನಿರುತ್ಸಾಹಗೊಳಿಸುವ ಪ್ರಯತ್ನದಲ್ಲಿ, ಇಟಲಿಯ ಬಲಪಂಥೀಯ ಸರ್ಕಾರವು ನಿರ್ಗಮನವನ್ನು ತಡೆಗಟ್ಟುವ ಗುರಿಯನ್ನು ಹೊಂದಿರುವ ಉತ್ತರ ಆಫ್ರಿಕಾದ ದೇಶಗಳೊಂದಿಗೆ ಆರ್ಥಿಕ ಒಪ್ಪಂದಗಳಿಗೆ ಒತ್ತಾಯಿಸಿದೆ. ಇದರ ಪರಿಣಾಮವಾಗಿ ಅನೇಕ ವಲಸಿಗರನ್ನು ಮತ್ತೆ ಬಂಧನ ಕೇಂದ್ರಗಳಿಗೆ ಕರೆದೊಯ್ಯಲಾಗಿದೆ, ಮುಖ್ಯವಾಗಿ ಲಿಬಿಯಾದಲ್ಲಿ, ಅಲ್ಲಿ ಬಂಧನಕ್ಕೆ ಒಳಗಾದವರಿಗೆ, ಚಿತ್ರಹಿಂಸೆ ಮತ್ತು ದೌರ್ಜನ್ಯದ ವರದಿಗಳು ವ್ಯಾಪಕವಾಗಿವೆ.
'ಸೇವ್ ದಿ ಚಿಲ್ಡ್ರನ್' ನಿಂದ ಮನವಿ
ದುರಂತದ ಬಗ್ಗೆ ವಿಷಾದಿಸುತ್ತಾ, ಸೇವ್ ದಿ ಚಿಲ್ಡ್ರನ್ ಎಂಬ ಚಾರಿಟಿಯ ಸಾಂಸ್ಥಿಕ ಸಂಬಂಧಗಳ ನಿರ್ದೇಶಕಿ ಜಾರ್ಜಿಯಾ ಡಿ'ಎರಿಕೊರವರು ಹೇಳಿಕೆ ನೀಡಿ, "ರಾಜಕೀಯ ಮತ್ತು ಮಾಧ್ಯಮಗಳ ಗಮನವು ಹೆಚ್ಚಾಗಿ ಯುರೋಪಿನ ದೇಶಕ್ಕೆ ಮರಳುವಿಕೆಯ ನಿಯಮಗಳನ್ನು ಸುಧಾರಿಸುವ ಹೊಸ ಪ್ರಸ್ತಾಪದ ಮೇಲೆ ಕೇಂದ್ರೀಕೃತವಾಗಿದ್ದರೂ, ಸಮುದ್ರದಲ್ಲಿ ಮತ್ತೊಂದು ತಪ್ಪಿಸಬಹುದಾದ ದುರಂತ ಸಂಭವಿಸಿದೆ. ನಾವು ಈ ಸಾವುಗಳಿಗೆ ಒಗ್ಗಿಕೊಳ್ಳಲು ಸಾಧ್ಯವಿಲ್ಲ."
"ಸೇವ್ ದಿ ಚಿಲ್ಡ್ರನ್" ಸಂಸ್ಥೆಯವರು ಹೀಗೆ ಹೇಳುತ್ತಾರೆ, ಜೀವಗಳನ್ನು ಉಳಿಸಲು ಸಮುದ್ರದಲ್ಲಿ ಸಂಘಟಿತ ಮತ್ತು ರಚನಾತ್ಮಕ ಹುಡುಕಾಟ ಹಾಗೂ ರಕ್ಷಣಾ ವ್ಯವಸ್ಥೆಯನ್ನು ಸ್ಥಾಪಿಸುವ, ಅಂತರರಾಷ್ಟ್ರೀಯ ತತ್ವಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವ ಮತ್ತು ಯುರೋಪಿನ ಒಕ್ಕೂಟದ ಮೂಲಭೂತ ಮೌಲ್ಯವಾಗಿರುವ ಒಗ್ಗಟ್ಟನ್ನು ಪ್ರದರ್ಶಿಸುವ ತನ್ನ ಕರೆಯನ್ನು ಪುನರುಚ್ಚರಿಸುತ್ತದೆ. ಯುರೋಪ್ ನ್ನು ತಲುಪಲು ನಿಯಮಿತ ಮತ್ತು ಸುರಕ್ಷಿತ ಮಾರ್ಗಗಳನ್ನು ತೆರೆಯುವಂತೆ ನಾವು ಒತ್ತಾಯಿಸುತ್ತೇವೆ ಎಂದು ಹೇಳುತ್ತಿದ್ದಾರೆ.