MAP

GREENLAND-POLITICS-VOTE GREENLAND-POLITICS-VOTE  (AFP or licensors)

ಗ್ರೀನ್‌ಲ್ಯಾಂಡ್ ನಿರ್ಣಾಯಕ ಸಂಸತ್ತಿನ ಚುನಾವಣೆಗಳನ್ನು ನಡೆಸುತ್ತಿದೆ

ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರ ಡ್ಯಾನಿಶ್ ಸ್ವಾಯತ್ತ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳುವ ಪುನರುಚ್ಚರಿಸಿದ ಆಲೋಚನೆಯಿಂದಾಗಿ, ಗ್ರೀನ್‌ಲ್ಯಾಂಡ್ ಮಂಗಳವಾರ ಚುನಾವಣೆಗೆ ಸಜ್ಜಾಗಿದೆ. ಈ ಡ್ಯಾನಿಶ್ ಸ್ವಾಯತ್ತ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರು ಪುನರುಚ್ಚರಿಸಿದ್ದಾರೆ. ಈ ಪ್ರದೇಶದ ಶ್ರೀಮಂತ ಖನಿಜ ಸಂಪನ್ಮೂಲಗಳು ಮತ್ತು ಕಾರ್ಯತಂತ್ರದ ಸ್ಥಳವು ಜಾಗತಿಕ ಆಸಕ್ತಿಯನ್ನು ಹೆಚ್ಚಿಸುವ ಕ್ಷೇತ್ರವಾಗಿದೆ.

ಲಿಸಾ ಝೆಂಗಾರಿನಿ

ಗ್ರೀನ್‌ಲ್ಯಾಂಡ್‌ನಲ್ಲಿ 41,000 ಅರ್ಹತಾ ಮತದಾರರು ಮಂಗಳವಾರ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನಕ್ಕೆ ತೆರಳುತ್ತಿದ್ದಾರೆ. ಈ ಚುನಾವಣೆಯು ಅಭೂತಪೂರ್ವ ಅಂತರರಾಷ್ಟ್ರೀಯ ಗಮನ ಸೆಳೆದಿದೆ. ಇದಕ್ಕೆ ಪ್ರಮುಖ ಕಾರಣ, ಈ ಕಡಿಮೆ ಜನಸಂಖ್ಯೆ ಹೊಂದಿರುವ ಸ್ವಾಯತ್ತ ಡ್ಯಾನಿಶ್ ಪ್ರದೇಶಕ್ಕೆ ಸಂಬಂಧಿಸಿದ ಭೌಗೋಳಿಕ ರಾಜಕೀಯ ಮತ್ತು ಆರ್ಥಿಕ ಅಂಶಗಳು.

ಗಮನ ಸೆಳೆಯುವುದು
ಅರವತ್ತು ಸಾವಿರಕ್ಕಿಂತ ಕಡಿಮೆ ನಿವಾಸಿಗಳನ್ನು ಹೊಂದಿರುವ ದೂರದ ಆರ್ಕ್ಟಿಕ್ ದ್ವೀಪದಲ್ಲಿ ಸ್ಥಳೀಯ ಚುನಾವಣೆಗಳು ಸಾಮಾನ್ಯವಾಗಿ ಜಾಗತಿಕ ಕಾಳಜಿಯಾಗಿರುವುದಿಲ್ಲ. ಆದಾಗ್ಯೂ, ಗ್ರೀನ್‌ಲ್ಯಾಂಡ್ ನ್ನು ಸ್ವಾಧೀನಪಡಿಸಿಕೊಳ್ಳುವ ಅಮೇರಿಕದ ಆಸಕ್ತಿಯನ್ನು ಪುನರುಚ್ಚರಿಸುವ, ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರ ಜನವರಿಯಲ್ಲಿನ ಹೇಳಿಕೆಗಳು ಈ ವರ್ಷದ ಚುನಾವಣೆಗಳನ್ನು ವಿಶ್ವದ ಗಮನ ಸೆಳೆಯುವಂತೆ ಮಾಡಿದೆ, ಡೆನ್ಮಾರ್ಕ್ ಮತ್ತು ಗ್ರೀನ್‌ಲ್ಯಾಂಡ್‌ನ ಪ್ರಧಾನಿ ಮ್ಯೂಟ್ ಇನೆಕ್ವಾನಾಲುಕ್ ಬೌರಪ್ ಎಗೆಡ್ ರವರು ಈ ಪ್ರದೇಶವು ಮಾರಾಟಕ್ಕಿಲ್ಲ ಎಂದು ಪುನರುಚ್ಚರಿಸಿದ್ದಾರೆ.

ಪ್ರಮುಖ ವಿಷಯಗಳು: ಡೆನ್ಮಾರ್ಕ್‌ನಿಂದ ಸ್ವಾತಂತ್ರ್ಯ
ಗ್ರೀನ್‌ಲ್ಯಾಂಡ್ ರಾಜಕೀಯದ ಕೇಂದ್ರಬಿಂದುವಾಗಿರುವ ಡೆನ್ಮಾರ್ಕ್‌ನಿಂದ ಪೂರ್ಣ ಸ್ವಾತಂತ್ರ್ಯದ ಪ್ರಶ್ನೆಯು, ಚುನಾವಣೆಯ ಪ್ರಮುಖ ವಿಷಯಗಳಲ್ಲಿ ಒಂದಾಗಿದೆ. ಪೂರ್ಣ ಸಾರ್ವಭೌಮತ್ವವು ಅನೇಕರಿಗೆ ದೀರ್ಘಕಾಲೀನ ಆಕಾಂಕ್ಷೆಯಾಗಿದ್ದರೂ, ಅದನ್ನು ಹೇಗೆ, ಅಥವಾ ಯಾವಾಗ ಅನುಸರಿಸಬೇಕು ಎಂಬುದರ ಕುರಿತು ಯಾವುದೇ ಒಮ್ಮತವಿಲ್ಲ.

ಚುನಾವಣೆಗಳ ನಂತರ ಸ್ವಾತಂತ್ರ್ಯವು, ಜನಾಭಿಪ್ರಾಯ ಸಂಗ್ರಹಣೆಯನ್ನು ನಡೆಸುವ ಬಗ್ಗೆ ಎರಡು ಪ್ರಮುಖ ಪಕ್ಷಗಳು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿವೆ, ಸಿಯುಮಟ್ ಪಕ್ಷವು ಚುನಾವಣೆಗಳ ನಂತರ, ತಕ್ಷಣವೇ ಜನಾಭಿಪ್ರಾಯ ಸಂಗ್ರಹಣೆಯನ್ನು ಬೆಂಬಲಿಸುತ್ತದೆ, ಆದರೆ ಇನ್ಯೂಟ್ ಅಟಾಕಾಟಿಗಿಟ್ ಇದರ ಬಗ್ಗೆ ಹೆಚ್ಚು ಜಾಗರೂಕವಾಗಿದೆ.

ಗ್ರೀನ್‌ಲ್ಯಾಂಡ್‌ನ ಸಂಪನ್ಮೂಲದ ಸಾಮರ್ಥ್ಯ ಮತ್ತು ಅದರ ಕಾರ್ಯತಂತ್ರದ ಸ್ಥಾನಕ್ಕಾಗಿ ಅದನ್ನು ಸ್ವಾಧೀನಪಡಿಸಿಕೊಳ್ಳುವ ಆಸಕ್ತಿಯನ್ನು ಟ್ರಂಪ್ ರವರು ಪದೇ ಪದೇ ಘೋಷಿಸುವುದರಿಂದ, ಈ ವಿಷಯದ ಕುರಿತು ಚರ್ಚೆಗಳು ಮತ್ತೆ ಆರಂಭವಾಗಿವೆ. ಅವರ ಹೇಳಿಕೆಗಳು ಗ್ರೀನ್‌ಲ್ಯಾಂಡ್‌ನ ಸ್ವ-ಆಡಳಿತದ ಒತ್ತಾಯವನ್ನು ಬಲಪಡಿಸುತ್ತವೆ ಎಂದು ಕೆಲವರು ವಾದಿಸಿದರೆ, ಇನ್ನೂ ಕೆಲವರು ಡೆನ್ಮಾರ್ಕ್‌ನ ಮೇಲಿನ ಪ್ರದೇಶದ ಅವಲಂಬನೆಯನ್ನು ಬಲಪಡಿಸುತ್ತಾರೆ ಎಂದು ನಂಬುತ್ತಾರೆ. ಕಾಲಮಿತಿಯ ಬಗ್ಗೆ ವಿಭಿನ್ನ ಅಭಿಪ್ರಾಯಗಳಿದ್ದರೂ, ಗ್ರೀನ್‌ಲ್ಯಾಂಡ್‌ನ ಸಾಮಾನ್ಯ ಭಾವನೆಯು ಅಂತಿಮವಾಗಿ ಸ್ವಾತಂತ್ರ್ಯದ ಕಡೆಗೆ ವಾಲುತ್ತದೆ.

ಗ್ರೀನ್‌ಲ್ಯಾಂಡ್‌ನ ಆರ್ಥಿಕ ಸಾಮರ್ಥ್ಯ
ಸ್ವಾತಂತ್ರ್ಯದ ಚರ್ಚೆಯ ಹೊರತಾಗಿ, ಈ ಚುನಾವಣೆಯಲ್ಲಿ ಆರ್ಥಿಕ ಅಭಿವೃದ್ಧಿಯು ಮತ್ತೊಂದು ನಿರ್ಣಾಯಕ ವಿಷಯವಾಗಿದೆ. ಗ್ರೀನ್‌ಲ್ಯಾಂಡ್‌ನ ಆರ್ಥಿಕತೆಯು ಮೀನುಗಾರಿಕೆ ಮತ್ತು ಡ್ಯಾನಿಶ್ ಸಬ್ಸಿಡಿಗಳ (ಸಹಾಯ ಧನಗಳ) ಮೇಲೆ ಹೆಚ್ಚು ಅವಲಂಬಿತವಾಗಿದೆ, ಆದರೆ ಆರ್ಥಿಕ ಸ್ವಾವಲಂಬನೆಯನ್ನು ಸೃಷ್ಟಿಸಲು ಗಣಿಗಾರಿಕೆ ಮತ್ತು ಪ್ರವಾಸೋದ್ಯಮವನ್ನು ವಿಸ್ತರಿಸುವ ಆಸಕ್ತಿ ಹೆಚ್ಚುತ್ತಿದೆ. ಈ ದ್ವೀಪವು ಅಪರೂಪದ-ಭೂಮಿಯ ಖನಿಜಗಳ ಗಮನಾರ್ಹ ನಿಕ್ಷೇಪಗಳು ಮತ್ತು ಅಪಾರ ತೈಲ ಮತ್ತು ಅನಿಲ ನಿಕ್ಷೇಪಗಳನ್ನು ಹೊಂದಿದೆ ಎಂದು ನಂಬಲಾಗಿದೆ, ಇದು ಜಾಗತಿಕ ಆಸಕ್ತಿಯನ್ನು ಆಕರ್ಷಿಸುತ್ತಿದೆ.

ಆದಾಗ್ಯೂ, ಪರಿಸರ ಕಾಳಜಿ ಮತ್ತು ಜನಸಂಖ್ಯೆಯ ಸುಮಾರು ಶೇಕಡಾ 90ರಷ್ಟಿರುವ ಇನ್ಯೂಟ್ ಸಮುದಾಯಗಳ ವಿರೋಧದಿಂದಾಗಿ ಗಣಿಗಾರಿಕೆ ವಿವಾದಾತ್ಮಕವಾಗಿಯೇ ಉಳಿದಿದೆ. ಆರ್ಥಿಕ ವೈವಿಧ್ಯೀಕರಣ ಅಗತ್ಯವೆಂದು ಪರಿಗಣಿಸಲಾಗಿದ್ದರೂ, ದೊಡ್ಡ ಪ್ರಮಾಣದ ಹೊರತೆಗೆಯುವಿಕೆಯ ಕಾರ್ಯಸಾಧ್ಯತೆ ಮತ್ತು ಅಪಾಯಗಳು ಚರ್ಚೆಯ ಮುಖ್ಯ ವಿಷಯವಾಗಿ ಉಳಿದಿವೆ.

ಭೌಗೋಳಿಕ ರಾಜಕೀಯ ಸಮಸ್ಯೆಗಳು
ಈ ಚುನಾವಣೆಯು ಗ್ರೀನ್‌ಲ್ಯಾಂಡ್‌ನ ವಿದೇಶಿ ಸಂಬಂಧಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ನಿರೀಕ್ಷಿಸಲಾಗಿದೆ, ವಿಶೇಷವಾಗಿ ಗ್ರೀನ್‌ಲ್ಯಾಂಡ್ ನ್ನು ಖರೀದಿಸುವ ಟ್ರಂಪ್ ರವರ ಆಸಕ್ತಿ ಹೊಂದಿರುವ ಹಿನ್ನೆಲೆಯಲ್ಲಿ ಹೆಚ್ಚು ಪ್ರಭಾವ ಬೀರುವ ಸಾಧ್ಯತೆಗಳಿವೆ. ಅಮೇರಿಕವು ಗ್ರೀನ್‌ಲ್ಯಾಂಡ್‌ನಲ್ಲಿ ಯಾವಾಗಲೂ ಕಾರ್ಯತಂತ್ರದ ಮಿಲಿಟರಿ ಹಿತಾಸಕ್ತಿಗಳನ್ನು ಹೊಂದಿದೆ, ಅಲ್ಲಿ ವಾಯುನೆಲೆಯನ್ನು ನಿರ್ವಹಿಸುವುದು ಮತ್ತು ತನ್ನ ಉಪಸ್ಥಿತಿಯನ್ನು ವಿಸ್ತರಿಸಲು ಪ್ರಯತ್ನಿಸುತ್ತಿದೆ.

ಆರ್ಕ್ಟಿಕ್‌ನಲ್ಲಿ ರಷ್ಯಾ ಮತ್ತು ಚೀನಾದ ಚಟುವಟಿಕೆಗಳ ಬಗ್ಗೆ ವಾಷಿಂಗ್ಟನ್‌ನ ಕಳವಳಗಳು ಗ್ರೀನ್‌ಲ್ಯಾಂಡ್‌ನ ಭೌಗೋಳಿಕ ರಾಜಕೀಯ ಪ್ರಾಮುಖ್ಯತೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ, ಇದು ಆರ್ಕ್ಟಿಕ್ ಕರಗುವಿಕೆಯಿಂದ ಅಟ್ಲಾಂಟಿಕ್ ಮತ್ತು ಪೆಸಿಫಿಕ್ ನಡುವೆ ಹೊಸ ವ್ಯಾಪಾರ ಮಾರ್ಗಗಳನ್ನು ತೆರೆಯುವುದರಿಂದ ನಿರ್ಣಾಯಕವಾಗಿ ವರ್ಧಿಸುತ್ತಿದೆ.

ಆದರೂ, ಅಮೇರಿಕದ ನಿಯಂತ್ರಣಕ್ಕೆ ಟ್ರಂಪ್ ರವರ ಒತ್ತಾಯ ಹೇರಿದ್ದರೂ, ಗ್ರೀನ್‌ಲ್ಯಾಂಡ್‌ನ ಬಹುತೇಕ ಜನರು ಅಮೇರಿಕದ ಭಾಗವಾಗುವ ಕಲ್ಪನೆಯನ್ನು ತಿರಸ್ಕರಿಸುತ್ತಾರೆ ಎಂದು ಸಮೀಕ್ಷೆಗಳು ಸೂಚಿಸುತ್ತವೆ.

ಭೂಪ್ರದೇಶದ ಮೇಲಿನ ಅವರ ಹಕ್ಕುಗಳಿಗೆ ಪ್ರತಿಕ್ರಿಯೆಯಾಗಿ, ಗ್ರೀನ್‌ಲ್ಯಾಂಡಿಕ್ ಸಂಸತ್ತು ಇತ್ತೀಚೆಗೆ ಎರಡು ಕಾನೂನುಗಳನ್ನು ಅಂಗೀಕರಿಸಿತು: ಒಂದು ಚುನಾವಣೆಗೆ ಮುಂಚಿತವಾಗಿ ರಾಜಕೀಯ ಪಕ್ಷಗಳಿಗೆ ವಿದೇಶಿ ಮತ್ತು ದೇಶೀಯ ನಿಧಿಯನ್ನು ಸೀಮಿತಗೊಳಿಸುವುದು ಮತ್ತು ಇನ್ನೊಂದು ದ್ವೀಪದಲ್ಲಿ ಭೂ ಸ್ವಾಧೀನವನ್ನು ನಿರ್ಬಂಧಿಸುವುದು.
 

11 ಮಾರ್ಚ್ 2025, 12:38