ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಈಜಿಪ್ಟ್ ಗಾಜಾದ ಹೊಸ ಕದನ ವಿರಾಮ ಯೋಜನೆಯನ್ನು ಪ್ರಸ್ತಾಪಸಿದೆ
ಫ್ರಾನ್ಸೆಸ್ಕಾ ಮೆರ್ಲೊ
ಗಾಜಾದಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲು ಈಜಿಪ್ಟ್ ಹೊಸ ಕದನ ವಿರಾಮ ಯೋಜನೆಯನ್ನು ಪ್ರಸ್ತಾಪಿಸಿದೆ, ಕಳೆದ 24 ಗಂಟೆಗಳಲ್ಲಿ ಇಸ್ರಯೇಲ್ ವೈಮಾನಿಕ ದಾಳಿಯಿಂದ ಕನಿಷ್ಠ 65 ಜನರು ಸಾವನ್ನಪ್ಪಿದ್ದಾರೆ ಎಂದು ಪ್ಯಾಲಸ್ತೀನಿಯದ ಆರೋಗ್ಯ ಅಧಿಕಾರಿಗಳು ವರದಿ ಮಾಡಿದ್ದಾರೆ.
ಕಳೆದ ವಾರ ಪರಿಚಯಿಸಲಾದ ಹೊಸ ಕದನ ವಿರಾಮ ಒಪ್ಪಂದದ ಪ್ರಸ್ತಾಪವು ಎರಡು ತಿಂಗಳ ಕದನ ವಿರಾಮವನ್ನು ಕೊನೆಗೊಳಿಸಿದ ಹಮಾಸ್ ವಿರುದ್ಧ ಇಸ್ರಯೇಲ್ ವಾಯು ಮತ್ತು ನೆಲದ ಕಾರ್ಯಾಚರಣೆಯನ್ನು ಪುನರಾರಂಭಿಸಿದ ನಂತರ ಹಿಂಸಾಚಾರದ ಉಲ್ಬಣವನ್ನು ಅನುಸರಿಸುತ್ತದೆ. ಕನಿಷ್ಠ 400 ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 700 ಪ್ಯಾಲಸ್ತೀನಿಯದವರು ದಾಳಿಯಲ್ಲಿ ಕೊಲ್ಲಲ್ಪಟ್ಟಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ಹೇಳುತ್ತಾರೆ. ಈ ತೀರಾ ಇತ್ತೀಚಿನ ಸಾವುಗಳು ಗಾಜಾದಲ್ಲಿ 7 ಅಕ್ಟೋಬರ್ 2023 ರಿಂದ ಸಾವಿನ ಸಂಖ್ಯೆಯನ್ನು 50,000ಕ್ಕೆ ಹೆಚ್ಚಿಸಿವೆ.
ಯೋಜನೆ
ಹೊಸದಾಗಿ ಪ್ರಸ್ತಾಪಿಸಲಾದ ಈಜಿಪ್ಟ್ ಯೋಜನೆಯಡಿಯಲ್ಲಿ, ಹಮಾಸ್ ಪ್ರತಿ ವಾರ ಐದು ಇಸ್ರಯೇಲ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡುತ್ತದೆ, ಇಸ್ರಯೇಲ್ ಮೊದಲ ವಾರದ ನಂತರ ಕದನ ವಿರಾಮದ ಮುಂದಿನ ಹಂತವನ್ನು ಜಾರಿಗೊಳಿಸುತ್ತದೆ. ಹಮಾಸ್ ಇನ್ನೂ 59 ಒತ್ತೆಯಾಳುಗಳನ್ನು ಹಿಡಿದಿಟ್ಟುಕೊಂಡಿದೆ ಎಂದು ನಂಬಲಾಗಿದೆ, ಅವರಲ್ಲಿ 24 ಜನರು ಜೀವಂತವಾಗಿದ್ದಾರೆ ಎಂದು ಭಾವಿಸಲಾಗಿದೆ. ಅಮೇರಿಕ ಮತ್ತು ಹಮಾಸ್ ಈ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿದ್ದರೂ, ಇಸ್ರಯೇಲ್ ಈ ಪ್ರಸ್ತಾಪಕ್ಕೆ ಇನ್ನೂ ಪ್ರತಿಕ್ರಿಯಿಸಿಲ್ಲ.
ರಫಾಹ್
ಅಷ್ಟರಲ್ಲಿ. ಇಸ್ರಯೇಲ್ ತನ್ನ ಮಿಲಿಟರಿ ಕಾರ್ಯಾಚರಣೆಗಳು ನಾಗರಿಕ ಹಾನಿಯನ್ನು ಕಡಿಮೆ ಮಾಡಲು ಹಮಾಸ್ ನ್ನು ಒತ್ತೆಯಾಳುಗಳನ್ನು ಬಿಡುಗಡೆ ಮಾಡುವಂತೆ ಒತ್ತಡ ಹೇರುವ ಗುರಿಯನ್ನು ಹೊಂದಿದೆ ಎಂದು ಹೇಳುತ್ತದೆ. ರಾಫಾದಲ್ಲಿ, ಇಸ್ರಯೇಲ್ ಪಡೆಗಳು ಆ ಪ್ರದೇಶಗಳಿಗೆ ಆಳವಾಗಿ ದಾಳಿ ಮಾಡುರುವುದರಿಂದ ಸಾವಿರಾರು ಜನರು ಟೆಲ್ ಅಲ್-ಸುಲ್ತಾನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ 124,000 ಜನರು ಸ್ಥಳಾಂತರಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯು ವರದಿ ಮಾಡಿದೆ, ನಿರ್ಬಂಧಿತ ನೆರವು, ಗಗನಕ್ಕೇರುತ್ತಿರುವ ಆಹಾರದ ಬೆಲೆಗಳು ಮತ್ತು ಮೂಲಭೂತ ಅಗತ್ಯಗಳ ಕೊರತೆಯಿಂದಾಗಿ ಮಾನವೀಯ ದುರಂತದ ಬಗ್ಗೆ ಎಚ್ಚರಿಸಿದೆ.