ಹೈಟಿ ಅಧ್ಯಕ್ಷೀಯ ಚುನಾವಣೆಯ ಭರವಸೆ
ಜೇಮ್ಸ್ ಬ್ಲಿಯರ್ಸ್
ಪರಿವರ್ತನಾ ಅಧ್ಯಕ್ಷೀಯ ಮಂಡಳಿಯ ಹೊಸ ನಾಯಕಿ ಫ್ರಿಟ್ಜ್ ಅಲ್ಫೋನ್ಸ್ ಜೀನ್ ರವರು, ಈ ವಾರ ರಾಜಧಾನಿ ಪೋರ್ಟ್ ಔ ಪ್ರಿನ್ಸ್ ಮೇಲೆ ಮತ್ತೊಂದು ದಾಳಿಯನ್ನು ಪ್ರಾರಂಭಿಸಿದ ಬೀದಿ ಗ್ಯಾಂಗ್‌ಗಳ ಸಮಸ್ಯೆಯ ಸ್ಮಾರಲ್ ಪ್ರಮಾಣವನ್ನು ಗುರುತಿಸುತ್ತಾರೆ ಮತ್ತು ಅದರ ಮುಖ್ಯ ಅಂಶಗಳನ್ನು ಎತ್ತಿ ತೋರಿಸುತ್ತಾರೆ. ಈ ಕಾನೂನುಬಾಹಿರ ಕ್ರಿಮಿನಲ್ ಮೈತ್ರಿಕೂಟವು ಈಗಾಗಲೇ ರಾಜಧಾನಿಯ ಎಂಬತ್ತೈದು ಪ್ರತಿಶತವನ್ನು ನಿಯಂತ್ರಿಸುತ್ತಿದೆ ಮತ್ತು ಅದನ್ನು ವಿಸ್ತರಿಸಲು ಪ್ರಯತ್ನಿಸುತ್ತಿದೆ. ಜೀನ್ ರವರು ಕಟುವಾಗಿ ಎಚ್ಚರಿಸುತ್ತಾರೆ: "ನಮ್ಮ ದೇಶವು ಯುದ್ಧದಲ್ಲಿದೆ ಮತ್ತು ಈ ಯುದ್ದವನ್ನು ಗೆಲ್ಲಲು ನಾವೆಲ್ಲಾ ಒಗಟ್ಟರಾಗಿರಬೇಕು."
ಜಾಗತಿಕವಾಗಿ ಟ್ರಂಪ್ ರವರ ಆಡಳಿತವು USAIDಗೆ ನೀಡಿದ ಕಡಿತದಲ್ಲಿ ಪಶ್ಚಿಮ ಗೋಳಾರ್ಧದ ಅತ್ಯಂತ ಬಡ ರಾಷ್ಟ್ರವೂ ಸೇರಿದ್ದರೂ, ಇಲ್ಲಿಯವರೆಗೆ ಈ ಏರಿಳಿತದ ಆರ್ಥಿಕ ನಿರ್ಬಂಧಗಳು ಕೆನ್ಯಾ ನೇತೃತ್ವದ ಬಹು-ರಾಷ್ಟ್ರೀಯ ಬೆಂಬಲ ಯೋಜನೆಯ ಮೇಲೆ ಪರಿಣಾಮ ಬೀರಿಲ್ಲ, ಇದು ಒಂದು ಸಾವಿರ ಸಿಬ್ಬಂದಿಯ ಒಟ್ಟು ಪಡೆಯಲ್ಲಿ ಎಂಟುನೂರು ಜನರನ್ನು ಹೊಂದಿದೆ. ಅಮೇರಿಕದ ವಿದೇಶಾಂಗದ ಕಾರ್ಯದರ್ಶಿ ಮಾರ್ಕೊ ರೂಬಿಯೊರವರು ದೂರವಾಣಿ ಕರೆಯಲ್ಲಿ ಈ ಭರವಸೆ ನೀಡಿದ್ದಾರೆ ಎಂದು ಕೆನ್ಯಾದ ಅಧ್ಯಕ್ಷ ವಿಲಿಯಂ ರುಟೊರವರು ದೃಢಪಡಿಸಿದ್ದಾರೆ, ಇಬ್ಬರೂ ಸಹಕಾರವನ್ನು ಬಲಪಡಿಸುವ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.
ಭದ್ರತಾ ಪಡೆಗೆ ಮೂಲತಃ 2023ರಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಅಧಿಕಾರ ನೀಡಿತು. ಸಂಖ್ಯಾತ್ಮಕವಾಗಿ ಅವರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ, ಸಂಕಷ್ಟದಲ್ಲಿರುವ ಹೈಟಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಅವರು ಭರವಸೆಯ ದಾರಿದೀಪವನ್ನು ಪ್ರತಿನಿಧಿಸುತ್ತಾರೆ.
ಜುಲೈ 7, 2021 ರಂದು ಕೊಲಂಬಿಯಾದ ಕೂಲಿ ಸೈನಿಕರಿಂದ ಅಧ್ಯಕ್ಷ ಜೊವೆನೆಲ್ ಮೊಯಿಸ್ ರವರು ಹತ್ಯೆಯಾದ ನಂತರ, ಈಗಾಗಲೇ ಭೀಕರವಾಗಿದ್ದ ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣ ತಪ್ಪಿತು. ಅಂದಿನಿಂದ, ಹೈಟಿಯಲ್ಲಿ ಪ್ರಜಾಪ್ರಭುತ್ವದ ಅಸ್ತಿತ್ವವು, ಒಂದು ತೆಳುವಾದ ದಾರದ ಹಾಗೆ ನೇತಾಡುವಂತಿದೆ, ಸಾವಿರಾರು ಜನರು ಸಾವನ್ನಪ್ಪಿದ್ದಾರೆ ಮತ್ತು ಒಂದು ಮಿಲಿಯನ್‌ಗಿಂತಲೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ.