MAP

Displaced Sudanese woman rests inside a shelter at Zamzam camp in North Darfur Displaced Sudanese woman rests inside a shelter at Zamzam camp in North Darfur 

ಸುಡಾನ್: ಲಕ್ಷಾಂತರ ಮಕ್ಕಳು ಹಸಿವಿನಿಂದ ಬಳಲುತ್ತಿದ್ದಾರೆ

ಸುಡಾನ್‌ನ ಉತ್ತರ ಡಾರ್ಫರ್ ಪ್ರದೇಶದಲ್ಲಿ ಲಕ್ಷಾಂತರ ಮಕ್ಕಳು ಹಸಿವಿನಿಂದ ಬಳಲುತ್ತಿದ್ದಾರೆ, ಹಿಂಸಾಚಾರವು ತೀವ್ರಗೊಂಡು, ನೆರವನ್ನು ತಡೆಯುತ್ತಿದೆ ಮತ್ತು ಈಗಾಗಲೇ ಭೀಕರಗೊಳಿಸಿರುವ ಮಾನವೀಯ ಬಿಕ್ಕಟ್ಟನ್ನು ಇನ್ನಷ್ಟು ಹದಗೆಡಿಸುತ್ತಿದೆ.

ಫ್ರಾನ್ಸೆಸ್ಕಾ ಮೆರ್ಲೊ

ಸುಡಾನ್‌ನ ಉತ್ತರ ಡಾರ್ಫರ್ ಪ್ರದೇಶದಲ್ಲಿ ಸಂಘರ್ಷವು ಉಲ್ಬಣಗೊಳ್ಳುತ್ತಿದ್ದಂತೆ, 825,000 ಮಕ್ಕಳು ಮೂಲಭೂತ ಅವಶ್ಯಕತೆಗಳಿಲ್ಲದೆ ಅಲ್ ಫಾಶರ್ ಮತ್ತು ಝಮ್‌ಝಮ್ ಶಿಬಿರಗಳಲ್ಲಿ ಸಿಕ್ಕಿಬಿದ್ದಿದ್ದಾರೆ. 2025ರ ಆರಂಭದಿಂದಲೂ, ಮಕ್ಕಳ ವಿರುದ್ಧ ಗಂಭೀರ ಉಲ್ಲಂಘನೆಗಳು ಹೊರಹೊಮ್ಮಿವೆ, ಅಲ್ ಫಾಶರ್‌ನಲ್ಲಿ ಮಾತ್ರ 70ಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟಿದ್ದಾರೆ ಹಾಗೂ ಯುದ್ಧದಿಂದ ಅಂಗವಿಕಲರಾಗಿದ್ದಾರೆ. ಝಮ್‌ಝಮ್‌ ಶಿಬಿರದಲ್ಲಿ ಶೆಲ್ ದಾಳಿ ಮತ್ತು ವಾಯುದಾಳಿಗಳನ್ನು ಪರಿಶೀಲಿಸಿದರಲ್ಲಿ ಮಕ್ಕಳ ಸಾವುನೋವುಗಳು 16% ರಷ್ಟಿದೆ, ಆದಾಗ್ಯೂ ನಿಜವಾಗಿಯೂ ಮಕ್ಕಳ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ.

ಸುಡಾನ್‌ನಲ್ಲಿರುವ ಯುನಿಸೆಫ್‌ನ ಪ್ರತಿನಿಧಿ ಶೆಲ್ಡನ್ ಯೆಟ್, “ಅಲ್ ಫಾಷರ್ ಮತ್ತು ಝಮ್‌ಝಮ್ ಶಿಬಿರದಲ್ಲಿರುವ ಮಕ್ಕಳು ಊಹಿಸಲಾಗದ ದುರಂತವನ್ನು ಎದುರಿಸುತ್ತಿದ್ದಾರೆ ಎಂದು ಎಚ್ಚರಿಸಿದ್ದಾರೆ. ಹಿಂಸೆ, ಹಸಿವು ಅಥವಾ ಅಗತ್ಯ ಸೇವೆಗಳ ಕುಸಿತದಿಂದ ಸಾವು ದೈನಂದಿನ ವಾಸ್ತವಾಗಿದೆ.

ಗುರುವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಯುನಿಸೆಫ್ ಏಪ್ರಿಲ್ 2024 ರಿಂದ, 300,000 ಮಕ್ಕಳನ್ನು ಒಳಗೊಂಡಂತೆ 600,000 ಜನರನ್ನು ಉತ್ತರ ಡಾರ್ಫರ್‌ನಿಂದ ಸ್ಥಳಾಂತರಿಸಲಾಗಿದೆ ಎಂದು ಎಚ್ಚರಿಸಿದೆ. ಕಳೆದ ಆರು ವಾರಗಳಲ್ಲಿಯೇ 60,000ಕ್ಕೂ ಹೆಚ್ಚು ಜನರು ಪಲಾಯನ ಮಾಡಿದ್ದಾರೆ. ಇದರ ಮಧ್ಯೆ, 1.65 ಮಿಲಿಯನ್ ಜನರು ಸಿಕ್ಕಿಬಿದ್ದಿದ್ದಾರೆ, ಇಲ್ಲಿ ಮಾನವೀಯ ಸಹಾಯಕ್ಕೆ ಯಾವುದೇ ಪ್ರವೇಶವಿಲ್ಲ.

ತವಿಲಾ-ಜಮ್ಜಮ್ ರಸ್ತೆಯು ಒಂದು ಕಾಲದಲ್ಲಿ ಪ್ರಮುಖ ಪೂರೈಕೆಯ ಮಾರ್ಗವಾಗಿತ್ತು. ಈಗ, ಶಸ್ತ್ರಸಜ್ಜಿತ ಗುಂಪುಗಳು ಸಹಾಯವನ್ನು ನಿರ್ಬಂಧಿಸುವುದನ್ನು ಮುಂದುವರಿಸುವುದರಿಂದ ಇದು ದುಸ್ತರವಾಗಿದೆ, ಸಮುದಾಯಗಳನ್ನು ಆಹಾರ, ನೀರು ಮತ್ತು ವೈದ್ಯಕೀಯ ಸರಬರಾಜುಗಳಿಲ್ಲದೆ ಬಿಡುತ್ತದೆ. ಆಹಾರದ ಬೆಲೆಗಳು ಮೂರು ತಿಂಗಳಲ್ಲಿ ಸುಮಾರು ದ್ವಿಗುಣಗೊಂಡಿದೆ, ಕುಟುಂಬಗಳನ್ನು ಹತಾಶೆಗೆ ತಳ್ಳಿದೆ.

ಯುನಿಸೆಫ್ ಮತ್ತು ಇತರ ಮಾನವೀಯ ಸಂಸ್ಥೆಗಳು ನೆರವು ನೀಡಲು ಶ್ರಮಿಸುತ್ತಿವೆ, ಆದರೆ ಪರಿಸ್ಥಿತಿ ನಿರ್ಣಾಯಕವಾಗಿದೆ. ಉತ್ತರ ಡಾರ್ಫರ್ 457,000 ತೀವ್ರ ಅಪೌಷ್ಟಿಕ ಮಕ್ಕಳನ್ನು ಹೊಂದಿದೆ, ಇದರಲ್ಲಿ 146,000 ತೀವ್ರ ಅಪೌಷ್ಟಿಕತೆ (SAM) ಮತ್ತು ಚಿಕಿತ್ಸಕ ಆಹಾರದ ದಾಸ್ತಾನು ಖಾಲಿಯಾಗಿದೆ.

ವೈದ್ಯಕೀಯ ಸೇವೆಗಳು ಕೂಡ ಕುಸಿಯುತ್ತಿವೆ. ಯುನಿಸೆಫ್ -ಬೆಂಬಲಿತ ಸೌಲಭ್ಯಗಳಲ್ಲಿರುವ ಆರೋಗ್ಯ ಕಾರ್ಯಕರ್ತರು ಶೆಲ್ ದಾಳಿಯಿಂದಾಗಿ ಪಲಾಯನ ಮಾಡಬೇಕಾಯಿತು, ಅನಾರೋಗ್ಯ ಮತ್ತು ಗಾಯಗೊಂಡ ಮಕ್ಕಳನ್ನು ಆರೈಕೆಯಿಲ್ಲದೆ ಬಿಡಲಾಗಿದೆ. ಆರೋಗ್ಯ, ಪೌಷ್ಠಿಕಾಂಶ ಮತ್ತು ನೀರಿನ ನೈರ್ಮಲ್ಯ ಸರಬರಾಜುಗಳು ಹತಾಶ ಅಗತ್ಯವಿರುವವರನ್ನು ತಲುಪಲು ಸಾಧ್ಯವಾಗದೆ ಸಿಕ್ಕಿಹಾಕಿಕೊಂಡಿವೆ.

ಯುನಿಸೆಫ್ ಎಲ್ಲಾ ಪಕ್ಷಗಳಿಗೆ ಸುರಕ್ಷಿತ ಮಾನವೀಯ ಪ್ರವೇಶವನ್ನು ನೀಡುವಂತೆ ಒತ್ತಾಯಿಸುತ್ತದೆ. "ಭೂಮಿಯ ಮೇಲಿನ ಈ ನರಕಕ್ಕೆ ನಾವು ಕಣ್ಣು ಮುಚ್ಚಲು ಸಾಧ್ಯವಿಲ್ಲ" ಎಂದು ಯೆಟ್ ರವರು ಎಚ್ಚರಿಸಿದ್ದಾರೆ. " ಈಗ ಜಗತ್ತು ಕಾರ್ಯನಿರ್ವಹಿಸಬೇಕು."

ವಿಶ್ವಗುರು ಫ್ರಾನ್ಸಿಸ್ ರವರು ಪದೇ ಪದೇ ಶಾಂತಿಗಾಗಿ ಮನವಿ ಮಾಡಿದ್ದಾರೆ, ಸುಡಾನ್ ಯುದ್ಧವನ್ನು "ವಿಶ್ವದ ಅತ್ಯಂತ ಗಂಭೀರವಾದ ಮಾನವೀಯ ಬಿಕ್ಕಟ್ಟು" ಎಂದು ಕರೆದರು ಮತ್ತು ಎಲ್ಲಾ ಪಕ್ಷಗಳು ಯುದ್ಧವನ್ನು ನಿಲ್ಲಿಸುವಂತೆ ಒತ್ತಾಯಿಸಿದರು.

ಸುಡಾನ್‌ನ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿದ್ದಂತೆ, ತುರ್ತು ಹಸ್ತಕ್ಷೇಪದ ಅಗತ್ಯವಿದೆ ಮತ್ತು ನೂರಾರು ಸಾವಿರ ಮಕ್ಕಳ ಭವಿಷ್ಯವು ಸಮತೋಲನದಲ್ಲಿದೆ ಎಂದು ಯುನಿಸೆಫ್ ಎಚ್ಚರಿಸಿದೆ.
 

27 ಮಾರ್ಚ್ 2025, 13:35