MAP

 Talitha Kum International Women’s Day Talitha Kum International Women’s Day   (M. Mastrandrea / Talitha Kum)

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ: ಉತ್ತಮ ಭವಿಷ್ಯಕ್ಕಾಗಿ ಉಪಕ್ರಮಗಳು

ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನದಂದು, ಪ್ರಪಂದಾದ್ಯಂತದ ಸಂಸ್ಥೆಗಳು ಮಹಿಳೆಯರು ಮತ್ತು ಹುಡುಗಿಯರ ಪರಿಸ್ಥಿತಿಯನ್ನು ಉತ್ತಮಗೊಳಿಸಲು ಸಹಾಯ ಮಾಡಲು ವಿನ್ಯಾಸಗೊಳಿಸಲಾದ ಉಪಕ್ರಮಗಳೊಂದಿಗೆ ದಿನವನ್ನು ಸ್ಮರಿಸುತ್ತಿವೆ.

ಕೀಲ್ಸ್ ಗುಸ್ಸಿ

1977ರಿಂದ ಪ್ರತಿ ವರ್ಷ ಮಾರ್ಚ್ 8 ರಂದು, ವಿಶ್ವಸಂಸ್ಥೆಯು ಬಾಲ್ಯದಿಂದ ಪ್ರೌಢಾವಸ್ಥೆಯವರೆಗೆ ಜಾಗತಿಕ ಸಂದರ್ಭದಲ್ಲಿ ಮಹಿಳೆಯರ ಹಕ್ಕುಗಳು ಮತ್ತು ಪರಿಸ್ಥಿತಿಗಳನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ವಿವಿಧ ಉಪಕ್ರಮಗಳು ಮತ್ತು ಕಾರ್ಯಕ್ರಮಗಳ ಮೂಲಕ ಮಹಿಳೆಯರ ದಿನವನ್ನು ಆಚರಿಸುತ್ತದೆ.

ವಿಶ್ವಾದ್ಯಂತ ಮಾನವ ಕಳ್ಳಸಾಗಣೆಯ ಸಮಸ್ಯೆಯನ್ನು ನಿಭಾಯಿಸಲು ತಲಿತ ಕಮ್ ಅಂತರರಾಷ್ಟ್ರೀಯ ಕಳ್ಳಸಾಗಣೆ ವಿರೋಧಿ ಜಾಲವು ಹೊಸ ʼಕಾಲ್ ಟು ಆಕ್ಷನ್ʼ (ಕ್ರಮಕ್ಕಾಗಿ ಕರೆ) ನ್ನು ಪ್ರಾರಂಭಿಸಿದೆ. ಪ್ರತ್ಯೇಕವಾಗಿ, ಯುವತಿಯರಿಗೆ ಜೀವನದಲ್ಲಿ ಉತ್ತಮ ಆರಂಭವನ್ನು ನೀಡುವ ಗುರಿಯೊಂದಿಗೆ, ವಿಶ್ವಸಂಸ್ಥೆಯ ಮಕ್ಕಳ ನಿಧಿಯು ಅಫ್ಘಾನಿಸ್ತಾನದ ಹುಡುಗಿಯರು ಓದಲು ಮತ್ತು ಬರೆಯಲು, ಕಲಿಯಲು ಸಹಾಯ ಮಾಡುವ ಅಗತ್ಯವನ್ನು ಎತ್ತಿ ತೋರಿಸುವ ಒಂದು ಸಣ್ಣ ವೀಡಿಯೊವನ್ನು ಪ್ರಚಾರ ಮಾಡಿದೆ.

ಮಾನವ ಕಳ್ಳಸಾಗಣೆ ವಿರುದ್ಧ ಯುವಜನರು
ಫೆಬ್ರವರಿಯಲ್ಲಿ ನಡೆದ ಮಾನವ ಕಳ್ಳಸಾಗಣೆ ವಿರುದ್ಧದ ಅಂತರರಾಷ್ಟ್ರೀಯ ಪ್ರಾರ್ಥನೆ ಮತ್ತು ಜಾಗೃತಿ ದಿನದ 11ನೇ ಆವೃತ್ತಿಯ ಕೊನೆಯಲ್ಲಿ - 2015ರಲ್ಲಿ ವಿಶ್ವಗುರು ಫ್ರಾನ್ಸಿಸ್ ರವರು ಸ್ಥಾಪಿಸಿದ ಉಪಕ್ರಮ, ಭರವಸೆಯ ರಾಯಭಾರಿಗಳು ಎಂದು ಕರೆಯಲ್ಪಡುವ ಅಂತರರಾಷ್ಟ್ರೀಯ ಯುವಜನರ ಗುಂಪು, ಕಾಲ್ ಟು ಆಕ್ಷನ್ ಅನ್ನು ರಚಿಸಿತು.

ಮಾನವ ಕಳ್ಳಸಾಗಣೆಯಿಂದ ಬಳಲುತ್ತಿರುವವರಿಗಾಗಿ, ಪ್ರಾರ್ಥಿಸುವ ಮತ್ತು ನೋಡಿಕೊಳ್ಳುವ ರಾಯಭಾರಿಗಳ ಬದ್ಧತೆಯನ್ನು ಕಾಲ್ ಟು ಆಕ್ಷನ್ ಪುನರುಚ್ಚರಿಸಿತು ಹಾಗೂ ವಿಶ್ವಾದ್ಯಂತ ಯುವಜನರು, ಸರ್ಕಾರಗಳು, ಸಂಸ್ಥೆಗಳು ಮತ್ತು ಎಲ್ಲಾ ಹಿನ್ನೆಲೆಯ ವಿಶ್ವಾಸದ ಜನರು ಮಾನವ ಕಳ್ಳಸಾಗಣೆ ವಿರುದ್ಧ ದೃಢವಾದ ಕ್ರಮ ಕೈಗೊಳ್ಳುವಂತೆ ಕರೆ ನೀಡಿತು.

"ವಿಶ್ವಸಂಸ್ಥೆಯ ದತ್ತಾಂಶದ ಪ್ರಕಾರ," ಕಳ್ಳಸಾಗಣೆಗೆ ಬಲಿಯಾದವರಲ್ಲಿ 70% ಮಹಿಳೆಯರು ಮತ್ತು ಹುಡುಗಿಯರು" ಎಂಬ ಆತಂಕಕಾರಿ ಸಂಗತಿಯಿಂದಾಗಿ ಮಾರ್ಚ್ 8 ರಂದು ಕಾಲ್ ಟು ಆಕ್ಷನ್ ಅನ್ನು ಪ್ರಾರಂಭಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮಾನವ ಕಳ್ಳಸಾಗಣೆ ವಿರುದ್ಧದ ಅಂತರರಾಷ್ಟ್ರೀಯ ಪ್ರಾರ್ಥನೆ ಮತ್ತು ಜಾಗೃತಿ ದಿನದ ಸಂಯೋಜಕರಾದ ಸಿಸ್ಟರ್ರ್ ಅಬ್ಬಿ ಅವೆಲಿನೊರವರು ಹೇಳಿದರು.

ಅಫ್ಘಾನಿಸ್ತಾನದಲ್ಲಿ ಹುಡುಗಿಯರಿಗೆ ಭವಿಷ್ಯ ನೀಡುವುದು
ಜಾಗತಿಕವಾಗಿ, 122 ಮಿಲಿಯನ್ ಹುಡುಗಿಯರು ಶಾಲೆಗೆ ಹೋಗುತ್ತಿಲ್ಲ ಮತ್ತು ಸುಮಾರು 50 ಮಿಲಿಯನ್ ಹುಡುಗಿಯರಿಗೆ ಹಾಗೂ ಯುವತಿಯರಿಗೆ ಸರಳವಾದ ವಾಕ್ಯವನ್ನು ಓದಲು ಅಥವಾ ಬರೆಯಲು ಬರುತ್ತಿಲ್ಲ. ಈ ಸಾರ್ವತ್ರಿಕ ಸಮಸ್ಯೆಯು ವಿಶ್ವಸಂಸ್ಥೆಯ ಮಕ್ಕಳ ನಿಧಿಯ ಗಮನದಲ್ಲಿದೆ, ಇದು ಒಂದು ಸಮಯದಲ್ಲಿ ಒಂದು ಮಗುವಿನಿಂದ ಈ ನಿರೂಪಣೆಯನ್ನು ಬದಲಾಯಿಸಲು ನಿರ್ಧರಿಸಿದೆ.

ಈ ವರ್ಷದ ಅಂತರರಾಷ್ಟ್ರೀಯ ಮಹಿಳಾ ದಿನದಂದು, ಅವರು ಶಾಲೆಗೆ ಹೋಗದ ಅಫ್ಘಾನಿಸ್ತಾನದ 3.7 ಮಿಲಿಯನ್ ಮಕ್ಕಳತ್ತ ಗಮನ ಸೆಳೆಯಲು ಒಂದು ಕಿರುಚಿತ್ರವನ್ನು ಪ್ರಚಾರ ಮಾಡಿದರು - ಅವರಲ್ಲಿ 60% ಹುಡುಗಿಯರು. ಮಿಲ್ಕ್‌ ಟೀತ್‌ – ಬೀಯಿಂಗ್‌ ಯಂಗ್‌ ಗರ್ಲ್ಸ್‌ ಇನ್‌ ಅಫ್ಘಾನಿಸ್ತಾನ್

" ಮಿಲ್ಕ್‌ ಟೀತ್‌ – ಬೀಯಿಂಗ್‌ ಯಂಗ್‌ ಗರ್ಲ್ಸ್‌ ಇನ್‌ ಅಫ್ಘಾನಿಸ್ತಾನ್ (MILK TEETH - Being young girls in Afghanistan)" ಎಂಬ ಶೀರ್ಷಿಕೆಯ ಈ 9 ನಿಮಿಷಗಳ ಕಿರು ಚಲನಚಿತ್ರವು ಹುಸ್ನಿಯಾ ಎಂಬ ಯುವತಿಯನ್ನು ಒಳಗೊಂಡಿದೆ.

ಇದು "ಹಾಲಿನ ಹಲ್ಲುಗಳನ್ನು" ಕಳೆದುಕೊಳ್ಳುತ್ತಿರುವ 7 ವರ್ಷದ ಬಾಲಕಿ ಫಾತಿಮಾಳ ಕಥೆಯನ್ನು ಹೇಳುತ್ತದೆ. ಅವಳು ಹಾಲಿನ ಹಲ್ಲುಗಳನ್ನು" ಕಳೆದುಕೊಳ್ಳುತ್ತಿರುವ ವಿಷಯಕ್ಕೆ ಹೆದರುತ್ತಾಳೆ, ಏಕೆಂದರೆ ಅದು ಅವಳು ಮಹಿಳೆಯಾಗುತ್ತಿದ್ದಾಳೆ ಮತ್ತು "ತನ್ನ ದೇಶದ ಅನೇಕ ಮಹಿಳೆಯರಂತೆ ಅದೃಶ್ಯವಾಗುವಂತೆ ತಾನು ಅದೃಶ್ಯವಾಗು"ತ್ತಾಳೆ ಎಂದು ಸೂಚಿಸುತ್ತದೆ ಎಂದು ಭಯ ಪಡುತ್ತಿದ್ದಾಳೆ. ಹೀಗಾಗಿ, ಅವಳು ಶಾಶ್ವತವಾಗಿ ಮಗುವಾಗಿ ಉಳಿಯಲು ಮತ್ತು ಈ ಮಹಿಳೆ ಎಂದ ಅದೃಷ್ಟವನ್ನು ತಪ್ಪಿಸಲು ಪ್ರಯತ್ನಿಸುತ್ತಾಳೆ.

ಇಟಲಿಯದ ಯುನಿಸೆಫ್ ನ ಅಧ್ಯಕ್ಷೆ ಕಾರ್ಮೆಲಾ ಪೇಸ್ ರವರು, ಈ ವರ್ಷ ಸಂಸ್ಥೆಯು "ಹುಡುಗಿಯರು ತಮ್ಮ ಅಧ್ಯಯನವನ್ನು ಮುಂದುವರಿಸದಂತೆ ತಡೆಯುವ, ಅವರ ಭವಿಷ್ಯವನ್ನು ಪರಿಣಾಮಕಾರಿಯಾಗಿ ಸ್ಥಗಿತಗೊಳಿಸುವ ದೇಶ"ವಾದ ಅಫ್ಘಾನಿಸ್ತಾನದ ಈ ಹುಡುಗಿಯರಿಗೆ ಅಂತರರಾಷ್ಟ್ರೀಯ ಮಹಿಳೆಯರ ದಿನವನ್ನು ಅರ್ಪಿಸಲು ಬಯಸಿದೆ ಎಂದು ವಿವರಿಸಿದರು.

ಅವರಿಗೆ ಶಿಕ್ಷಣ ನೀಡುವುದರಿಂದ ಅಭಿವೃದ್ಧಿಗೆ ಅವಕಾಶಗಳು ಹೇಗೆ ಸೃಷ್ಟಿಯಾಗುತ್ತವೆ ಮತ್ತು "ದೇಶದಲ್ಲಿ ಇನ್ನೂ ವ್ಯಾಪಕವಾಗಿ ಹರಡಿರುವ ಬಾಲ್ಯ ವಿವಾಹಗಳಂತಹ ಅವರ ಹಕ್ಕುಗಳ ಉಲ್ಲಂಘನೆ, ಅಪಾಯಗಳಿಂದ ಅವರನ್ನು ರಕ್ಷಿಸುತ್ತದೆ" ಎಂದು ಶ್ರೀಮತಿ ಪೇಸ್ ರವರು ವಿವರಿಸಿದರು.
 

08 ಮಾರ್ಚ್ 2025, 11:34